For Quick Alerts
ALLOW NOTIFICATIONS  
For Daily Alerts

ಪ್ರಾಚೀನ ಗ್ರಂಥಗಳ ಪ್ರಕಾರ ನೀವು ಹೇಗೆ ಸಾಯುತ್ತೀರಿ? ಇಲ್ಲಿದೆ ನೋಡಿ...

|

ಸಾವು ಎನ್ನುವುದು ಪ್ರತಿಯೊಂದು ಜೀವಿಯ ಅಂತಿಮ ಘಟ್ಟ. ಸತ್ತ ಬಳಿಕ ಏನಾಗುತ್ತಾರೆ? ಎಲ್ಲಿಗೆ ಹೋಗುತ್ತಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಿ ಆಧಾರಗಳಿಲ್ಲ. ಆದರೆ ಯಾರೂ ಚಿರಂಜೀವಿಗಳಲ್ಲ. ಎಲ್ಲರೂ ಒಂದಲ್ಲಾ ಒಂದು ದಿನ ಸಾವನ್ನು ಸ್ವೀಕರಿಸಲೇ ಬೇಕು. ಕೆಲವರು ಬಹು ಬೇಗ ಸಾಯಬಹುದು ಇನ್ನೂ ಕೆಲವರು ಬಹಳ ವರ್ಷಗಳ ನಂತರ ಸಾವನ್ನು ಕಾಣಬಹುದು. ಹಾಗಾಗಿ ಹುಟ್ಟು ಅನಿರೀಕ್ಷಿತವಾಗಿದ್ದರೂ ಸಾವು ಖಚಿತ ಎಂದು ಹೇಳಲಾಗುತ್ತದೆ. ಸಾವಿಲ್ಲದ ಸಂಗತಿಗಳಿಲ್ಲ ಎನ್ನುವ ಸತ್ಯ ಎಲ್ಲರೂ ತಿಳಿದಿರುವುದಕ್ಕೆ ಇಂದು ಸಾಕಷ್ಟು ಜನರು ಸತ್ಯ-ಧರ್ಮದ ಆಧಾರದಲ್ಲಿಯೇ ಬದುಕುತ್ತಿದ್ದಾರೆ ಎನ್ನಬಹುದು.

death,

ಹುಟ್ಟಿನಿಂದ ಸಾವಿನ ತನಕ ಯಾವ ಬಗೆಯ ಕರ್ಮ ಅಥವಾ ಕೆಲಸವನ್ನು ಮಾಡುತ್ತೇವೆ ಎನ್ನುವುದರ ಆಧಾರದ ಮೇಲೆ ಪಾಪ-ಪುಣ್ಯಗಳು ನಿರ್ಧಾರವಾಗುತ್ತವೆ. ಅವುಗಳಿಗೆ ಅನ್ವಯಿಸಿಯೇ ನಮ್ಮ ಸಾವು ಸಮೀಪಿಸುತ್ತದೆ ಎಂದು ಧಾರ್ಮಿಕ ಕಥೆ-ಪುರಾಣಗಳು ವಿವರಿಸುತ್ತವೆ. ಯಾರು ಜೀವನದಲ್ಲಿ ಅತಿ ಹೆಚ್ಚು ಪಾಪ ಕೃತ್ಯಗಳನ್ನು ಎಸಗಿರುತ್ತಾರೋ ಅಂತಹವರು ಸಾವಿನ ನಂತರ ನರಕ ಲೋಕಕ್ಕೆ ಹೋಗುವರು. ಅಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುವರು ಎಂದು ಹೇಳಲಾಗುವುದು. ಯಾವ ವ್ಯಕ್ತಿ ಧರ್ಮ-ನೀತಿಯಿಂದ ಬದುಕುತ್ತಾನೆ? ತನ್ನ ಕರ್ತವ್ಯಗಳನ್ನು ಮರೆಯದೆ ಜವಾಬ್ದಾರಿಯಿಂದ ನಿರ್ವಹಿಸುತ್ತಾನೆ? ಅಂತಹವನಿಗೆ ಪುಣ್ಯ ಪ್ರಾಪ್ತಿಯಾಗುವುದು, ಅವನು ಸತ್ತ ಬಳಿಕ ಸರ್ಗಕ್ಕೆ ಹೋಗುತ್ತಾನೆ. ಅಲ್ಲಿಯೂ ಸುಂದರ ಜೀವನ ನಡೆಸುತ್ತಾರೆ ಎನ್ನಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಶ್ಚಿತಾರ್ಥಕ್ಕೆ ವಜ್ರದ ಉಂಗುರ ಸೂಕ್ತವೇ?

ಸಾವು ಎನ್ನುವ ಎರಡು ಪದವು ಮಾನಸಿಕವಾಗಿ ಒತ್ತಡ ಹಾಗೂ ಭಯವನ್ನು ಉಂಟುಮಾಡುವ ಶಬ್ದ. ಅದನ್ನು ಪದೇ ಪದೇ ಕೇಳಲು ಅಥವಾ ಆ ಶಬ್ದವನ್ನು ಹೇಳಲು ಸಾಕಷ್ಟು ಭಯ ಹಾಗೂ ಬೇಸರ ಉಂಟಾಗುವುದು ಸಹಜ. ಇಂತಹ ಒಂದು ಸಾವು ನಮ್ಮನ್ನು ಸಮೀಪಿಸುತ್ತಿದೆ ಎನ್ನುವುದನ್ನು ನಮ್ಮ ನಡುವೆ ನಡೆಯುವ ಕೆಲವು ಬದಲಾವಣೆಯಿಂದ ಸುಲಭವಾಗಿ ತಿಳಿದುಕೊಳ್ಳಬಹುದು. ನಿಜ, ಕೆಲವು ಧಾರ್ಮಿಕ ಪುರಾವೆಗಳು ಹೇಳುವ ಪ್ರಕಾರ ವ್ಯಕ್ತಿ ಸಾವಿಗೆ ಸಮೀಪಿಸುತ್ತಿದ್ದಂತೆ ತನ್ನಲ್ಲಿ ಹಾಗೂ ಸುತ್ತಲಿನ ಜನರೊಂದಿಗೆ ಸಾಕಷ್ಟು ಭಿನ್ನತೆಯನ್ನು ಕಾಣುತ್ತಾನೆ ಎನ್ನಲಾಗುತ್ತದೆ. ಹಾಗಾದರೆ ಆ ಬದಲಾವಣೆಗಳು ಯಾವವು? ಎನ್ನುವ ನಿಮ್ಮ ಕುತೂಹಲಕ್ಕೆ ಲೇಖನದ ಮುಂದಿನ ಭಾಗ ವಿವರಣೆ ನೀಡುವುದು.

1.ಸಾವು ಸಮೀಪಿಸಿದಾಗ ನಮ್ಮಲ್ಲಿ ಬದಲಾವಣೆ

1.ಸಾವು ಸಮೀಪಿಸಿದಾಗ ನಮ್ಮಲ್ಲಿ ಬದಲಾವಣೆ

ಚಿಕ್ಕ ವಯಸ್ಸಿನಲ್ಲೇ ನೀವು ಸಹ ರೋಲ್ ಮಾಡೆಲ್‌ ಆಗಬೇಕಾ? ಈ ಸಲಹೆಗಳನ್ನು ಪಾಲಿಸಿ

2. ಗರುಡ ಪುರಾಣ

2. ಗರುಡ ಪುರಾಣ

ಗರುಡ ಪುರಾಣದ ಪ್ರಕಾರ, ಸಾವು ಎನ್ನುವುದು ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧಾರವಾಗಿರುತ್ತದೆ. ಅವನು ಮಾಡುವ ಕರ್ಮಗಳು ಹಾಗೂ ಪುಣ್ಯ ಸಂಗತಿಗಳು ಅವನ ಅಡಿಗಳಲ್ಲಿಯೇ ಇರುತ್ತವೆ. ಅವುಗಳ ಆಧಾರದ ಮೇಲೆಯೇ ವ್ಯಕ್ತಿಯ ಸಾವು ನಿರ್ಧಾರವಾಗುವುದು ಎಂದು ಶ್ರೀಕೃಷ್ಣ ಪರಮಾತ್ಮನು ಹೇಳಿದ್ದಾನೆ ಎಂದು ಹೇಳಲಾಗುವುದು.

3. ಸುಲಭವಾದ ಸಾವು

3. ಸುಲಭವಾದ ಸಾವು

ಸಾವು ಎಲ್ಲರಿಗೂ ನೋವು ಹಾಗೂ ದುಃಖವನ್ನು ತಂದೊಡ್ಡುವುದು. ಸಾಯುತ್ತಿರುವ ವ್ಯಕ್ತಿ ಸದಾ ಸತ್ಯವನ್ನೇ ನುಡಿಯುವವನಾಗಿದ್ದರೆ, ದೇವರಲ್ಲಿ ನಂಬಿಕೆ ಇಟ್ಟವನಾಗಿದ್ದರೆ ಹಾಗೂ ತನ್ನ ಕರ್ತವ್ಯ ಹಾಗೂ ಕರ್ಮದಲ್ಲಿ ನಿಷ್ಟಾವಂತನಾಗಿದ್ದರೆ ಅವನಿಗೆ ನೋವು ರಹಿತ ಸಾವು ಬರುವುದು ಎನ್ನಲಾಗುತ್ತದೆ.

4. ಕಷ್ಟದ ಸಾವು

4. ಕಷ್ಟದ ಸಾವು

ಯಾವ ವ್ಯಕ್ತಿ ನೀಚ ತನವನ್ನು ಹೆಚ್ಚಾಗಿ ಹೊಂದಿರುತ್ತಾನೆ, ಮೋಸ ವಂಚನೆಯಿಂದಲೇ ತನ್ನ ಬದುಕನ್ನು ನಿರ್ವಹಿಸಿಕೊಳ್ಳುತ್ತಾನೆ? ಅಸಭ್ಯ ವರ್ತನೆಯಿಂದ ಎಲ್ಲರಿಗೂ ತೊಂದರೆ ಕೊಡುವವನು, ಯಾರಿಗೂ ಗೌರವ ನೀಡದವನು, ಅಹಂಕಾರದಲ್ಲಿ ಸೊಕ್ಕುತ್ತಿರುವವನ ಸಾವು ಅತ್ಯಂತ ಕಷ್ಟ ಹಾಗೂ ನೋವಿನಿಂದ ಕೂಡಿರುತ್ತದೆ ಎಂದು ಹೇಳಲಾಗುವುದು.

5. ಯಮರಾಜ ಕೆಟ್ಟ ಮನಃಸ್ಥಿತಿಯಲ್ಲಿ ಬರುವನು

5. ಯಮರಾಜ ಕೆಟ್ಟ ಮನಃಸ್ಥಿತಿಯಲ್ಲಿ ಬರುವನು

ಯಾವ ವ್ಯಕ್ತಿ ಅತ್ಯಾಚಾರ, ಕೊಲೆ ಹಾಗೂ ಅಪರಾಧವನ್ನು ಮಾಡಿರುತ್ತಾನೆ, ಅವನು ಬಹಳ ನೋವಿನಿಂದ ಸಾವನ್ನಪ್ಪುತ್ತಾನೆ. ಅಂತಹ ವ್ಯಕ್ತಿಗಳನ್ನು ಕರೆದೊಯ್ಯಲು ಯಮರಾಜ ಬಂದಾಗ ಅತ್ಯಂತ ಕೆಟ್ಟ ಮನಃಸ್ಥಿತಿಯಲ್ಲಿ ಇರುತ್ತಾನೆ ಎಂದು ಕೆಲವು ಧಾರ್ಮಿಕ ಕಥೆಗಳು ವಿವರಿಸುತ್ತವೆ.

6. ಶಿವ ಪುರಾಣದ ಪ್ರಕಾರ

6. ಶಿವ ಪುರಾಣದ ಪ್ರಕಾರ

ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಸಂಗತಿಗಳಿಂದ ಕೂಡಿರುವ ಶಿವ ಪುರಾಣವು ಮನುಷ್ಯನ ಸಾವಿನ ಬಗ್ಗೆಯೂ ಒಂದಿಷ್ಟು ವಿಷಯಗಳನ್ನು ತೆರೆದಿಡುತ್ತದೆ. ಶಿವ ಪುರಾಣದಲ್ಲಿ ಹೇಳುವ ಪ್ರಕರ ವ್ಯಕ್ತಿ ತನ್ನ ಸಾವನ್ನು ಸಮೀಪಿಸುತ್ತಿರುವಾಗ ಕೆಲವು ದೈಹಿಕ ಮತ್ತು ಮಾನಸಿಕ ಬದಲಾವಣೆಯನ್ನು ಕಂಡುಕೊಳ್ಳುವನು.

7. ಸಾವಿನ ಸಮಯದಲ್ಲಿ

7. ಸಾವಿನ ಸಮಯದಲ್ಲಿ

ನೋವಿನಿಂದ ತಮ್ಮ ಸಾವನ್ನು ಕಂಡುಕೊಳ್ಳುವವರು ಕೆಲವು ಅವಸ್ತೆಯನ್ನು ಅನುಭವಿಸುತ್ತಾರೆ. ಇನ್ನೇನು ಸಾವಿಗೆ ಹತ್ತಿರವಾಗಿದ್ದಾರೆ ಎಂದಾಗ ಮಾತುಗಳು ಅಥವಾ ಧ್ವನಿಗಳು ಕಡಿಮೆಯಾಗುತ್ತವೆ. ಮನಸ್ಸಲ್ಲಿ ಎಲ್ಲವೂ ಗೊಂದಲದಿಂದ ಕೂಡಿರುವಂತೆ ಅನಿಸುವುದು. ದೇಹದ ಮೇಲೆ ಕೆಂಪು ಬಣ್ಣದ ತೇಪೆಗಳು ಮುಸುಕಾಗಿ ಕಾಣಿಸಿಕೊಳ್ಳುತ್ತವೆ. ಇಂತಹ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಗಳು 6 ತಿಂಗಳೊಳಗೆ ಸಾಯುತ್ತಾರೆ ಎನ್ನಲಾಗುವುದು.

8. ಸ್ಪರ್ಶ ಪ್ರಜ್ಞೆ ಕಳೆದುಕೊಳ್ಳುವನು

8. ಸ್ಪರ್ಶ ಪ್ರಜ್ಞೆ ಕಳೆದುಕೊಳ್ಳುವನು

ಒಬ್ಬ ವ್ಯಕ್ತಿ ವಾಸನೆಯನ್ನು ಗುರುತಿಸುವುದು ಹಾಗೂ ಸ್ಪರ್ಶದ ಪ್ರಜ್ಞೆಯನ್ನು ಕಳೆದುಕೊಂಡಿದ್ದಾನೆ ಎಂದರೆ ಅವನು ಶೀಘ್ರದಲ್ಲಿಯೇ ಸಾಯುತ್ತಾನೆ ಎಂದರ್ಥ. ವ್ಯಕ್ತಿಗೆ ಸೂರ್ಯನ ಶಾಖವನ್ನು ಅನುಭವಿಸಲು ಹಾಗೂ ನೋಡಲು ಕಷ್ಟವಾಗುತ್ತಿದೆ ಎಂದರೆ ದೈಹಿಕವಾಗಿ ಸಾಕಷ್ಟು ಕುಗ್ಗಿರುವನು. ಅವನ ಸಾವು ಸಮೀಪದಲ್ಲಿಯೇ ಇದೆ ಎನ್ನುವುದನ್ನು ತಿಳಿಸುವುದು.

9. ದೈಹಿಕ ಚಿಹ್ನೆಗಳು

9. ದೈಹಿಕ ಚಿಹ್ನೆಗಳು

ನಮ್ಮ ಸುತ್ತಲಿನ ಪರಿಸರ ವಿವಿಧ ಬಣ್ಣಗಳಿಂದ ಕೂಡಿದೆ. ಈ ಬಣ್ಣ ಬಣ್ಣದ ಲೋಕವು ವ್ಯಕ್ತಿಗೆ ಕೇವಲ ಕಪ್ಪು-ಬಿಳುಪು ಬಣ್ಣಗಳಿಂದ ಕೂಡಿರುವಂತೆ ಕಾಣುತ್ತಿದೆ ಎಂದರೆ ಅವನು ಶೀಘ್ರದಲ್ಲಿಯೇ ಸಾಯುತ್ತಾನೆ ಎನ್ನುವುದನ್ನು ಸೂಚಿಸುವುದು. ಯಾರಿಗೆ ಎಡಗೈ ಬಹಳ ಸೆಳೆತದಿಂದ ಕೂಡಿರುತ್ತದೆ ಅಂತಹವರು ಬಹುಬೇಗ ಸಾಯುತ್ತಾರೆ.

 10. ನೆರಳು ಕಾಣದೆ ಇದ್ದರೆ

10. ನೆರಳು ಕಾಣದೆ ಇದ್ದರೆ

ಯಾವ ವ್ಯಕ್ತಿ ತನ್ನ ಪ್ರತಿಬಿಂಬವನ್ನು ಕನ್ನಡಿಯಲ್ಲಿ, ಎಣ್ಣೆಯಲ್ಲಿ, ನೀರಿನಲ್ಲಿ ಹಾಗೂ ಬೆಳಕಿನಲ್ಲಿ ಕಾಣಲು ಸಾಧ್ಯವಾಗುವುದಿಲ್ಲವೋ ಅಥವಾ ಪ್ರತಿಬಿಂಬ ಇಲ್ಲದಂತೆ ಭಾವಿಸುವನೋ ಅವನ ಸಾವು ಸಮೀಪದಲ್ಲಿಯೇ ಇದೆ ಎನ್ನುವುದು ತಿಳಿಯುತ್ತದೆ. ಅವರು ತಮ್ಮ ನೆರಳನ್ನು ನೋಡುವುದನ್ನೇ ಸಂಪೂರ್ಣವಾಗಿ ನಿಲ್ಲಿಸಿರುತ್ತಾರೆ.

11. ನಕ್ಷತ್ರಗಳನ್ನು ನೋಡಲು ಆಗದು

11. ನಕ್ಷತ್ರಗಳನ್ನು ನೋಡಲು ಆಗದು

ಜೀವನದಲ್ಲಿ ಸಾಕಷ್ಟು ಹತಾಶೆಗೊಂಡಿದ್ದೀರಾ: ಈ ಸಪ್ತಸೂತ್ರಗಳನ್ನು ಅನುಸರಿಸಿ ಗೆಲುವು ಸಾಧಿಸಿ

12. ನೀಲಿ ನೊಣಗಳು ಸಮೀಪಿಸಿದರೆ

12. ನೀಲಿ ನೊಣಗಳು ಸಮೀಪಿಸಿದರೆ

ಯಾವ ವ್ಯಕ್ತಿಯ ಸುತ್ತ ನೀಲಿ ಬಣ್ಣದ ನೊಣಗಳು ಅತಿಯಾಗಿ ಹಾರಾಡುತ್ತವೆ, ಅಂತಹ ವ್ಯಕ್ತಿಗಳ ಸಾವು ಅತ್ಯಂತ ಸಮೀಪದಲ್ಲಿದೆ ಎಂದು ಹೇಳಬಹುದು. ಅವರು ಒಂದು ತಿಂಗಳು ಅಥವಾ ಅದಕ್ಕೂ ಬಹುಬೇಗ ಸಾವನ್ನಪ್ಪಬಹುದು.

13. ಸಾವನ್ನು ಸುಲಭಗೊಳಿಸುವುದು

13. ಸಾವನ್ನು ಸುಲಭಗೊಳಿಸುವುದು

ಪವಿತ್ರ ಪುರಾಣ ಕಥೆಗಳು ಹಾಗೂ ಭಗವದ್ಗೀತೆಯಲ್ಲಿ ಉಲ್ಲೇಖಿಸಿರುವ ಪ್ರಕಾರ ವ್ಯಕ್ತಿ ತಾನು ಸಾಯುತ್ತಿದ್ದೇನೆ ಅಥವಾ ತನ್ನ ಸಾವು ಸಮೀಪಿಸುತ್ತಿದೆ ಎಂದು ಭಾವಿಸಿದಾಗ ಅಥವಾ ತಿಳಿದಾಗ ಆದಷ್ಟು ಉತ್ತಮ ಕೆಲಸ-ಕಾರ್ಯಗಳನ್ನು ಮಾಡುವುದು ಉತ್ತಮ. ಆಗ ನಮ್ಮ ಸಾವು ಸುಲಭ ರೀತಿಯಿಂದ ಕೂಡಿರುತ್ತದೆ ಎಂದು ಹೇಳಲಾಗುವುದು.

14. ದೇವರ ಜಪ ಮಾಡುವುದು

14. ದೇವರ ಜಪ ಮಾಡುವುದು

ಸಾವಿಗೆ ಸಮೀಪಿಸಿದ ವ್ಯಕ್ತಿಯು ಅತಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ತನಗೆ ದೊರೆತ ಸಮಯದಲ್ಲಿ ದೇವರ ನಾಮ ಜಪ ಮಾಡಬೇಕು. ದೇವರ ಪೂಜೆ ಹಾಗೂ ದರ್ಶನ ಪಡೆಯುವುದರ ಮೂಲಕ ಒಂದಿಷ್ಟು ಪುಣ್ಯವನ್ನು ಪಡೆದುಕೊಳ್ಳಬೇಕು.

15. ಒಳ್ಳೆಯ ಕೆಲಸ ಮಾಡುವುದು

15. ಒಳ್ಳೆಯ ಕೆಲಸ ಮಾಡುವುದು

ಒಂದೇ ದಿನದಲ್ಲಿ ಎಲ್ಲಾ ಒಳ್ಳೆಯ ಕೆಲಸ ಕಾರ್ಯವನ್ನು ಮಾಡಿ ಮುಗಿಸಲು ಸಾದ್ಯವಿಲ್ಲ. ಸಾವಿಗೆ ಸಮೀಪದಲ್ಲಿ ಇದ್ದೇವೆ ಎನ್ನುವ ಅರಿವು ಮೂಡಿದಾಗ, ತಪ್ಪು ಕೆಲಸವನ್ನು ಮಾಡುವುದ ನಿಲ್ಲಿಸಬೇಕು. ಒಳ್ಳೆಯ ಕರ್ಮ ಅಥವಾ ಕೆಸವನ್ನು ಮಾಡುವುದರ ಮೂಲಕ ಎಲ್ಲರಿಗೂ ಸಹಾಯ ಮತ್ತು ಸಹಕಾರ ನೀಡಬೇಕು.

16. ಪ್ರೀತಿ ಪಾತ್ರರೊಂದಿಗೆ ಮಾತನಾಡಬೇಕು

16. ಪ್ರೀತಿ ಪಾತ್ರರೊಂದಿಗೆ ಮಾತನಾಡಬೇಕು

ಸಾಯುವ ಮುನ್ನ ನಾವು ಇಷ್ಟಪಡುವ ವ್ಯಕ್ತಿಗಳೊಂದಿಗೆ ಒಂದಿಷ್ಟು ಮಾತುಗಳನ್ನು ಆಡಿ. ನೀವು ಎಷ್ಟು ಪ್ರೀತಿಸುತ್ತೀರಿ? ಅವರ ಸಾವಿಗೆ ಯಾಕೆ ಶೋಕಿಸಬಾರದು? ಜೀವನದಲ್ಲಿ ಧೈರ್ಯದಿಂದ ಮುಂದೆ ನಡೆಯುವಂತೆ ಭರವಸೆಯನ್ನು ನೀಡುವ ವಿಚಾರಗಳಿಗೆ ಸಂಬಂಧಿಸಿದಂತೆ ಮಾತನಾಡಬೇಕು.

18. ಪೋಷಕರ ಹೆಸರನ್ನು ನೆನೆಯಿರಿ

18. ಪೋಷಕರ ಹೆಸರನ್ನು ನೆನೆಯಿರಿ

ಸಾಯುವ ಸಮಯ ಹತ್ತಿರವಾದಾಗ ಅಥವಾ ಸಾವು ಸಮೀಪಿಸುವುದು ಎಂದು ತಿಳಿದಾಗ ಆದಷ್ಟು ತಂದೆ ತಾಯಿಯ ಹೆಸರನ್ನು ಜಪಿಸಬೇಕು. ನಮ್ಮ ಪಾಲಕರು ದೇವರಿಗೆ ಸಮಾನವಾಗಿರುತ್ತಾರೆ. ಅವರ ಹೆಸರನ್ನು ಜಪಿಸಿದರೆ ಸಾವು ಸುಗಮವಾಗಿ ಹೋಗುವುದು, ಕಷ್ಟಗಳು ದೂರ ಆಗುವವು. ಮಾಡಿದ ಪಾಪವು ಮಾಯವಾಗುತ್ತವೆ. ಬದಲಿಗೆ ಪುಣ್ಯ ಪ್ರಾಪ್ತಿಯಾಗುವುದು.

ಕ್ಷಮೆ ಕೇಳಬೇಕು

ಕ್ಷಮೆ ಕೇಳಬೇಕು

ಸಾವನ್ನು ಹೊಂದುವಾಗ ಅಥವಾ ಸಾವಿನ ಸಮಯ ಹತ್ತಿರವಾದಾಗ ವ್ಯಕ್ತಿ ತನ್ನಿಂದ ಆದ ತಪ್ಪುಗಳಿಗೆ ಇತರರಲ್ಲಿ ಕ್ಷಮೆ ಕೇಳಬೇಕು. ತನ್ನ ತಪ್ಪಿನ ಅರಿವನ್ನು ಹೊಂದುವುದು ಹಾಗೂ ಕರ್ಮವನ್ನು ಸರಿಯಾಗಿ ನಿರ್ವಹಿಸುವರು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಹೇಳಲಾಗುವುದು. ಅಲ್ಲದೆ ವ್ಯಕ್ತಿಯು ಶಾಂತತೆಯಿಂದ ತೀರಿಕೊಳ್ಳುವನು. ಜೊತೆಗೆ ಪುಣ್ಯವನ್ನು ಪಡೆದುಕೊಳ್ಳುವುದರ ಮೂಲಕ ಜೀವನದ ಮುಕ್ತಿಯನ್ನು ಕಾಣುವನು. ದೇವರ ಆಶೀರ್ವಾದವೂ ಲಭಿಸುವುದು.

ಮೇಲಿನ ಎಲ್ಲಾ ಹೇಳಿಕೆಗಳು ಪೌರಾಣಿಕ ಹಿನ್ನೆಲೆಯನ್ನು ಹೊಂದಿದ್ದು, ಆ ಮೂಲವನ್ನು ಆಧರಿಸಿ ಲೇಖನವನ್ನು ಬರೆಯಲಾಗಿದೆ. ಇದನ್ನು ನಂಬುವುದು ಅಥವಾ ಬಿಡುವುದು ನಿಮಗೆ ಬಿಟ್ಟದ್ದು.

English summary

According To Ancient Texts, How You Will Die

Death the ultimate reality of life death often comes announced and we have to face it, even if we are not prepared however, do you know that our religious texts have decided when and how we all will die, according to our good and bad karma?
X
Desktop Bottom Promotion