For Quick Alerts
ALLOW NOTIFICATIONS  
For Daily Alerts

ಈ ಬಾಲಕಿಗೆ ತಾನು ನಿನ್ನೆ ಏನು ಮಾಡಿದ್ದೇನೆ ಮತ್ತು ಮಾತನಾಡಿದ್ದೇನೆ ಎನ್ನುವ ನೆನಪೇ ಇರುವುದಿಲ್ಲವಂತೆ!

|

ಜೀವನದ ಎಲ್ಲಾ ನೋವು ಹಾಗೂ ಕಷ್ಟಗಳನ್ನು ಮರೆತು ಹೊಸ ಜೀವನವನ್ನು ಆರಂಭಿಸಬೇಕು ಎಂದು ಮನಸ್ಸಿರುವುದು. ಆದರೆ ಮೆದುಳಿನಲ್ಲಿ ಇರುವಂತಹ ನೆನಪು ಮತ್ತೆ ಮತ್ತೆ ಕಷ್ಟಗಳು ಹಾಗೂ ದುಃಖವನ್ನು ನೆನಪಿಸುತ್ತಾ ಇರುವುದು. ಕೆಲವೊಮ್ಮೆ ಇಂತಹ ನೆನಪುಗಳು ಮರೆತು ಹೋದರೆ ಹೇಗೆ ಎಂದು ನಮಗೆ ಅನಿಸುವುದು ಇದೆ. ಎಲ್ಲವನ್ನು ಮರೆತು ಬಿಡುವಂತಹ ಕೆಲವೊಂದು ಸಿನಿಮಾಗಳನ್ನು ಕೂಡ ನಾವು ನೋಡಿದ್ದೇವೆ.

ಇದು ಸಿನಿಮಾದಲ್ಲಿ, ಅದೇ ನಿಜ ಜೀವನದಲ್ಲಿ ಹೀಗೆ ಆದರೆ ಹೇಗೆ ಆಗಬಹುದು ಎಂದು ನೀವು ಆಲೋಚಿಸಿ. ನಿನ್ನೆ ಮಾಡಿದಂತಹ ಯಾವುದೇ ಕೆಲಸಗಳು, ಮಾತನಾಡಿರುವುದು ನೆನಪಿಲ್ಲದೆ ಇದ್ದರೆ ಹೇಗಾಗಬಹುದು? ಇದನ್ನು ಊಹಿಸುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಇಲ್ಲೊಬ್ಬಳು ಬಾಲಕಿಗೆ ತಾನು ನಿನ್ನೆ ಏನು ಮಾಡಿದ್ದೇನೆ ಮತ್ತು ಮಾತನಾಡಿದ್ದೇನೆ ಎನ್ನುವ ನೆನಪೇ ಇರುವುದಿಲ್ಲ. ಹಲವಾರು ವರ್ಷಗಳಿಂದ ಈ ಬಾಲಕಿಯು ಇಂತಹ ಸಮಸ್ಯೆ ಎದುರಿಸುತ್ತಿರುವಳು. ಇದರ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ.

ಆಕೆ ಒಂದು ಸಲ ಅಪಘಾತಕ್ಕೀಡಾದಳು

ಆಕೆ ಒಂದು ಸಲ ಅಪಘಾತಕ್ಕೀಡಾದಳು

ನಾರ್ತ್ ಕಾರೊಲಿನಾದ ಕೈಟ್ಲಿನ್ ಲಿಟಲ್ ಎಂಬ ಬಾಲಕಿಯು ಕ್ರಾಸ್ ಕಂಟ್ರಿ ಅಭ್ಯಾಸದ ವೇಳೆ ಸಂಘರ್ಷಕ್ಕೀಡಾದಳು ಮತ್ತು ಇದರ ಪರಿಣಾಮವಾಗಿ ಆಕೆ ತುಂಬಾ ಅಪರೂಪದಲ್ಲಿ ಕಾಡುವಂತಹ ಅಮ್ನೆಸಿಯಾ ಸಮಸ್ಯೆ ಎದುರಿಸುತ್ತಿರುವಳು. ಕ್ರಾಸ್ ಕಂಟ್ರಿ ವೇಳೆ ತನ್ನ ಜತೆಗಿದ್ದವರು ಮೈಮೇಲೆ ಬಂದು ಬಿದ್ದ ವೇಳೆ ಆಕೆಯ ತಲೆಗೆ ಆಕಸ್ಮಿಕವಾಗಿ ಏಟಾಗಿದೆ.

ವೈದ್ಯರು ಆಕೆ ಬೇಗನೆ ಚೇತರಿಸಬಹುದು ಎಂದು ಭಾವಿಸಿದ್ದರು

ವೈದ್ಯರು ಆಕೆ ಬೇಗನೆ ಚೇತರಿಸಬಹುದು ಎಂದು ಭಾವಿಸಿದ್ದರು

ಅಪಘಾತದ ವೇಳೆ ಹುಡುಗಿಯ ಕೋಚ್ ಮತ್ತು ಆಕೆಯನ್ನು ಪರೀಕ್ಷಿಸಿದ ನರತಜ್ಞರು ಈ ತೀವ್ರ ಏಟು ಕೆಲವು ವಾರಗಳಲ್ಲಿ ವಾಸಿಯಾಗಬಹುದು ಮತ್ತು ಆಕೆ ಗುಣಮುಖವಾಗಬಹುದು ಎಂದು ನಂಬಿದ್ದರು.

ಈ ಅಪಘಾತವಾಗಿ ಎರಡು ವರ್ಷಗಳು ಕಳೆದಿದೆ

ಈ ಅಪಘಾತವಾಗಿ ಎರಡು ವರ್ಷಗಳು ಕಳೆದಿದೆ

ಅಪಘಾತ ನಡೆದು ಈಗ ಎರಡು ವರ್ಷ ಕಳೆದು ಹೋಗಿದೆ ಮತ್ತು ಪ್ರತಿನಿತ್ಯ ಆಕೆಯ ಪೋಷಕರು ಆಕೆಯನ್ನು ಎಬ್ಬಿಸಿ, ಇಂದು ಯಾವ ದಿನ ಎಂದು ನೆನಪಿಸಬೇಖು ಮತ್ತು ಎರಡು ವರ್ಷಗಳ ಮೊದಲು ಸಂಘರ್ಷಕ್ಕೆ ಒಳಗಾಗಿದ್ದನ್ನು ನೆನಪಿಸಬೇಕು.

ಆಕೆಯ ತಂದೆ ಒಂದು ಪುಸ್ತಕವನ್ನಿಟ್ಟಿರುವರು

ಎರಡು ವರ್ಷಗಳ ಮೊದಲು ಏನು ನಡೆದಿದೆ ಎಂದು ಆಕೆ ಎದ್ದ ಬಳಿಕ ತನ್ನ ಪೋಷಕರಿಂದ ವಿವರಣೆ ಪಡೆದ ಬಳಿಕ ಆಕೆಯ ಬಳಿಯಲ್ಲಿ ಇರುವ ಪುಸ್ತಕವೊಂದನ್ನು ಓದಲು ಹೇಳುವರು. ಇದರಲ್ಲಿ ಆಕೆಯ ಅಪಘಾತದ ಬಳಿಕದ ಪ್ರತಿಯೊಂದು ದಿನದ ದಿನಚರಿ ಬರೆಯಲಾಗಿದೆ. ಇದರ ಬಳಿಕ ಅವರು ಆಕೆಗೆ ಯಾವುದೇ ಪ್ರಶ್ನೆಯಿದ್ದರೆ ಬಂದು 15-20 ನಿಮಿಷ ಬಳಿಕ ಭೇಟಿಯಾಗುವಂತೆ ತಿಳಿಸುವರು.

ಆಕೆ ಆಂಟೆರ್ಗ್ರೇಡ್ ಅಮ್ನೇಷಿಯಾದಿಂದ ಬಳಲುತ್ತಿರುವಳು

ಆಕೆ ಆಂಟೆರ್ಗ್ರೇಡ್ ಅಮ್ನೇಷಿಯಾ ಸಮಸ್ಯೆಯಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ತಿಳಿಸಿರುವರು ಮತ್ತು ಇದಕ್ಕೆ ಇದುವರೆಗೆ ಯಾವುದೇ ಪರಿಹಾರ ಅವರಿಗೆ ಸಿಕ್ಕಿಲ್ಲ. ಕಳೆದ ಎರಡು ವರ್ಷ ಗಳಿಂದ ಆಕೆ ಇದೇ ರೀತಿ ಜೀವನ ಸಾಗಿಸುತ್ತಿರುವಳು ಮತ್ತು ಆಕೆಯ ಪೋಷಕರು ಒಂದು ದಿನ ತಮ್ಮ ಮಗಳಿಗೆ ಎಲ್ಲಾ ನೆನಪು ಉಳಿಯುವುದು ಮತ್ತು ಸಹಜ ಸ್ಥಿತಿಗೆ ಮರಳುವಳು ಎಂದು ನಂಬಿರುವರು ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿ ಕಳುಹಿಸಿ.

English summary

Teen’s Short-Term Memory Resets Everyday

A teen named Caitlin Little from North Carolina had suffered a concussion during a cross-country practice and as a result she was left to suffer from a rare form of amnesia. Medics reveal that her new memories are erased every single night, so every morning she wakes up and thinks it's October 2017.
Story first published: Wednesday, May 8, 2019, 17:47 [IST]
X
Desktop Bottom Promotion