For Quick Alerts
ALLOW NOTIFICATIONS  
For Daily Alerts

ಪ್ರದರ್ಶನಕ್ಕಿಟ್ಟ 85 ಲಕ್ಷ ಬೆಲೆಬಾಳುವ ಬಾಳೆಹಣ್ಣು ತಿಂದ ಭೂಪ!

|

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಂತೆ ಬಾಳೆಹಣ್ಣಿನ ಬೆಲೆ 5ರಿಂದ 10ರೂಪಾಯಿ ಇರುವುದು ಸಾಮಾನ್ಯ. ಅಥವಾ ವಿಶೇಷವಾದ, ಅಪರೂಪದ ಬಾಳೆಹಣ್ಣೆಂದರೆ 50ರೂಪಾಯಿ ಎನ್ನಬಹುದೇ?. ಆದರೆ ನ್ಯೂಯಾರ್ಕ್‌ನಲ್ಲಿ ವ್ಯಕ್ತಿಯೊಬ್ಬ 85 ಲಕ್ಷ ರೂಪಾಯಿಯ ಬಾಳೆಹಣ್ಣನ್ನು ತಿನ್ನುವ ಮೂಲಕ ವಿಶ್ವದ ಗಮನಸೆಳೆದಿದ್ದಾರೆ.

ಹೌದು, ಇಲ್ಲಿ ಇತ್ತೀಚೆಗೆ 85ಲಕ್ಷ ಮೌಲ್ಯದ ಬಾಳೆಹಣ್ಣು ಮಾರಾಟಕ್ಕಿದೆ ಎಂಬುದಾಗಿ ದಾಖಲೆಯಾಗಿತ್ತು. ಆದರೆ ಇನ್ನೂ ವಿಶೇಷವೆಂದರೆ ಪ್ರದರ್ಶನಕ್ಕೆಂದು ಇಟ್ಟಿದ್ದ ಈ ದುಬಾರಿ ಬಾಳೆಹಣ್ಣನ್ನು ತಿನ್ನುವ ಮೂಲಕ ನ್ಯೂಯಾರ್ಕ್‌ನ ಕಲಾವಿದನೊಬ್ಬ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಕಲಾವಿದ ಮೌರಿಜಿಯಾ ಕ್ಯಾಟೆಲನ್ ಎಂಬುವರು ಈ ಬಾಳೆಹಣ್ಣನ್ನು ಕೇವಲ 21 ರೂಪಾಯಿಗೆ ಖರೀದಿಸಿದ್ದರು. ನಂತರ ಇದನ್ನು ಬರೋಬ್ಬರಿ 85 ಲಕ್ಷ ರೂಪಾಯಿಗೆ ಮಾರಾಟಕ್ಕೆ ಸಹ ಇಟ್ಟು, 'ಕಾಮಿಡಿಯನ್' ಎಂಬ ಹೆಸರಿನಡಿ ಮೈಮಿ ಬೀಚ್‌ನ ಆರ್ಟ್ ಬಸಲ್ ಎಕ್ಸಿಬಿಷನ್ ನಲ್ಲಿ ಪ್ರದರ್ಶಿಸಿದ್ದರು. ಇಲ್ಲಿಗೆ ಬಂದಿದ್ದ ಡೇವಿಡ್ ದಟುನಾ ಎಂಬ ಕಲಾವಿದ ಏಕಾಏಕಿ ಗೋಡೆಗೆ ಅಂಟಿಸಿದ್ದ ವಿಶ್ವದಲ್ಲೇ ಅತಿ ಹೆಚ್ಚು ದುಬಾರಿ ಬಾಳೆಹಣ್ಣನ್ನು ತಿನ್ನುವ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ. ಈ ದೃಶ್ಯವನ್ನು ಹಲವು ಪ್ರೇಕ್ಷಕರು ವಿಡಿಯೋ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಕಲಾವಿದರು ರಚಿಸಿದ ಚಿತ್ರಗಳನ್ನು ಪ್ರದರ್ಶಿಸುವ ಪ್ರದರ್ಶನದಲ್ಲಿ ಈ ಬಾಳೆಹಣ್ಣನ್ನು ಖರೀದಿದಾರ ಮೌರಿಜಿಯಾ ಕ್ಯಾಟೆಲನ್ ಅವರು ಪ್ರದರ್ಶಿಸಿದ್ದರು. ಎಲ್ಲ ಪ್ರೇಕ್ಷಕರು ನಿಂತು ಬಾಳೆಹಣ್ನನ್ನು ನೋಡುತ್ತಿದ್ದರು, ಕೆಲವರು ಬಾಳೆಹಣ್ಣಿನ ಜತೆ ಫೋಟೋ ತೆಗೆದುಕೊಳ್ಳುತ್ತಿದ್ದರೆ ದಟುನಾ ಬಾಳೆಹಣ್ಣಿನ ಬಳಿ ಬಂದು ಏಕಾಏಕಿ ಅದನ್ನು ತೆಗೆದುಕೊಂಡು ಸವಿಯುತ್ತಾ ತಿನ್ನುವ ದೃಶ್ಯ ನೆರೆದವರಲ್ಲಿ ಅಚ್ಚರಿ ಮೂಡಿಸಿತ್ತು. ದಟುನಾ ಹಣ್ನನ್ನು ತಿನ್ನುವ ವೇಳೆ "ನನ್ನ ಹೆಸರು ಡೇವಿಡ್ ದಟುನಾ, ಹಂಗ್ರಿ ಆರ್ಟಿಸ್ಟ್ 85 ಲಕ್ಷ ಮೌಲ್ಯದ ಬಾಳೆಹಣ್ಣನ್ನು ತಿನ್ನುತ್ತಾ ಇದ್ದೇನೆ,'' ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ದಟುನಾ, "ಹಸಿದ ಕಲಾವಿದ'' (ಹಂಗ್ರಿ ಆರ್ಟಿಸ್ಟ್), ಆರ್ಟ್ ಪರ್ಫಾರ್ಮೆನ್ಸ್ ಬೈ ಮಿ ಎಂಬುದಾಗಿ ಹಾಗೂ ಮೌರಿಜಿಯಾ ಕ್ಯಾಟೆಲನ್ ಅವರ ಆರ್ಟ್ ವರ್ಕ್ ನನಗೆ ತುಂಬಾ ಇಷ್ಟವಾಗಿದೆ ಮತ್ತು ಇದನ್ನು ಪ್ರದರ್ಶಿಸಿರುವ ರೀತಿ ಅತ್ಯದ್ಭುತ ಎಂದು ಕಮೆಂಟ್ ಹಾಕುವ ಮೂಲಕ ಇನ್ನಷ್ಟು ವೈರಲ್ ಆಗಿದ್ದಾರೆ.

ಇದಕ್ಕೆ ಗ್ಯಾಲರಿಯಲ್ಲಿದ್ದ ಮಹಿಳೆಯೊಬ್ಬರು ಪ್ರತಿರೋಧ ವ್ಯಕ್ತಪಡಿಸಿದ್ದು, ಇದು ಬಹಳ ದಡ್ಡತನದ ಕೆಲಸ ಎಂದು ಟೀಕಿಸಿದ್ದಾರೆ. ನಂತರ ದಟುನಾ ಈ ಸಂಬಂಧ, ಇಲ್ಲಿನ ಅಧಿಕಾರಿಗಳ ಜತೆಗೂ ವಾಗ್ವಾದ ನಡೆಸಿದ್ದಾರೆ.

ನಂತರ ಪೊಲೀಸರು ಇವರನ್ನು ಕರೆದೊಕೊಂಡು ಹೋಗುವ ವೇಳೆ ದುಬಾರಿ ಬಾಳೆಹಣ್ಣನ್ನು ಧೈರ್ಯವಾಗಿ ತಿನ್ನುವ ಮೂಲಕ ಗಮನಸೆಳೆದ ದಟುನಾ ಹೀರೋ ಎಂಬಂತೆ ಅವರ ಜತೆ ಸೆಲ್ಫಿಗಾಗಿ ಜನ ಮುಗಿಬಿದ್ದಿದ್ದಾರೆ.

ನಂತರ ದಟುನಾ, ತಾನು ಹೊಗಳಿಸಿಕೊಳ್ಳುವ ಸಲುವಾಗಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರ ಬಳಿ ಹೇಳಿಕೆ ನೀಡುವ ಮೂಲಕ ಒಂದೆಡೆ ಇನ್ನಷ್ಟು ಟೀಕೆಗೆ ಗುರಿಯಾಗಿದ್ದಾರೆ, ಮತ್ತೊಂದೆಡೆ ಸಾರ್ವಜನಿಕರು ದಟುನಾ ಅವರನ್ನು "ಹೀರೋ'' ಎಂದು ಹಾಡಿಹೊಗಳುತ್ತಿದ್ದಾರೆ.

ಈ ಎಲ್ಲದರ ನಡುವೆ ಪ್ರದರ್ಶನದಲ್ಲಿ ನಿಜವಾಗಲೂ 85 ಲಕ್ಷ ಮೌಲ್ಯದ ಬಾಳೆಹಣ್ಣು ಇತ್ತಾ ಅಥವಾ ಅದನ್ನು ಬದಲಾಯಿಸಿದ್ದರ ಎಂಬ ಸಂಶಯಗಳು ವ್ಯಕ್ತವಾಗಿದೆ.

ಅಂದ ಹಾಗೇ ಬಾಳೆಹಣ್ಣನ್ನು 85 ಲಕ್ಷ ರೂಪಾಯಿಗೆ ಮಾರಾಟಕ್ಕೆ ಇಟ್ಟಿದ್ದ ಕಲಾವಿದ ಮೌರಿಜಿಯಾ ಕ್ಯಾಟೆಲನ್ ಅವರು ಈ ಹಿಂದೆ ಚಿನ್ನದ ಟಾಯ್ಲೆಟ್ ಸೀಟ್ ಅನ್ನು ತಯಾರಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದ್ದರು.

English summary

Man Had Banana Worth Rs 85 Lakh: viral video

A man is going viral online for eating the banana taped to the wall art installation worth Rs 85 lakh. Internet is calling him a hero.
X