For Quick Alerts
ALLOW NOTIFICATIONS  
For Daily Alerts

'ಗಾರ್ಬೆಜ್ ಕೆಫೆ': ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನೀಡಿ ಉಚಿತ ಊಟ ಪಡೆಯಿರಿ!

|

ಪ್ಲಾಸ್ಟಿಕ್ ಎನ್ನುವ ಮಹಾಮಾರಿಯು ಈಗ ವಿಶ್ವದೆಲ್ಲೆಡೆ ಹಾಹಾಕಾರ ಉಂಟು ಮಾಡಿದೆ. ಮಣ್ಣಿನಲ್ಲಿ ಕರಗದೆ ಇರುವಂತಹ ಪ್ಲಾಸ್ಟಿಕ್‌ನ್ನು ವಿಲೇವಾರಿ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಪ್ಲಾಸ್ಟಿಕ್ ಎನ್ನುವುದು ಪ್ರಕೃತಿ ಮೇಲೆ ಮಾರಕ ಪರಿಣಾಮ ಬೀರುತ್ತಿದ. ಇದು ಸಮುದ್ರದ ಆಳಕ್ಕೆ ತೆರಳಿ ಮೀನುಗಳಿಗೆ ಉಸಿರಾಡದಂತೆ ಮಾಡುತ್ತಿದೆ. ಹೀಗಾಗಿ ಹೆಚ್ಚಿನ ರಾಷ್ಟ್ರಗಳು ಪ್ಲಾಸ್ಟಿಕ್ ನಿಷೇಧ ಮಾಡುತ್ತಿದೆ. ಭಾರತವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಮತ್ತು ಪ್ಲಾಸ್ಟಿಕ್ ಕಸದ ವಿಲೇವಾರಿ ಮಾಡಲು ಹಲವಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿವೆ. ಕಸವು ತುಂಬಿರುವ ಕಾರಣದಿಂದಾಗಿ ಸ್ವಚ್ಛ ಭಾರತ್ ಅಭಿಯಾನವನ್ನು ಕೇಂದ್ರ ಸರ್ಕಾರವು ಆರಂಭಿಸಿದೆ.

ಪ್ರತಿನಿತ್ಯವು ದೇಶದೆಲ್ಲೆಡೆಯಲ್ಲಿ ಲೋಡ್ ಗಟ್ಟಲೆ ಕಸವು ಬೀಳುತ್ತಲೇ ಇದೆ. ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ದಿನಕ್ಕೆ 1.50 ಲಕ್ಷ ಮೆಟ್ರಿಕ್ ಟನ್ ಘನತ್ಯಾಜ್ಯ ಮತ್ತು ಶೇ.90ರಷ್ಟು ಸಂಪೂರ್ಣವಾಗಿ ಸಂಗ್ರಹವಾದ ಕಸವು ಸಂಗ್ರಹವಾಗುತ್ತಿದೆ. ಕೇವಲ ಇದು ಮಾತ್ರ ದೇಶದ ಸಮಸ್ಯೆಯಲ್ಲ, ಇದರೊಂದಿಗೆ ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ನೀಡುವುದು ಕೂಡ ದೊಡ್ಡ ಸವಾಲಾಗಿದೆ.

ಛತ್ತೀಸಗಢದಲ್ಲಿ ಇರುವಂತಹ ಅಂಬಿಕಾಪುರ ಮಹಾನಗರ ಪಾಲಿಕೆ(ಎಎಂಸಿ)ಯು ಗಾರ್ಬೆಜ್ ಕೆಫೆ'ಎನ್ನುವುದನ್ನು ಆರಂಭಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನೀಡಿ ಆಹಾರ ಪಡೆಯಬಹುದು. ಇದು ತುಂಬಾ ಒಳ್ಳೆಯ ಅಭಿಯಾನವಲ್ಲವೇ? ಕೇವಲ ಎರಡು ಲಕ್ಷ ಜನಸಂಖ್ಯೆಯಿರುವ ಈ ನಗರ ಇದಾಗಿದೆ. ಛತ್ತೀಸಗಢ ರಾಜ್ಯವು ಅತೀ ಸ್ವಚ್ಛ ನಗರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇಂತಹ ಅದ್ಭುತವಾದ ಅಭಿಯಾನದಿಂದ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತಾಗಿದೆ. ಇಲ್ಲಿ ಕಸದ ವಿಲೇವಾರಿಯೂ ಆಗುವುದು ಮತ್ತು ಹಸಿವು ಕೂಡ ನೀಗುವುದು. ಇದು ಕೇವಲ ಕಸದ ವಿಲೇವಾರಿಗಾಗಿ ಮಾಡಿರುವಂತಹ ಕಾರ್ಯಕ್ರಮವಲ್ಲ, ಇಲ್ಲಿ ಹೆಚ್ಚಾಗಿ ನಿರ್ವಸತಿಗರಿಗೆ ಆಹಾರ ನೀಡುವ ಮಹತ್ತರ ಉದ್ದೇಶವಿದೆ.

Plastic Waste Will Get You Free Food

ಈ ಅಭಿಯಾನ ಹೇಗೆ ಹೊಳೆದಿದೆ?

ಅಂಬಿಕಾಪುರ ನಗರ ಪಾಲಿಕೆ ಮೇಯರ್ ಅಜಯ್ ತಿರ್ಕೆ ಅವರು ತನ್ನ ಬಜೆಟ್ ನಲ್ಲಿ ಈ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ್ದಾರೆ ಮತ್ತು 5.5 ಲಕ್ಷ ರೂ. ಅನುದಾನದ ಜತೆಗೆ ಇದನ್ನು ಆರಂಭಿಸಿದ್ದಾರೆ. ಗಾರ್ಬೆಜ್ ಕೆಫೆ ಅಭಿಯಾನವು ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಬರುತ್ತದೆ. ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿಕೊಂಡು ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಈ ಕೆಫೆಯು ಅಂಬಿಕಾಪುರ ಬಸ್ ನಿಲ್ದಾಣದ ಬಳಿಯಲ್ಲೇ ಇದೆ. ಈ ಯೋಜನೆಗೆ ಹಣದ ಕೊರತೆಯಾದರೆ ಆಗ ಶಾಸಕರ ಕ್ಷೇತ್ರ ನಿಧಿ ಮತ್ತು ಸಂಸದ ನಿಧಿಯಿಂದ ಇದನ್ನು ಪಡೆದುಕೊಂಡು, ಇದು ಸರಾಗವಾಗಿ ಸಾಗಲು ಪ್ರಯತ್ನಿಸಲಾಗುವುದು ಎಂದು ಎಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

Plastic Waste Will Get You Free Food

ಉಚಿತ ಆಹಾರಕ್ಕೆ ಪ್ಲಾಸ್ಟಿಕ್ ತ್ಯಾಜ್ಯ

ಈ ಯೋಜನೆಯಲ್ಲಿ ಕಸ ಹೆಕ್ಕುವವರು ಅಥವಾ ತುಂಬಾ ಬಡತನದಲ್ಲಿರುವ ಜನರು ಇಲ್ಲಿ ಒಂದು ಅರ್ಧ ಅಥವಾ ಒಂದು ಕಿ.ಲೋ. ಪ್ಲಾಸ್ಟಿಕ್ ತ್ಯಾಜ್ಯ ನೀಡಿ ಉಚಿತ ಆಹಾರ ಪಡೆಯಬಹುದು. 500 ಗ್ರಾಂ ತ್ಯಾಜ್ಯಕ್ಕೆ ಉಪಾಹಾರ ಮತ್ತು ಒಂದು ಕಿ.ಲೋ. ತ್ಯಾಜ್ಯಕ್ಕೆ ಊಟ ಸಿಗುತ್ತದೆ. ತ್ಯಾಜ್ಯವು ಸಂಗ್ರಹಣೆಯಾದ ಬಳಿಕ ಇದನ್ನು ಸಾಲಿಡ್ ಆ್ಯಂಡ್ ಲಿಕ್ವಿಡ್ ರಿಸೋರ್ಸ್ ಮ್ಯಾನೇಜ್ ಮೆಂಟ್(ಎಸ್ ಎಲ್ ಆರ್ ಎಂ)ಗೆ ಕಳುಹಿಸಿಕೊಡಲಾಗುತ್ತದೆ. ಇದು ಕಸ ಹೆಕ್ಕುವವರಿಗೆ ಉಚಿತ ಕೂಪನ್ ನೀಡುತ್ತದೆ. ಈ ಕೂಪನ್ ನ್ನು ಕ್ಯಾಂಟೀನ್ ನಲ್ಲಿ ಉಚಿತ ಉಪಾಹಾರ ಮತ್ತು ಊಟ ಪಡೆಯಲು ಬಳಸಬಹುದು.

ಪ್ಲಾಸ್ಟಿಕ್ ತ್ಯಾಜ್ಯ ಪಡೆದ ಬಳಿಕ ಇದನ್ನು ಅವುಗಳ ಪ್ಲಾಂಟ್ ನಲ್ಲಿ ಮರುಬಳಕೆ ಮಾಡಲಾಗುತ್ತದೆ ಮತ್ತು ಪ್ಲಾಸ್ಟಿಕ್ ಕಣಗಳನ್ನು ಮತ್ತೆ ಮಾರಲಾಗುವುದು. ಮೇಯರ್ ಅಜಯ್ ಟಿರ್ಕೆ ಅವರು ಹೇಳುವ ಪ್ರಕಾರ, ಮರುಬಳಕೆಯ ಪ್ಲಾಸ್ಟಿಕ್ ಕಣ ಮತ್ತು ಪೇಪರ್ ತಿಂಗಳೀಗೆ ಸುಮಾರು 12 ಲಕ್ಷ ರೂಪಾಯಿ ಆದಾಯ ನೀಡುತ್ತದೆ ಎನ್ನುತ್ತಾರೆ.

ಇನ್ನಷ್ಟು ಗಾರ್ಬೆಜ್ ಕೆಫೆ ಯಾಕೆ ಬೇಕು?

ಗಾರ್ಬೆಜ್ ಕೆಫೆಯು ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲಿದೆ ಮತ್ತು ತ್ಯಾಜ್ಯದಿಂದ ಆಗುವಂತಹ ಕಾಯಿಲೆಗಳನ್ನು ತಡೆಯುವುದು. ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ಮಾಡಿದರೆ, ಅದು ನೀರನ್ನು ಹೀರಿಕೊಳ್ಳುವುದಿಲ್ಲ ಮತ್ತು ಅದು ಪ್ರವಾಹದ ಸಂದರ್ಭದಲ್ಲೂ ಹೆಚ್ಚು ಕಾಲ ಬಾಳಿಕೆ ಬರುವುದು. ಇದರಿಂದಾಗಿ ರಸ್ತೆಗೆ ತಗಲುವ ಖರ್ಚು ಕೂಡ ಕಡಿಮೆ. ಭಾರತವನ್ನು ಕಸ ಮತ್ತು ಹಸಿವಿನಿಂದ ಮುಕ್ತಗೊಳಿಸಲು ಶಪಥ ಮಾಡುವ...

English summary

Here Plastic Waste Will Get You Free Food

Garbage cafe is a great initiative started by the municipal corporation of Chattisgarh. Under this scheme, people can exchange garbages up to 1 kg for a full meal and 500 g for a free breakfast. The scheme has especially benefitted rag pickers and poor and expanding to provide shelters to homeless garbage collectors.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X