Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಈ ಮಹಿಳೆ ದೇಹವನ್ನು ವೈದ್ಯರು 27 ಸಾವಿರ ತುಂಡುಗಳನ್ನಾಗಿ ಮಾಡಿದರು! ಯಾಕೆ ಗೊತ್ತೇ?
ವೈದ್ಯಕೀಯ ಜಗತ್ತು ಪ್ರತೀ ಕ್ಷಣವೂ ಬದಲಾಗುತ್ತಲೇ ಇರುತ್ತದೆ. ಸಾವಿರಾರು ಸಂಶೋಧನೆಗಳು ಪ್ರತಿನಿತ್ಯವು ನಡೆಯುತ್ತಲೇ ಇರುವುದು. ಹೊಸ ಹೊಸ ಕಾಯಿಲೆಗಳು ಬರುತ್ತಿರುವಂತೆ ಅದಕ್ಕೆ ಬೇಕಾಗಿರುವ ಔಷಧಿ ಅಥವಾ ತಡೆಗಟ್ಟುವಂತಹ ವಿಧಾನವನ್ನು ವೈದ್ಯಕೀಯ ಜಗತ್ತು ಹುಡುಕುತ್ತಲೇ ಇರುತ್ತದೆ. ಈ ಕಾರಣದಿಂದಾಗಿ ಇಂದು ಯಾವುದೇ ಕಾಯಿಲೆ ಬಂದರೂ ಕೆಲವೇ ಸಮಯದಲ್ಲಿ ಅದಕ್ಕೊಂದು ಪರಿಹಾರ ಸಿಗುವುದು. ಮಹಾಮಾರಿಯಾಗಿ ಕಾಡುವಂತಹ ಸಾಂಕ್ರಾಮಿಕ ರೋಗಗಳಿಗೂ ಇಂದಿನ ದಿನಗಳಲ್ಲಿ ಔಷಧಿಗಳು ಬಂದಿದೆ. ಕಳೆದ ಕೆಲವು ದಶಕಗಳಿಂದ ವಿಜ್ಞಾನವು ತುಂಬಾ ಮುಂದುವರಿದಿದೆ.
ವಿಜ್ಞಾನವು ನಡೆಸುವಂತಹ ಹೊಸ ಹೊಸ ಸಂಶೋಧನೆಗಳ ಬಗ್ಗೆ ತಿಳಿಯುವುದು ನಮಗೆಲ್ಲರಿಗೂ ತುಂಬಾ ಆಸಕ್ತಿಯ ವಿಚಾರವಾಗಿರುವುದು. ಅದರಲ್ಲೂ ಕೆಲವೊಂದು ಸಲ ಮಾನವನ ದೇಹದ ಮೇಲೆ ಸಂಶೋಧನೆಗಳನ್ನು ಮಾಡಲಾಗುತ್ತದೆ. ಆದರೆ ಸಂಶೋಧನೆ ಮಾಡಲು ಅಥವಾ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಯಲು ಮಾನವ ದೇಹವು ತುಂಬಾ ಕಡಿಮೆ ಇರುವುದು. ಕೆಲವೇ ಕೆಲವು ಮಂದಿ ಮಾತ್ರ ದೇಹದಾನ ಮಾಡುವ ಕಾರಣದಿಂದಾಗಿ ಇಂತಹ ಕೊರತೆ ಕಂಡುಬರುತ್ತಿದೆ. ದೇಹದಾನದ ಬಗ್ಗೆ ಸರಿಯಾದ ಮಾಹಿತಿಯು ಅಗತ್ಯವಾಗಿ ಬೇಕು. ಇಲ್ಲೊಬ್ಬರು ಮಹಿಳೆ ತನ್ನ ದೇಹದಾನ ಮಾಡಿದ್ದು, ವೈದ್ಯಕೀಯ ವಿದ್ಯಾರ್ಥಿಗಳು ಇದರಿಂದ ಕಲಿಯಬೇಕು ಎನ್ನುವುದೇ ಅವರ ಬಯಕೆಯಾಗಿದೆ. ಇದರ ಬಗ್ಗೆ ನೀವು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ.

ಇತಿಹಾಸ ನಿರ್ಮಿಸಬೇಕೆಂದು ಆಕೆಯ ಎಂದಿನ ಬಯಕೆಯಾಗಿತ್ತು!
ಸುಸಾನ್ ಪಾಟರ್ ಎಂಬಾಕೆ ತನ್ನ 87ನೇ ವಯಸ್ಸಿನಲ್ಲಿ ಮೃತಪಟ್ಟರು. ಆಕೆ ಅಥವಾ ಆಕೆಯ ದೇಹವು ಖಂಡಿತವಾಗಿಯೂ ಇತಿಹಾಸ ನಿರ್ಮಿಸಲಿದೆ ಎಂದು ಆಕೆಗೆ ತಿಳಿದಿತ್ತು. ಟೈಟಾನಿಯಂ ಸೊಂಟ ಹೊಂದಿರುವಂತಹ ಮೊದಲ ಶವ ಎಂಬ ಹೆಗ್ಗಳಿಕೆಗೂ ಆಕೆ ಪಾತ್ರರಾದರು. ಆಕೆಯ ದೇಹವನ್ನು ಶೀತಲೀಕರಿಸಿ, ಅದನ್ನು ತುಂಡು ಮಾಡಿ, ಅಧ್ಯಯನಕ್ಕಾಗಿ ಬಳಸಲಾಯಿತು.

ಆಕೆ ಅಮರಳಾಗಬೇಕೆಂದು ಬಯಸಿದಳು
ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ತನ್ನ ದೇಹವನ್ನು ಅಮರವಾಗಿಸಬೇಕು ಎಂದು ಸುಸಾನ್ ವೈದ್ಯರಲ್ಲಿ ಪ್ರಸ್ತಾವನ್ನಿಟ್ಟಿದ್ದರು. ಈ ಪಸ್ತಾವ ಮಾಡಿದ ಬಳಿಕ ಆಕೆ ಮತ್ತೆ 15 ವರ್ಷ ಕಾಲ ಬದುಕುಳಿದರು. ಈ 15 ವರ್ಷಗಳಲ್ಲಿ ಆಕೆಯ ಜೀವನದ ಪ್ರತಿಯೊಂದು ವಿಚಾರವನ್ನು ಅಧ್ಯಯನದ ದೃಷ್ಟಿಯಿಂದ ದಾಖಲೆ ಮಾಡಿಕೊಳ್ಳಲಾಯಿತು.

ಆಕೆಯ ದೇಹವನ್ನು 27000 ತುಂಡುಗಳನ್ನಾಗಿ ಮಾಡಲಾಯಿತು!
ಪ್ರಾಯೋಗಿಕ ಅಧ್ಯಯನಕ್ಕಾಗಿ ಆಕೆಯ ದೇಹವನ್ನು 27000 ತುಂಡುಗಳನ್ನಾಗಿ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮನುಷ್ಯನ ಕಣ್ಣುಗಳು ಇದರ ಅಂಚನ್ನು ಗುರುತಿಸಲು ಅದು ಮೂರು ಪಟ್ಟು ತೆಳುವಾಗಿರುವುದು. ಇದನ್ನು ಕಂಪ್ಯೂಟರ್ ಮೂಲಕ ಸ್ಕ್ಯಾನಿಂಗ್ ಮಾಡಲಾಗುವುದು. ಯಾಕೆಂದರೆ ಆಕೆಯ ದೇಹವನ್ನು ಡಿಜಿಟಲ್ ರೆಕಾರ್ಡ್ ನಲ್ಲಿ ದಾಖಲಿಸಲಾಗುವುದು.

ನ್ಯಾಶನಲ್ ಜಿಯೋಗ್ರಾಫಿ ಆಕೆಯ ಪ್ರಯಾಣವನ್ನು ದಾಖಲೆ ಮಾಡಿದೆ
ತನ್ನ ಜೀವನದ ಬಗ್ಗೆ ಅಧ್ಯಯನವು ಅಪಡೇಟ್ ಆಗಿರಬೇಕು ಎಂದು ಸುಸಾನ್ ಬಯಸಿದ್ದ ಕಾರಣದಿಂದಾಗಿ ಕಳೆದ 16 ವರ್ಷಗಳಿಂದ ನ್ಯಾಷನಲ್ ಜಿಯೋಗ್ರಾಫಿ ಆಕೆಯ ಪ್ರಯಣವನ್ನು ದಾಖಲೆ ಮಾಡಿಕೊಳ್ಳುತ್ತಿದೆ. ಸಾವಿನ ಬಳಿಕ ಆಕೆಯ ದೇಹವನ್ನು ವೈದ್ಯರು ಫ್ರೀಜರ್ ನಲ್ಲಿ ಇಟ್ಟಿದ್ದಾರೆ. ಇದು ಸುಮಾರು 15 ಡಿಗ್ರಿ ಫ್ಯಾರನ್ಹೀಟ್ ಗಿಂತಲೂ ಕಡಿಮೆ ಇದೆ. ಆಕೆಯ ದೇಹವನ್ನು ಎರಡು ವರ್ಷಗಳ ಕಾಲ ಫ್ರೀಜರ್ ನಲ್ಲಿ ಇಡಲಾಗಿತ್ತು.

ಆಕೆ ಸತ್ತ ಬಳಿಕ....
ಅಧ್ಯಯನಕ್ಕಾಗಿ ಆಕೆಯ ದೇಹವನ್ನು ರಕ್ಷಿಸಬೇಕು ಎನ್ನುವ ನಿಟ್ಟಿನಲ್ಲಿ ವೈದ್ಯರು ತುಂಬಾ ವೇಗವಾಗಿ ಈ ಬಗ್ಗೆ ಕೆಲಸ ಮಾಡಿದರು. ತನ್ನ ದೇಹವನ್ನು ಯಾರಾದರೂ ಕಂಡರೆ ಅದನ್ನು ನಾಲ್ಕು ಗಂಟೆಗಳ ಒಳಗಾಗಿ ಶೀತಲೀಕರಿಸಬೇಕು ಎಂದು ಬರೆದಿದ್ದ ಕಾರ್ಡ್ ಒಂದು ಸುಸಾನ್ ಬಳಿಯಲ್ಲಿ ಇತ್ತು.
ಈ ಮಹಿಳೆಯ ದೇಹದಾನದ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.



Click it and Unblock the Notifications
