For Quick Alerts
ALLOW NOTIFICATIONS  
For Daily Alerts

Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?

|

ಮಹಾಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬ. ಈ ಶುಭ ಗಳಿಗೆಗೆ ಕೋಟ್ಯಾಂತರ ಶಿವ ಭಕ್ತರು ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಶಿವರಾತ್ರಿಯ ದಿನ ದೀರ್ಘ ಉಪವಾಸದ ಜೊತೆಗೆ ರಾತ್ರಿ ಇಡೀ ಜಾಗರಣೆಯನ್ನು ಮಾಡಲಾಗುತ್ತದೆ.

2023ರಲ್ಲಿ ಶಿವರಾತ್ರಿ ಯಾವಾಗ ಆಚರಿಸಲಾಗುವುದು?

ಈ ಬಾರಿ ಅಂದರೆ 2023 ರಲ್ಲಿ ಪವಿತ್ರ ದಿನದಂದು ಶಿವರಾತ್ರಿ ಹಬ್ಬ ಬಂದಿದೆ. ಫೆಬ್ರವರಿ 18, ಶನಿವಾರದ ದಿನ ಶಿವನ ಭಕ್ತರು ಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಿದ್ದಾರೆ. ಇದಕ್ಕಾಗಿ ದೇಶದೆಲ್ಲೆಡೆ ಸಕಲ ಸಿದ್ಧತೆಗಳು ನಡೆದಿದೆ.

ಅಷ್ಟಕ್ಕೂ ಶಿವರಾತ್ರಿ ಎಂದರೇನು? ಅದರ ಮಹತ್ವವೇನು? ಯಾವ ಮುಹೂರ್ತದಲ್ಲಿ ಶಿವನ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಇತಿಹಾಸ ಏನು ಹೇಳುತ್ತೆ? ಪೂಜಾ ವಿಧಿ ವಿಧಾನಗಳು ಹೇಗಿರಲಿದೆ ಅನ್ನೋದನ್ನ ತಿಳಿಯೋಣ ಬನ್ನಿ.

ಶಿವರಾತ್ರಿಯ ಮುಹೂರ್ತದ ಬಗ್ಗೆ ತಿಳಿಯೋಣ

ಪೂಜೆಗೆ ಶುಭ ಮುಹೂರ್ತ

ಪೂಜೆಗೆ ಶುಭ ಮುಹೂರ್ತ

ಚತುರ್ದಶಿ ತಿಥಿ ಆರಂಭ(ರಾತ್ರಿ) : 6:40 ರಿಂದ 9: 46ವರೆಗೆ

ಚತುರ್ದಶಿ ತಿಥಿ ಅಂತ್ಯ(ರಾತ್ರಿ) : 9:46 ರಿಂದ 12:52, ಫೆಬ್ರವರಿ 19ವರೆಗೆ

ಮೂರನೇ ಪ್ರಹಾರ ಪೂಜೆಯ ಸಮಯ(ರಾತ್ರಿ) : 12: 52 ರಿಂದ 3:58, ಫೆಬ್ರವರಿ19ವರೆಗೆ

ನಾಲ್ಕನೇಯ ಪ್ರಹಾರ ಪೂಜೆಯ ಸಮಯ : 3:58 ರಿಂದ 7:05, ಫೆಬ್ರವರಿ 19

ಹಿಂದೂಗಳ ಆರಾಧನೆಯೆ ಮಹಾಹಬ್ಬವೇ ಮಹಾಶಿವರಾತ್ರಿ. ಶಿವ ಹಾಗೂ ರಾತ್ರಿ ಎಂಬ ಎರಡು ಪದಗಳಿಂದ ಶಿವರಾತ್ರಿ ಸೃಷ್ಟಿಯಾದ್ರು ಕೂಡ ಈ ಎರಡು ಪದಗಳಿಗೆ ಅರ್ಥಪೂರ್ಣ ವಿಶ್ಲೇಷಣೆ ಇದೆ. ಈ ದಿನವನ್ನು ಶಿವನ ರಾತ್ರಿಯೆಂದೇ ಕರೆಯಲಾಗುತ್ತದೆ. ಈ ದಿನವನ್ನು ನಮ್ಮ ಸೃಷ್ಟಿಕರ್ತ, ಇಡೀ ಜಗತ್ತನ್ನು ರಕ್ಷಿಸುವ ಮಹಾ ಶಿವನಿಗೆ ಅರ್ಪಿಸಲಾಗುತ್ತಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಮಹಾಶಿವರಾತ್ರಿಯನ್ನು ಫಾಲ್ಗುಣ ಮಾಸದಲ್ಲಿ ಆಚರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾಚ್೬ ತಿಂಗಳಲ್ಲಿ ಮಹಾಶಿವರಾತ್ರಿ ಬರುತ್ತದೆ. ಈ ವರ್ಷ ಫೆಬ್ರವರಿ ೧೮ರಂದು ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ಮಹಾಶಿವರಾತ್ರಿ ಎಂದರೇನು?

ಮಹಾಶಿವರಾತ್ರಿ ಎಂದರೇನು?

ಶಿವರಾತ್ರಿಯು ಪ್ರತಿ ವರ್ಷ ಹುಣ್ಣಿಮೆಯ ೧೪ನೇ ದಿನ ಸಂಭವಿಸುತ್ತದೆ . ಅಥವಾ ಪೂರ್ಣಚಂದ್ರ ಕಾಣಿಸಿಕೊಳ್ಳುವ ಮೊದಲ ದಿನವನ್ನು ಶಿವರಾತ್ರಿ ಎಂದು ಆಚರಣೆ ಮಾಡಲಾಗುತ್ತದೆ. ಪುರಾಣಗಳ ಪ್ರಕಾರ ಆ ದಿನ ಶಿವ ತಾಂಡವ ನೃತ್ಯವಾಡಿದ್ದು, ಮಹಾಶಕ್ತಿಯನ್ನು ಆ ದಿನವೇ ವರಸಿದ್ದಾನೆ ಎಂಬ ಉಲ್ಲೇಖವಿದೆ. ಇತಿಹಾಸಗಳ ಪ್ರಕಾರ ಶಿವರಾತ್ರಿ ಎಂದರೆ ಕತ್ತಲೆಗಳ ರಾತ್ರಿ. ಕತ್ತಲೆಯ ಹಬ್ಬವನ್ನ ಆಚರಣೆ ಮಾಡುವುದೇ ಮಹಾಶಿವರಾತ್ರಿ. ಇನ್ನೂ ಅನೇಕರ ನಂಬಿಕೆಯ ಪ್ರಕಾರ ಶಿವ ಮತ್ತು ಶಕ್ತಿಯ ಮದುವೆಯ ಆಚರಣೆಯೇ ಶಿವರಾತ್ರಿ.

ಶಿವರಾತ್ರಿ ಬಗ್ಗೆ ಇತಿಹಾಸ ಹೇಳೋದೇನು..?

ಶಿವರಾತ್ರಿ ಬಗ್ಗೆ ಇತಿಹಾಸ ಹೇಳೋದೇನು..?

1. ಶಿವರಾತ್ರಿ ಆಚರಣೆಯ ಹಿಂದಿರುವ ಹಿನ್ನಲೆಯನ್ನು ಹುಡುಕುತ್ತಾ ಹೋದರೆ ಅದರ ಹಿಂದೆ ಅನೇಕ ಕಥೆಗಳಿದೆ. ಅದರಲ್ಲಿ ಮುಖ್ಯವಾದುದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ. ಅದರಲ್ಲಿ ಮೊದಲನೇಯದ್ದು, ಶಿವ ಪಾರ್ವತಿಯ ಮದುವೆಯ ಕಥೆ. ಸತಿಯ ಸಾವಿನ ನಂತರ ದುಃಖದಲ್ಲಿದ್ದ ಪತಿಯ ಮನಸ್ಸನ್ನು ಮತ್ತೆ ಗೆಲ್ಲಲು ಸತಿ ಮತ್ತೆ ಪಾರ್ವತಿಯ ರೂಪದಲ್ಲಿ ಹುಟ್ಟಿ ಬರುತ್ತಾಳೆ. ಹಾಗೂ ಆತನ ಮನ ಒಲಿಸುತ್ತಾಳೆ. ಆನಂತರ ಮತ್ತೆ ಶಿವ ಪಾರ್ವತಿಯನ್ನ ಮದುವೆಯಾಗುತ್ತಾನೆ.

2. ಶಿವರಾತ್ರಿ ಆಚರಣೆಯ ಎರಡನೇ ಸ್ವಾರಸ್ಯಕರ ಕಥೆಯೇ ಸಮುದ್ರ ಮಂಥನ. ದೇವತೆಗಳು ಹಾಗೂ ರಾಕ್ಷಸರು ಅಮರತ್ವ ಪಡೆಯೋದಕ್ಕೋಸ್ಕರ ಕ್ಷೀರಸಾಗರವನ್ನು ಕಡೆಯುತ್ತಾರೆ ಈ ವೇಳೆ ಹೊರ ಬಂದ ಅಮೂಲ್ಯ ವಸ್ತುಗಳಲ್ಲಿ ಹಾಲಾಹಲ(ವಿಷ) ಕೂಡ ಒಂದಾಗಿತ್ತು. ಶಿವನು ಈ ಹಾಲಾಹಲವನ್ನು ಸೇವಿಸುತ್ತಾನೆ. ಈ ವೇಳೆ ವಿಷವು ಈಶ್ವರನ ದೇಹ ಸೇರದಂತೆ ಪಾರ್ವತಿ ಶಿವನ ಕತ್ತನ್ನು ಒತ್ತಿ ಹಿಡಿಯುತ್ತಾಳೆ. ಹಾಗೂ ಹಾಲಾಹಲ ಕುಡಿದ ಶಿವನಿಗೆ ಯಾವ ತೊಂದರೆಯೂ ಆಗುವುದಿಲ್ಲ ಇದೇ ಕಾರಣಕ್ಕೆ ಶಿವನನ್ನು ನೀಲ ಕಂಠ ಎಂದು ಕರೆಯುವುದು.

3. ಶಿವಪುರಾಣದಲ್ಲಿ ಉಲ್ಲೇಖವಾದ ಮೂರನೇ ಕಥೆ ಏನು ಹೇಳುತ್ತೆ ಎಂದರೆ ಒಂದು ಬಾರಿ ಬ್ರಹ್ಮ ಮತ್ತು ವಿಷ್ಣು ಇಬ್ಬರಲ್ಲಿ ಯಾರು ಶ್ರೇಷ್ಠರು ಎಂಬ ವಿಚಾರಕ್ಕಾಗಿ ಜಗಳವಾಡುತ್ತಾರೆ. ಈ ವೇಳೆ ಭೀತಿಗೊಂಡ ದೇವತೆಗಳು ಪರಮೇಶ್ವರ ಮೊರೆ ಹೋಗುತ್ತಾರೆ. ಆಗ ಶಿವನು ಉರಿಯುತ್ತಿರುವ ಅಗ್ನಿಯ ಸ್ವರೂಪವಾಗಿ ಬದಲಾಗುತ್ತಾನೆ ಆಗ ಬ್ರಹ್ಮ ಹಾಗೂ ವಿಷ್ಣು ಆ ಅಗ್ನಿಯ ಮೇಲ್ಭಾಗ ಹಾಗೂ ಕೆಳಭಾಗದ ಮೂಲ ಹುಡುಕಲು ಮುಂದಾಗುತ್ತಾರೆ. ಬ್ರಹ್ಮ ಹಂಸದ ರೂಪ ತಾಳಿದರೆ, ವಿಷ್ಣುವು ವರಹದ ರೂಪ ತಾಳಿ ಭೂಲೋಕಕ್ಕೆ ತೆರಳುತ್ತಾರೆ. ಆದರೆ ಬೆಂಕಿಗೆ ಯಾವುದೇ ಮಿತಿಯಿಲ್ಲದ ಕಾರಣ ಅದು ಮೈಲಿಗಟ್ಟಲೇ ವಿಸ್ತರಿಸಿತ್ತು. ಅದರ ಅಂತ್ಯವನ್ನು ಕಂಡುಹಿಡಿಯಲಾಗಲಿಲ್ಲ. ಆಗ ಬ್ರಹ್ಮ ದೇವನು ಮೇಲ್ಮುಖವಾಗಿ ಪ್ರಯಾಣ ಮಾಡುವಾಗ ಬ್ರಹ್ಮನಿಗೆ ಕೇತಕಿ ಹೂವು ಎದುರಾಯಿತು. ಬ್ರಹ್ಮನು ಆಕೆಯನ್ನು ಎಲ್ಲಿಂದ ಬಂದಿದ್ದಾಳೆ ಎಂದು ಕೇತಕಿಯನ್ನು ಪ್ರಶ್ನಿಸಿದನು. ಆಗ ಕೇತಕಿ ಅರ್ಪಣೆಯಾಗಿ ಉರಿಯುತ್ತಿರುವ ಸ್ತಂಭದ ಮೇಲ್ಭಾಗದಿಂದ ಬಂದಿದ್ದೇನೆ ಎಂದು ಹೇಳುತ್ತಾಳೆ. ಬ್ರಹ್ಮನು ಮೇಲಿನ ಮಿತಿಯನ್ನು ಕಾಣದೆ ಇದ್ದುದರಿಂದ ಹೂವನ್ನು ಸಾಕ್ಷಿಯಾಗಿ ತೆಗೆದುಕೊಂಡು ಬರುತ್ತಾನೆ.

ಈ ವೇಳೆ ಕೋಪಗೊಂಡ ಶಿವನು ನಿಜವಾದ ರೂಪವನ್ನು ಬಹಿರಂಗಪಡಿಸಿದನು. ಬ್ರಹ್ಮನು ಸುಳ್ಳು ಹೇಳಿದ್ದಕ್ಕಾಗಿ ಶಿವನಿಂದ ಶಿಕ್ಷಿಸಲ್ಪಟ್ಟನು ಮತ್ತು ಅವನಿಗಾಗಿ ಭೂಲೋಕದಲ್ಲಿ ಪೂಜೆ-ಪುನಸ್ಕಾರಗಳು ನಡೆಯಬಾರದು ಎಂದು ಶಿವ ಶಾಪ ನೀಡುತ್ತಾನೆ. ಇದೇ ಕಾರಣಕ್ಕೆ ಕೇತಕಿ ಹೂವನ್ನು ಸಹ ಯಾವುದೇ ಪೂಜೆಗೆ ನೈವೇದ್ಯವಾಗಿ ಬಳಸುವುದನ್ನು ನಿಷೇಧಿಸಲಾಗಿದೆ.

ಮಹಾಶಿವರಾತ್ರಿಯ ಮಹತ್ವವೇನು..?

ಮಹಾಶಿವರಾತ್ರಿಯ ಮಹತ್ವವೇನು..?

ಮಹಾಶಿವರಾತ್ರಿಯು ದಾಂಪತ್ಯ ಜೀವನದಲ್ಲಿರುವ ಪ್ರೀತಿ, ಹೊಂದಾಣಿಕೆ, ಒಗ್ಗಟ್ಟನ್ನು ಸೂಚಿಸುತ್ತದೆ. ಶಿವ ಮತ್ತು ಪಾರ್ವತಿ ಶಕ್ತಿಯ ಎರಡು ರೂಪವಾಗಿದೆ. ಅವರಿಬ್ಬರು ಒಟ್ಟಿಗೆ ನಿಂತಾಗ ಮಾತ್ರ ಪರಿಪೂರ್ಣ ಅಥವಾ ಶಕ್ತಿಶಾಲಿ ಎಂದೆನಿಸೋದು. ಇದು ಏನನ್ನು ಪ್ರತಿನಿಧಿಸುತ್ತದೆ ಎಂದರೆ ದಂಪತಿಗಳಿಬ್ಬರು ತಮ್ಮ ಬಂಧವನ್ನು ಗಟ್ಟಿಗೊಳಿಸಿದಾಗ ಮಾತ್ರ ಜೀವನದ ಪ್ರತಿಯೊಂದು ಹಂತವ್ನನು ಎದುರಿಸೋದಕ್ಕೆ ಸಾಧ್ಯವಾಗುತ್ತದೆ. ಸಂಬಂಧದಲ್ಲಿ ಒಬ್ಬರು ತಪ್ಪು ಮಾಡಿದಾಗ ಮತ್ತೊಬ್ಬರು ಅವರ ಜೊತೆ ನಿಂತು ತಿದ್ದುವ ಕೆಲಸ ಮಾಡಬೇಕು. ಹೀಗೆ ಶಿವ ಹಾಗೂ ಪಾರ್ವತಿ ದಾಂಪತ್ಯ ಜೀವನಕ್ಕೆ ಮಾದರಿಯಾಗಿದ್ದಾರೆ.

ಶಿವರಾತ್ರಿಯ ದಿನ ಪಾಲಿಸಬೇಕಾದ ಆಚರಣೆಗಳೇನು..?

ಶಿವರಾತ್ರಿಯ ದಿನ ಪಾಲಿಸಬೇಕಾದ ಆಚರಣೆಗಳೇನು..?

ಮಹಾಶಿವರಾತ್ರಿಯ ದಿನ ಇಡೀ ದಿನ-ರಾತ್ರಿ ಉಪವಾಸ ವೃತವನ್ನು ಭಕ್ತರು ಕೈಗೊಳ್ಳುತ್ತಾರೆ. ಇತರ ಜೊತೆಗೆ ಶಿವ ಭಕ್ತರು ರಾತ್ರಿ ಇಡೀ ಜಾಗರಣೆ ಇದ್ದು ಶಿವನಾಮವನ್ನು ಪಠಣೆ ಮಾಡುತ್ತಾರೆ. ಇನ್ನೂ ಶಿವರಾತ್ರಿಯ ದಿನ ಭಕ್ತರು ಬೆಳ್ಳಂ ಬೆಳಗ್ಗೆ ಎದ್ದು ಪವಿತ್ರ ಸ್ನಾನ ಮಾಡಿ ಹತ್ತಿರವಿರುವ ಶಿವನ ಮಂದಿರಕ್ಕೆ ತೆರಳಬೇಕು. ನಂತರ ಶಿವನಿಗೆ ಪ್ರೀಯವಾದ ಹಾಲು, ಮೊಸರು, ಜೇನು ತುಪ್ಪ, ತುಪ್ಪ, ಸಕ್ಕರೆ ಹಾಗೂ ನೀರನ್ನು ಅರ್ಪಣೆ ಮಾಡಬೇಕು. ಇನ್ನೂ ದೇಶದಾಂದ್ಯಂತ ಮನೆ ಮನೆಗಳಲ್ಲಿ ಹಾಗೂ ಎಲ್ಲಾ ದೇವಾಲಯಗಳಲ್ಲಿ ಶಿವ ನಾಮವನ್ನು ಜಪಿಸುವ ವಾಡಿಕೆ ಹಿಂದಿನಿಂದಾನೂ ಇದೆ. "ಓಂ ನಮಃ ಶಿವಾಯ'' ಎಂಬ ಮಂತ್ರಘೋಷದ ಜೊತೆ ಶಿವನಿಗೆ ಪ್ರೀಯವಾದ ಮಂತ್ರಗಳನ್ನು ಇಡೀ ದಿನ ಜಪಿಸುವುದರಿಂದ ಪುಣ್ಯ ಪಾಪ್ತಿಯಾಗುವುದು ಎಂಬ ನಂಬಿಕೆ ಇದೆ.

ಒಂದು ವರ್ಷದಿಂದ ಶುಭ ಗಳಿಗೆಗಾಗಿ ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ. ಶಿವನಾಮವನ್ನು ಪಟಿಸುತ್ತಾ ಶಿವನಿಗೆ ಪ್ರೀಯವಾದ ನೈವೇದ್ಯವನ್ನು ಅರ್ಪಣೆ ಮಾಡಿ ಪುನೀತರಾಗಿ.

ಮಹಾಶಿವರಾತ್ರಿಯ ಪೂಜಾ ವಿಧಾನ ಹೇಗಿರಬೇಕು..?

ಮಹಾಶಿವರಾತ್ರಿಯ ಪೂಜಾ ವಿಧಾನ ಹೇಗಿರಬೇಕು..?

ಶಿವನಿಗೆ ಇಷ್ಟವಾಗುವ ವಿವಿಧ ವಸ್ತುಗಳ ಅಭಿಷೇಕವನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಶಿವನಿಗೆ ಪ್ರಿಯವಾದ ಹಾಲು, ಗುಲಾಬಿ ನೀರು, ಶ್ರೀಗಂಧದ ಲೇಪನ, ಮೊಸರು, ಜೇನುತುಪ್ಪ, ತುಪ್ಪ, ಸಕ್ಕರೆ ಮತ್ತು ನೀರಿನ ಅಭಿಷೇಕ ಮಾಡಬೇಕು. ಯಾರು ನಾಲ್ಕು ಪ್ರಹಾರದಲ್ಲಿ ಪೂಜೆಯನ್ನು ಕೈಗೊಳ್ಳುತ್ತಾರೆ. ಅಂತಹವರು ಮೊದಲ ಪ್ರಹಾರದಲ್ಲಿ ನೀರಿನ ಅಭಿಷೇಕ, ಎರಡನೇ ಪ್ರಹಾರದಲ್ಲಿ ಮೊಸರು, ಮೂರನೇ ಪ್ರಹಾರದಲ್ಲಿ ತುಪ್ಪ ಹಾಗೂ ನಾಲ್ಕನೇ ಪ್ರಹಾರದಲ್ಲಿ ಜೇನುತುಪ್ಪದ ಅಭಿಷೇಕವನ್ನು ಕೈಗೊಳ್ಳಬೇಕು. ಅಭಿಷೇಕಗಳ ನಂತರ ಶಿವನಿಗೆ ಬಿಲ್ವ ಪತ್ರೆಗಳ ಹಾರವನ್ನು ಹಾಕಿ ಅಲಂಕರಿಸಬೇಕು.

ಶಿವರಾತ್ರಿ ದಿನದ ವಿಶೇಷ ಪೂಜಾ ಸಾಮಾಗ್ರಿ ಬಿಲ್ವ ಪತ್ರೆ. ಬಿಲ್ವ ಪತ್ರೆ ಶಿವನಿಗೆ ಪ್ರಿಯವಾದುದ್ದು. ಇದರ ಒಂದು ಎಲೆಯನ್ನು ಶಿವನಿಗೆ ಅರ್ಪಿಸಿದರೆ ಪುಣ್ಯಗಳಿಗೆ ಪಾತ್ರರಾಗುತ್ತೀವಿ ಎಂಬ ನಂಬಿಕೆ ಇದೆ. ಶಿವಲಿಂಗಕ್ಕೆ ಪಂಚಾಮೃತ ಮತ್ತು ಬಿಲ್ವ ಪತ್ರೆ ಸಮರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಇಡೀ ದಿನ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಮಾರನೆಯ ದಿನ ಪಾರಣೆ ಮಾಡಬೇಕು. ಉಪವಾಸ ಮಾಡಲು ಆಗದಿದ್ದರೆ, ಫಲಹಾರ ಮಾಡುತ್ತಾರೆ.

English summary

Maha Shivratri 2023 Date, Time, Shubh Muhurat, History, Rituals, Puja Vidhi and Significance

When is Maha shivratri, Shubha Muhurat, Significance, read on...
X
Desktop Bottom Promotion