For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಶ್ಚಿತಾರ್ಥಕ್ಕೆ ವಜ್ರದ ಉಂಗುರ ಸೂಕ್ತವೇ?

|

ವಿವಾಹ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಮಹತ್ತರದ ತಿರುವನ್ನು ತೆಗೆದುಕೊಳ್ಳುವುದು. ಅಪರಿಚಿತರು ಪರಿಚಿತರಾಗಿ ಒಂದೇ ಸೂರಿನ ಅಡಿಯಲ್ಲಿ ಜೀವನ ಪೂರ್ತಿ ಜೊತೆಗೆ ಜೊತೆಯಾಗಿ ಬಾಳುತ್ತೇವೆ ಎಂದು ವಚನ ತೆಗೆದುಕೊಳ್ಳುವ ಸುಂದರ ಸಮಯ. ಈ ಸಮಯವು ಜೀವನದಲ್ಲಿ ಮರೆಯಲಾಗದ ಕ್ಷಣಗಳಿಂದ ಕೂಡಿರುತ್ತವೆ. ಎರಡು ಕುಟುಂಬಗಳು ಪ್ರೀತಿಯ ಒಪ್ಪಂದ ಮತ್ತು ಹೊಸ ಸಂಬಂಧಗಳ ಬೆಸುಗೆಯಿಂದ ತಮ್ಮ ಕುಟುಂಬವನ್ನು ವಿಸ್ತರಿಸಿಕೊಳ್ಳುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳಿಗೂ ಮುಂಚೆ ನಿಶ್ಚಿತಾರ್ಥ ಎನ್ನುವ ಪವಿತ್ರವಾದ ವಿಧಿ ವಿಧಾನವನ್ನು ಅನುಸರಿಸುವುದು ಒಂದು ಪದ್ಧತಿ.

ALSO READ: ಜ್ಯೋತಿಷ್ಯದ ಪ್ರಕಾರ, ಪಾರ್ಟಿಗಳಲ್ಲಿ ಯಾವ ರಾಶಿಯವರು ಹೇಗೆ ವರ್ತಿಸುತ್ತಾರೆ ಗೊತ್ತೇ?

ನಮ್ಮ ಮಗಳನ್ನು ನಿಮ್ಮ ಮಗನಿಗೆ ವಿವಾಹ ಮಾಡಿಕೊಡುತ್ತೇವೆ ಎನ್ನುವ ಒಪ್ಪಂದ ಅಥವಾ ನಮ್ಮ ಮಗನಿಗೆ ನಿಮ್ಮ ಮಗಳನ್ನು ವಿವಾಹ ಮಾಡಿಸಿಕೊಳ್ಳುತ್ತೇವೆ ಎನ್ನುವ ಒಪ್ಪಿಗೆಗೆ ಸಮ್ಮತಿ ಸೂಚಿಸುವ ಧಾರ್ಮಿಕ ಪದ್ಧತಿಗೆ ನಿಶ್ಚಿತಾರ್ಥ ಎಂದು ಹೇಳಲಾಗುವುದು. ಸಮಾಜದಲ್ಲಿ ವಾಸಿಸುವ ನಾವು ನಮ್ಮಲ್ಲಿ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮಾಡಿಕೊಳ್ಳುವ ಸಂಬಂಧಗಳ ಬೆಸುಗೆಗೆ ನಿಶ್ಚಿತಾರ್ಥ ಕಾರ್ಯಕ್ರಮದ ಮೂಲಕ ತಾಂಬೂಲ ಬದಲಾಯಿಸಿಕೊಳ್ಳುತ್ತಾರೆ. ತಾಂಬೂಲ ಬದಲಾವಣೆಯ ಸಂದರ್ಭದಲ್ಲಿ ಹುಡುಗ ಮತ್ತು ಹುಡುಗಿ ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಳ್ಳುತ್ತಾರೆ.

Diamond Ring

ಪುರಾತನ ಕಾಲದಿಂದಲೂ ಇರುವ ಈ ಪದ್ಧತಿಯು ಇದೀಗ ಸಾಕಷ್ಟು ಬದಲಾವಣೆಯ ಮೂಲಕ ನಡೆಯುತ್ತಿರುವುದನ್ನು ಕಾಣಬಹುದು. ನಿಶ್ಚಿತಾರ್ಥ ಹಾಗೂ ವಿವಾಹದ ಸಂದರ್ಭದಲ್ಲಿ ಎರಡು ಕುಟುಂಬಗಳು ತಮ್ಮ ಶ್ರೀಮಂತಿಕೆಗೆ ಪ್ರತೀಕವಾಗಿ ವಿವಿಧ ಬದಲಾವಣೆ ಹಾಗೂ ವಸ್ತುಗಳ ವಿನಿಮಯದಲ್ಲಿ ದೊಡ್ಡಸ್ತಿಕೆಯನ್ನು ತೋರಿಸಿಕೊಳ್ಳುತ್ತಾರೆ. ಅದರಲ್ಲೂ ನಿಶ್ಚಿತಾರ್ಥದ ಉಂಗುರಗಳು ವಿಭಿನ್ನತೆಯಿಂದ ಕೂಡಿರುತ್ತವೆ. ಬಹುತೇಕ ಜನರು ನಿಶ್ಚಿತಾರ್ಥ ಕಾರ್ಯಗಳಿಗೆ ವಜ್ರದ ಉಂಗುರಗಳೇ ಶ್ರೇಷ್ಠ ಎಂದು ಆಯ್ಕೆ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಜ್ರದ ಉಂಗುರವು ನವ ಜೋಡಿಗಳಿಗೆ ಉತ್ತಮವೇ? ಕಡ್ಡಾಯವಾಗಿ ವಜ್ರದ ಉಂಗುರವನ್ನೇ ಆಯ್ಕೆ ಮಾಡಬೇಕೆ? ವಜ್ರದಿಂದ ವಿವಾಹದ ಸಂಬಂಧ ಭದ್ರವಾಗುವುದೇ? ಎನ್ನುವ ಅನೇಕ ಸಂಗತಿಗಳನ್ನು ನೀವು ಲೇಖನದ ಮುಂದಿನ ಭಾಗದಲ್ಲಿ ತಿಳಿದುಕೊಳ್ಳಬಹುದು.

ವಜ್ರದ ಉಂಗುರದಿಂದ ಉಂಟಾಗುವ ಉತ್ತಮ ಪರಿಣಾಮಗಳು

ವಜ್ರದ ಉಂಗುರದಿಂದ ಉಂಟಾಗುವ ಉತ್ತಮ ಪರಿಣಾಮಗಳು

ಅತ್ಯಂತ ಬೆಲೆ ಬಾಳುವ ಹಾಗೂ ಬಹು ಕಾಂತೀಯ ರತ್ನ ಎಂದರೆ ವಜ್ರ. ವಜ್ರವು ಪ್ರಣಯ ದೇವತೆಯಾದ ಶುಕ್ರನನ್ನು ಪ್ರತಿನಿಧಿಸುತ್ತದೆ. ಹಾಗಾಗಿ ವಜ್ರವನ್ನು ಪ್ರೀತಿಯ ಸಂಕೇತವಾಗಿ ಪರಿಗಣಿಸಲಾಗುವುದು. ವಜ್ರ ಧರಿಸುವುದರಿಂದ ಜನ್ಮ ಕುಂಡಲಿಯಲ್ಲಿ ಇರುವ ಶುಕ್ರನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುವುದು. ವಜ್ರವು ಸಂಬಂಧದಲ್ಲಿ ಶಾಶ್ವತವಾದ ಪ್ರೀತಿ ಹಾಗೂ ಆನಂದವನ್ನು ನೀಡುವುದು ಎಂದು ಹೇಳಲಾಗುತ್ತದೆ. ವಧು-ವರರಲ್ಲಿ ಪರಸ್ಪರ ಪ್ರೀತಿ, ಕಾಳಜಿ ಹಾಗೂ ಹೊಂದಾಣಿಕೆಗೆ ಸ್ಫೂರ್ತಿ ನೀಡುವುದರ ಮೂಲಕ ಜೀವನವನ್ನು ಸುಧಾರಿಸುವುದು ಎಂದು ಹೇಳಲಾಗುತ್ತದೆ. ಅಲ್ಲದೆ ಸುತ್ತಲ ಜನರಿಂದ ಪ್ರಶಂಸಿಸಲು ಮತ್ತು ಮೆಚ್ಚುಗೆಯನ್ನು ಪಡೆದುಕೊಳ್ಳಲು ಸಹಕರಿಸುವುದು.

ವಜ್ರದ ಉಂಗುರದಿಂದ ಉಂಟಾಗುವ ಕೆಟ್ಟ ಪರಿಣಾಮಗಳು

ವಜ್ರದ ಉಂಗುರದಿಂದ ಉಂಟಾಗುವ ಕೆಟ್ಟ ಪರಿಣಾಮಗಳು

ವಜ್ರವು ಅತ್ಯಂತ ಬೆಲೆಬಾಳುವ ಹಾಗೂ ಆಕರ್ಷಕ ರತ್ನ. ಆದರೆ ಇದರಿಂದ ಎಷ್ಟು ಉತ್ತಮ ಗುಣಗಳಿರುತ್ತವೆಯೋ ಅಷ್ಟೇ ನಕಾರಾತ್ಮಕ ಗುಣಗಳು ಇರುತ್ತದೆ ಎಂದು ಹೇಳಲಾಗುವುದು. ಕುಂಡಲಿಯಲ್ಲಿ ನಮ್ಮ ಅದೃಷ್ಟದ ಗ್ರಹ ಯಾವುದು? ನೀಚ ಗ್ರಹ ಯಾವುದು? ಅದರಿಂದ ಉಂಟಾಗುವ ಕೆಟ್ಟ ಗುಣಗಳು ಯಾವವು? ಎನ್ನುವುದನ್ನು ಸರಿಯಾಗಿ ಪರಿಶೀಲಿಸಬೇಕಾಗುವುದು. ಶುಕ್ರನನ್ನು ಪ್ರತಿನಿಧಿಸುವ ಈ ರತ್ನವು ಶುಕ್ರ ಗ್ರಹದ ಪ್ರಭಾವ ಹೇಗಿದೆ? ಎನ್ನುವುದನ್ನು ಮೊದಲು ತಿಳಿಯಬೇಕು. ಶುಕ್ರನು ಕುಂಡಲಿಯಲ್ಲಿ ದೋಷಪೂರಿತನಾಗಿದ್ದರೆ ಅಥವಾ ಹೆಚ್ಚು ಶಕ್ತಿಯನ್ನು ನೀಡದ ಸ್ಥಾನದಲ್ಲಿ ಇದ್ದರೆ ವಜ್ರದ ಉಂಗುರವನ್ನು ಧರಿಸಬಾರದು. ಅದು ಕೆಟ್ಟ ಪರಿಣಾಮಗಳಿಗೆ ಹೆಚ್ಚು ಪ್ರಚೋದನೆ ಮಾಡುವುದು. ಅಲ್ಲದೆ ಸಂಬಂಧ ಅಥವಾ ಪ್ರೀತಿಯ ಜೀವನದ ಮೇಲೆ ಹೆಚ್ಚು ಋಣಾತ್ಮಕ ಪ್ರಭಾವವನ್ನು ಬೀರುವುದು.

ALSO READ: ಹೇಗೆ ಪ್ರತಿ ರಾಶಿಗಳವರು ತಮಗೆ ಗೊತ್ತಿಲ್ಲದ ಹಾಗೆ ತಾವೇ ತೊಂದರೆ ತಂದುಕೊಳ್ಳುತ್ತಾರೆ ನೋಡಿ?

ರಾಶಿಗಳ ಆಧಾರದ ಮೇಲೆ ಪ್ರಭಾವ ಬೀರುವುದು

ರಾಶಿಗಳ ಆಧಾರದ ಮೇಲೆ ಪ್ರಭಾವ ಬೀರುವುದು

ವಜ್ರದ ಉಂಗುರವು ಎಲ್ಲಾ ರಾಶಿಯವರಿಗೂ ಉತ್ತಮ ಪರಿಣಾಮ ಬೀರದು. ಕೆಲವು ರಾಶಿಗಳಿಗೆ ಧನಾತ್ಮಕ ಫಲಿತಾಂಶವನ್ನು ಕೊಡುವುದು. ಕೆಲವು ರಾಶಿಯವರಿಗೆ ಅತ್ಯುತ್ತಮ ಸ್ಥಿತಿಯನ್ನು ತಂದೊಡ್ಡುವುದು. ಉತ್ತಮ ಫಲಿತಾಂಶವನ್ನು ಪಡೆದರೆ ವ್ಯಕ್ತಿ ಜೀವನದಲ್ಲಿ ಅದೃಷ್ಟ ಹಾಗೂ ಸಂತೋಷವನ್ನು ಪಡೆದುಕೊಳ್ಳುವನು. ಅದೇ ಋಣಾತ್ಮಕ ಪ್ರತಿಫಲಕ್ಕೆ ಒಳಗಾದರೆ ಜೀವನದಲ್ಲಿ ಸಹಿಸಲಾಗದಷ್ಟು ಕೆಟ್ಟ ಪರಿಣಾಮವನ್ನು ಅನುಭವಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯವರಿಗೆ ವಜ್ರದ ಹರಳು ಉತ್ತಮ ಫಲವನ್ನು ನೀಡುವುದು. ಅದೇ ಮೇಷ, ಸಿಂಹ, ಕರ್ಕ, ಧನು ಮತ್ತು ಮೀನ ರಾಶಿಯವರಿಗೆ ಉತ್ತಮ ಫಲವನ್ನು ನೀಡುವುದಿಲ್ಲ. ಈ ರಾಶಿಯವರ ಮೇಲೆ ನಕಾರಾತ್ಮಕ ಪ್ರಭಾವವನ್ನು ಹೆಚ್ಚಾಗಿ ಬೀರುವುದು.

ನಿಶ್ಚಿತಾರ್ಥದ ಉಂಗುರವನ್ನಾಗಿ ವಜ್ರವನ್ನು ಆಯ್ಕೆ ಮಾಡಬಹುದೇ?

ನಿಶ್ಚಿತಾರ್ಥದ ಉಂಗುರವನ್ನಾಗಿ ವಜ್ರವನ್ನು ಆಯ್ಕೆ ಮಾಡಬಹುದೇ?

ಪ್ರತಿಯೊಂದು ರಾಶಿಗಳಿಗೆ ವಿಶೇಷವಾದ ಕಲ್ಲು ಅಥವಾ ಹರಳುಗಳು ಹೆಚ್ಚು ಪ್ರಭಾವವನ್ನು ಬೀರುತ್ತವೆ. ಹಾಗಾಗಿ ಮನಸ್ಸು ಬಯಸಿದ ಹಾಗೆ ನಾವು ಹರಳುಗಳನ್ನು ಆಯ್ಕೆ ಮಾಡಿಕೊಂಡು ಧರಿಸಬಾರದು. ಇತರರಿಗೆ ಪ್ರಭಾವ ಬೀರಿದ ಹಾಗೆ ನಿಮ್ಮ ಮೇಲೂ ಉತ್ತಮ ಪ್ರಭಾವ ಬೀರುತ್ತದೆ ಎಂದು ಭಾವಿಸುವುದು ತಪ್ಪು. ಕುಂಡಲಿಯಲ್ಲಿ ಯಾವ ಗ್ರಹಗಳು ಯಾವ ಸ್ಥಾನದಲ್ಲಿದೆ ಎನ್ನುವುದನ್ನು ಅರಿತು, ನಂತರ ನಿಮಗೆ ಯಾವ ಹರಳು ಸೂಕ್ತ ಫಲ ನೀಡುವುದು? ಎನ್ನುವುದನ್ನು ತಿಳಿಯಬೇಕು. ನಂತರ ಅದಕ್ಕೆ ಅನುಗುಣವಾದ ಹರಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಅಂತೆಯೇ ವಜ್ರವು ನಮ್ಮ ನಕ್ಷತ್ರ, ರಾಶಿ ಹಾಗೂ ಕುಂಡಲಿಯಲ್ಲಿರುವ ಗ್ರಹಗತಿಗಳಿಗೆ ಸೂಕ್ತವಾಗಿದೆಯೇ? ಎನ್ನುವುದನ್ನು ಮೊದಲು ಅರಿಯಬೇಕು, ನಂತರ ಧರಿಸುವುದು ಉತ್ತಮ. ಯಾವುದೇ ಚಿಂತನೆ ಅಥವಾ ಪರಿಶೀಲನೆ ನಡೆಸದೆ ನಿಶ್ಚಿತಾರ್ಥಕ್ಕೆ ವಜ್ರದ ಉಂಗುರಗಳನ್ನು ಖರೀದಿಸಬಾರದು.

ALSO READ: ಜೀವನದಲ್ಲಿ ಸಾಕಷ್ಟು ಹತಾಶೆಗೊಂಡಿದ್ದೀರಾ: ಈ ಸಪ್ತಸೂತ್ರಗಳನ್ನು ಅನುಸರಿಸಿ ಗೆಲುವು ಸಾಧಿಸಿ

ನಿಶ್ಚಿತಾರ್ಥಕ್ಕೆ ಉಂಗುರಗಳ ಆಯ್ಕೆ ಮಾಡುವಾಗ ಜ್ಯೋತಿಷ್ಯದ ಮೊರೆ ಹೋಗುವುದು ಉತ್ತಮ

ನಿಶ್ಚಿತಾರ್ಥಕ್ಕೆ ಉಂಗುರಗಳ ಆಯ್ಕೆ ಮಾಡುವಾಗ ಜ್ಯೋತಿಷ್ಯದ ಮೊರೆ ಹೋಗುವುದು ಉತ್ತಮ

ನಿಶ್ಚಿತಾರ್ಥ ಎನ್ನುವುದು ನಿಮ್ಮ ಭವಿಷ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುವುದು. ಆ ಸುಂದರ ಕ್ಷಣಗಳು ನಿಮ್ಮ ಜೀವನದಲ್ಲಿ ಸದಾ ಹಸನಾಗಿರಲು ನೀವು ಜ್ಯೋತಿಷಿಗಳಿಂದ ಯಾವ ಹರಳು ನಿಮಗೆ ಸೂಕ್ತ ಎನ್ನುವುದನ್ನು ಅರಿಯುವುದು ಉತ್ತಮ. ಉತ್ತಮ ಜ್ಯೋತಿಷಿಯನ್ನು ಸಂಪರ್ಕಿಸಿ ಅವರಲ್ಲಿ ನಿಮ್ಮ ಕುಂಡಲಿಗೆ ಅನುಗುಣವಾಗಿ ಯಾವ ಹರಳನ್ನು ಧರಿಸಬೇಕು? ಯಾವ ಹರಳು ನಿಮ್ಮ ಪ್ರೀತಿ ಹಾಗೂ ಕುಟುಂಬದ ಜೀವನವನ್ನು ಸುಖದಿಂದ ಕೂಡಿರುವಂತೆ ಮಾಡುವುದು? ಎನ್ನುವುದನ್ನು ಅರಿಯಿರಿ. ನಂತರ ಆ ಹರಳಿನ ಉಂಗುರವನ್ನು ಧರಿಸಿ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ. ಹೊರತಾಗಿ ಕುರುಡು ನಂಬಿಕೆಯಿಂದ ವಜ್ರವನ್ನೇ ಧರಿಸಬೇಕು ಎನ್ನುವ ಹಠಕ್ಕೆ ಅಥವಾ ಆಯ್ಕೆಗೆ ಮುಂದಾಗದಿರಿ.

English summary

According To Astrology Is Diamond Ring Suitable For Engagement

You might hae heard the phrase that marriages and matches are made in heaven! You can not guarantee that, but can surely know it when the right partner is just in front of you. Is it that time of your life that you’re looking for the perfect ring to propose your special someone or for couple engagement rings?
Story first published: Friday, November 8, 2019, 17:06 [IST]
X
Desktop Bottom Promotion