For Quick Alerts
ALLOW NOTIFICATIONS  
For Daily Alerts

ಕಂಪೆನಿ ನೀಡಿದ ಟಾರ್ಗೆಟ್ ಮುಟ್ಟಲು ಆಗದೇ ನಡುರಸ್ತೆಯಲ್ಲಿ ಕಣ್ಣೀರಿಟ್ಟ ಸೇಲ್ಸ್‍ಮೆನ್

|

ವೃತ್ತಿಯಲ್ಲಿ ಇಂದಿನ ದಿನಗಳಲ್ಲಿ ತುಂಬಾ ಸ್ಪರ್ಧೆಯಿದ್ದು, ಜನರು ಒಂದು ಉದ್ಯೋಗಕ್ಕಾಗಿ ಸರತಿ ಸಾಲಿನಲ್ಲಿ ಕಾಯುತ್ತಿರುವರು. ಅದರಲ್ಲೂ ಸೇಲ್ಸ್ ವಿಭಾಗದಲ್ಲಿ ತುಂಬಾ ಕಠಿಣ ಪರಿಸ್ಥಿತಿಯಿದೆ. ಅವರಿಗೆ ತಿಂಗಳಿಗೆ ಇಂತಿಷ್ಟು ಎಂದು ಗುರಿಯನ್ನಿಡಲಾಗುತ್ತದೆ. ಇದನ್ನು ಸಾಧಿಸಲು ವಿಫಲವಾದರೆ ಅವರಿಗೆ ಸಿಗುವಂತಹ ಸಂಬಳದಲ್ಲೂ ಕಡಿತವಾಗುವುದು ಮತ್ತು ಇನ್ನು ಕೆಲವೊಂದು ಕಡೆಗಳಲ್ಲಿ ಸಂಬಳವನ್ನೇ ನೀಡುವುದಿಲ್ಲ.

Young Salesman Breaks Down In Public As He Did Not Meet His Targets

ಅವರ ವೃತ್ತಿಯು ಬೇರೆಲ್ಲಾ ವೃತ್ತಿಗಿಂತ ತುಂಬಾ ಕಠಿಣವೆಂದೇ ಹೇಳಬಹುದು. ದಿನವಿಡಿ ತಿರುಗಾಡಿದರೂ ಕೆಲವೊಂದು ಸಲ ತಿಂಗಳ ಅಂತ್ಯಕ್ಕೆ ಗುರಿ ಮುಟ್ಟುವುದು ಕಠಿಣವಾಗಬಹುದು. ಇದಕ್ಕಾಗಿ ಅವರು ಎಲ್ಲಾ ರೀತಿಯ ಸಂಭ್ರಮಗಳನ್ನು ಬದಿಗಿಟ್ಟು ಕೆಲಸ ಮಾಡುವರು ಮತ್ತು ತಮ್ಮ ಗುರಿ ಮಟ್ಟಲು ಪ್ರಯತ್ನಿಸುವರು. ಇಲ್ಲೊಬ್ಬ ಯುವ ಸೇಲ್ಸ್ ಮೆನ್ ತನ್ನ ಕಂಪೆನಿಯು ನೀಡಿರುವಂತಹ ಗುರಿಯನ್ನು ಮುಟ್ಟಲು ವಿಫಲವಾದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದ ಘಟನೆಯು ನಡೆದಿದೆ. ಈ ಘಟನೆ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ...

ಆತ ಕಣ್ಣೀರು ಹಾಕುತ್ತಾ ನೆಲದ ಮೇಲೆ ಕುಳಿತುಕೊಂಡ

ಆತ ಕಣ್ಣೀರು ಹಾಕುತ್ತಾ ನೆಲದ ಮೇಲೆ ಕುಳಿತುಕೊಂಡ

25ರ ಹರೆಯದ ಯುವಕ ಸಾರ್ವಜನಿಕವಾಗಿ ತನ್ನ ಭಾವನೆಗಳನ್ನು ಹೊರಹಾಕಿದ್ದಾನೆ. ಅದು ಕೂಡ ಮದ್ಯಪಾನ ಮಾಡಿದ ಬಳಿಕ. ಆತ ನೆಲದ ಮೇಲೆ ಕುಳಿತುಕೊಂಡಿದ್ದ ಹಾಗೂ ಬದಿಯಲ್ಲೇ ವಾಂತಿ ಕೂಡ ಮಾಡಿದ್ದ. ಕೆಲವು ಜನರು ಇದನ್ನು ನೋಡಿದ ಬಳಿಕ ಪೊಲೀಸರಿಗೆ ಕರೆ ಮಾಡಿದ್ದರು.

Most Read: ತಪ್ಪಾದ ಅಭ್ಯರ್ಥಿಗೆ ಮತ ನೀಡಿರುವುದಕ್ಕೆ ತನ್ನ ಬೆರಳನ್ನೇ ಕತ್ತರಿಸಿಕೊಂಡ ವ್ಯಕ್ತಿ

ಪೊಲೀಸರು ಬಂದು ಯುವಕನ ಪರಿಶೀಲನೆ ನಡೆಸಿದರು

ಪೊಲೀಸರು ಬಂದು ಯುವಕನ ಪರಿಶೀಲನೆ ನಡೆಸಿದರು

ಪೊಲೀಸರು ಬಂದು ಯುವಕನನ್ನು ಎಬ್ಬಿಸಿದರು ಮತ್ತು ಆತ ವಾಂತಿ ಮಾಡಿಕೊಂಡು ಅದರ ಮೇಲೆ ಬಿದ್ದುಕೊಂಡಿದ್ದ ಮತ್ತು ನರಳಾಡುತ್ತಿದ್ದ. ಆತ ಕುಡಿದಿದ್ದಾನೆಯಾ ಎಂದು ಪೊಲೀಸರು ಕೇಳಿದರು ಮತ್ತು ಆ ಸೇಲ್ಸ್ ಮೆನ್ ತನ್ನ ಕೆಲಸದ ಒತ್ತಡದ ಬಗ್ಗೆ ತಿಳಿಸಿದ ಮತ್ತು ಜೋರಾಗಿ ಅಳಲು ಆರಂಭಿಸಿದ.

ಆತ ಯಾವತ್ತೂ ಕುಡಿಯುವುದನ್ನು ಇಷ್ಟಪಟ್ಟಿರಲಿಲ್ಲ

ಆತ ಯಾವತ್ತೂ ಕುಡಿಯುವುದನ್ನು ಇಷ್ಟಪಟ್ಟಿರಲಿಲ್ಲ

ಆತನಿಗೆ ಕುಡಿಯುವುದು ಇಷ್ಟವಿರಲಿಲ್ಲವಾದರೂ ಗ್ರಾಹಕರೊಂದಿಗೆ ಮಾಡಿಕೊಂಡಿರುವಂತಹ ಒಪ್ಪಂದದ ಪ್ರಕಾರ ಆತ ಒತ್ತಾಯ ಪೂರ್ವಕವಾಗಿ ಕುಡಿಯುವುದು ಅನಿವಾರ್ಯವಾಗಿತ್ತು. ಆ ವ್ಯಕ್ತಿಯ ಪತ್ನಿಗೆ ಕರೆ ಮಾಡಲಾಯಿತು ಮತ್ತು ಆಕೆ ಬಂದು ಆತನ ಬಗ್ಗೆ ಕಾಳಜಿ ವಹಿಸಿದಳು.

Most Read: ಅಡುಗೆ ಮಾಡಲು ತಂದಿಟ್ಟ ಮೊಟ್ಟೆಯಲ್ಲಿ ಮರಿಗಳಾಗಿದ್ದವು!

ಸೇಲ್ಸ್ ಮೆನ್ ಒಬ್ಬ ವಲಸೆಗಾರ

ಸೇಲ್ಸ್ ಮೆನ್ ಒಬ್ಬ ವಲಸೆಗಾರ

ತನ್ನ ಪತ್ನಿಯಿಂದಾಗಿ ಚೀನಾದ ನಾನ್ ಜಿಂಗ್‌ಗೆ ಬಂದಿರುವ ಕಾರಣದಿಂದಾಗಿ ತಾನು ಒಬ್ಬ ವಲಸೆ ವ್ಯಕ್ತಿ ಎಂದು ಆತ ನಂಬಿಕೊಂಡಿದ್ದ. ತನ್ನ ಕುಟುಂಬವು ಯಾವತ್ತಿಗೂ ಬಡತನದಲ್ಲಿ ಇರಲಿಲ್ಲ. ಆದರೆ ಸ್ವಾಭಿಮಾನದಿಂದಾಗಿ ತಾನು ಹಣವನ್ನು ಕೇಳಿರಲಿಲ್ಲವೆಂದು ಆತ ಹೇಳಿದ್ದಾನೆ. ಆತ ಸೇಲ್ಸ್ ಮೆನ್ ಆಗಿರುವ ಕಾರಣದಿಂದಾಗಿ ಕೆಲವೊಂದು ಒಪ್ಪಂದವನ್ನು ಪೂರ್ತಿ ಮಾಡಲು ಕುಡಿಯಬೇಕಾಗಿತ್ತು.

English summary

Young Salesman Breaks Down In Public As He Did Not Meet His Targets

A 25-year-old man suffered from an emotional meltdown in public after he got drunk. The man was spotted laying on the ground beside a pile of vomit and it is reported that the police was called in by concerned citizens.This young chap needed to drink every time he signed a deal with the clients. This was one of the reasons why the man broke down.
X
Desktop Bottom Promotion