For Quick Alerts
ALLOW NOTIFICATIONS  
For Daily Alerts

ಮಹಿಳೆಯರು ಕೆಲಸದ ಸ್ಥಳದಲ್ಲಿ ಒಬ್ಬರಿಗೊಬ್ಬರು ಪುರುಷರಿಗಿಂತ ಕ್ರೂರವಾಗಿ ವರ್ತಿಸುತ್ತಾರೆಯೇ?

|

ನಿಮ್ಮ ಬಾಸ್ ಮಹಿಳೆಯೋ ಅಥವಾ ಪುರುಷರೋ? ಒಂದು ವೇಳೆ ಮಹಿಳೆ ಆಗಿದ್ದರೆ ನೀವು ಈ ಸ್ಟೋರಿಯನ್ನ ಓದಲೇಬೇಕು. ಇದನ್ನು ಓದಿದ ಮೇಲೆ ನಮ್ಮ ಬಾಸ್ ಕೂಡ ಹೀಗೆ ಎಂದು ನೀವಂದುಕೊಂಡರೆ ಖಂಡಿತ ಅದರಲ್ಲಿ ತಪ್ಪಿಲ್ಲ. ಬಹುಶಃ ಈ ಅಧ್ಯಯನದ ಸಾರಾಂಶ ನೋಡಿದ ಮೇಲೆ "ಎರಡು ಜಡೆ ಎಂದಿಗೂ ಸೇರುವುದಿಲ್ಲ" ಅಂತ ಹಿಂದಿನವರು ಗಾದೆ ಮಾಡಿಟ್ಟಿದ್ದು ಇಂತಹ ವರ್ತನೆಗಳಿಗಾಗೇ ಇರಬೇಕು ಅನ್ನಿಸುತ್ತದೆ.

ಹಿಂದಿನವರು ಈ ಗಾದೆಯನ್ನು ಒಂದು ಮನೆಮಟ್ಟಿಗೆ ಮಾಡಿಟ್ಟಿದ್ದರೋ ಏನೋ? ಆದರೆ ಈಗ ಜಗತ್ತು ಬದಲಾಗುತ್ತಿದೆಯಲ್ಲ! ಹಾಗಾಗಿ ಈ ಗಾದೆಯನ್ನು ನೀವು ನಿಮ್ಮ ಕೆಲಸದ ಸ್ಥಳಕ್ಕೆ ಅಳವಡಿಸಿಕೊಳ್ಳಬಹುದು. ಅಷ್ಟಕ್ಕೂ ಈ ಗಾದೆಯನ್ನೇ ಅಧ್ಯಯನವೂ ಹೇಳುತ್ತಿದೆ. ಹಾಗಾದ್ರೆ ಏನದು ಅಧ್ಯಯನ? ಮುಂದೆ ಓದಿ.

Are women ruder to each other than they are to men at workplace?

1973 ರಲ್ಲಿ ಜಿ.ಎಲ್.ಸ್ಟೈನ್ಸ್, ಟಿ.ಇ ಜಯರತ್ನೇ ಮತ್ತು ಸಿ ಟ್ರಾವಿಸ್ ಅನ್ನೋ ಅಧ್ಯಯನಕಾರರು "ಕ್ವೀನ್ ಬಿ ಸಿಂಡ್ರೋಮ್" ಅನ್ನುವ ಮಹಿಳೆಯ ವರ್ತನೆಯೊಂದರ ಬಗ್ಗೆ ಪ್ರಸ್ತಾಪಿಸಿದರು. ಇದು ಮಹಿಳೆಯೊಬ್ಬಳು ತನಗೆ ಅಧಿಕಾರದ ಸ್ಥಾನವನ್ನು ಪಡೆದಾಗ ತನ್ನ ಅಧೀನ ಅಧಿಕಾರಿಗಳನ್ನು ಅದ್ರಲ್ಲೂ ಇತರೆ ಮಹಿಳಾ ಅಧಿಕಾರಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ನಡೆದ ಅಧ್ಯಯನವಾಗಿತ್ತು.

ಈ ಮೂವರು ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ ಮಹಿಳೆಯೊಬ್ಬಳು ತನ್ನ ಸಂಸ್ಥೆಯಲ್ಲಿ ಉತ್ತಮ ಹುದ್ದೆಯಲ್ಲಿದ್ದರೆ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಇತರೆ ಮಹಿಳಾ ಕೆಲಸಗಾರರನ್ನು ಬೆಂಬಲಿಸುವುದಿಲ್ಲ ಮತ್ತು ಇತರ ಮಹಿಳಾ ಕೆಲಸಗಾರರ ಬಗ್ಗೆ ಋಣಾತ್ಮಕ ಪರಿಣಾಮವನ್ನು ಉಂಟು ಮಾಡುತ್ತಾಳೆ. ಅಷ್ಟೇ ಅಲ್ಲ ಇತರ ಮಹಿಳೆಯೊಂದಿಗೆ ಅಧಿಕಾರದಲ್ಲಿರುವ ಮಹಿಳೆ ಕಠೋರವಾಗಿ ನಡೆದುಕೊಳ್ಳುತ್ತಾರೆ ಎಂಬುದಾಗಿ ಪ್ರಸ್ತಾಪಿಸಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಗಳು ಮತ್ತು ಅಧ್ಯಯನಗಳು ಈಗಲೂ ಕೂಡ ನಡೆಯುತ್ತಿದೆ ಮತ್ತು ಭಿನ್ನವಿಭಿನ್ನ ಅಭಿಪ್ರಾಯಗಳು ಹೊರಬಿದ್ದಿವೆ. ಕ್ವೀನ್ ಬಿ ಸಿಂಡ್ರೋಮ್ ನ್ನು ಕೆಲವರು ಒಪ್ಪಿಕೊಳ್ಳುತ್ತಾರೆ ಆದರೆ ಇದನ್ನು ವಿರೋಧಿಸುವ ವರ್ಗವೂ ಅಷ್ಟೇ ಇದೆ.

ಅಧಿಕಾರದಲ್ಲಿರುವ ಮಹಿಳೆ ಸಿಬ್ಬಂದಿಯೊಂದಿಗೆ ಅಮಾನುಷವಾಗಿ ವರ್ತಿಸುತ್ತಾರೆಯೇ?

ಅಧಿಕಾರದಲ್ಲಿರುವ ಮಹಿಳೆ ಸಿಬ್ಬಂದಿಯೊಂದಿಗೆ ಅಮಾನುಷವಾಗಿ ವರ್ತಿಸುತ್ತಾರೆಯೇ?

ಅರಿಝೋನಾ ವಿಶ್ವವಿದ್ಯಾಲಯದಲ್ಲಿ ನಡೆದ ಅಧ್ಯಯೊಂದು ಹೇಳುವ ಪ್ರಕಾರ "ಪುರುಷರಿಗೆ ಹೋಲಿಸಿದರೆ ಅಧಿಕಾರದಲ್ಲಿರುವ ಮಹಿಳೆಯರು ಸ್ವಲ್ಪ ಅಮಾನುಷವಾಗಿ ವರ್ತಿಸುತ್ತಾರೆ" ಎಂದು ಹೇಳಿದೆ. ಮಹಿಳೆಯು ಕೆಲಸದ ಸ್ಥಳದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದ್ದರೆ ಅಥವಾ ಅಧಿಕಾರ ಹೊಂದಿದ್ದರೆ ಇತರ ಮಹಿಳೆಯನ್ನು ಟಾರ್ಗೆಟ್ ಮಾಡುವುದು ಸಾಮಾನ್ಯ ವರ್ತನೆಯಾಗಿರುತ್ತದೆ ಎಂದು ತಿಳಿಸಿದೆ.

ಅಧ್ಯಯನ ಕೈಗೊಂಡಿರುವುದು ಹೇಗೆ?

ಅಧ್ಯಯನ ಕೈಗೊಂಡಿರುವುದು ಹೇಗೆ?

ಅರಿಝೋನಾ ವಿಶ್ವವಿದ್ಯಾಲಯ ಕಳೆದ ವರ್ಷ ಮೂರು ಅಧ್ಯಯನವನ್ನು ಕೈಗೊಂಡಿದ್ದರು. ಈ ಸಂಶೋಧನೆಯಲ್ಲಿ ಮಹಿಳೆ ಮತ್ತು ಪುರುಷ ಇಬ್ಬರೂ ಪೂರ್ಣಾವಧಿ ಕೆಲಸ ಮಾಡುವ ಉದ್ಯೋಗಿಗಳು ಪಾಲ್ಗೊಂಡಿದ್ದರು. ಅವರು ತಮ್ಮ ಸಹ-ಉದ್ಯೋಗಿಗಳ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಅದರಲ್ಲಿ ಅವಹೇಳನಕಾರಿ ಹೇಳಿಕೆ ನೀಡುವುದು, ಇತರರ ಮುಂದೆ ಕೀಳಾಗಿ ಕಾಣುವುದು, ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವುದು ಅಥವಾ ನಿರಾತಂಕವಾಗಿ ತಪ್ಪನ್ನು ಹೇರುವುದು ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದವು. ಪ್ರಯೋಗದ ಅಂತ್ಯದಲ್ಲಿ ಭಾಗವಹಿಸಿದ ಎಲ್ಲರ ಉತ್ತರಗಳಿಂದ "ಪುರುಷ ಪ್ರಚೋದಿತ ಅಸಮರ್ಥತೆ"ಗಿಂತ "ಸ್ತ್ರೀ ಸಂಬಂಧಿತ ಅಸಮರ್ಥತೆ" ಯೇ ಅಧಿಕವಾಗಿರುವುದು ಸಾಬೀತಾಯಿತು. ಆ ನಂತರ ಅಧಿಕಾರದಲ್ಲಿರುವ ಮಹಿಳೆಯರು ಇತರ ಮಹಿಳೆಯರೊಂದಿಗೆ ಹೆಚ್ಚು ಅನಾಗರೀಕ, ಅಮಾನುಷವಾಗಿರುತ್ತಾರೆ ಎಂಬ ನಿರ್ಧಾರಕ್ಕೆ ಬಂದರು.

ಮಹಿಳಾ ಉದ್ಯೋಗಿಗಳನ್ನು ಕಳೆದುಕೊಳ್ಳುವ ಅಪಾಯ

ಮಹಿಳಾ ಉದ್ಯೋಗಿಗಳನ್ನು ಕಳೆದುಕೊಳ್ಳುವ ಅಪಾಯ

ಈ ಅಧ್ಯಯನದಲ್ಲಿ ಕ್ವೀನ್ ಬಿ ಸಿಂಡ್ರೋಮ್ ನ ಪರಿಣಾಮದಿಂದಾಗಿ ಒಂದು ಸಂಸ್ಥೆಯು ಮಹಿಳಾ ಉದ್ಯೋಗಿಗಳನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುವ ಬಗ್ಗೆ ಕೂಡ ಅಧ್ಯಯನಕಾರರು ಗುರುತಿಸಿದ್ದಾರೆ. ಇಂತಹ ಉದ್ಯೋಗಿಗಳು ನಿರಂತರವಾಗಿ ಸ್ತ್ರೀ ಸಂಬಂಧಿತ ಅಸಮರ್ಥತೆಯನ್ನು ಕೆಲಸದ ಸಂದರ್ಭದಲ್ಲಿ ಎದುರಿಸುತ್ತಾರೆ ಮತ್ತು ಉದ್ಯೋಗದ ಬಗೆಗಿನ ಅವರ ತೃಪ್ತಿ ನಿರಾಶದಾಯಕವಾಗಿರುತ್ತೆ. ಅಂದರೆ ಅವರಿಗೆ ಆಫೀಸಿನ ಈ ಕಿರುಕುಳ ಕೆಲಸದ ಅತೃಪ್ತಿಗೆ ಕಾರಣವಾಗಿರುತ್ತದೆ ಎಂಬುದು ಅಧ್ಯಯನದಿಂದಾಗಿ ತಿಳಿದುಬಂದಿದೆ.

ಹಿರಿಯ ಮಹಿಳಾ ಅಧಿಕಾರಿಗಳಿಂದ ಈ ಸಿದ್ಧಾಂತಕ್ಕೆ ನಿರಾಕರಣೆ

ಹಿರಿಯ ಮಹಿಳಾ ಅಧಿಕಾರಿಗಳಿಂದ ಈ ಸಿದ್ಧಾಂತಕ್ಕೆ ನಿರಾಕರಣೆ

ಆದರೆ, ಎಲ್ಲಾ ಉದ್ಯೋಗಿಗಳು ಸಹ ಈ ಸಿದ್ಧಾಂತದಿಂದ ತೃಪ್ತರಾಗಿಲ್ಲ. ಅದರಲ್ಲೂ ಪ್ರಮುಖವಾಗಿ ಹಿರಿಯ ಮಹಿಳಾ ಅಧಿಕಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಬ್ರಿಟನ್ನಿನ ಪ್ರಮುಖ ಮಹಿಳಾ ಬಾಸ್ ಗಳಲ್ಲಿ ಒಬ್ಬರಾಗಿರುವ ಆನ್ ಫ್ರ್ಯಾಂಕೆ ಈ ಕ್ವೀನ್ ಬಿ ಸಿಂಡ್ರೋಮ್ ಸತ್ಯಕ್ಕೆ ದೂರವಾದದ್ದು ಎನ್ನುತ್ತಾರೆ. ಒಟ್ಟಿನಲ್ಲಿ ಈ ಅಧ್ಯಯನವು ಇಂತಹದ್ದೊಂದು ಚರ್ಚೆಯನ್ನು ಹುಟ್ಟುಹಾಕಿರುವುದು ಮಾತ್ರ ಸುಳ್ಳಲ್ಲ. ನಿಮ್ಮ ಅಭಿಪ್ರಾಯವೇನು? ನಿಮಗೂ ಮಹಿಳಾ ಬಾಸ್ ಇದ್ದಾರಾ? ಅವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಕಮೆಂಟ್ ಮಾಡಿ ತಿಳಿಸುವುದನ್ನು ಮರೀಬೇಡಿ.

English summary

Are women ruder to each other than they are to men at workplace?

women in senior positions in organisations not only fail to support other women in the organisation but even go so far as to have a negative impact on them and their careers. A lot of debate and studies have been going on since then that divides the world into two camps—one that says yes, queen bee syndrome does exist while the other denies its existence.
X
Desktop Bottom Promotion