For Quick Alerts
ALLOW NOTIFICATIONS  
For Daily Alerts

ಪರ್ಯಾಯವಾಗಿ ಕೈ ತುಂಬಾ ಹಣಗಳಿಸುವ 7 ಮಾರ್ಗಗಳು

|

ಈ ಜಗತ್ತಿನಲ್ಲಿ ಹಣವೇ ಎಲ್ಲವೂ ಅಲ್ಲ. ಮನಸ್ಸಿನ ನೆಮ್ಮದಿ, ಆನಂದ ಇವೆಲ್ಲ ಹಣಕ್ಕೂ ಮಿಗಿಲಾದವು ಎಂಬುದು ನಮಗೆ ಗೊತ್ತು. ಆದರೆ ಜಗತ್ತಿನಲ್ಲಿ ಮರ್ಯಾದೆಯಿಂದ ಹಾಗೂ ಸುಖವಾಗಿ ಬಾಳಬೇಕಾದರೆ ಹಣ ಬೇಕೇ ಬೇಕು ಎಂಬುದು ಸಹ ಸತ್ಯ. ಹೀಗಾಗಿ ಜೀವನದಲ್ಲಿ ಹಣದ ಮಹತ್ವ ಬಹಳಷ್ಟಿದೆ. ಈಗಿನ ದುಬಾರಿ ಆಧುನಿಕ ಕಾಲದಲ್ಲಿ ಹಣ ಎಷ್ಟಿದ್ದರೂ ಸಾಲದು, ಇನ್ನಷ್ಟು ಬೇಕು ಎನಿಸುತ್ತದೆ.

ಹೀಗಾಗಿ ಒಂದೇ ಆದಾಯದ ಮೂಲವನ್ನು ನೆಚ್ಚಿಕೊಂಡು ಕುಳಿತುಕೊಳ್ಳದೆ ಮತ್ತಷ್ಟು ಪರ್ಯಾಯ ಆದಾಯದ ಮೂಲಗಳನ್ನು ಶೋಧಿಸುವುದು ಅಗತ್ಯ. ಪ್ರಮುಖ 7 ರೀತಿಯ ಪರ್ಯಾಯ ಆದಾಯದ ಮೂಲಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಲಾಗಿದ್ದು ನೀವೂ ನೋಡಿ. ಪರ್ಯಾಯ ಆದಾಯ ಗಳಿಕೆಯ 7 ಪ್ರಮುಖ ವಿಧಾನಗಳು...

ಬ್ಲಾಗ್ ಆರಂಭಿಸಿ

ಬ್ಲಾಗ್ ಆರಂಭಿಸಿ

ಬ್ಲಾಗ್ ಆರಂಭಿಸಲು ದೊಡ್ಡ ಮೊತ್ತದ ಬಂಡವಾಳವೇನೂ ಬೇಕಿಲ್ಲ. ಸರಿಯಾಗಿ ಬ್ಲಾಗ್ ನಿರ್ವಹಿಸಿದಲ್ಲಿ ದೀರ್ಘಾವಧಿಯವರೆಗೆ ಇದರಿಂದ ಆದಾಯ ಪಡೆಯಬಹುದು. ನಿಮ್ಮ ಆಸಕ್ತಿಯ ವಿಷಯದ ಬಗ್ಗೆ ಬ್ಲಾಗ್ ಬರೆಯಲು ಅಥವಾ ಅದರ ಬಗ್ಗೆ ವಿಡಿಯೋಗಳನ್ನು ತಯಾರಿಸಿ ಬ್ಲಾಗಿಗೆ ಹಾಕಿ. ಆರಂಭದಲ್ಲಿ ಇದಕ್ಕೆ ಒಂದಿಷ್ಟು ಸಮಯ ತಗುಲಿದರೂ ನಂತರ ಫಾಲೋವರ್ಸ್ ಹೆಚ್ಚಾದಂತೆ ನಿಮ್ಮ ಆದಾಯದ ಮಟ್ಟವೂ ಹೆಚ್ಚಾಗುತ್ತದೆ.

ಜಾಣತನದಿಂದ ಹೂಡಿಕೆ ಮಾಡಿ

ಜಾಣತನದಿಂದ ಹೂಡಿಕೆ ಮಾಡಿ

ನಿಮ್ಮ ಉಳಿತಾಯದ ಹಣವನ್ನು ಸೇವಿಂಗ್ಸ್ ಅಕೌಂಟಿನಲ್ಲಿಟ್ಟರೆ ಅದರಿಂದ ಅಂಥ ಆದಾಯವೇನೂ ಸಿಗದು. ನಿಮ್ಮ ಆರ್ಥಿಕ ಸಲಹೆಗಾರರೊಂದಿಗೆ ಮಾತನಾಡಿ ಅಥವಾ ಆನ್ಲೈನ್‌ನಲ್ಲಿ ಹುಡುಕಿ ಹಣ ಹೂಡಿಕೆಗೆ ಉತ್ತಮ ಮಾರ್ಗಗಳಾವವು ಎಂದು ಶೋಧಿಸಿ. ಮ್ಯೂಚುವಲ್ ಫಂಡ್‌ಗಳು, ಸಿಪ್ (ಸಿಸ್ಟಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲಾನ್), ಶೇರುಗಳು ಅಥವಾ ಇನ್ನಾವುದೇ ನಿಮಗೆ ಸೂಕ್ತವಾದ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಆದರೆ ಹೂಡಿಕೆ ಮಾಡುವ ಮುನ್ನ ಯೋಜನೆಗಳಲ್ಲಿನ ರಿಸ್ಕ್ ಫ್ಯಾಕ್ಟರ್ ತಿಳಿದುಕೊಳ್ಳಲು ಮರೆಯಬೇಡಿ. ಹಾಗೆಯೇ ಎಲ್ಲ ಮೊತ್ತವನ್ನು ಒಂದೇ ಕಡೆ ಹೂಡಿಕೆ ಮಾಡುವುದು ಜಾಣತನವಲ್ಲ.

ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ

ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ

ಮಾರುಕಟ್ಟೆಯ ಸ್ಥಿತಿಗತಿ ಹಾಗೂ ನಿಮ್ಮ ಹಣಕಾಸಿನ ಸಾಮರ್ಥ್ಯವನ್ನು ಆಧರಿಸಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬಹುದು. ಈ ಕ್ಷೇತ್ರದಲ್ಲಿ ಆದಾಯದ ಮಟ್ಟ ತುಂಬಾ ಚೆನ್ನಾಗಿದೆ. ಈಗಾಗಲೇ ನಿಮ್ಮ ಬಳಿ ಹೆಚ್ಚುವರಿ ಮನೆ ಇದ್ದಲ್ಲಿ ಅದನ್ನು ಬಾಡಿಗೆಗೆ ನೀಡಬಹುದು, ಪೇಯಿಂಗ್ ಗೆಸ್ಟ್ ಆರಂಭಿಸಬಹುದು ಅಥವಾ ಹೆಚ್ಚಿನ ಮೌಲ್ಯ ದೊರಕುವಂತಿದ್ದರೆ ಮಾರಬಹುದು. ರಿಯಲ್ ಎಸ್ಟೇಟ್ ವಲಯದಲ್ಲಿ ರಿಸ್ಕ್ ಅಂಶ ಜಾಸ್ತಿ ಇರುವುದರಿಂದ ಹುಷಾರಾಗಿ ಹೂಡಿಕೆ ಮಾಡಿ. ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ ತಕ್ಷಣ ಆದಾಯ ಬರಲಾರಂಭಿಸುವುದಿಲ್ಲ, ಅದಕ್ಕಾಗಿ ಸ್ವಲ್ಪ ತಾಳ್ಮೆಯಿಂದ ಕಾಯಬೇಕಾಗುತ್ತದೆ.

Most Read: ಪುರುಷರಲ್ಲಿ ಕಾಣಿಸಿಕೊಳ್ಳುವ 10 ಆರೋಗ್ಯ ಸಮಸ್ಯೆಗಳು-ಅಪ್ಪಿತಪ್ಪಿಯೂ ಇದನ್ನು ನಿರ್ಲಕ್ಷಿಸಬೇಡಿ

ಕಾರಿನ ಮೇಲೆ ಜಾಹಿರಾತು ಪ್ರದರ್ಶಿಸಿ

ಕಾರಿನ ಮೇಲೆ ಜಾಹಿರಾತು ಪ್ರದರ್ಶಿಸಿ

ಸ್ವಂತದ ಕಾರಿನ ಜಾಹಿರಾತು ಪ್ರದರ್ಶಿಸುವ ವ್ಯವಹಾರ ಇನ್ನೂ ಅಷ್ಟೊಂದು ಜನಪ್ರಿಯತೆ ಗಳಿಸಿಲ್ಲ. ಆದರೆ ಪರ್ಯಾಯ ಆದಾಯ ಗಳಿಸಲು ಇದೊಂದು ಉತ್ತಮ ಮಾರ್ಗವಾಗಿದೆ. ಇದಕ್ಕಾಗಿ ಯಾವುದಾದರೂ ಒಳ್ಳೆಯ ಜಾಹಿರಾತು ಸಂಸ್ಥೆಯನ್ನು ಸಂಪರ್ಕಿಸಿ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಿ. ಅವರು ನಿಮ್ಮ ಕಾರಿನ ಮೇಲೆ ಯಾವುದಾದರೂ ವಸ್ತುವಿನ ಜಾಹಿರಾತು ಪೇಂಟ್ ಮಾಡಿಸುತ್ತಾರೆ.

ಸೈಡ್ ಬಿಸಿನೆಸ್ ಆರಂಭಿಸಿ

ಸೈಡ್ ಬಿಸಿನೆಸ್ ಆರಂಭಿಸಿ

ನಿಮಗೆ ಬರೆಯುವ ಹವ್ಯಾಸವಿದ್ದು ಉತ್ತಮವಾಗಿ ಬರೆಯ ಬಲ್ಲವರಾದರೆ ನೀವು ಫ್ರೀಲಾನ್ಸ್ ಬರಹಗಾರರಾಗಬಹುದು. ನಿಮ್ಮಲ್ಲೊಬ್ಬ ಪೇಂಟರ್ ಇರಬಹುದು ಅಥವಾ ನೀವೊಬ್ಬ ಕುಶಲ ಕರ್ಮಿಯಾಗಿರಬಹುದು ಅಥವಾ ಆಭರಣ ತಯಾರಿಕೆಯಲ್ಲಿ ನಿಪುಣರಾಗಿರಬಹುದು ಅಥವಾ ಇನ್ನಾವುದೋ ಕೆಲಸದಲ್ಲಿ ನೀವು ಪರಿಣಿತರಾಗಿರಬಹುದು. ನಿಮ್ಮ ಬಿಡುವಿನ ವೇಳೆಯಲ್ಲಿ ಆನ್ಲೈನ್ ಮೂಲಕ ನಿಮ್ಮ ಕೌಶಲ್ಯವನ್ನು ಮಾರ್ಕೆಟಿಂಗ್ ಮಾಡಲು ಯತ್ನಿಸಿ. ನಿಮ್ಮಲ್ಲಿನ ಕೌಶಲ್ಯವನ್ನು ಗುರುತಿಸಿ ಅದರಿಂದ ಹೇಗೆ ಆದಾಯ ಪಡೆಯಬಹುದು ಎಂಬುದರ ಬಗ್ಗೆ ಆಲೋಚಿಸಿ.

ಕಾರಪೂಲ್ ಆರಂಭಿಸಿ

ಕಾರಪೂಲ್ ಆರಂಭಿಸಿ

ಕಾರಪೂಲ್ ಆರಂಭಿಸುವುದು ನಿಮ್ಮ ಜೇಬಿಗಂತೂ ಆದಾಯ ತರುತ್ತದೆ. ಹಾಗೆಯೇ ಇದು ಪ್ರಕೃತಿಯ ಸ್ನೇಹಿಯೂ ಆಗಿದೆ. ನೀವು ಒಬ್ಬಂಟಿಯಾಗಿ ಕಾರಿನಲ್ಲಿ ಆಫೀಸಿಗೆ ಹೋಗುವವರಾಗಿದ್ದರೆ ನಿಮ್ಮದೇ ಮಾರ್ಗದಲ್ಲಿ ಬರುವ ಕೆಲವರನ್ನು ಜೊತೆಗೆ ಸೇರಿಸಿಕೊಂಡು ಡ್ರಾಪ್ ಮಾಡಬಹುದು. ಹೀಗೆ ಕಾರಪೂಲ್ ಆರಂಭಿಸಲು ಯಾವುದೇ ಹೆಚ್ಚುವರಿ ಬಂಡವಾಳವನ್ನು ಹೂಡಬೇಕಿಲ್ಲ ಎಂಬುದು ಖುಷಿಯ ಸಂಗತಿಯಾಗಿದೆ.

Most Read:ಕಿಡ್ನಿ ಸೊಂಕಿನ ಸಮಸ್ಯೆ ನಿವಾರಣೆಗೆ ಅತ್ಯುತ್ತಮ ಆಹಾರಗಳು ಹಾಗೂ ಜ್ಯೂಸ್‌ಗಳು

ನಿಮ್ಮ ಅನುಭವವನ್ನು ಉಪಯೋಗಿಸಿಕೊಳ್ಳಿ

ನಿಮ್ಮ ಅನುಭವವನ್ನು ಉಪಯೋಗಿಸಿಕೊಳ್ಳಿ

ನೀವು ಯಾವುದಾದರೂ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿ ಅದರಲ್ಲಿ ಸಾಕಷ್ಟು ಅನುಭವ ಗಳಿಸಿದ್ದರೆ ಅದನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡು ಹೆಚ್ಚಿನ ಆದಾಯ ಗಳಿಸಬಹುದು. ನಿಮಗೆ ಗೊತ್ತಿರುವ ವಿಷಯದಲ್ಲಿ ಪಾರ್ಟ ಟೈಂ ಉಪನ್ಯಾಸಕರಾಗಬಹುದು ಅಥವಾ ಬಿಡುವಿನ ವೇಳೆಯಲ್ಲಿ ಟ್ಯೂಶನ್ ತೆಗೆದುಕೊಳ್ಳಬಹುದು. ಆರಂಭದಲ್ಲಿ ಇದು ಕೊಂಚ ಕಷ್ಟವೆನಿಸಿದರೂ ಕಾಲೇಜುಗಳ ಜೊತೆ ಸಂಪರ್ಕ ಬೆಳೆದ ನಂತರ ಸಾಕಷ್ಟು ಆದಾಯ ಹರಿದು ಬರಲಾರಂಭಿಸುತ್ತದೆ.

English summary

Ways to Create Multiple Sources of Income

Deep down we all know money cannot buy happiness but at the end of the day, we all need money to survive and thrive in life. If you are looking for ways to create multiple streams of income, here are a few ideas that might help you.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more