Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಫ್ಲೋರಿಡಾ ವಿಲ್ಲಾಕ್ಕೆ ವ್ಯಕ್ತಿ ಒಬ್ಬ 9,100 ಡಾಲರ್ ಪಾವತಿಸಿದ, ಆದರೆ ನೈಜ ಸಂಗತಿ ಏನು ಗೊತ್ತೇ?
ಆನ್ಲೈನ್ ಅಲ್ಲಿ ಅಗತ್ಯ ವಸ್ತುಗಳನ್ನು ಕೊಳ್ಳುವುದು ಸಹಜವಾಗಿದೆ. ಅಲ್ಲದೆ ವಿವಿಧ ಬಗೆಯ ರಿಯಾಯತಿಗಳು ಇಂದಿನ ಯುವ ಜನತೆಯನ್ನು ಹೆಚ್ಚು ಆಕರ್ಷಿಸುತ್ತಿದೆ ಎನ್ನಬಹುದು. ಇಂದು ಕುಡಿಯುವ ನೀರಿನಿಂದ ಹಿಡಿದು, ಬೆಲೆಬಾಳುವ ವಜ್ರ ವೈಡೂರ್ಯಗಳನ್ನು ಹಾಗೂ ಜಮೀನುಗಳಂತಹ ಆಸ್ತಿಗಳನ್ನು ಸಹ ನಾವು ಸುಲಭವಾಗಿ ಖರೀದಿಸಬಹುದು. ದಿನನಿತ್ಯದ ಊಟ-ತಿಂಡಿಯಿಂದ ಹಿಡಿದು ಅಗತ್ಯವಾದ ಎಲ್ಲಾ ಬಗೆಯ ವಸ್ತುಗಳನ್ನು ಸಹ ಗಂಟೆಗಳ ಅವಧಿಯಲ್ಲಿ ಪಡೆದುಕೊಳ್ಳಬಹುದಾಗಿದೆ.
ಆನ್ಲೈನ್ ಮಾರ್ಕೆಟಿಂಗ್ ಅಥವಾ ಖರೀದಿ ಎನ್ನುವುದು ಸುಲಭ ಹಾಗೂ ಸಂತೋಷವನ್ನು ತಂದುಕೊಡುತ್ತದೆ. ಆದರೆ ಇಂತಹ ವ್ಯವಸ್ಥೆಯು ಎಷ್ಟು ಸುರಕ್ಷಿತ ಎಂದುಕೊಳ್ಳುತ್ತೇವೋ ಅಷ್ಟೇ ಪ್ರಮಾಣದಲ್ಲಿ ಮೋಸ ಅಥವಾ ವಂಚನೆಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಆನ್ ಲೈನ್ ಮೂಲಕವೇ ಅನೇಕ ಗ್ರಾಹಕರು ಮೋಸ ಹೋಗಿರುವ ದಾಖಲೆಗಳಿರುವುದನ್ನು ಕಾಣಬಹುದು.

ಹಾಗಾಗಿಯೇ ನಾವು ಆನ್ಲೈನ್ ಅಲ್ಲಿ ನೋಡುವ ಎಲ್ಲ ಸಂಗತಿಗಳು ನಿಜವಾಗಿರುವುದಿಲ್ಲ. ಅದು ನಮಗೆ ಕುರುಡು ನಂಬಿಕೆಯನ್ನು ಮೂಡಿಸಬಹುದು. ಇಲ್ಲವೇ ಖರೀದಿಸುವ ವಸ್ತುಗಳು ನಕಲಿ ಆಗಿರಬಹುದು. ವಿಷಯಗಳು ನೈಜತೆ ಹಾಗೂ ಭರವಸೆಯನ್ನು ತೋರುತ್ತವೆಯಾದರೂ ಮೋಸದ ಸಂಗತಿಗಳಾಗಿ ಬದಲಾಗಬಹುದು. ಹೌದು, ಒಬ್ಬ ಯುವಕ ತನ್ನ ಜೀವನದ ಜಾಕ್ಪಾಟ್ ಎಂದು ಭಾವಿಸಿ ಖರೀದಿಸಿದ ಸಂಗತಿಯಿಂದ ಬಡವನಾದ ಯುವಕನ ಪ್ರಕರಣವೊಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ ನೋಡಿ.
ಫ್ಲೋರಿಡಾದ ಕೆರ್ವಿಲ್ಲೆ ಹೋಲ್ನೆಸ್ ಅವರು ಮೊದಲ ಬಾರಿಗೆ ಹರಾಜು ಬಿಡ್ಡಾರರಾಗಿ ಕಹಿ ಅನುಭವವನ್ನು ಪಡೆದುಕೊಂಡಿದ್ದರು. ದಕ್ಷಿಣ ಫ್ಲೋರಿಡಾ ಸ್ಪ್ರಿಂಗ್ ಲೇಕ್ ಸಮುದಾಯದಲ್ಲಿ ವಿಲ್ಲಾಕ್ಕಾಗಿ ಅವರು 9,100 ಡಾಲರ್ ಬಿಡ್ ಮಾಡಿದ್ದರು. ಜಾಕ್ಪಾಟ್ ಹೊಡೆದಾಗ ಅವರ ಕಣ್ಣುಗಳನ್ನು ಅವರಿಗೇ ನಂಬಲಾಗಲಿಲ್ಲ. ಅತೀವ ಸಂತೋಷವನ್ನು ಹೊಂದಿದ್ದರು. ಆದರೆ ದುರಾದೃಷ್ಟ ಅವರು ಖರೀದಿಸಿದ್ದು ಅತ್ಯಂತ ಕಿರಿದಾದ ಜಮೀನನ್ನಾಗಿತ್ತು. ಅವರ ಬಿಡ್ ಕ್ರೂರ ತಮಾಷೆಯಾಗಿ ಪರಿಣಮಿಸಿತು ಎಂದು ತಿಳಿದು ಬಂದಿದೆ. ಅದನ್ನು ಈ ಕೆಳಗೆ ಚಿತ್ರದಲ್ಲಿ ತೋರಿಸಲಾಗಿದೆ.
ಈ ವ್ಯಕ್ತಿ ಖರೀದಿಸಿದ ಕಿರಿದಾದ ಭೂಮಿಯು ಒಂದು ದಂಡೆಯ ರೂಪದಲ್ಲಿದೆ. ಅಂದರೆ ಇವರು ಖರೀದಿಸಿದ್ದು 30 ಸೆಂ.ಮೀ. ಅಗಲದ ಹುಲ್ಲು ಹಾಸನ್ನು. ಅದು ಎರಡು ವಿಲ್ಲವನ್ನು ಬೇರ್ಪಡಿಸುವ ಜಾಗ ಅಥವಾ ಗೋಡೆಯನ್ನು ಹೊಂದುವ ಜಾಗ. ಅಲ್ಲಿ ಒಂದು ಗೋಡೆಯನ್ನು ನಿರ್ಮಿಸಿದ್ದರೂ ಸಹ ಗೋಡೆಯ ಕೆಳಭಾಗದಲ್ಲಿ ಮುಚ್ಚಿರುತ್ತದೆ ಅಷ್ಟೆ. ಕೌಂಟಿಯ ತೆರಿಗೆ ಸೈಟ್ನಲ್ಲಿ ಮೌಲ್ಯಮಾಪಕನ ಸೈಟ್ ಮತ್ತು ವಿವರಗಳು ಭೂಮಿಗೆ ಯಾವುದೇ ಕಟ್ಟಡ ಮೌಲ್ಯವನ್ನು ಹೊಂದಿಲ್ಲ ಎಂದು ಹೇಳಿದ್ದರೂ ಸಹ, ಜನರು ಇನ್ನೂ ಸೈಟ್ನಲ್ಲಿ ಬಿಡ್ ಮಾಡಿದ್ದರು. ಕೆರ್ವಿಲ್ಲೆ ಹರಾಜು ಸ್ಥಳದಲ್ಲಿ ಬಳಸಿದ ಫೋಟೋಗಳು ಮೋಸಗೊಳಿಸುವಂತಹದ್ದಾಗಿದೆ ಮತ್ತು ವಿಲ್ಲಾ ಮಾರಾಟದಲ್ಲಿದೆ ಎಂದು ಅವರು ಬಿಡ್ ಮಾಡಿದ್ದರು. ಆದ್ದರಿಂದ ಅವರು ಈ ಒಪ್ಪಂದವನ್ನು ಒಪ್ಪಿಕೊಂಡಿದ್ದರು.
ಈಗ ಅವರು ಕೇವಲ $ 50 ಮೌಲ್ಯದ ಒಂದು ಪ್ಯಾಚ್ ಭೂಮಿಯೊಂದಿಗೆ ಸಿಲುಕಿಕೊಂಡಿದ್ದಾರೆ ಮತ್ತು $ 9,100 ರಷ್ಟು ಬಡವರಾಗಿದ್ದಾರೆ. ದುಃಖಕರ ಸಂಗತಿಯೆಂದರೆ ಕೌಂಟಿ ಕಾನೂನುಗಳು ಯಾವುದೇ ರೀತಿಯ ಮರುಪಾವತಿಯನ್ನು ಅನುಮತಿಸುವುದಿಲ್ಲ.
ಮತ್ತೊಂದೆಡೆ, ಯಾವುದೇ ಕಟ್ಟಡದ ಮೌಲ್ಯವನ್ನು ಹೊಂದಿರದ ಭೂಮಿಯ ಅಂದಾಜು ವೆಚ್ಚದ ಬಗ್ಗೆ ಆನ್ಲೈನ್ನಲ್ಲಿ ಬಹಳ ಕಡಿಮೆ ಮಾಹಿತಿ ಲಭ್ಯವಿತ್ತು. ತಜ್ಞರು ಅವರು ಏನೂ ಮಾಡಲಾಗುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಹಾಗಾಗಿ ಈ ವ್ಯಕ್ತಿಯ ಬಗ್ಗೆ ಕನಿಕರ ಅಥವಾ ಮರುಗಬೇಕಷ್ಟೆ.
ಇದೊಂದು ನೀತಿಯ ಪಾಠ ಉಳಿದವರಿಗೆ ಎಂದು ಹೇಳಬಹುದು. ಯಾವುದೇ ಸಂಗತಿಗಾಗಿ ಆನ್ ಲೈನ್ ವ್ಯಾಪಾರ ಅಥವಾ ವ್ಯವಹಾರವನ್ನು ನಡೆಸುತ್ತಿದ್ದೀರಿ ಎಂದರೆ ಸಾಕಷ್ಟು ಎಚ್ಚರಿಕೆಯನ್ನು ವಹಿಸಿ. ನಿಮ್ಮ ಕಣ್ಣಿಗೆ ಕಾಣುವುದೆಲ್ಲಾ ನಿಜವಾಗಿರುವುದಿಲ್ಲ. ಸರಿಯಾದ ಪರಿಶೀಲನೆಯಿಂದ ಮುನ್ನಡೆಯಿರಿ. ಬೆಳ್ಳಗಿರುವುದೆಲ್ಲಾ ಹಾಲಲ್ಲ ಎನ್ನುವುದನ್ನು ಪದೇ ಪದೇ ನೆನಪಿಸಿಕೊಂಡರೂ ತಪ್ಪಾಗಲಾರದು. ಯಾರಿಗೂ ಮೋಸ ಆಗಬಾರದು ಎನ್ನುವುದೇ ನಮ್ಮ ಉದ್ದೇಶ.



Click it and Unblock the Notifications












