For Quick Alerts
ALLOW NOTIFICATIONS  
For Daily Alerts

ಗರುಡ ಪುರಾಣ ಪ್ರಕಾರ ಈ 4 ಗುಣಗಳಿದ್ದರೆ ಆ ವ್ಯಕ್ತಿ ಖಂಡಿತ ಯಶಸ್ವಿಯಾಗುತ್ತಾನೆ

|

ಹಿಂದೂ ಧರ್ಮದಲ್ಲಿ 18 ಪುರಾಣಗಳನ್ನು ವಿವರಿಸಲಾಗಿದೆ. ಈ ಪುರಾಣಗಳಲ್ಲಿ ಮನುಷ್ಯನ ಕಲ್ಯಾಣಕ್ಕಾಗಿ ವಿಷಯಗಳನ್ನು ಹೇಳಲಾಗಿದೆ. ಅದರಲ್ಲೊಂದು ಗರುಡ ಪುರಾಣ. ಗರುಡ ಪುರಾಣದಲ್ಲಿ ಮನುಷ್ಯ ಯಾವ ಮಾರ್ಗದಲ್ಲಿ ನಡೆದರೆ ಯಶಸ್ಸು ಸಾಧಿಸಬಹುದು ಎಂಬುದನ್ನೂ ಹೇಳಲಾಗಿದೆ.

garuda purana

ಗರುಡ ಪುರಾಣದಲ್ಲಿ ಸ್ವತಃ ವಿಷ್ಣುವೇ ತನ್ನ ಪ್ರಿಯ ವಾಹನ ಗರುಡ ದೇವನಿಗೆ ಮೋಕ್ಷ ಮಾರ್ಗದ ರಹಸ್ಯವನ್ನು ಹೇಳಿದ್ದಾನೆ. ಗರುಡ ಪುರಾಣದಲ್ಲಿ ಮೋಕ್ಷದ ಮಾರ್ಗವನ್ನು ಹೇಳಲಾಗಿದೆ. ಯಾರು ಗರುಡ ಪುರಾಣದಲ್ಲಿ ನೀಡಲಾದ ನಿಯಮಗಳನ್ನು ಅನುಸರಿಸುತ್ತಾರೋ ಅವರು ತನ್ನ ಜೀವನದಲ್ಲಿ ಎದುರಾಗುವ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾರೆ ಹಾಗೂ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದು ಹೇಳಲಾಗುವುದು.

ಪ್ರತಿಯೊಬ್ಬರಿಗೂ ಯಶಸ್ಸು ಆಗಬೇಕೆಂಬ ಆಸೆ ಇರುತ್ತದೆ, ಆದರೆ ಅದಕ್ಕಾಗಿ ಏನು ಮಾಡಬೇಕೆಂದು ತಿಳಿದಿರುವುದಿಲ್ಲ. ನೀವು ಯಶಸ್ಸು ಬಗ್ಗೆ ಚಿಂತೆ ಮಾಡುತ್ತಿದ್ದರೆ ಗರುಡ ಪುರಾಣದಲ್ಲಿ ಹೇಳಲಾಗಿರುವ ಈ ನಾಲ್ಕು ಅಂಶಗಳನ್ನು ತಿಳಿದುಕೊಂಡರೆ ಸಾಕು ಯಶಸ್ಸಿನ ಮಾರ್ಗಗಳು ತೆರೆದುಕೊಳ್ಳುತ್ತದೆ.

ಒಬ್ಬ ವ್ಯಕ್ತಿ ಯಶಸ್ಸು ಕಾಣಲು ಏನು ಮಾಡಬೇಕೆಂದು ಗರುಡ ಪುರಾಣ ಹೇಳಿದೆ ನೋಡೋಣ ಬನ್ನಿ:

ಇತರರನ್ನು ದ್ವೇಷಿಸುವವ ಎಂದಿಗೂ ಯಶಸ್ವಿಯಾಗುವುದಿಲ್ಲ

ಇತರರನ್ನು ದ್ವೇಷಿಸುವವ ಎಂದಿಗೂ ಯಶಸ್ವಿಯಾಗುವುದಿಲ್ಲ

ಗರುಡ ಪುರಾಣವು ಇತರರನ್ನು ದ್ವೇಷಿಸುವವನು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಹೇಳುತ್ತದೆ. ಮನಸ್ಸಿನಲ್ಲಿ ದ್ವೇಷ ತುಂಬಿಕೊಮಡಿದ್ದರೆ ಆ ವ್ಯಕ್ತಿಗೆ ಒಳಿತಿನ ಬಗ್ಗೆ ಚಿಂತಿಸಲು ಸಾಧ್ಯವಿಲ್ಲ. ಆದ್ದರಿಂದ ಒಂದು ವೇಳೆ ನೀವು ಅಂತಹ ವ್ಯಕ್ತಿಯ ಜೊತೆ ಸ್ನೇಹದಿಂದಿದ್ದರೆ ದೂರ ಸರಿಯುವುದೇ ಒಳ್ಳೆಯದು. ಏಕೆಂದರೆ ಅವರ ಕೆಟ್ಟ ಆಲೋಚನೆಗಳು, ದುಷ್ಟ ನಡವಳಿಕೆಗಳು ನಿಮ್ಮ ಜೀವನದ ಮೇಲೂ ಪರಿಣಾಮ ಬೀರಬಹುದು. ಯಾರು ದ್ವೇಷ ಭಾವವನ್ನು ಇಟ್ಟುಕೊಂಡಿರುತ್ತಾರೋ ಅವರು ಯಶಸ್ಸನ್ನು ಸಾಧಿಸುವಲ್ಲಿ ಅನೇಕ ರೀತಿಯ ಅಡೆತಡೆಗಳು ಉಂಟಾಗಬಹುದು. ಅಂತಹ ವ್ಯಕ್ತಿಯೊಂದಿಗೆ ಯಾವಾಗಲೂ ಜಾಗರೂಕರಾಗಿರಿ. ಆದ್ದರಿಂದ ದ್ವೇಷ ಭಾವನೆ ಬಿಟ್ಟು ಪ್ರೀತಿಸುವುದನ್ನು ಕಲಿಯಬೇಕು. ನಮಗೆ ಕೆಡಕು ಮಾಡಿದವರ ಬಗ್ಗೆ ದ್ವೇಷ ಮಾಡುವ ಬದಲಿಗೆ ಅವರನ್ನು ಮರೆತು ಒಳ್ಳೆಯ ವಿಚಾರಗಳತ್ತ ಗಮನ ಹರಿಸಬೇಕು, ನಮ್ಮ ಶಕ್ತಿಯನ್ನು ಧನಾತ್ಮವಾಗಿ ಬಳಸಿಕೊಳ್ಳಬೇಕು, ಆಗ ನಾವು ಯಶಸ್ಸು ಪಡೆಯಲು ಸಾಧ್ಯ.

ನಿಮ್ಮ ಮನಸ್ಸಿನಲ್ಲಿ ಯಾರ ಬಗ್ಗೆ ದ್ವೇಷ ಇದ್ದರೆ ಅದನ್ನು ಮರೆತು ಬಿಡಿ, ಆಗ ನಿಮ್ಮ ಮನಸ್ಸು ತುಂಬಾ ಹಗುರವಾದಂತೆ ಅನಿಸುವುದು, ನನಗೆ ಮಾಡಬೇಕಾಗಿರುವ ಒಳ್ಳೆಯ ಕಾರ್ಯಗಳು ಅನೇಕ ಇದೆ ಎಮದು ಅನಿಸಲಾರಂಭಿಸುತ್ತದೆ.

ಜೀವನದ ಬಗ್ಗೆ ಸಕಾರಾತ್ಮಕ ವರ್ತನೆ

ಜೀವನದ ಬಗ್ಗೆ ಸಕಾರಾತ್ಮಕ ವರ್ತನೆ

ತನ್ನ ಗುರಿಯತ್ತ ಸಕಾರಾತ್ಮಕ ಮನೋಭಾವವನ್ನು ಹೊಂದಿರುವ ವ್ಯಕ್ತಿಯು ಯಾವಾಗಲೂ ಯಶಸ್ವಿಯಾಗುತ್ತಾನೆ ಎಂದು ಮಹಾಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಏಕೆಂದರೆ ಅವನು ತನ್ನ ಗುರಿಯತ್ತ ಕಠಿಣ ಮತ್ತು ಶ್ರದ್ಧೆಯಿಂದ ಕೆಲಸ ಮಾಡುತ್ತಾನೆ. ಯಾರು ಸಕರಾತ್ಮಕ ಆಲೋಚನೆ ಹೊಂದಿರುತ್ತಾರೋ ಅವರ ದುರದೃಷ್ಟವನ್ನು ಕೂಡ ಧನಾತ್ಮಕ ರೂಪವನ್ನು ನೀಡುವ ಮೂಲಕ ಅದರಿಂದ ಒಳ್ಳೆಯ ಫಲವನ್ನೇ ಪಡೆಯುತ್ತಾರೆ. ಆದ್ದರಿಂದ ಯಾವಾಗಲೂ ಒಳ್ಳೆಯ ಆಲೋಚನೆ ಇಟ್ಟುಕೊಳ್ಳಬೇಕು ಎಂದು ಗರುಡ ಪುರಾಣ ಹೇಳಿದೆ.

ಅದು ನಿಜ ನಿಮ್ಮ ಮನಸ್ಸಿನಲ್ಲಿ ನನ್ನಿಂದ ಸಾಧ್ಯ ಎಂದು ಆಲೋಚಿಸಿದರೆ ಅದು ಎಂಥದ್ದೇ ಕಷ್ಟವಾದರೂ ಸಾಧ್ಯವಾಗುವುದು, ಅದೇ ನನ್ನಿಂದ ಆಗಲ್ಲ ಎಂದು ಕೂರುವವನಿಗೆ ಬದುಕಿನಲ್ಲಿ ಏನು ಮಾಡಲೂ ಸಾಧ್ಯವಿಲ್ಲ. ಆದ್ದರಿಂದ ಯಾವಾಗಕೂ ಸಕರಾತ್ಮಕ ಆಲೋಚನೆ ಮಾಡಬೇಕು. ನಮ್ಮ ಆಲೋಚನೆಗಳು ಉತ್ತಮವಾಗಿದ್ದರೆ ಎಲ್ಲ ಒಳ್ಳೆಯದೇ ಆಗುತ್ತದೆ.

ರೋಗಗಳಿಂದ ದೂರವಿರಿ

ರೋಗಗಳಿಂದ ದೂರವಿರಿ

ಯಾರು ರೋಗಗಳಿಂದ ದೂರವಿರುತ್ತಾರೆ ಮತ್ತು ಯಾವಾಗಲೂ ಚೈತನ್ಯದಿಂದ ಇರುತ್ತಾರೆ, ಅವನಿಗೆ ಮಾತ್ರ ಯಶಸ್ಸು ಸಿಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಅದು ನಿಜ ಆರೋಗ್ಯವೇ ಭಾಗ್ಯ, ಆರೋಗ್ಯ ಸರಿಯಿಲ್ಲ ಅಂದರೆ ಏನು ಇದ್ದು ಏನು ಪ್ರಯೋಜನ?ಅದಕ್ಕಾಗಿಯೇ ಒಬ್ಬ ವ್ಯಕ್ತಿಯು ಪ್ರತಿದಿನ ಚೆನ್ನಾಗಿ ಜೀರ್ಣವಾಗುವ ಮತ್ತು ಸಮತೋಲಿತ ಆಹಾರವನ್ನು ಸೇವಿಸಬೇಕು. ಅಂತಹವರು ಮಾತ್ರ ಎಲ್ಲಾ ಕಾಯಿಲೆಗಳಿಂದ ದೂರವಿದ್ದು, ಯಾವುದೇ ಅಡೆತಡೆಯಿಲ್ಲದೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಾರೆ. ಯೋಗ, ಧ್ಯಾನ ನಿಮ್ಮ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ.

ನೀತಿಯ ಮಾರ್ಗವನ್ನು ಅನುಸರಿಸಿ

ನೀತಿಯ ಮಾರ್ಗವನ್ನು ಅನುಸರಿಸಿ

ಧರ್ಮಮಾರ್ಗದಲ್ಲಿ ನಡೆಯುವ ವ್ಯಕ್ತಿಯನ್ನು ಯಶಸ್ವಿಯಾಗುತ್ತಾಮೆ. ಅವನು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾನೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಏಕೆಂದರೆ ಧರ್ಮವು ಯಾವಾಗಲೂ ನಿಯಮಗಳ ಪ್ರಕಾರ ಬದುಕಲು ಕಲಿಸುತ್ತದೆ. ಯಾರು ಶಿಸ್ತನ್ನು ಪಾಲಿಸುತ್ತಾ ಜೀವನ ಕಳೆಯುತ್ತಾನೋ, ಗುರಿಯನ್ನು ಸಾಧಿಸಲು ಮುಂದೆ ಸಾಗುತ್ತಾನೋ ಅವನು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ.

English summary

According to Garuda Purana These are the Qualities Make You Successful in kannada

As per garuda purana these quality in people make them successful person read on.
Story first published: Wednesday, January 25, 2023, 20:48 [IST]
X
Desktop Bottom Promotion