For Quick Alerts
ALLOW NOTIFICATIONS  
For Daily Alerts

ಈ ಯೋಗ ಶಿಕ್ಷಕಿಯು ನಿತ್ಯವೂ ತನ್ನದೇ ಮೂತ್ರವನ್ನು ಕುಡಿಯುತ್ತಾಳಂತೆ!!

|

ಅನಾರೋಗ್ಯ ಎನ್ನುವುದು ಪ್ರತಿಯೊಂದು ಪ್ರಾಣಿಗೂ ಸಾಮಾನ್ಯವಾಗಿ ಒಂದಲ್ಲಾ ಒಂದು ಬಾರಿ ಬಂದೇ ಬರುತ್ತದೆ. ಅನಾರೋಗ್ಯ ಎನ್ನುವುದು ಜೀವಿಗೆ ಕಾಡುವ ಒಂದು ಸಮಸ್ಯೆ ಅಥವಾ ತೊಂದರೆ ಎನ್ನಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಅನಾರೋಗ್ಯವು ಭಿನ್ನ ವಾಗಿದ್ದರೂ ಅವುಗಳಿಗೆ ಚಿಕಿತ್ಸೆ ಹಾಗೂ ಔಷಧಗಳನ್ನು ನೀಡಲಾಗುವುದು. ಕೆಲವು ಅನುಚಿತ ಆರೋಗ್ಯ ಸಮಸ್ಯೆ ಅಥವಾ ಹೊಸ ಆರೋಗ್ಯ ಸಮಸ್ಯೆ ಉಂಟಾದರೆ ಅದಕ್ಕೆ ವಿಶೇಷ ಚಿಕಿತ್ಸೆಯನ್ನು ಆವಿಷ್ಕರಿಸಲಾಗುವುದು. ಹೇಗೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಔಷಧಿ ಹಾಗೂ ಚಿಕಿತ್ಸೆಗಳು ಇವೆಯೋ ಹಾಗೆಯೇ ಕೆಲವು ಆರೋಗ್ಯ ಸಮಸ್ಯೆಗಳಿಗೆ ಇಂದಿಗೂ ಚಿಕಿತ್ಸೆ ಹಾಗೂ ಔಷಧಗಳು ಇಲ್ಲದೆ ಇರುವುದನ್ನು ಸಹ ಕಾಣಬಹುದು. ಹಾಗಾಗಿ ಆರೋಗ್ಯ ಹಾಳಾದ ಬಳಿಕ ಎಚ್ಚೆತ್ತು ಕೊಳ್ಳುವ ಬದಲು ಮೊದಲೇ ಒಂದಿಷ್ಟು ಆರೋಗ್ಯಕ್ಕೆ ಉತ್ತಮವಾದ ಜೀವನ ಶೈಲಿ ಹಾಗೂ ಆಹಾರ ಕ್ರಮವನ್ನು ಕೈಗೊಳ್ಳುವುದು ಉತ್ತಮ.

ಪ್ರಕೃತಿಯು ನಮಗೆ ಅಗಾದವಾದ ಆಸ್ತಿ ಹಾಗೂ ರಕ್ಷಣೆಯನ್ನು ನೀಡುತ್ತದೆ. ಪ್ರಕೃತಿಯಲ್ಲಿ ಸಿಗುವ ಹೂವು, ಹಣ್ಣು, ಸೊಪ್ಪು, ತರಕಾರಿಗಳು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶ ಹಾಗೂ ರಕ್ಷಣೆಯನ್ನು ನೀಡುತ್ತದೆ. ಅಂತೆಯೇ ಕೆಲವು ಹಸುವಿನ ಮೂತ್ರ ಸೇವನೆ ಮಾಡಿದರೆ ಅನಾರೋಗ್ಯ ನಿವಾರಣೆಯಾಗುವುದು ಎನ್ನಲಾಗುತ್ತದೆ. ಅಲ್ಲದೆ ಕೆಲವು ದೈಹಿಕ ವ್ಯಾಯಾಮಗಳು, ಧ್ಯಾನ, ಯೋಗ ಸೇರಿದಂತೆ ಇನ್ನಿತರ ಚಟುವಟಿಕೆಯಿಂದ ಆರೋಗ್ಯವನ್ನು ಸಮತೋಲನದಲ್ಲಿ ಇರಿಸಬಹುದು ಎನ್ನಲಾಗುತ್ತದೆ.

ಆದರೆ ಇಲ್ಲೊಬ್ಬ ಮಹಿಳೆತನ್ನ ಮೂತ್ರವನ್ನೇ ತಾನು ಕುಡಿಯುವುದರ ಮೂಲಕ ತನ್ನ ಆರೋಗ್ಯವನ್ನುಉತ್ತಮವಾಗಿರಿಸಿಕೊಳ್ಳುತ್ತಿದ್ದಾಳೆ. ಅದೇ ಅವಳ ಉತ್ತಮ ಆರೋಗ್ಯದ ರಹಸ್ಯ ಎಂದು ಹೇಳುತ್ತಿದ್ದಾಳೆ. ಯೋಗ ಶಿಕ್ಷಕಿಯಾದ ಈಕೆ ಹೇಳುವ ಪ್ರಕಾರ, ಅವಳು ಬಾಲ್ಯದಲ್ಲಿ ದುರ್ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಳು. ತನ್ನ ಆ ದುರ್ಬಲತೆಯನ್ನು ಹೋಗಲಾಡಿಸಲು ತನ್ನ ಮೂತ್ರವನ್ನೇ ತಾನು ಕುಡಿಯುತ್ತಾ ಬಂದಳು. ಇದು ಅವಳು ಕಂಡುಕೊಂಡ ವಿಶಿಷ್ಟ ಚಿಕಿತ್ಸಾ ಕ್ರಮ ಎಂದು ಹೇಳಿಕೊಂಡಿದ್ದಾಳೆ.

ಅವಳು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿದ್ದಳು

ಅವಳು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿದ್ದಳು

ಕೇಯ್ಲೀ ಓಕ್ಲೆ ಎಂಬ ಯುವತಿ ಕೆಂಟ್ ಮೂಲದವಳು. ಇವಳು ಈಗ 33 ವರ್ಷದ ಯೋಗ ಶಿಕ್ಷಕಿ. ಈಕೆ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿದ್ದಳು. ಆಗ ಅವಳಿಗೆ ಕೇವಲ 4 ವರ್ಷ. ಇವಳ ಈ ಸಮಸ್ಯೆಯಿಂದ ಆಗಾಗ ಸ್ನಾಯು ನೋವು ಹಾಗೂ ಅತಿಯಾದ ದಣಿವಿನಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಳು. ಸತತ 15 ವರ್ಷ ಈ ಸಮಸ್ಯೆಗಳನ್ನು ಅನುಭವಿಸುತ್ತಾ ಬಂದಳು. ಬಳಿಕ ತನ್ನ 15ನೇ ವರ್ಷದಲ್ಲಿ ತನ್ನಿಂದ ತಾನೇ ರೋಗ ನಿರೋಧಕ ಶಕ್ತಿ ಹೆಚ್ಚಾಗುವ ಚಿಕಿತ್ಸೆಯನ್ನು ಕಂಡುಕೊಳ್ಳಬೇಕಾಗಿತ್ತು.

ಅವಳ ಸಂಕಟ ಅಲ್ಲಿಗೆ ಕೊನೆಯಾಗಿರಲಿಲ್ಲ

ಅವಳ ಸಂಕಟ ಅಲ್ಲಿಗೆ ಕೊನೆಯಾಗಿರಲಿಲ್ಲ

ಎರಡು ವರ್ಷಗಳ ನಂತರ ಅವಳಿಗೆ ದೀರ್ಘಕಾಲದ ಆಯಾಸ ಹಾಗೂ ಫೈಬ್ರೊಮ್ಯಾಲ್ಗಿಯಾ ಎನ್ನುವ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದರು. ಈ ಕಾರಣದಿಂದ ಆಕೆ ದೇಹದಲ್ಲಿ ನಿರಂತರವಾದ ನೋವನ್ನು ಅನುಭವಿಸುತ್ತಿದ್ದಳು. ಅವಳು ಸಣ್ಣ ಕೆಲಸವನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸಣ್ಣ-ಪುಟ್ಟ ಕೆಲಸಗಳು ಸಹ ಅವಳಿಗೆ ಒಂದು ದುಃಸ್ವಪ್ನವಾಗಿ ಕಾಣುತ್ತಿತ್ತು. ತನ್ನ ಅನಾರೋಗ್ಯದ ಕಾರಣದಿಂದ ಹಾಸಿಗೆ ಹಿಡಿದಳು. ಆಗ ಅವಳಿಗೆ ತನ್ನ ಜೀವನ ಹಾಗೂ ಆರೋಗ್ಯದ ಸುಧಾರಣೆಗೆ ಮನಸ್ಸು ಹಾತೊರೆಯುತ್ತಿತ್ತು.

ತನ್ನ ಮೂತ್ರವನ್ನು ತಾನೇ ಕುಡಿಯುವುದರ ಮೂಲಕ ಚಿಕಿತ್ಸೆ ಪ್ರಾರಂಭಿಸಿದಳು

ತನ್ನ ಮೂತ್ರವನ್ನು ತಾನೇ ಕುಡಿಯುವುದರ ಮೂಲಕ ಚಿಕಿತ್ಸೆ ಪ್ರಾರಂಭಿಸಿದಳು

ಕೇಯ್ಲೀ ತಾನು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಗೆ ತನ್ನ ಮೂತ್ರವನ್ನು ತಾನೇ ಕುಡಿಯಲು ನಿರ್ಧರಿಸಿದಳು. ಅಂತೆಯೇ ಅರ್ಧ ಗ್ಲಾಸ್ ಮೂತ್ರವನ್ನು ಕುಡಿಯಲು ಪ್ರಾರಂಭಿಸಿದಳು. ನಿಯಮಿತವಾಗಿ ಕುಡಿಯುವುದರಿಂದ ಅವಳ ಚಯಾಪಚಯ ಕ್ರಿಯೆ ಉತ್ತಮವಾಯಿತು. ತನ್ನ ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಯಿತು. ನಮ್ಮ ಮೂತ್ರವನ್ನು ನಾವೇ ಕುಡಿಯುವುದರಿಂದ ಮೈ ಬಣ್ಣವು ತಾಜಾ ಹಾಗೂ ಕಾಂತಿಯಿಂದ ಕೂಡಿರುವಂತೆ ಮಾಡುತ್ತದೆ ಎಂದು ಹೇಳುತ್ತಾಳೆ. ಇವರ ಈ ಚಿಕಿತ್ಸಾ ಕ್ರಮಕ್ಕೆ ವೈದ್ಯರ ಸಲಹೆ ಹಾಗೂ ಯಾವುದೇ ಬೆಂಬಲವಿರಲಿಲ್ಲ. ಆದರೂ ನನ್ನ ಆರೋಗ್ಯ ಪರಿಸ್ಥಿಗಳನ್ನು ಗುಣಪಡಿಸಿದೆ ಎಂದು ಆಕೆ ಬಹಿರಂಗ ಪಡಿಸಿದ್ದಾಳೆ.

ಮುಂಜಾನೆಯ ಮೂತ್ರದಲ್ಲಿ ಆರೋಗ್ಯ ಪ್ರಯೋಜನಗಳು ಹೆಚ್ಚು

ಮುಂಜಾನೆಯ ಮೂತ್ರದಲ್ಲಿ ಆರೋಗ್ಯ ಪ್ರಯೋಜನಗಳು ಹೆಚ್ಚು

ಮುಂಜಾನೆಯ ನಮ್ಮ ಮೂತ್ರದಲ್ಲಿ ಹೆಚ್ಚು ಹಾರ್ಮೋನ್‍ಗಳು ಮತ್ತು ಪೋಷಕಾಂಶಗಳಿವೆ ಎಂದು ಅವರು ಬಹಿರಂಗ ಪಡಿಸಿದ್ದಾರೆ. ಶವರ್ ಸ್ನಾನ ಮಾಡುವಾಗಲೂ ಮೂತ್ರವನ್ನು ಬಳಸುತ್ತಾಳೆ. ಇದರಿಂದ ಅವಳ ತ್ವಚೆಯು ಹೆಚ್ಚು ತಾಜಾ ಹಾಗೂ ಕಾಂತಿಯಿಂದ ಕೂಡಿರುತ್ತದೆ ಎಂದು ಹೇಳಿಕೊಂಡಿದ್ದಾಳೆ. ತನ್ನ ಈ ಚಿಕಿತ್ಸಾ ಕ್ರಮಕ್ಕೆ ತನ್ನ ಕುಟುಂಬ, ಸ್ನೇಹಿತರು ಹಾಗೂ ಪತಿಯ ಪ್ರೋತ್ಸಾಹ ಇದೆ ಎಂದು ಹೇಳಿಕೊಂಡಿದ್ದಾಳೆ. ಮೂತ್ರ ಸೇವನೆಯಿಂದ ದೇಹದೊಳಗೆ ಸೋಂಕು ಉಂಟಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ಹೇಳುತ್ತಾರೆ. ಹಾಗಾಗಿ ನೀವು ಈ ಕ್ರಮವನ್ನು ಅನುಸರಿಸುವುದಾದರೆ ಸೂಕ್ತ ಚಿಂತನೆ ಹಾಗೂ ಯೋಜನೆ ಹೊಂದುವುದು ಉತ್ತಮ ಎಂದು ಹೇಳಿದ್ದಾರೆ.

English summary

Yoga Teacher Drinks Her Own Urine Every Morning

Kayleigh Oakley is a 33-year-old yoga teacher from Kent. She drinks her own urine every morning. She reveals that drinking her urine every morning has made her feel better ever since she started it. She says this therapy has helped her to cure severe fatigue, underactive thyroid and improve her immune system as well.
X
Desktop Bottom Promotion