For Quick Alerts
ALLOW NOTIFICATIONS  
For Daily Alerts

ಕಿವಿಯಿಂದ ದೊಡ್ಡ ಗಾತ್ರದ ಮೇಣ ಹೊರತೆಗೆದ ವಿಡಿಯೋ ವೈರಲ್!

|

ಸ್ವಚ್ಛತೆಯಿದ್ದರೆ ದೇವರಗೆ ಹತ್ತಿರವಾಗಿಸುತ್ತದೆ ಎನ್ನುವ ಮಾತಿದೆ. ಅದೇ ರೀತಿಯಾಗಿ ನಾವು ದೇಹವನ್ನು ತುಂಬಾ ಶುದ್ಧ ಹಾಗೂ ಸ್ವಚ್ಛವಾಗಿ ಇಟ್ಟುಕೊಂಡರೆ ಆಗ ನಮಗೆ ಯಾವುದೇ ಕಾಯಿಲೆಗಳು ಬರುವುದು ದೂರವಾಗುವುದು ಮತ್ತು ಸಮಸ್ಯೆಗಳು ಕೂಡ ಕಾಡದು.

ಕಿವಿಯಲ್ಲಿ ಇರುವಂತಹ ಮೇಣವನ್ನು ತೆಗೆಯಲು ಹೆಚ್ಚಿನವರು ಹೆದರಿಕೊಳ್ಳುವರು. ಆದರೆ ಇದನ್ನು ಸಮಯಕ್ಕೆ ಅನುಗುಣವಾಗಿ ತೆಗೆಯುತ್ತಿರಬೇಕು. ಇಯರ್ ಬಡ್ಸ್ ಗಳನ್ನು ಬಳಸಿಕೊಂಡು ಮೇಣವನ್ನು ತೆಗೆದರೆ ಆಗ ಕಿವಿಯು ಸ್ವಚ್ಛವಾಗಿ ಇರುತ್ತದೆ. ಈ ಲೇಖನದಲ್ಲಿ ನಿಮಗೆ ಸ್ವಚ್ಛತೆ ಪ್ರಾಮುಖ್ಯತೆ ಮತ್ತು ಒಬ್ಬ ವ್ಯಕ್ತಿ ತನ್ನ ಕಿವಿಯನ್ನು ಸ್ವಚ್ಛವಾಗಿಡದ ಪರಿಣಾಮವಾಗಿ ಏನಾಯಿತು ಎನ್ನುವ ಬಗ್ಗೆ ತಿಳಿಸಿಕೊಡಲಿದ್ದೇವೆ.

Earwax

ಈ ವ್ಯಕ್ತಿಯ ಕಿವಿಯೊಳಗೆ ಕಿವಿಯ ತೂತಿನಷ್ಟು ದೊಡ್ಡ ಗಾತ್ರದ ಮೇಣವು ತುಂಬಿಕೊಂಡಿತ್ತು. ಅದನ್ನು ವೈದ್ಯರು ಹೊರಗೆ ತೆಗೆದಿದ್ದಾರೆ. ಇದರ ಬಗ್ಗೆ ನೀವು ತಿಳಿಯಿರಿ. ರೋಗಿಯ ಕಿವಿಯಿಂದ ದೊಡ್ಡ ಗಾತ್ರದ ಮೇಣದ ತುಂಡನ್ನು ಹೊರಗೆ ತೆಗೆಯುವ ವಿಡಿಯೋವನ್ನು ಆಡಿಯಾಲಜಿಸ್ಟ್ ಅವರು ಹಂಚಿಕೊಂಡಿದ್ದಾರೆ. ಇದನ್ನು ನೋಡಿದರೆ ವಾಕರಿಕೆ ಬರುವುದು ಖಚಿತ ಎನ್ನಬಹುದು. ಇಂಗ್ಲೆಂಡಿನ ಲೈಸಸ್ಟರ್ ನಲ್ಲಿನ ಆಡಿಯಾಲಜಿಸ್ಟ್ ನೀಲ್ ರೈಥಾಥಾ ಎಂಬವರು ತನ್ನ ರೋಗಿಯ ಕಿವಿಯಲ್ಲಿ ಇದ್ದ ದೊಡ್ಡ ಗಾತ್ರದ ಮೇಣವನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಡಿಯೋದಲ್ಲಿ ವೈದ್ಯರು ಮತ್ತು ರೋಗಿಯು ಕಿವಿಯಿಂದ ದೊಡ್ಡ ಗಾತ್ರದ ಮೇಣ ತೆಗೆದ ಬಳಿಕ ನಿಟ್ಟುಸಿರು ಬಿಡುವುದನ್ನು ಕೇಳಬಹುದಾಗಿದೆ. ಈ ಮೇಣವು ಸುಮಾರು 2.5 ಸೆ.ಮೀ. ಉದ್ದವಿದೆ ಮತ್ತು ಇದು ಕಿವಿಯ ರಂಧ್ರದಷ್ಟು ದೊಡ್ಡದಿದೆ!

ಮೇಣವು ಕಿವಿಯಲ್ಲಿ ಜಮೆಯಾಗಿದ್ದ ಪರಿಣಾಮವಾಗಿ ಈ ವ್ಯಕ್ತಿಯು ವಿಮಾನದಲ್ಲಿ ಪ್ರಯಾಣಿಸಲು ಹೆದರುತ್ತಿದ್ದರು. ಯಾಕೆಂದರೆ ಅವರಿಗೆ ಒತ್ತಡದಿಂದ ಕಿವಿ ನೋವು ಉಂಟಾಗುವ ಬಗ್ಗೆ ತುಂಬಾ ಭೀತಿಯಾಗುತ್ತಲಿತ್ತು.

ಕಿವಿಯ ರಂಧ್ರವು ಸಂಪೂರ್ಣವಾಗಿ ಸ್ವಚ್ಛವಾಗುವ ತನಕ ವೈದ್ಯರು ಮೇಣವನ್ನು ತೆಗೆಯುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಸಂಪೂರ್ಣವಾಗಿ ಇದನ್ನು ಹೊರಗೆ ತೆಗೆಯಲು ಅವರು ಕಪ್ ಸಕ್ಷನ್ ಬಳಸಿಕೊಂಡಿದ್ದಾರೆ. ಕಿವಿಯ ಪದರವನ್ನು ಸರಿಯಾಗಿ ನೋಡಿದ ಬಳಿಕ ಎಂಡೋಸ್ಕೋಪಿ ಮೂಲಕವಾಗಿ ಈ ಪ್ರಕ್ರಿಯೆಯನ್ನು ನಡೆಸಲಾಗಿದೆ. ಈ ಚಿಕಿತ್ಸೆ ಮಾಡಿರುವಂತಹ ನೀಲ್ ರೈಥಾಥಾ ಅವರಿಗೆ ಯೂ ಟ್ಯೂಬ್ ನಲ್ಲಿ ಸುಮಾರು 43000 ಸಬ್ ಸ್ಕ್ರೈಬರ್ ಗಳು ಇದ್ದಾರೆ. ಇವರನ್ನು ವ್ಯಾಕ್ಸ್ ವಿಸ್ಪರರ್''ಎಂದು ಕರೆಯಲಾಗುತ್ತದೆ.

English summary

Man Has Biggest Clump Of Earwax Removed

In a gross video doing rounds on the internet, you can see an audiologist Neel Raithatha from Leicester, UK, removing the biggest clump of earwax you had ever seen from a patient's ear. Both the doctor and the patient are seen gasping in the video after seeing the lump measuring a whopping 2.5 cm being removed. The wax was the average size of the entire ear canal!
Story first published: Thursday, July 25, 2019, 12:44 [IST]
X
Desktop Bottom Promotion