For Quick Alerts
ALLOW NOTIFICATIONS  
For Daily Alerts

ನ. 2ಕ್ಕೆ ತುಲಾ ರಾಶಿಯಲ್ಲಿ ಬುಧ ರಾಶಿ ಪರಿವರ್ತನೆ: 12 ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?

|

ಗ್ರಹಗಳಲ್ಲಿ ಯುವರಾಜ ಎಂದು ಕರೆಯಲ್ಪಡುವ ಬುಧನು ಈ ವರ್ಷ ಎರಡನೇ ಬಾರಿ ತುಲಾ ರಾಶಿಯನ್ನು ಪ್ರವೇಶಿಸುತ್ತಿದೆ. ಸೆಪ್ಟೆಂಬರ್‌ 22ಕ್ಕೆ ತುಲಾ ರಾಶಿ ಪ್ರವೇಶಿಸಿದ ಬುಧ ನಂತರ ಹಿಮ್ಮುಖವಾಗಿ ಚಲಿಸಿತ್ತು. ಯಾವುದೇ ಗ್ರಹ ಹಿಮ್ಮುಖವಾಗಿ ಚಲಿಸಿದಾಗ ಅದರ ಅಡ್ಡಪರಿಣಾಮಗಳನ್ನು ಎಲ್ಲಾ ರಾಶಿಗಳು ಎದುರಿಸಬೇಕಾಗಿತ್ತು. ಬುಧನ ಹಿಮ್ಮುಖ ಚಲನೆ ಕೆಲವೊಂದು ರಾಶಿಗಳಲ್ಲಿ ಕೆಲವು ತೊಂದರೆ ಉಂಟು ಮಾಡಿತ್ತು. ಇದೀಗ ಆ ರಾಶಿಯವರು ನೆಮ್ಮದಿಯ ಉಸಿರು ಬಿಡಬಹುದು. ಏಕೆಂದರೆ ಬುಧ ತುಲಾದಲ್ಲಿ ಮತ್ತೆ ನೇರವಾಗಿ ಚಲಿಸಲಿದೆ.

ಇದೇ ನವೆಂಬರ್‌ 2ರಂದು ಬೆಳಗ್ಗೆ 9:50 ಕ್ಕೆ ಮತ್ತೆ ತುಲಾ ರಾಶಿಯಲ್ಲಿ ಸಾಗುತ್ತಾನೆ. ಮಾರ್ಗಿಯಾಗಿ ಸಂಚರಿಸುತ್ತಿರುವ ತುಲಾ ನವೆಂಬರ್ 21ಕ್ಕೆ ವೃಶ್ಚಿಕ ರಾಶಿಗೆ ಸಂಚರಿಸುವುದು. ಇದೀಗ ನವೆಂಬರ್‌ 2ರಿಂದ 2ರವರೆಗೆ ತುಲಾ ರಾಶಿಯಲ್ಲಿ ಬುಧ ಇರುವುದರಿಂದ ಇದು ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ, ಈ ಸಂಚಾರ ಯಾವೆಲ್ಲಾ ರಾಶಿಗಳಿಗೆ ಒಳ್ಳೆಯದು ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿ

ಈ ಸಂಚಾರ ಅವಧಿಯಲ್ಲಿ ಮೇಷ ರಾಶಿಯವರಲ್ಲಿ 7ನೇ ಮನೆಯಲ್ಲಿ ಸಂಚರಿಸಲಿದೆ. ಈ ಸಂಚಾರ ಅವಧಿ ವಿವಾಹಿತರ ವೈವಾಹಿಕ ಜೀವನದಲ್ಲಿ ಹೆಚ್ಚು ಮಧುರತೆಯನ್ನು ತರುತ್ತದೆ. ಅವಾಹಿತರ ಮದುವೆಗೆ ಸಂಬಂಧಿಸಿದ ಮಾತುಕತೆಗಳು ಯಶಸ್ವಿಯಾಗುತ್ತವೆ. ಪ್ರೇಮ ಸಂಬಂಧಗಳಲ್ಲಿ ತೀವ್ರತೆ ಇರುತ್ತದೆ. ನೀವು ಲವ್ ಮ್ಯಾರೇಜ್ ಮಾಡಲು ಬಯಸಿದರೆ, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಿ. ನೀವು ಯಾವುದೇ ರೀತಿಯ ಹೊಸ ಒಪ್ಪಂದವನ್ನು ಪಡೆಯಲು ಬಯಸಿದರೆ, ಅದರಲ್ಲಿಯೂ ಅವಕಾಶವು ಉತ್ತಮವಾಗಿದೆ. ನೀವು ಸರ್ಕಾರಿ ಸಂಸ್ಥೆಗಳಲ್ಲಿ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಬಯಸಿದರೆ, ಅವಕಾಶವು ಅನುಕೂಲಕರವಾಗಿರುತ್ತದೆ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯಲ್ಲಿ 6ನೇ ಮನೆಯಲ್ಲಿರುವ ಬುಧ ಮಿಶ್ರ ಫಲ ನೀಡುವುದು. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಅಲ್ಲದೆ ಬೇರೆಯವರಿಗೆ ಹೆಚ್ಚಿನ ಹಣವನ್ನು ಸಾಲವಾಗಿ ನೀಡಬೇಡಿ ಆರ್ಥಿಕ ನಷ್ಟದ ಸಾಧ್ಯತೆ ಇರುತ್ತದೆ. ರಹಸ್ಯ ಶತ್ರುಗಳು ಹೆಚ್ಚಾಗುತ್ತಾರೆ ಮತ್ತು ನಿಮ್ಮನ್ನು ಅವಮಾನಿಸುವ ಒಂದೇ ಒಂದು ಅವಕಾಶವನ್ನು ಅವರು ಬಿಡುವುದಿಲ್ಲ. ಆದ್ದರಿಂದ, ನಿಮ್ಮ ತಂತ್ರಗಳು ಮತ್ತು ಯೋಜನೆಗಳನ್ನು ಗೌಪ್ಯವಾಗಿ ಇಟ್ಟುಕೊಂಡು ಮುಂದುವರಿದರೆ ನೀವು ಸಂಪೂರ್ಣವಾಗಿ ಯಶಸ್ವಿಯಾಗುತ್ತೀರಿ. ಚರ್ಚೆ ಮತ್ತು ವಿವಾದಗಳಿಂದ ದೂರವಿರಿ ಮತ್ತು ನ್ಯಾಯಾಲಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಹೊರಗೆ ಇತ್ಯರ್ಥಪಡಿಸುವುದು ಬುದ್ಧಿವಂತವಾಗಿದೆ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನರಾಶಿಯಲ್ಲಿ ಬುಧ ಈ ಸಂಚಾರ ಅವಧಿಯಲ್ಲಿ 5ನೇ ಮನೆಯಲ್ಲಿ ಇರಲಿದೆ. ಈ ಅವಧಿ ಅದೃಷ್ಟಕರವಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಸಮಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಹ ನಿರೀಕ್ಷಿತ ಯಶಸ್ಸನ್ನು ಪಡೆಯುತ್ತಾರೆ. ಪ್ರೇಮ ಸಂಬಂಧಿ ವಿಷಯಗಳಲ್ಲಿ ತೀವ್ರತೆ ಇರುತ್ತದೆ. ಮಗುವಿನ ಜವಾಬ್ದಾರಿಯನ್ನು ಪೂರೈಸಲಾಗುವುದು. ನವ ದಂಪತಿಗಳಿಗೆ ಮಕ್ಕಳ ಜನನ ಹಾಗೂ ಜನ್ಮ ಯೋಗ ಕೂಡ ಇದೆ. ಹಿರಿಯ ಕುಟುಂಬದ ಸದಸ್ಯರು ಮತ್ತು ಹಿರಿಯ ಸಹೋದರರಿಂದ ಬೆಂಬಲ ಸಿಗುವುದು. ನೀವು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲು ಬಯಸಿದರೆ ಆಗ ಅವಕಾಶವು ಅನುಕೂಲಕರವಾಗಿರುತ್ತದೆ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರಲ್ಲಿ ಬುಧ 4ನೇ ಮನೆಯಲ್ಲಿ ಇರಲಿದೆ. ನಾಲ್ಕನೇ ಮನೆಯನ್ನು ಪರಿಗಣಿಸಲಾಗುವುದು. ಆದ್ದರಿಂದ ಬುಧದ ಈ ಸಾಗಣೆ ಪ್ರಭಾವಉತ್ತಮವಾಗಿರುತ್ತದೆ. ಪೋಷಕರ ಆರೋಗ್ಯದ ಮೇಲೆ ಅನುಕೂಲಕರ ಪರಿಣಾಮವಿರುತ್ತದೆ. ಸ್ನೇಹಿತರು ಮತ್ತು ಬಂಧುಗಳಿಂದ ಸಹಕಾರವನ್ನು ನಿರೀಕ್ಷಿಸಲಾಗುತ್ತಿದೆ. ವಿದೇಶಿ ಕಂಪನಿಗಳಲ್ಲಿ ಸೇವೆ ಅಥವಾ ಪೌರತ್ವಕ್ಕಾಗಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನೀವು ಮನೆ ಅಥವಾ ವಾಹನವನ್ನು ಖರೀದಿಸಲು ಬಯಸಿದರೆ, ಅವಕಾಶವು ಅನುಕೂಲಕರವಾಗಿರುತ್ತದೆ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಇತರ ವಿಷಯಗಳು ಸಹ ಇತ್ಯರ್ಥಗೊಳ್ಳುತ್ತವೆ. ಎಚ್ಚರಿಕೆಯಿಂದ ಪ್ರಯಾಣಿಸಿ. ವಸ್ತುಗಳನ್ನು ಕಳ್ಳತನದಿಂದ ರಕ್ಷಿಸಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರ 3ನೇ ಮನೆಯಲ್ಲಿ ಬುಧ ಇರಲಿದೆ. ಬುಧನ ಈ ಸ್ಥಾನ ಸಾಮಾನ್ಯ ಪ್ರಭಾವ ಬೀರುವುದು ಎಮದು ಪರಿಗಣಿಸಲಾಗಿದೆ. ಆದರೂ ಧೈರ್ಯವು ಹೆಚ್ಚಾಗುತ್ತದೆ. ತೆಗೆದುಕೊಂಡ ನಿರ್ಧಾರ ಮತ್ತು ಮಾಡಿದ ಕೆಲಸವೂ ಮೆಚ್ಚುಗೆಗೆ ಪಾತ್ರವಾಗುತ್ತದೆ. ಕುಟುಂಬದಲ್ಲಿ ಕಿರಿಯ ಸಹೋದರರ ಬೆಂಬಲ ಸಿಗುವುದು. ಧರ್ಮ ಮತ್ತು ಆಧ್ಯಾತ್ಮದ ಕಡೆಗೆ ಆಸಕ್ತಿಯೂ ಹೆಚ್ಚಾಗುತ್ತದೆ. ವಿದೇಶಿ ಕಂಪನಿಗಳಲ್ಲಿ ಸೇವೆ ಅಥವಾ ವಿದೇಶಿ ಪೌರತ್ವಕ್ಕಾಗಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಮಕ್ಕಳಿಗೆ ಸಂಬಂಧಿಸಿದ ಆತಂಕವೂ ಕಡಿಮೆಯಾಗುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಬುಧ 2ನೇ ಮನೆಯಲ್ಲಿ ಇರಲಿದೆ. ಬುಧ ಎರಡನೇ ಮನೆಯಲ್ಲಿ ಇರುವುದರಿಂದ ಆರ್ಥಿಕ ಸ್ಥಿತಿ ಬಲವಾಗುವುದು. ಬರಬೇಕಿದ್ದ ಹಣ ನಿಮ್ಮ ಕೈ ಸೇರುವುದು. ನಿಮ್ಮ ಮಾತಿನ ಕೌಶಲ್ಯದ ಬಲದ ಮೇಲೆ ಎಂಥ ಕಷ್ಟಕರ ಸಂದರ್ಭಗಳನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುವುದು.

ಆಸ್ತಿಗೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗುತ್ತವೆ.ಮಹಿಳೆಯರಿಗೆ ಅನುಕೂಲಕರವಾಗಿರುತ್ತದೆ, ಈ ಅವಧಿಯಲ್ಲಿ ಐಷಾರಾಮಿ ವಸ್ತುಗಳನ್ನು ಕೊಳ್ಳಲು ಬಯಸಬಹುದು. ನಿಮ್ಮ ಯೋಜನೆಗಳನ್ನು ಗೌಪ್ಯವಾಗಿರಿಸಿ ಮತ್ತು ನೀವು ಅದನ್ನು ಪೂರ್ಣಗೊಳಿಸುವವರೆಗೆ ಹೊರಗಡೆ ಹೇಳಬೇಡಿ.

ತುಲಾ ರಾಶಿ

ತುಲಾ ರಾಶಿ

ಬುಧ ತುಲಾದಲ್ಲಿ ನೇರವಾಗಿ ಸಂಚರಿಸಲಿದ್ದಾನೆ. ಈ ಸಂಚಾರ ತುಲಾ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಏನೇ ಮಾಡುವುದಾದರೂ ಯೋಚಿಸಿ ಮಾಡಿ. ಆಲೋಚಿಸಿದ ಕೆಲಸವನ್ನು ಪೂರ್ಣಗೊಳಿಸುವಿರಿ. ನೀವು ಯಾವುದೇ ರೀತಿಯ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಅಥವಾ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಬಯಸಿದರೆ ಈ ಸಮಯ ಒಳ್ಳೆಯದಿದೆ. ಉನ್ನತ ಅಧಿಕಾರಿಗಳನಿಮಗೆ ದೊರೆಯಲಿದೆ. ಆಸ್ತಿ ಖರೀದಿಗೆ ಈ ಸಮಯ ಅನುಕೂಲಕರವಾಗಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಲ್ಲಿ 12ನೇ ಮನೆಯಲ್ಲಿ ಬುಧ ಇರಲಿದೆ. ಆದ್ದರಿಂದ ಈ ಸಮಯ ನಿಮಗೆ ಅನುಕೂಲಕರವಾಗಿಲ್ಲ, ನಷ್ಟದ ಸಾದ್ಯತೆ ಇದೆ. ಸಾಕಷ್ಟು ಓಡಾಟವಿರುತ್ತದೆ ಮತ್ತು ಅತಿಯಾದ ಖರ್ಚಿನಿಂದಾಗಿ ಆರ್ಥಿಕ ಬಿಕ್ಕಟ್ಟನ್ನು ಸಹ ಎದುರಿಸಬೇಕಾಗಬಹುದು. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹೊಟ್ಟೆಗೆ ಸಂಬಂಧಿಸಿದ ಅಸ್ವಸ್ಥತೆಗಳು ಮತ್ತು ಚರ್ಮ ರೋಗಗಳು ಇತ್ಯಾದಿಗಳ ಬಗ್ಗೆ ಎಚ್ಚರದಿಂದಿರಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಕಠಿಣ ಪ್ರಯತ್ನ ಮಾಡಬೇಕಾಗುತ್ತದೆ. ಗುಪ್ತ ಶತ್ರುಗಳು ಹೆಚ್ಚಾಗುತ್ತಾರೆ. ವಿವಾದಗಳಿಂದ ದೂರವಿರಿ ಮತ್ತು ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದ ವಿವಾದಗಳನ್ನು ಹೊರಗೆ ಪರಿಹರಿಸಲು ಪ್ರಯತ್ನಿಸುವುದು ಒಳ್ಳೆಯದು.

ಧನು ರಾಶಿ

ಧನು ರಾಶಿ

ಧನು ರಾಶಿಯವರಲ್ಲಿ ಬುಧ 11ನೇ ಮನೆಯಲ್ಲಿ ಇರಲಿದೆ. ಹನ್ನೊಂದನೇ ಮನೆ ಲಾಭದಾಯಕ ಮನೆಯಾಗಿದೆ. ಆದ್ದರಿಂದ ಬುಧದ ಪ್ರಭಾವವು ಉತ್ತಮವಾಗಿರುತ್ತದೆ, ಆದರೆ ಎಲ್ಲೋ ನಿಮ್ಮ ಸ್ವಂತ ಜನರು ನಿಮ್ಮನ್ನು ಅವಮಾನಿಸಲು ಪ್ರಯತ್ನಿಸುತ್ತಾರೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಎಚ್ಚರಿಕೆಯಿಂದ ವ್ಯವಹಾರ ಮಾಡಿ. ಉದ್ಯೋಗ ಅಪೇಕ್ಷಿಗಳು ಒಳ್ಳೆಯ ಸುದ್ದಿ ಪಡೆಯಲಿದ್ದೀರಿ. ಮಕ್ಕಳಿಂ ಸಂತೋಷ ದೊರೆಯುವುದು. ಮಕ್ಕಳ ಅಪೇಕ್ಷಿತ ದಂಪತಿಗಳಿಗೆ ಸಂತಾನ ಪ್ರಾಪ್ತಿಗಾಗಿ ಯೋಗವಿದೆ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯ 10ನೇ ಮನೆಯಲ್ಲಿ ಬುಧ ಇರಲಿದೆ. ಬುಧ ಈ ಮನೆಯಲ್ಲಿ ಇರವುದರಿಂದ ಬುಧದ ಪ್ರಭಾವವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ಕೆಲಸದ ವ್ಯಾಪ್ತಿ ವಿಸ್ತಾರವಾಗಲಿದೆ. ನೀವು ಯಾವುದೇ ರೀತಿಯ ಹೊಸ ವ್ಯಾಪಾರ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಅವಕಾಶವು ಅನುಕೂಲಕರವಾಗಿರುತ್ತದೆ. ಐಷಾರಾಮಿ ವಸ್ತುಗಳಿಗೆ ಖರ್ಚು ಮಾಡುವಿರಿ. ನಿಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ರಾಜಕಾರಣಿಗಳೊಂದಿಗೆ ಆತ್ಮೀಯತೆ ಹೆಚ್ಚಲಿದೆ. ಸಾಮಾಜಿಕ ಸ್ಥಾನಮಾನವೂ ಹೆಚ್ಚುತ್ತದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಮಯವು ಅನುಕೂಲಕರವಾಗಿರುತ್ತದೆ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರಲ್ಲಿ ಒಂಭತ್ತನೇ ಮನೆಯಲ್ಲಿ ಬುಧ ಇರಲಿದೆ. ಒಂಬತ್ತನೇ ಮನೆಯನ್ನು ಅದೃಷ್ಟದ ಮನೆಯೆಂದು ಕರೆಯಲಾಗಿದೆ. ಬುಧದ ಪ್ರಭಾವವು ಧರ್ಮ ಮತ್ತು ಆಧ್ಯಾತ್ಮಿಕತೆಯ ಕಡೆಗೆ ನಿಮ್ಮ ಆಸಕ್ತಿಯನ್ನು ಹೆಚಚಿಸುತ್ತದೆ. ಬರವಣಿಗೆ, ಓದುವಿಕೆ ಮತ್ತು ಆಡಳಿತಾತ್ಮಕ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಮಗುವಿನ ಜವಾಬ್ದಾರಿಯನ್ನು ಪೂರೈಸಲಾಗುವುದು. ನವ ದಂಪತಿಗಳಿಗೆ ಮಕ್ಕಳ ಜನನ ಯೋಗ ಕೂಡ ಇದೆ. ವಿದೇಶಿ ಕಂಪನಿಗಳಲ್ಲಿ ಸೇವೆ ಅಥವಾ ಪೌರತ್ವಕ್ಕಾಗಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಧೈರ್ಯದ ನಿರ್ಧಾರ ಮತ್ತು ಶೌರ್ಯದ ಬಲದ ಮೇಲೆ ನೀವು ಕಷ್ಟಕರ ಸಂದರ್ಭಗಳನ್ನು ಸುಲಭವಾಗಿ ಜಯಿಸುತ್ತೀರಿ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರ 8ನೇ ಮನೆಯಲ್ಲಿ ಬುಧ ಇರಲಿದೆ. ಮೀನ ರಾಶಿಯವರಿಗೆಬುಧನ ಈ ಸಂಚಾರ ಅಷ್ಟೊಂದು ಅನುಕೂಲಕರವಾಗಿಲ್ಲ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಕೆಲಸದ ಸ್ಥಳದಲ್ಲಿ ಪಿತೂರಿಗೆ ಬಲಿಯಾಗುವುದನ್ನು ತಪ್ಪಿಸಿ. ಕೆಲಸ ಮುಗಿಸಿ ನೇರವಾಗಿ ಮನೆಗೆ ಬನ್ನಿ, ಯಾವುದೇ ವಿವಾದಗಳಲ್ಲಿ ಬಾಗಿಯಾಗಬೇಡಿ. ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದ ವಿವಾದಗಳನ್ನು ಹೊರಗೆ ಇತ್ಯರ್ಥಪಡಿಸುವುದು ವಿವೇಕಯುತವಾಗಿರುತ್ತದೆ. ಕುಟುಂಬದಲ್ಲಿ ಪ್ರತ್ಯೇಕತಾವಾದದ ಪರಿಸ್ಥಿತಿ ಉದ್ಭವಿಸಲು ಬಿಡಬೇಡಿ. ಹಣಕಾಸಿನ ಭಾಗವು ಬಲವಾಗಿರುತ್ತದೆ ಮತ್ತು ದೀರ್ಘಕಾಲದಿಂದ ಬರಬೇಕಾಗಿದ್ದ ಹಣ ಹಿಂತಿರುಗಿ ಪಡೆಯುವಿರಿ.

English summary

Mercury Transit in Libra On 02 November 2021 Effects on Zodiac Signs in kannada

Budh Rashi Parivartan 2021 in Tula Rashi; Mercury Transit in Libra Effects on Zodiac Signs in kannada : The Mercury Transit in Libra will take place on 02nd November 2021. Learn about remedies to perform in kannada..
Story first published: Saturday, October 30, 2021, 11:20 [IST]
X
Desktop Bottom Promotion