Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಮಹಿಳೆಗೆ ಶಾಕ್! ಆಹಾರದಲ್ಲಿ ಸಿಕ್ಕಿತ್ತು 40 ಜಿರಳೆ!!!
ಹಿಂದೆಲ್ಲಾ ನಮಗೆ ಇಷ್ಟವಾದ ಆಹಾರ ಅಥವಾ ತಿಂಡಿ ಬೇಕಿದ್ದರೆ, ಊಟ ಮಾಡಬೇಕಿದ್ದರೆ ನಮ್ಮ ಫೇವರಿಟ್ ರೆಸ್ಟೋರೆಂಟ್ ಗೆ ಹೋಗಬೇಕಾಗಿತ್ತು. ಆದರೆ ಈಗ ಕಾಲ ಸಂಪೂರ್ಣ ಬದಲಾಗಿದೆ. ನಿಮಗೆ ಇಷ್ಟವಾದ ತಿಂಡಿ, ನಿಮ್ಮ ಫೇವರಿಟ್ ಹೋಟೆಲ್ ನಿಂದ ನಿಮ್ಮ ಮನೆ ಬಾಗಿಲಿಗೆ ತಂದು ಕೊಡಲಾಗುತ್ತದೆ. ಇಂತಹ ಗ್ರಾಹಕ ಸ್ನೇಹಿಯಾಗಿರುವಂತಹ ವ್ಯವಸ್ಥೆಯಾಗಿದ್ದರೂ ಇದರಲ್ಲಿ ಕೆಲವೊಂದು ತಪ್ಪುಗಳು ಆಗುವುದು ಇದೆ. ನಾವು ಹೆಚ್ಚಾಗಿ ಆನ್ ಲೈನ್ ಆರ್ಡರ್ ಮಾಡುವಂತಹ ಆಹಾರವು ಕಳಪೆ ಮಟ್ಟದ್ದು ಆಗಿರಬಹುದು, ಇನ್ನು ಕೆಲವೊಂದು ಸಂದರ್ಭದಲ್ಲಿ ಆಹಾರವು ತಾಜಾ ಆಗಿರದೆ ಹಳಸಿರಬಹುದು.
ಇಂತಹ ಕೆಲವು ಘಟನೆಗಳನ್ನು ಗ್ರಾಹಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಮೊದಲು ಇದೇ ವಿಭಾಗದಲ್ಲಿ ಆಹಾರದಲ್ಲಿ ಬ್ಯಾಂಡೇಡ್ ಸಿಕ್ಕಿರುವುದನ್ನು ಓದಿರಬಹುದು. ಈಗ ಮಹಿಳೆಯೊಬ್ಬರು ಆನ್ ಲೈನ್ ಮೂಲಕ ಆರ್ಡರ್ ಮಾಡಿರುವಂತಹ ಆಹಾರದಲ್ಲಿ ಸತ್ತ ಜಿರಳೆಗಳು ಕಂಡುಬಂದಿದೆ. ಆದರೆ ನೀವು ಸಂತೋಷ ಪಡಬೇಕಾದ ವಿಚಾರವೆಂದರೆ ಇದು ನಮ್ಮ ದೇಶದಲ್ಲಿ ನಡೆದಿರುವಂತಹ ಘಟನೆಯಲ್ಲ. ನಮ್ಮ ನೆರೆಯ ಚೀನಾದಲ್ಲಿ ನಡೆದಿರುವ ಘಟನೆಯಿದು. ಆನ್ ಲೈನ್ ಮೂಲಕ ಆರ್ಡರ್ ಮಾಡಿರುವಂತಹ ತನ್ನ ಆಹಾರದಲ್ಲಿ ಸುಮಾರು 40 ಜಿರಳೆಗಳನ್ನು ಕಂಡ ಮಹಿಳೆಯ ಸ್ಥಿತಿ ಏನಾಗಿರಬಹುದು ಎಂದು ಊಹಿಸುವುದು ಕಷ್ಟ. ಇದರ ಬಗ್ಗೆ ಓದುತ್ತಾ ಸಾಗಿ...

ಈ ಮಹಿಳೆ ಆನ್ ಲೈನ್ ನಲ್ಲಿ ಆಹಾರ ಆರ್ಡರ್ ಮಾಡಿದ್ದಳು
ಈ ಮಹಿಳೆಗೆ ತನಗೆ ಇಷ್ಟವಾಗಿರುವಂತಹ ಆಹಾರ ತಿನ್ನಬೇಕು ಎಂದು ಮನಸ್ಸಾಯಿತು. ಇದರಿಂದ ತನಗೆ ಇಷ್ಟದ ಬಾತುಕೋಳಿ ಮಾಂಸದ ಸ್ಟೀವ್ ನ್ನು ಆಕೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರು. ವರದಿಯಾಗಿರುವ ಪ್ರಕಾರ ಮಹಿಳೆಯ ಆಹಾರದಲ್ಲಿ ಒಂದು ಅಥವಾ ಎರಡು ಜಿರಳೆ ಪತ್ತೆಯಾಗಿರುವುದಲ್ಲ. ಆಕೆಯ ಆಹಾರದಲ್ಲಿ ಬರೋಬ್ಬರಿ 40 ಜಿರಳೆಗಳು ಸಿಕ್ಕಿದೆ!

ಆಹಾರ ಸೇವನೆ ಮಾಡುವ ಮೊದಲೇ ಆಕೆ ಇದನ್ನು ನೋಡಿದಳು
ಮಹಿಳೆಯ ಹೆಸರನ್ನು ಇಲ್ಲಿ ಗೌಪ್ಯವಾಗಿ ಇಡಲಾಗಿದೆ. ಆದರೆ ಈ ಘಟನೆಯು ಚಿನಾದ ಗುವಾಂಗ್ಡಾಂಗ್ ನ ಚೋಸಾನ್ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ತನಗೆ ಬಂದ ಆಹಾರದ ಪ್ಯಾಕೇಟ್ ನ್ನು ತೆರೆದ ತಕ್ಷಣವೇ ಮಹಿಳೆಗೆ ಜಿರಳೆ ಕಂಡುಬಂದ ಕಾರಣದಿಂದಾಗಿ ಆಕೆ ಇದನ್ನು ಸೇವಿಸದೆ ಉಳಿದುಕೊಂಡರು.

ಸಂಪೂರ್ಣ ಆಹಾರದಲ್ಲಿ ಕೀಟ ಆವರಿಸಿಕೊಂಡಿತ್ತು!
ಮಹಿಳೆಯು ಮೊದಲಿಗೆ ಕಾಣಿಸಿಕೊಂಡ ಒಂದು ಜಿರಳೆಯನ್ನು ಹೊರಗೆ ತೆಗೆಯುತ್ತಿದ್ದಂತೆ ಆಕೆಗೆ ಮತ್ತಷ್ಟು ಸತ್ತ ಜಿರಳೆಗಳು ಕಾಣಿಸಿಕೊಂಡಿದೆ. ಒಂದೊಂದನ್ನೇ ಆಕೆ ಹೊರಗೆ ತೆಗೆದು ಅದನ್ನು ಟಿಶ್ಯೂ ಪೇಪರ್ ನಲ್ಲಿ ಹಾಕಿಟ್ಟರು.

ಆಕೆ ದೂರು ದಾಖಲಿಸಿದಳು
ಆಹಾರದಲ್ಲಿ ಜಿರಳೆಯನ್ನು ನೋಡಿದಂತಹ ಮಹಿಳೆಗೆ ಮುಂದಿನ ಕೆಲವು ದಿನಗಳ ಕಾಲ ಆಹಾರ ಸೇವನೆ ಮಾಡಲು ಆಗಲಿಲ್ಲವಂತೆ! ಈ ಬಗ್ಗೆ ಆಕೆ ರೆಸ್ಟೋರೆಂಟ್ ಗೆ ದೂರು ದಾಖಲಿಸಿದಳು ಮತ್ತು ಇದಕ್ಕೆ ಉತ್ತರವಾಗಿ ಆಕೆ ಪಡೆದಿರುವುದು ಏನೇಂದರೆ ಆಕೆ ಬಿಲ್ ನ ಮೊತ್ತ ಮಾತ್ರ. ಇದನ್ನು ಹೊರತುಪಡಿಸಿ, ಆಕೆ ಈ ಬಗ್ಗೆ ಪೊಲೀಸರಿಗೆ ಕೂಡ ದೂರು ನೀಡಿರುವಳು. ಈ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂತಹ ಘಟನೆಯು ನಮ್ಮ ನೆರೆಯ ರಾಷ್ಟ್ರದಲ್ಲಿ ನಡೆದಿದ್ದರೂ ನಾವು ಇಂದಿನ ದಿನಗಳಲ್ಲಿ ಹೆಚ್ಚಾಗಿ ಆನ್ ಲೈನ್ ನಲ್ಲೇ ಆಹಾರ ತರಿಸಿಕೊಳ್ಳುವ ಕಾರಣದಿಂದಾಗಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಆಹಾರವನ್ನು ತೆರೆದು ಅದನ್ನು ಸರಿಯಾಗಿ ಪರಿಶೀಲಿಸಿದ ಬಳಿಕ ತಿಂದರೆ ಒಳ್ಳೆಯದು. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.



Click it and Unblock the Notifications
