Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
2019 ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆ ಹಾಗೂ ಮಹತ್ವ
ಎರಡು ದಶಕದ ಮೊದಲು ಪಾಕಿಸ್ತಾನ ವಿರುದ್ಧ ಕಾರ್ಗಿಲ್ ಯುದ್ಧ ಗೆದ್ದ ಸಂಭ್ರಮದ ದಿನ ಇಂದು. ಉಗ್ರರ ಧಿರಿಸಿನಲ್ಲಿದ್ದ ಪಾಕಿಸ್ತಾನದ ಯೋಧರು ಭಾರತದ ಎಲ್ ಒಸಿ ದಾಟಿ ಮುನ್ನಡೆದಿದ್ದರು. ಈ ವೇಳೆ ಭಾರತೀಯ ಸೈನಿಕರು ಕಾಶ್ಮೀರದ ಕಾರ್ಗಿಲ್ ಎನ್ನುವ ಪ್ರದೇಶದಲ್ಲಿ ಭಾರತದ ವಿಜಯ ಪತಾಕೆ ಹಾರಿಸಿದ ದಿನವಿದು. ಇದನ್ನು ಆಪರೇಷನ್ ವಿಜಯ್ ಎಂದೂ ಕರೆಯಲಾಗುತ್ತದೆ ಮತ್ತು ಪ್ರತೀ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
2019ರ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆ. ಪಾಕಿಸ್ತಾನದ ಅರೆಸೇನಾ ಪಡೆಯೊಂದಿಗೆ ಸುಮಾರು ಎರಡು ತಿಂಗಳ ಕಾಲ ಹೋರಾಟ ಮಾಡಿದ ಭಾರತೀಯ ಸೈನಿಕರ ಶೌರ್ಯವೇ ಈ ಕಾರ್ಗಿಲ್ ವಿಜಯ ದಿವಸ. ಪಾಕಿಸ್ತಾನದ ಸೈನಿಕರ ವಶದಲ್ಲಿದ್ದ ಕಾರ್ಗಿಲ್ ನ್ನು ಅಂತಿಮವಾಗಿ ಭಾರತೀಯ ಸೈನಿಕರು ವಶಪಡಿಸಿಕೊಂಡು ಅಲ್ಲಿ ಭಾರತೀಯ ಧ್ವಜವನ್ನು ಹಾರಿಸಿದ್ದರು. ಕಾರ್ಗಿಲ್ ಯುದ್ಧ ಅಥವಾ ಆಪರೇಷನ್ ವಿಜಯ ಹಲವಾರು ಮಂದಿ ಭಾರತೀಯ ವೀರ ಸೈನಿಕರ ಪ್ರಾಣವನ್ನು ಬಲಿ ಪಡೆದಿದೆ. ಈ ವೀರ ಸೇನಾನಿಗಳಿಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಮತ್ತು ಎಲ್ಲಾ ತೊಂದರೆಗಳನ್ನು ಮೀರಿ ಪಾಕಿಸ್ತಾನದ ಸೈನಿಕರ ವಿರುದ್ಧ ಹೋರಾಟ ನಡೆಸಿದ ಸೇನಾನಿಗಳ ಶೌರವನ್ನು ನೆನೆಯಲಾಗುತ್ತದೆ.

ಜಮ್ಮು ಕಾಶ್ಮೀರದ ದ್ರಾಸದಲ್ಲಿ ರಕ್ಷಣಾ ಸಚಿವಾಲಯದಿಂದ ಆಯೋಜಿಸಲಾಗಿರುವಂತಹ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಎಲ್ಲರೂ ಜತೆಯಾಗಿ ಭಾಗಿಯಾಗುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರತಿಯೊಂದು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಕಾರ್ಗಿಲ್ ದಿವಸದ ಮಹತ್ವ
1999ರಲ್ಲಿ ಲಾಹೋರ್ ಒಪ್ಪಂದವು ಶಾಂತಿಯುತವಾಗಿ ನಡೆದ ಬಳಿಕ ಅದೇ ವರ್ಷದ ಚಳಿಗಾಲದ ಅವಧಿಯಲ್ಲಿ ಪಾಕಿಸ್ತಾನದ ಸೈನಿಕರು ರಹಸ್ಯವಾಗಿ ಲೈನ್ ಆಫ್ ಕಂಟ್ರೋಲ್(ಎಲ್ ಒಸಿ) ದಾಟಿದ್ದರು ಮತ್ತು ಭಾರತದ ವಶದಲ್ಲಿದ್ದ ಎಲ್ ಒಸಿ ಭಾಗದಲ್ಲಿ ಕಾಶ್ಮೀರಿ ಉಗ್ರರಂತೆ ಅವರು ಅಲ್ಲಿ ತಮ್ಮ ಶಿಬಿರಗಳನ್ನು ಸ್ಥಾಪಿಸಿದ್ದರು. ಎಲ್ ಒಸಿಯು ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ರೇಖೆಯಾಗಿದೆ.
ಸ್ಥಳೀಯ ಕೆಲವು ಕುರಿಗಾಯಿಗಳು ಪಾಕ್ ಸೈನಿಕರ ನುಸುಳುವಿಕೆ ಬಗ್ಗೆ ಭಾರತೀಯ ಸೈನಿಕರಿಗೆ ಮಾಹಿತಿ ನೀಡಿದರು. ಮೊದಲಿಗೆ ಭಾರತವು ದೊಡ್ಡ ಮಟ್ಟದಲ್ಲಿ ಸೇನೆಯನ್ನು ಕಳುಹಿಸಿ ಅವರನ್ನು ಹೊರಗೆ ಅಟ್ಟಲು ಪ್ರಯತ್ನಿಸಿತು. ಆದರೆ ಈ ವೇಳೆ ಪಾಕ್ ನ ಅರೆಸೇನಾ ಪಡೆ ಕೂಡ ಇದರಲ್ಲಿ ಭಾಗಿಯಾಗಿದೆ ಎಂದು ತಿಳಿದುಬಂತು.
ಭಾರತೀಯ ವಾಯುಪಡೆಯ ನೆರವಿನಿಂದ ಪಾಕಿಸ್ತಾನವು ವಶಪಡಿಸಿಕೊಂಡಿದ್ದ ಶೇ.75-80ರಷ್ಟು ಭೂ ಪ್ರದೇಶವನ್ನು ಭಾರತೀಯ ಸೈನಿಕರು ವಶಕ್ಕೆ ಪಡೆದುಕೊಂಡರು. ಉಳಿದ ಶೇ.20-25ರಷ್ಟು ಭಾಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಒತ್ತಡದಿಂದಾಗಿ ಪಾಕಿಸ್ತಾನವು ಭಾರತಕ್ಕೆ ಬಿಟ್ಟುಕೊಟ್ಟಿತು. ಜುಲೈ 22, 1999ರಲ್ಲಿ ಈ ವಿವಾದವು ಅಧಿಕೃತವಾಗಿ ಕೊನೆಯಾಯಿತು ಮತ್ತು ಭಾರತವು ಜಮ್ಮುಕಾಶ್ಮೀರದ ಕಾರ್ಗಿಲ್ ನಲ್ಲಿ ತನ್ನ ಹಿಡಿದ ಮರು ಸ್ಥಾಪಿಸಿತು. ಕಾರ್ಗಿಲ್ ಯುದ್ಧವನ್ನು ಬೆಟ್ಟ ಪ್ರದೇಶಗಳಲ್ಲಿ ಹೋರಾಡಿದ್ದ ಕಾರಣದಿಂದಾಗಿ ಇದು ತುಂಬಾ ಮಹತ್ವ ಹಾಗೂ ಕಠಿಣವಾಗಿತ್ತು. ಪರ್ವತ ಪ್ರದೇಶವು ತುಂಬಾ ಒರಟು ಮತ್ತು ಕಿರಿದಾಗಿದ್ದ ಕಾರಣದಿಂದಾಗಿ ಭಾರತೀಯ ಸೈನಿಕರು ತುಂಬಾ ಶ್ರಮ ವಹಿಸಬೇಕಾಗಿ ಬಂದಿತ್ತು.
ಕಾರ್ಗಿಲ್ ದಿವಸವನ್ನು ಹೇಗೆ ಆಚರಿಸಲಾಗುವುದು
ಪಾಕಿಸ್ತಾನ ವಿರುದ್ಧ ಸುಮಾರು 90 ದಿನಗಳ ಕಾಲ ಹೋರಾಡಿದ ಭಾರತೀಯ ಸೈನಿಕರ ನೆನಪಿನಲ್ಲಿ ಕಾರ್ಗಿಲ್ ದಿವಸವನ್ನು ಆಚರಿಸಲಾಗುತ್ತದೆ ಮತ್ತು ಆಪರೇಷನ್ ವಿಜಯದಲ್ಲಿ ಪ್ರಾಣ ಕಳೆದುಕೊಂಡ ಸೈನಿಕರ ನೆನೆದು, ಗೌರವ ಅರ್ಪಿಸಲು ಈ ದಿನ ಆಚರಿಸಲ್ಪಡುವುದು.
ಜಮ್ಮು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಇರುವ ದ್ರಾಸದಲ್ಲಿ ಕಾರ್ಗಿಲ್ ಯುದ್ಧ ಸ್ಮಾರಕವನ್ನು ರಚಿಸಲಾಗಿದೆ. ತಮ್ಮ ಮಾತೃಭೂಮಿ ರಕ್ಷಣೆಗಾಗಿ ಪ್ರಾಣ ಕಳೆದುಕೊಂಡ ಸೈನಿಕರ ನೆನಪಿಗಾಗಿ ಭಾರತೀಯ ಸೇನೆಯು ಈ ಸ್ಮಾರಕವನ್ನು ರಚಿಸಿದೆ. ಕಾರ್ಗಿಲ್ ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿರುವಂತಹ ಸೈನಿಕರ ಹೆಸರನ್ನು ಇದರಲ್ಲಿ ಬರೆಯಲಾಗಿದೆ ಮತ್ತು ಇದರಲ್ಲಿ ಒಂದು ದೊಡ್ಡ ಧ್ವಜವನ್ನು ಹಾರಿಸಲಾಗಿದೆ.
ಆಪರೇಷನ್ ವಿಜಯದಲ್ಲಿ ಸುಮಾರು 530 ಸೈನಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಮಾತೃಭೂಮಿಗಾಗಿ ಪ್ರಾಣ ತೆತ್ತ ನಮ್ಮ ಸೈನಿಕರಿಗಾಗಿ ಗೌರವಾರ್ಪಣೆ ಮಾಡುವ ದಿವಸವು ಇದಾಗಿರುವ ಕಾರಣದಿಂದಾಗಿ ಕಾರ್ಗಿಲ್ ದಿವಸವು ಅತೀ ಮಹತ್ವ ಪಡೆದುಕೊಂಡಿದೆ. ನಾವು ಈ ಮೂಲಕ ಕಾರ್ಗಿಲ್ ಹೀರೋಗಳನ್ನು ನೆನೆಯುತ್ತೇವೆ. ಕಾರ್ಗಿಲ್ ಯುದ್ಧದ ಹೀರೊಗಳು
ಕ್ಯಾಪ್ಟನ್ ವಿಕ್ರಂ ಬಾತ್ರ
ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ಜನಿಸಿರುವ ಕ್ಯಾಪ್ಟನ್ ವಿಕ್ರಂ ಬಾತ್ರ ಅವರನ್ನು ಶೇರ್ ಶಾ'ಎಂದು ಕರೆಯಲಾಗುತ್ತದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಬಾತ್ರಾ ಅವರು ಪಾಯಿಂಟ್ 5140 ಮತ್ತು ಪಾಯಿಂಟ್ 4875ಯನ್ನು ಮರು ವಶಪಡಿಸಿ ಕೊಂಡಿದ್ದರು. ಆದರೆ ಅವರು ಆಪರೇಷನ್ ವಿಜಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಯುದ್ಧದಲ್ಲಿ ಅವರು ಹಲವಾರು ಮಂದಿ ಭಾರತೀಯ ಸೈನಿಕರ ಪ್ರಾಣ ಕೂಡ ಕಾಪಾಡಿದ್ದರು. ಅವರಿಗೆ ಅಂದಿನ ರಾಷ್ಟ್ರಪತಿ ಕೆ.ಆರ್. ನಾರಾಯಣ್ ಅವರು ಪರಮ ವೀರ ಚಕ್ರ ನೀಡಿ ಗೌರವಿಸಿದ್ದರು.
ಮನೋಜ್ ಕುಮಾರ್ ಪಾಂಡೆ
ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಅವರಿಗೆ ತನ್ನ ಉನ್ನತ ನಾಯಕತ್ವ ಮತ್ತು ಶೌರ್ಯಕ್ಕಾಗಿ ಪರಮವೀರ ಚಕ್ರ ನೀಡಿ ಗೌರವಿಸಲಾಗಿದೆ. ಆಪರೇಷನ್ ವಿಜಯದ ವೇಳೆ ಅವರನ್ನು ಹೀರೊ ಆಫ್ ಬಾಟಲಿಕ್ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಅವರು ತಮ್ಮ ಬ್ಯಾಟಲಿಯನ್ ತುಂಬಾ ಸುರಕ್ಷಿತ ಜಾಗಕ್ಕೆ ಹೋಗಲು ನೆರವಾಗಿದ್ದರು. ಅವರು ಗಂಭೀರವಾಗಿ ಗಾಯಗೊಂಡಿದ್ದರೂ ಎದುರಾಳಿ ಸೈನಿಕರನ್ನು ಧ್ವಂಸ ಮಾಡಿದ್ದರು. ಶತ್ರುಗಳನ್ನು ಬಿಡಬೇಡಿ ಎನ್ನುವುದು ಅವರ ಕೊನೆಯ ಮಾತಾಗಿತ್ತು.
ಕಾರ್ಗಿಲ್ ಯುದ್ಧದಲ್ಲಿ ಇತರ ಹಲವಾರು ಮಂದಿ ಸೈನಿಕರು ಕೂಡ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಎಲ್ಲಾ ಸೈನಿಕರು ತಮ್ಮ ದೇಶಕ್ಕಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅವರು ನೆನಪು ಮಾತ್ರ ನಮ್ಮ ಹೃದಯದಲ್ಲಿ ಯಾವಾಗಲೂ ಸ್ಥಿರವಾಗಿರಲಿದೆ.
ಜೈ ಹಿಂದ್



Click it and Unblock the Notifications














