For Quick Alerts
ALLOW NOTIFICATIONS  
For Daily Alerts

ಶಿಕ್ಷಕರ ದಿನಾಚರಣೆ 2019: ಜೀವನದ ಗುರಿ ರೂಪಿಸುವ ಗುರುಗಳಿಗೆ ಸ್ಪೂರ್ತಿದಾಯಕ ಉಲ್ಲೇಖಗಳು

|

ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪರಿಸರ ಮತ್ತು ಶಿಕ್ಷಣ ಇವೆರಡೂ ಅಪಾರವಾದ ಪ್ರಭಾವ ಬೀರುತ್ತವೆ. ಈ ಜಗತ್ತಿನಲ್ಲಿ ನಾವು ಪ್ರತಿದಿನವೂ ಕಲಿಯುತ್ತಲೇ ಇರುತ್ತೇವೆ ಹಾಗೂ ಕಲಿಸುವವರೆಲ್ಲರೂ ಒಂದು ರೀತಿಯಲ್ಲಿ ಗುರುಗಳೇ ಆಗಿದ್ದಾರೆ.

ತಾಯಿ ನಮ್ಮ ಪ್ರಥಮ ಗುರುವಾದರೆ ಶಾಲಾ-ಕಾಲೇಜಿನ ಅವಧಿಯಲ್ಲಿ ಶಿಕ್ಷಣ ನೀಡುವ ಶಿಕ್ಷಕರು ಎರಡನೇ ಗುರುವಾಗುತ್ತಾರೆ. ಜೀವನಪರ್ಯಂತ ಈ ಇಬ್ಬರು ಗುರುಗಳ ಶಿಕ್ಷಣ ನಮ್ಮ ಕೆಲಸಕ್ಕೆ ಬರುತ್ತದೆ. ಸಾಮಾನ್ಯವಾಗಿ ಶಿಕ್ಷಕರು ನೀಡುವ ಶಿಕ್ಷಣ ಪಠ್ಯ ಮತ್ತು ನಿಗದಿತ ಪಠ್ಯಕ್ರಮಕ್ಕೆ ಮೀಸಲಾಗಿರುವುದೆಂದೇ ನಾವು ಭಾವಿಸಿದ್ದೇವೆ. ಆದರೆ ಇದರ ಜೊತೆಗೇ ಶಿಕ್ಷಕರು ನೀಡುವ ಸಮಯಾಧಾರಿತ ಬುದ್ದಿವಾದಗಳಿಗೆ ಸಾಟಿಯೇ ಇರಲಾರದು.

Teachers Day

ಈ ಜಗತ್ತಿನಲ್ಲಿ ಹಂಚಿದಷ್ಟೂ ಕಡಿಮೆಯಾಗದವು ಎಂದರೆ ಜ್ಞಾನ ಮತ್ತು ಬೆಳಕು ಮಾತ್ರ! ಅಂತಹ ಜ್ಞಾನದೀವಿಗೆಯಿಂದ ವಿದ್ಯಾರ್ಥಿಗಳ ಜೀವನವನ್ನು ಜೀವನವನ್ನು ಬೆಳಗುವ ಗುರುಗಳೂ ತಮ್ಮ ಶಿಕ್ಷಣದಿಂದ ವಿದ್ಯಾರ್ಥಿಯೊಬ್ಬ ಜೀವನದಲ್ಲಿ ಯಶಸ್ವಿಯಾದರೆ ತಾವೇ ಯಶಸ್ವಿಯಾದಷ್ಟು ಕೃತಾರ್ಥತೆ ಅನುಭವಿಸುತ್ತಾರೆ.

Teachers Day

ಒತ್ತಡದಲ್ಲಿ ಶಿಕ್ಷಕರು

ಶಿಕ್ಷಕರು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಒತ್ತಡಗಳ ನಡುವೆ ಕೆಲಸವನ್ನು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 2019 ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆ ಹಿನ್ನಲೆ ಶಿಕ್ಷಕರಿಗೆ ಪ್ರೇರಣೆ ನೀಡುವಂಥ ಜಗತ್ತಿನ ಶ್ರೇಷ್ಠ ಶಿಕ್ಷಣಕಾರರು ಮತ್ತು ಚಿಂತಕರು ನೀಡಿದ ಈ ಸ್ಪೂರ್ತಿದಾಯಕ ಉಕ್ತಿಗಳನ್ನು ನಾವಿಲ್ಲಿ ಸಂಗ್ರಹಿಸಿದ್ದೇವೆ.

ಜಗತ್ತಿನ ಶ್ರೇಷ್ಠ ಶಿಕ್ಷಣಕಾರರು ಮತ್ತು ಚಿಂತಕರು ನೀಡಿದ ಈ ಸ್ಪೂರ್ತಿದಾಯಕ ಉಕ್ತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇನ್ನಷ್ಟು ಹೆಚ್ಚಿನ ಶಕ್ತಿಯನ್ನು ಇಂದಿನ ದಿನ ಅಥವಾ ಈ ವಾರವೆಲ್ಲಾ . ಈ ಮೂಲಕ ಬೋಲ್ಡ್ ಸ್ಕೈ ಕನ್ನಡ ದೇಶದ ಸಮಸ್ತ ಶಿಕ್ಷಕರಿಗ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತದೆ.

ವಿಶ್ವದ ಖ್ಯಾತನಾಮರು ಶಿಕ್ಷಕರ ಮೌಲ್ಯದ ಬಗ್ಗೆ ನೀಡಿರುವ ಪ್ರೇರಣಾತ್ಮಕ ಹೇಳಿಕೆಗಳಿವು:

Teachers Day

1. ಓರ್ವ ವ್ಯಕ್ತಿಯ ನಡತೆ, ಕಲಿಕಾ ಸಾಮರ್ಥ್ಯವನ್ನು ಉತ್ತಮಗೊಳಿಸಿ ಆತನ ಭವಿಷ್ಯವನ್ನು ಸುಂದರಗೊಳಿಸುವ ಶಿಕ್ಷಕ ವೃತ್ತಿ ಅತಿ ಪವಿತ್ರವಾಗಿದೆ. ಒಂದು ವೇಳೆ ನನ್ನನ್ನು ಉತ್ತಮ ಶಿಕ್ಷಕ ಎಂದು ಸಮಾಜ ಗುರುತಿಸಿದರೆ ಇದಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲ - ಡಾ. ಎ.ಪಿ.ಜೆ. ಅಬ್ದುಲ್ ಕಲಾಂ.

Teachers Day

2. ಓರ್ವ ಶಿಕ್ಷಕ, ಓರ್ವ ಉತ್ತಮ ಕಲಾವಿದನಂತೆ ತನ್ನ ವಿದ್ಯಾರ್ಥಿಗಳ ಗಮನವನ್ನು ತಾನು ಬೋಧಿಸುವ ವಿಷಯದ ಕಡೆ ಕೇಂದ್ರೀಕರಿಸುವಂತೆ ಮಾಡಬೇಕು - ಜಾನ್ ಹೆನ್ರಿಕ್

Teachers Day

3. ಜೀವಿತಾವಧಿಯಲ್ಲಿ ಒಬ್ಬ ಉತ್ತಮ ಶಿಕ್ಷಕ ಕೆಲವೊಮ್ಮೆ ಓರ್ವ ಅಪರಾಧಿಯನ್ನೂ ಉತ್ತಮ ಪ್ರಜೆಯನ್ನಾಗಿ ಬದಲಾಯಿಸಬಹುದು. ಫಿಲಿಪ್ ವೈಲಿ

Teachers Day

4. ವೇತನವನ್ನೇ ಪಡೆಯದೆ ಮಕ್ಕಳನ್ನು ದೈಹಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುವ ಉತ್ತಮ ಶಿಕ್ಷಕ ಅಕ್ಷರಶಃ ದೇವತಾ ಮನುಷ್ಯನೇ ಸರಿ. - ಇವಾ ಅಮುರಿ

Teachers Day

5. ಒಳ್ಳೆಯ ಶಿಕ್ಷಕ ಒಂದು ಮೇಣದ ಬತ್ತಿಯಂತಿರುತ್ತಾನೆ, ಇತರರಿಗೆ ದಾರಿ ಮಾಡಿಕೊಡಲು ತನ್ನನ್ನು ತಾನೇ ದಹಿಸಿಕೊಳ್ಳುವಂತೆ- ಮುಸ್ತಫಾ ಕೆಮಾಲ್ ಅಟಾಟುರ್ಕ್

Teachers Day

6. ಉತ್ತಮ ಶಿಕ್ಷಕರು ವಿದ್ಯಾರ್ಥಿಗಳಿಂದ ಅತ್ಯುತ್ತಮವಾದುದನ್ನು ಹೇಗೆ ಹೊರತರುವುದು ಎಂದು ತಿಳಿದುಕೊಂಡಿರುತ್ತಾರೆ. ಚಾರ್ಲ್ಸ್ ಕುರಾಲ್ಟ್

Teachers Day

7. ಒಬ್ಬ ಉತ್ತಮ ಶಿಕ್ಷಕನ ಪ್ರಭಾವವು ತರಗತಿಯ ಆಚೆಗೆ ಅಂದರೆ ಮಕ್ಕಳ ಭವಿಷ್ಯದವರೆಗೂ ವಿಸ್ತರಿಸುತ್ತದೆ. ಎಫ್. ಸಿಯೋನಿಲ್ ಜೋಸ್

Teachers Day

8. ಶಿಕ್ಷಕರು ನಮ್ಮ ಅತ್ಯುತ್ತಮ ಸಾರ್ವಜನಿಕ ಸೇವಕರು; ಅವರು ತಮ್ಮ ಜೀವನವನ್ನು ನಮ್ಮ ಯುವಜನರಿಗೆ ಶಿಕ್ಷಣ ನೀಡಲು ಮುಡಿಪಾಗಿಡುತ್ತಾರೆ ಮತ್ತು ನಾಳೆಯ ನಮ್ಮ ರಾಷ್ಟ್ರವನ್ನೂ ರೂಪಿಸುತ್ತಾರೆ. ಸೊಲೊಮನ್ ಒರ್ಟಿಜ್

Teachers Day

9. ಸ್ವಂತ ಶಿಕ್ಷಣವನ್ನು ನೆನೆಸಿಕೊಳ್ಳುವ ಪ್ರತಿಯೊಬ್ಬರೂ ತಮ್ಮ ಶಿಕ್ಷಕರನ್ನು ಖಂಡಿತವಾಗಿಯೂ ನೆನೆಸಿಕೊಳ್ಳುತ್ತಾರೆ. ಶಿಕ್ಷಕನು ಶಿಕ್ಷಣ ವ್ಯವಸ್ಥೆಯ ಹೃದಯ. ಸಿಡ್ನಿ ಹುಕ್

Teachers Day

10. ಸಾಧಾರಣ ಶಿಕ್ಷಕ ಹೇಳುತ್ತಾನೆ. ಒಳ್ಳೆಯ ಶಿಕ್ಷಕ ವಿವರಿಸುತ್ತಾನೆ. ಉನ್ನತ ಶಿಕ್ಷಕನು ಪ್ರದರ್ಶಿಸುತ್ತಾನೆ. ಮಹಾನ್ ಶಿಕ್ಷಕ ಸ್ಫೂರ್ತಿ ನೀಡುತ್ತಾನೆ. ವಿಲಿಯಂ ಎ. ವಾರ್ಡ್

Teachers Day

11. ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನದಲ್ಲಿ ಸಂತೋಷವನ್ನು ಜಾಗೃತಗೊಳಿಸುವುದೇ ಶಿಕ್ಷಕರ ಅತ್ಯುತ್ತಮ ಕಲೆಯಾಗಿದೆ. ಆಲ್ಬರ್ಟ್ ಐನ್ಸ್ಟೈನ್

Teachers Day

12. ನನ್ನ ವಯಸ್ಸು ಹೆಚ್ಚುತ್ತಿದ್ದ ಹಾಗೇ, ನನ್ನ ಶಿಕ್ಷಕರು ಹೆಚ್ಚು ಹೆಚ್ಚು ಚುರುಕಾಗುತ್ತಾರೆ. ಆಲಿ ಕಾರ್ಟರ್

Teachers Day

13. ಒಳ್ಳೆಯ ಬೋಧನೆಯು ಸಾಕಷ್ಟು ನಿಧಾನವಾಗಿರಬೇಕು, ಅದು ಗೊಂದಲಕ್ಕೀಡಾಗಬಾರದು ಮತ್ತು ನೀರಸ ಎನಿಸುವಂತೆ ಕಾಣುವ ವೇಗವಾಗಿರಬೇಕು. ಸಿಡ್ನಿ ಜೆ. ಹ್ಯಾರಿಸ್

Teachers Day

14. ಉತ್ತಮ ಬೋಧನೆಯಲ್ಲಿ ಕಾಲುಭಾಗ ಮಾತ್ರ ತಯಾರಿ ಇರುತ್ತದೆ, ಇನ್ನುಳಿದ ಮುಕ್ಕಾಲು ಭಾಗ ಪ್ರಾಯೋಗಿಕ. ಗೇಲ್ ಗಾಡ್ವಿನ್

English summary

Teachers Day Special: Inspiring Quotes For Teachers

All teachers cherish the feeling: The thrill of inspiration that comes from inspiring others. But whether it be writing report cards or managing the classroom, daily stresses can make it hard to keep that inspiration alive. We’ve dug through many sources to find Few of our favorite motivational quotes for teachers. Re-energize your day or week with these inspiring quotes from some of the world’s greatest educators and thinkers!
Story first published: Tuesday, September 3, 2019, 15:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more