For Quick Alerts
ALLOW NOTIFICATIONS  
For Daily Alerts

Chanakya Neeti: ಚಾಣಕ್ಯ ಪ್ರಕಾರ ಪುರುಷನ ಬದುಕಿನಲ್ಲಿ ಅದೃಷ್ಟ ತರುವ 3 ವ್ಯಕ್ತಿಗಳಿವರು

|

ಚಾಣಕ್ಯ ಪ್ರಕಾರ ನಮ್ಮ ಬಗ್ಗೆಈ ಮೂರು ವ್ಯಕ್ತಿಗಳನ್ನ ದೂರುವುದಕ್ಕೆ ಅವಕಾಶ ಕೊಡಲೇಬಾರದು, ಆ ಮೂರು ವ್ಯಕ್ತಿಗಳಾರು ಎಂದು ನೋಡೋಣ ಬನ್ನಿ:

ಚಾಣಕ್ಯ ಹೇಳಿರುವ ಯಾವುದೇ ಅಂಶವನ್ನು ತಳ್ಳಿ ಹಾಕುವಂತಿಲ್ಲ, ಪ್ರತಿಯೊಂದು ವಿಷಯವೂ ನಮಗೇ ಹೇಳಿದಷ್ಟು ಅನ್ವಯಿಸುತ್ತದೆ, ಆದ್ದರಿಂದಲೇ ಚಾಣಕ್ಯ ನೀತಿ ಇಂದಿಗೂ ಪ್ರಸ್ತುತ, ಮುಂದೆಯೂ ಅನ್ವಯಿಸುತ್ತದೆ. ಸುಖ ಹಾಗೂ ದುಃಖ ಎಂಬುವುದು ಜೀವನದ ಭಾಗ, ಖುಷಿಯನ್ನು ಹಂಚಿಕೊಂಡರೆ ಖುಷಿ ಹೆಚ್ಚಾಗುತ್ತದೆ, ದುಃಖವನ್ನು ಮತ್ತೊಬ್ಬರ ಜೊತೆ ಹಂಚಿಕೊಂಡಾಗ ನಮ್ಮ ದುಃಖ ಕಡಿಮೆಯಾಗುತ್ತದೆ. ಚಾಣಕ್ಯ ಪ್ರಕಾರ ಎಂಥದ್ದೇ ಪರಿಸ್ಥಿತಿಯಲ್ಲಿ ನಮ್ಮ ಜೊತೆ ಮೂವರು ವ್ಯಕ್ತಿಗಳು ನಿಲ್ಲುತ್ತಾರೆ, ಅವರನ್ನು ಎಂದಿಗೂ ದೂರ ತಳ್ಳಬಾರದು, ಆದ್ದರಿಂದ ಈ ವ್ಯಕ್ತಿಗಳು ಜೀವನದಲ್ಲಿ ತುಂಬಾನೇ ಮುಖ್ಯ, ಆ ಮೂವರು ವ್ಯಕ್ತಿಗಳಾರು ಎಂದು ನೋಡುವುದಾದರೆ

ಸಂಸ್ಕಾರವಂತ ಹೆಂಡತಿ

ಸಂಸ್ಕಾರವಂತ ಹೆಂಡತಿ

ಸಂಸ್ಕಾರವಂತ ಹೆಂಡತಿ ತನ್ನ ಗಂಡನಿಗೆ ಸದಾ ನೆರಳಾಗಿರುತ್ತದೆ, ಪ್ರತಿಯೊಂದು ಕಷ್ಟ-ಸುಖದಲ್ಲಿ ಗಂಡನ ಜೊತೆಯಾಗಿರುತ್ತಾಳೆ. ಕಷ್ಟ ಸಂದರ್ಭದಲ್ಲಿ ಗಂಡನಿಗೆ ಧೈರ್ಯವನ್ನು ತುಂಬುತ್ತಾಳೆ, ಕುಟುಂಬಕ್ಕೆ ಕಷ್ಟ ಅಂತ ಬಂದಾಗ ಕುಟುಂಬದ ರಕ್ಷಣೆಗೆ ನಿಲ್ಲುತ್ತಾಳೆ. ಇಂಥ ಹೆಂಡತಿ ಸಿಕ್ಕರೆ ಅಂಥ ಗಂಡ ಪುಣ್ಯವಂತ.

ಯಾವುದೇ ಕಾರಣಕ್ಕೆ ಇಂಥ ಪತ್ನಿಯನ್ನು ದೂರ ಮಾಡಬಾರದು ಎಂದು ಚಾಣಕ್ಯ ಹೇಳುತ್ತಾರೆ.

ಚಾಣಕ್ಯ ಹೇಳಿರುವ ಈ ಅಂಶ ಎಷ್ಟು ಸತ್ಯ ಅಲ್ವಾ? ಒಂದು ಒಳ್ಳೆಯ ಹೆಂಡತಿ ಸಿಕ್ಕರೆ ಅವನ ಬದುಕು ಸುಂದರವಾಗಿರುತ್ತದೆ, ಇಲ್ಲದಿದ್ದರೆ ಬದುಕು ನರಕವಾಗುವುದು. ಹೆಂಡತಿಯಾದವಳು ಗಂಡನ ಕಷ್ಟ-ಸುಖದಲ್ಲಿ ಭಾಗಿಯಾಗಬೇಕು, ಅದುವೇ ಪತ್ನಿ ಧರ್ಮ. ಹೀಗಿದ್ದರೆ ಗಂಡನಿಗೆ ಜೀವನದಲ್ಲಿ ಎಂಥದ್ದೇ ಕಷ್ಟ ಬಂದರೂ ಕಷ್ಟ ಅನಿಸಲ್ಲ.

ಇನ್ನು ಗಂಡಸರು ಅಷ್ಟೇ ಇಂಥ ಪತ್ನಿ ಸಿಕ್ಕರೆ ಅದು ನಿಮ್ಮ ಅದೃಷ್ಟವೆಂದು ಭಾವಿಸಬೇಕು, ಅವಳಿಗೆ ನೋವಾಗುವಂತೆ ನಡೆದುಕೊಳ್ಳಲು ಹೋಗಬೇಡಿ, ಇಂಥ ಹೆಂಡತಿಯನ್ನು ಯಾವುದೋ ಕಾರಣಕ್ಕೆ ದೂರ ಮಾಡಿದರೆ ಖಂಡಿತ ಬದುಕಿನಲ್ಲಿ ನೆಮ್ಮದಿ ಇರಲ್ಲ. ಆದ್ದರಿಂದ ಸಂಸ್ಕಾರವಂತ ಹೆಂಡತಿ ಒಬ್ಬ ಪುರುಷನ ಬದುಕಿನಲ್ಲಿ ಅದೃಷ್ಟ ತರುತ್ತಾಳೆ ಎಂಬುವುದು ಚಾಣಕ್ಯನ ಮಾತಾಗಿದೆ.

ಗುಣವಂತ ಮಕ್ಕಳು

ಗುಣವಂತ ಮಕ್ಕಳು

ಮಕ್ಕಳು ಎಲ್ಲಾ ಸಂದರ್ಭದಲ್ಲಿ ಪೋಷಕರ ಜೊತೆ ನಿಲ್ಲಬೇಕು. ನಮ್ಮ ಮಕ್ಕಳಲ್ಲಿ ಒಳ್ಳೆಯ ಗುಣಗಳಿರಬೇಕು ಎಂದು ಪ್ರತಿಯೊಬ್ಬ ಪೋಷಕರು ಬಯಸುತ್ತಾರೆ. ಮಕ್ಕಳನ್ನು ಗುಣವಂತರಾಗಿ ಬೆಳೆಸಿದರೆ ಅಂಥ ಮಕ್ಕಳು ಪೋಷಕರಿಗೆ ವಯಸ್ಸಾದಾಗ ಅವರ ರಕ್ಷಣೆ ಮಾಡುತ್ತಾರೆ. ಮಕ್ಕಳಲ್ಲಿ ಯಾವುದೇ ಕೆಟ್ಟ ಚಟಗಳಿರಬಾರದು, ಯಾರಿಗೂ ಅಂಥ ಮಕ್ಕಳಿರುತ್ತದೋ ಅವರು ದುಃಖ ಪಡಬೇಕಾಗಿಲ್ಲ, ಏಕೆಂದರೆ ಯಾವುದೇ ಸಂದರ್ಭದಲ್ಲಿ ಮಕ್ಕಳು ನಿಮ್ಮ ಕೈ ಬಿಡಲ್ಲ ಎಂಬುವುದಾಗಿ ಚಾಣಕ್ಯ ಹೇಳುತ್ತಾರೆ.

ಪೋಷಕರಿಗೆ ಮಕ್ಕಳೇ ಆಸ್ತಿ, ಮಕ್ಕಳಿಗೆ ಒಳ್ಳೆಯ ಗುಣಗಳನ್ನು ಕಲಿಸಬೇಕು, ಆಗ ಮಾತ್ರ ಆ ಮಕ್ಕಳು ನಿಮಗೆ ನೆಮ್ಮದಿ ನೀಡಲು ಸಾಧ್ಯ, ಮಕ್ಕಳ ಗುಣ ಸರಿಯಿಲ್ಲದಿದ್ದರೆ ಪೋಷಕರ ನೆಮ್ಮದಿ ದೂರಾಗುವುದು, ಸಮಾಜದಲ್ಲಿ ಕೆಟ್ಟ ಹೆಸರು ತಂದುಕೊಡುತ್ತಾರೆ. ಅದೇ ಒಳ್ಳೆಯ ಗುಣದ ಮಕ್ಕಳಿದ್ದರೆ ಯಾವ ಕಾರಣಕ್ಕೂ ಚಿಂತಿಸಬೇಕಾಗಿ ಅವರು ಸದಾ ತಮ್ಮ ಪೋಷಕರನ್ನು ಕಾಪಾಡುತ್ತಾರೆ. ಯಾವ ವೃದ್ಧಾಶ್ರಮವೂ ಈ ಸಮಾಜದಲ್ಲಿ ಇರಲ್ಲ, ಆದ್ದರಿಂದ ಒಳ್ಳೆಯ ಮಕ್ಕಳನ್ನು ಪಡೆದವರೇ ಅದೃಷ್ಟವಂತವರು.

ಒಳ್ಳೆಯ ಸ್ನೇಹಿತರು

ಒಳ್ಳೆಯ ಸ್ನೇಹಿತರು

ಒಳ್ಳೆಯ ಸ್ನೇಹಿತರು ನಮ್ಮ ಜೊತೆಗಿದ್ದರೆ ಅದುವೇ ನಮಗೆ ದೊಡ್ಡ ಶಕ್ತಿ. ಒಳ್ಳೆಯವರ ಸಂಗ ಮಾಡಿದರೆ ನಮ್ಮ ಬದುಕಿನಲ್ಲಿ ಒಳ್ಲೆಯದಾಗುತ್ತದೆ, ಅವರು ನಮ್ಮನ್ನು ಒಳ್ಳೆಯ ಮಾರ್ಗದಲ್ಲಿ ನಡೆಸುತ್ತಾರೆ. ಒಬ್ಬ ಒಳ್ಳೆಯ ಸ್ನೇಹಿತ ಇದ್ದರೆ ನಾವು ತಪ್ಪು ಹೆಜ್ಜೆ ಇಡಲು ಬಿಡುವುದಿಲ್ಲ, ನಮ್ಮ ಕಷ್ಟ-ಸುಖದಲ್ಲಿ ಜೊತೆ ನಿಲ್ಲುತ್ತಾರೆ. ಒಳ್ಳೆಯ ಸ್ನೇಹಿತ ಸಿಕ್ಕರೆ ಅವರನ್ನು ಬಿಡಲೇಬಾರದು ಎಂದು ಚಾಣಕ್ಯ ಹೇಳುತ್ತಾರೆ.

ಎಲ್ಲರಿಗೂ ಸ್ನೇಹಿತರು ಇರುತ್ತಾರೆ, ಆದರೆ ನಿಜವಾದ ಸ್ನೇಹಿತರು ಯಾರು ಎಂಬುವುದು ನಮ್ಮ ಜೀವನದಲ್ಲಿ ಕಷ್ಟ ಬಂದಾಗ ಮಾತ್ರ ತಿಳಿಯುವುದು. ಯಾರು ನಮ್ಮ ಕಷ್ಟದಲ್ಲಿ ಜೊತೆಗಿದ್ದು ನಮ್ಮ ಕಣ್ಣೀರು ಒರೆಸಲು ಸಹಾಯ ಮಾಡುತ್ತಾರೋ ಅಂಥ ಸ್ನೇಹಿತರನ್ನು ಯಾವುದೇ ಕಾರಣಕ್ಕೆ ದೂರ ಮಾಡಬಾರದು, ಅಂಥ ಸ್ನೇಹಿತರನ್ನು ಕಳೆದುಕೊಂಡರೆ ತುಂಬಾನೇ ನಷ್ಟ.

ಆದ್ದರಿಂದ ಒಳ್ಳೆಯ ಸ್ನೇಹಿತರನ್ನು ಯಾವತ್ತಿಗೂ ದೂರ ಮಾಡಬೇಡಿ.

ಮೇಲೆ ಹೇಳಿದ ಮೂರು ವ್ಯಕ್ತಿಗಳು ನಿಮ್ಮ ಬದುಕಿನಲ್ಲಿದ್ದರೆ ಅಂಥ ಪುರುಷನೇ ಅದೃಷ್ಟವಂತ ಎಂದು ಚಾಣಕ್ಯ ನೀತಿ ಹೇಳುತ್ತದೆ, ಈ ಮಾತು ನೀವೂ ಒಪ್ಪುತ್ತೀರಿ ತಾನೆ?

English summary

Chanakya Neeti: Chanakya Says These Are The Lucky Three Persons of Your life

Chankya says these 3 person are lucky in your life, never miss them , who are they read on...
Story first published: Thursday, February 2, 2023, 13:27 [IST]
X
Desktop Bottom Promotion