For Quick Alerts
ALLOW NOTIFICATIONS  
For Daily Alerts

ಜ್ಯೋತಿಶಾಸ್ತ್ರದ ಪ್ರಕಾರ ಈ ಅವಧಿಯಲ್ಲಿ ಹೆಣ್ಣಿನಲ್ಲಿ ಫಲವತ್ತತೆ ಹೆಚ್ಚಿರುತ್ತದೆ

|

ಪ್ರತಿಯೊಂದು ಹೆಣ್ಣು ಗರ್ಭವತಿಯಾಗಬೇಕು, ತನ್ನದೇ ಆದ ಮಗುವನ್ನು ಹೊಂದಬೇಕು ಎಂದು ಬಯಸುವುದು ಸಾಮಾನ್ಯ. ಆದರೆ ಕೆಲವು ಮಹಿಳೆಯರಿಗೆ ವಿವಾಹವಾಗಿ ಸಾಕಷ್ಟು ವರ್ಷಗಳೇ ಕಳೆದರೂ ಸಂತಾನ ಭಾಗ್ಯ ಇರುವುದಿಲ್ಲ. ಮಗುವಿಗಾಗಿ ಸಾಕಷ್ಟು ವೈದ್ಯರನ್ನು ಸಂಪರ್ಕಿಸಿದರೂ, ಆರೋಗ್ಯದ ಕಾಳಜಿ ಮಾಡಿದ್ದರೂ ಶುಭ ಸುದ್ದಿ ಲಭಿಸಿರುವುದಿಲ್ಲ.

 Astrology Tips to get pregnant in kannada

ಆದರೆ, ಜ್ಯೋತಿಷ್ಯಾಸ್ತ್ರದ ಪ್ರಕಾರ ಸೌರಮಂಡಲದ ಬದಲಾವಣೆಯನ್ನು ಆಧರಿಸಿ ನಿಮ್ಮಲ್ಲಿ ಸಕಾರಾತ್ಮಕ ಸಂತಾನಫಲಗಳನ್ನು ನೀಡುತ್ತದೆ ಎನ್ನುತ್ತಾರೆ ಜ್ಯೋತಿಷ್ಯಾಸ್ತ್ರಜ್ಞರು. ನೀವು ಆರೋಗ್ಯದ ಜತೆಗೆ ಜ್ಯೋತಿಷ್ಯದ ಕೆಲವು ನಂಬಿಕೆಗಳನ್ನು ಪಾಲಿಸಿದರೆ ಸಂತಾನಭಾಗ್ಯ ನಿಮ್ಮದಾಗುತ್ತದೆ, ಜತೆಗೆ ಆರೋಗ್ಯವಂತ, ಗುಣವಂತ ಹಾಗೂ ಬುದ್ಧಿವಂತ ಮಗುವನ್ನು ಪಡೆಯಲು ಕಾರಣವಾಗುತ್ತದೆ ಎನ್ನಲಾಗುತ್ತದೆ.

ಹೌದು, ಜ್ಯೋತಿಶ್ಯಾಸ್ತ್ರದ ಪ್ರಕಾರ ಈ ಕೆಳಗೆ ಹೇಳಲಾಗಿರುವ ಅಭ್ಯಾಸಗಳ ಮೂಲಕ ನೀವು ಶುಭಸುದ್ಧಿಯನ್ನು ಪಡೆಯಬಹುದು:

1. ಫಲವತ್ತತೆಯ ಸಮಯ ಅರಿಯಿರಿ

1. ಫಲವತ್ತತೆಯ ಸಮಯ ಅರಿಯಿರಿ

ಜ್ಯೋತಿಷ್ಯಶಾಸ್ತ್ರ ನಂಬಿಕೆಗಳ ಪ್ರಕಾರ ಮಹಿಳೆಯಲ್ಲಿ ಮಾಸದಲ್ಲಿ ಕೆಲವು ದಿನಗಳ ಕಾಲ ಫಲವತ್ತತೆ ಇದ್ದರೂ, ಒಂದು ದಿನ ಎರಡು ಗಂಟೆಗಳ ಕಾಲ ಮಾತ್ರ ಆಕೆಯ ದೇಹದಲ್ಲಿ ಫಲವತ್ತತೆಯು ಉತ್ತುಂಗದಲ್ಲಿರುತ್ತದೆ. ಇದು ನೀವು ಹುಟ್ಟಿದಾಗ ಇದ್ದಂತೆಯೇ, ಸೂರ್ಯ ಮತ್ತು ಚಂದ್ರರು ಒಂದೇ ಸಮಾನಾಂತರದಲ್ಲಿ ದೂರಾದಾಗ ಹೆಣ್ಣಲ್ಲಿ ಫಲವತ್ತತೆ ಹೆಚ್ಚುತ್ತದೆ ಅಂತೆ. ಸಮಯವನ್ನು ಅರಿಯಲು ನಿಮ್ಮ ಜನ್ಮ ದಿನಾಂಕ ಮತ್ತು ನೀವು ಹುಟ್ಟಿದ ನಿಖರವಾದ ಸಮಯ ತಿಳಿದುಕೊಳ್ಳಬೇಕು.

ಈ ಮಾಹಿತಿಯ ಮೂಲಕ, ಜ್ಯೋತಿಷ್ಯ ಕ್ಯಾಲೆಂಡರ್ ಸಹಾಯದಿಂದ ನೀವು ಜನಿಸಿದಾಗ ಸೂರ್ಯ ಮತ್ತು ಚಂದ್ರರು ಎಷ್ಟು ಡಿಗ್ರಿ ಅಂತರದಲ್ಲಿದ್ದರು ಎಂಬುದನ್ನು ತಿಳಿಯಿರಿ. ಪ್ರತಿ ತಿಂಗಳು, ಸೂರ್ಯ ಮತ್ತು ಚಂದ್ರರು ನಿಮ್ಮ ಜನನದ ಸಮಯದಲ್ಲಿ ಕೇವಲ ಎರಡು ಗಂಟೆಗಳ ಕಾಲ ಇದ್ದಂತೆ ಅದೇ ಸಮಾನಾಂತರ ಡಿಗ್ರಿಗಳಲ್ಲಿ ಪ್ರತ್ಯೇಕವಾಗಿರುತ್ತದೆ. ಈ ಎರಡು ಗಂಟೆಗಳಲ್ಲಿ, ನಿಮ್ಮ ಫಲವತ್ತತೆ ಹೆಚ್ಚಾಗುತ್ತದೆ ಮತ್ತು ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಈ ಅವಧಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಸಂತಾನ ಭಾಗ್ಯ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

2. ಚಂದ್ರನ ಕೋನವನ್ನು ಅನುಸರಿಸಿ

2. ಚಂದ್ರನ ಕೋನವನ್ನು ಅನುಸರಿಸಿ

ನೀವು ಹುಟ್ಟಿದ ದಿನದ ಸಮಯದಂತೆಯೇ ಚಂದ್ರನ ದಿಕ್ಕು ಒಂದೇ ಆಗಿರುವ ಸಮಯದಲ್ಲಿ ನಿಮ್ಮ ಫಲವತ್ತತೆ ಹೆಚ್ಚಾಗುತ್ತದೆ. ಇದು ಮೇಲೆ ಹೇಳಿದಂತೆಯೇ ಇದ್ದರೂ, ಇದು ಚಂದ್ರನ ದಿಕ್ಕು ಮತ್ತು ಅದರ ಕೋನೀಯ ಸಂಬಂಧವನ್ನು ಪರಿಗಣಿಸುತ್ತದೆ. ಈ ಸಮಯದ ಬಗ್ಗೆ ಸಹ ತಿಳಿಯಲು ನೀವು ಜ್ಯೋತಿಶಾಸ್ತ್ರದ ಸಹಾಯ ಪಡೆಯಬೇಕು.

3. ಅಮಾವಾಸ್ಯೆಯಂದು ಈ ರಾಶಿಗಳ ಫಲವತ್ತತೆ ಉತ್ತುಂಗದಲ್ಲಿರುತ್ತದೆ

3. ಅಮಾವಾಸ್ಯೆಯಂದು ಈ ರಾಶಿಗಳ ಫಲವತ್ತತೆ ಉತ್ತುಂಗದಲ್ಲಿರುತ್ತದೆ

ಮತ್ತೊಂದು ನಂಬಿಕೆಯ ಪ್ರಕಾರ, ಅಮಾವಾಸ್ಯೆಯಂದು ಮೀನ, ವೃಶ್ಚಿಕ ಮತ್ತು ವಿಶೇಷವಾಗಿ ಕರ್ಕ ಈ ರಾಶಿಯ ಮಹಿಳೆಯರಲ್ಲಿ ಹೆಚ್ಚು ಫಲವತ್ತತೆ ಇರುತ್ತದೆ. ಇದರರ್ಥ ಒಂದು ವರ್ಷದಲ್ಲಿ, ನೀವು ಎರಡು ವಾರಗಳ ಕಾಲ ಮೂರು ಬಾರಿ ನಿಮ್ಮ ಫಲವತ್ತತೆ ಉತ್ತುಂಗದಲ್ಲಿರುತ್ತದೆ. ಈ ದಿನಗಳನ್ನು ಅರಿತರೆ ನೀವು ದಿನಗಳಲ್ಲಿ ನೀವು ಗರ್ಭಿಣಿಯಾಗುವ ಹೆಚ್ಚಿನ ಅವಕಾಶಗಳಿರುತ್ತದೆ.

4. ಸೂರ್ಯನನ್ನು ಅನುಸರಿಸಿ

4. ಸೂರ್ಯನನ್ನು ಅನುಸರಿಸಿ

ಜ್ಯೋತಿಷ್ಯದ ಪ್ರಕಾರ, ಸೂರ್ಯನ ಕೋನವು ಸಂತಾನಫಲವನ್ನು ನೀಡುತ್ತದೆ. ಅದರಂತೆ ಮಹಿಳೆ ಹುಟ್ಟಿದ ಅವಧಿಯಲ್ಲಿ ಸೂರ್ಯನ ದಿಕ್ಕು ಯಾವ ಕೋನದಲ್ಲಿತ್ತೋ ಅದೇ ಕೋನವನ್ನು ಜ್ಯೋತಿಶಾಸ್ತ್ರದ ಸಹಾಯದಿಂದ ತಿಳಿದು, ಇದೇ ಸಮಯದಲ್ಲಿ ಲೈಂಗಿಕ ಸಂಪರ್ಕ ಹೊಂದಿದರೆ ಗರ್ಭವತಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

5. ಶುಭ ದಿನಾಂಕಗಳನ್ನು ಅನುಸರಿಸಿ

5. ಶುಭ ದಿನಾಂಕಗಳನ್ನು ಅನುಸರಿಸಿ

ಪ್ರತಿ ವರ್ಷ, ಶುಭ ಅಥವಾ ಅದೃಷ್ಟದ ದಿನಗಳು ಇರುತ್ತವೆ. ಈ ದಿನಗಳಲ್ಲಿ ಫಲವತ್ತತೆ ಹೆಚ್ಚಾಗಿರುತ್ತದೆ ಎಂದು ನಂಬಲಾಗಿದೆ; ಈ ದಿನಗಳು ಕುಟುಂಬಕ್ಕೆ ಅದೃಷ್ಟವನ್ನು ತರುತ್ತದೆ, ಅದಕ್ಕಾಗಿಯೇ ಶುಭ ದಿನಗಳಂದೇ ಮದುವೆಗಳನ್ನು ಮಾಡಲಾಗುತ್ತದೆ. ಈ ದಿನಗಳಲ್ಲಿ ಲೈಂಗಿಕ ಸಂಪರ್ಕ ಹೊಂದುವುದು ಉತ್ತಮ, ಇದರಿಂದ ಸಂತಾನಫಲ ನಿರೀಕ್ಷಿಸಬಹುದು ಎನ್ನಲಾಗುತ್ತದೆ.

ನೆನಪಿಡಿ: ಜ್ಯೋತಿಶಾಸ್ತ್ರವು ನಂಬಿಕೆಯನ್ನು ಆಧರಿಸಿದ್ದು, ಇದರ ನಂಬಿಕೆ ಅಥವಾ ನಂಬದಿರುವುದು ನಿಮ್ಮ ನಿರ್ಧಾರವಾಗಿರುತ್ತದೆ. ಇಲ್ಲಿನ ಯಾವುದೇ ಪ್ರಯತ್ನಗಳು ನಂಬಿಕೆ ಅಥವಾ ಊಹೆಗಳೇ ಹೊರತು ಖಚಿತವಾಗಿ ನಿಮಗೆ ಸಂತಾನಫಲ ನೀಡುತ್ತದೆ ಎಂದು ಹೇಳಲಾಗುವುದಿಲ್ಲ.

--

English summary

Astrology Tips to get pregnant in Kannada

Here we are discussing about Astrology Tips to get pregnant in kannada. 5 astrology tips on how to get you pregnant. Women who have trouble getting a child resort to a lot of ways to try to be pregnant. If you are one of the women with the same burden – you might want to look towards the sky; because here are 5 astrology tips on how to get you pregnant: Read more.
X
Desktop Bottom Promotion