For Quick Alerts
ALLOW NOTIFICATIONS  
For Daily Alerts

Astrology tips: ನಿಮ್ಮ ರಾಶಿಚಕ್ರದ ಪ್ರಕಾರ ನೀವು ಯಾವ ಗಿಡವನ್ನು ಬೆಳೆಸಿದರೆ ಶುಭಫಲ

|

ಜ್ಯೋತಿಶಾಸ್ತ್ರ ನಮಗೆ ನಮ್ಮ ಬಗ್ಗೆ ಹಾಗೂ ನಮ್ಮ ಭವಿಷ್ಯದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತದೆ. ಈ ಭವಿಷ್ಯವನ್ನು ಆಧರಿಸಿಯೇ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವವರು, ಇದನ್ನು ಆಧರಿಸಿಯೇ ಪ್ರತಿಯೊಂದು ಕೆಲಸ ಮಾಡುವವರು ನಮ್ಮ ಸುತ್ತಮುತ್ತ ಇದ್ದಾರೆ.

ಹಾಗೆಯೇ ನಿಮಗೆ ತಿಳಿದಿರಲಿ ಜ್ಯೋತಿಶಾಸ್ತ್ರ ನಮಗೆ ಹಲವಾರು ಅಚ್ಚರಿ ಎನಿಸುವ ವಿಚಾರಗಳ ಬಗ್ಗೆಯೂ ತಿಳಿಸಿಕೊಡುತ್ತದೆ. ಹೌದು ನಾವಿಂದು ಜ್ಯೋತಿಶಾಸ್ತ್ರದ ಪ್ರಕಾರ ಯಾವ ರಾಶಿಯವರು ಯಾವ ಗಿಡ ನೆಟ್ಟರೆ ಹಾಗೂ ಅವರ ಗುಣ ಸ್ವಭಾವದ ಪ್ರಕಾರ ಅವರು ಎಂಥಾ ಆಹಾರಗಳಿಗೆ ಆದ್ಯತೆ ನೀಡಬೇಕು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇವೆ:

1. ಬೆಂಕಿಯ ಚಿಹ್ನೆಯ ರಾಶಿಗಳಾದ ಮೇಷ, ಸಿಂಹ, ಧನು ರಾಶಿ

1. ಬೆಂಕಿಯ ಚಿಹ್ನೆಯ ರಾಶಿಗಳಾದ ಮೇಷ, ಸಿಂಹ, ಧನು ರಾಶಿ

ಉರಿಯುತ್ತಿರುವ ಬೆಂಕಿಯ ಚಿಹ್ನೆಗಳಾದ ಮೇಷ, ಸಿಂಹ, ಧನು ರಾಶಿಯವರು ಸದಾ ಭಾವೋದ್ರಿಕ್ತರು ಮತ್ತು ಶಕ್ತಿಯಿಂದ ತುಂಬಿರುವ ರಾಶಿಯವರಾಗಿದ್ದಾರೆ. ಈ ರಾಶಿಯವರಿಗೆ ವಿಟಮಿನ್ ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಆಹಾರಗಳು ಬೇಕಾಗುತ್ತದೆ. ಇವರು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳಿಗೆ ಆದ್ಯತೆ ನೀಡಬೇಕು. ಈ ರಾಶಿಯವರು ಟೊಮೆಟೊಗಳು, ಸ್ಟ್ರಾಬೆರಿಗಳು ಮತ್ತು ಮೆಣಸಿನಂಥ ಗಿಡಗಳನ್ನು ನೆಡಿರಿ.

2. ನೀರಿನ ಚಿಹ್ನೆಯ ರಾಶಿಗಳಾದ ಕರ್ಕ, ವೃಶ್ಚಿಕ, ಮೀನ ರಾಶಿ

2. ನೀರಿನ ಚಿಹ್ನೆಯ ರಾಶಿಗಳಾದ ಕರ್ಕ, ವೃಶ್ಚಿಕ, ಮೀನ ರಾಶಿ

ನೀರಿನ ಚಿಹ್ನೆಯ ರಾಶಿಗಳಾದ ಕರ್ಕ, ವೃಶ್ಚಿಕ, ಮೀನ ರಾಶಿಯವರು ಭಾವನಾತ್ಮಕ ಮತ್ತು ಸೂಕ್ಷ್ಮವಾಗಿರುವ ರಾಶಿಚಕ್ರದವರಾಗಿರುತ್ತಾರೆ. ಇವರಿಗೆ ಪೋಷಣೆ ಮತ್ತು ಸಾಂತ್ವನ ನೀಡುವ ಆಹಾರಗಳು ಬೇಕಾಗುತ್ತವೆ. ಆದ್ದರಿಂದ ಇವರು ಪಾಲಕ್‌ನಂತಹ ಎಲೆಗಳ ಸೊಪ್ಪನ್ನು, ಹಾಗೆಯೇ ಆಲೂಗಡ್ಡೆ ಮತ್ತು ಕ್ಯಾರೆಟ್‌ಗಳಂತಹ ಬೇರು ತರಕಾರಿಗಳನ್ನು ನೆಡಬೇಕು.

3. ವಾಯು ಚಿಹ್ನೆಯ ರಾಶಿಗಳಾದ ಮಿಥುನ, ತುಲಾ, ಕುಂಭ ರಾಶಿ

3. ವಾಯು ಚಿಹ್ನೆಯ ರಾಶಿಗಳಾದ ಮಿಥುನ, ತುಲಾ, ಕುಂಭ ರಾಶಿ

ಗಾಳಿ ಚಿಹ್ನೆ ರಾಶಿಚಕ್ರಗಳಾದ ಮಿಥುನ, ತುಲಾ, ಕುಂಭ ರಾಶಿಯ ಬಗ್ಗೆ ಹೇಳಬೇಕೆಂದರೆ ಸಂವಹನ ಮತ್ತು ಸಂಪರ್ಕದಲ್ಲಿ ಇವು ಎತ್ತಿದ ಕೈ. ನಿಮಗೆ ಹಗುರವಾದ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರಗಳು ಬೇಕಾಗುತ್ತವೆ, ಆದ್ದರಿಂದ ನೀವು ನಿಮ್ಮ ಶಕ್ತಿಯನ್ನು ಮತ್ತು ನಿಮ್ಮ ಮನಸ್ಸನ್ನು ತೀಕ್ಷ್ಣವಾಗಿರಿಸಿಕೊಳ್ಳಬಹುದು. ಕಿತ್ತಳೆ ಮತ್ತು ನಿಂಬೆಹಣ್ಣುಗಳಂತಹ ಸಿಟ್ರಸ್ ಹಣ್ಣುಗಳು, ಹಾಗೆಯೇ ಕೋಸುಗಡ್ಡೆ ಮತ್ತು ಎಲೆಕೋಸುಗಳಂಥ ಗಿಡಗಳು ನಿಮಗೆ ಸಕಾರಾತ್ಮಕತೆಯನ್ನು ತರುತ್ತದೆ.

4. ಭೂಮಿಯ ಚಿಹ್ನೆಯ ರಾಶಿಗಳಾದ ವೃಷಭ, ಕನ್ಯಾ, ಮಕರ ರಾಶಿ

4. ಭೂಮಿಯ ಚಿಹ್ನೆಯ ರಾಶಿಗಳಾದ ವೃಷಭ, ಕನ್ಯಾ, ಮಕರ ರಾಶಿ

ಭೂಮಿಯ ಸಂಕೇತದ ರಾಶಿಚಕ್ರಗಳಾದ ವೃಷಭ, ಕನ್ಯಾ, ಮಕರ ರಾಶಿಯವರು ಸದಾ ಇತರರಿಗೆ ಆಧಾರವಾಗಿರುವಿರಿ ಮತ್ತು ಪ್ರಾಯೋಗಿಕವಾಗಿರುತ್ತೀರಿ. ನಿಮಗೆ ತೃಪ್ತಿಕರವಾದ ಆಹಾರಗಳು ಬೇಕಾಗುತ್ತವೆ. ಆಲೂಗಡ್ಡೆ ಮತ್ತು ಕ್ಯಾರೆಟ್‌ಗಳಂತಹ ಬೇರು ತರಕಾರಿಗಳನ್ನು, ಹಾಗೆಯೇ ಕುಂಬಳಕಾಯಿಯಂಥ ಬಳ್ಳಿಯ ಗಿಡಗಳನ್ನು ನೀವು ನೆಟ್ಟರೆ ಶುಭಫಲ.

English summary

As per Zodiac sign which plant you should plant in Garden In Kannada

Here we are discussing about As per Zodiac sign which plant you should plant in Garden In Kannada. Read more.
Story first published: Monday, November 21, 2022, 17:00 [IST]
X
Desktop Bottom Promotion