For Quick Alerts
ALLOW NOTIFICATIONS  
For Daily Alerts

ಇಂತಹ ಸೆಕ್ಸ್ ರಹಸ್ಯಗಳು ಮಹಿಳೆಯರು ತಿಳಿದಿರಲೇಬೇಕು

|

ಜೀವನವೆಂದ ಮೇಲೆ ಅಲ್ಲಿ ಲೈಂಗಿಕ ಜೀವನವೂ ಮುಖ್ಯವಾಗಿರುವುದು. ಲೈಂಗಿಕ ಜೀವನ ಸಂತೃಪ್ತವಾಗಿದ್ದರೆ ಆಗ ಜೀವನ ಸುಗಮವಾಗಿರುವುದು. ಅದರಲ್ಲೂ ಪುರುಷ ಹಾಗೂ ಮಹಿಳೆ ಪರಸ್ಪರ ತಮ್ಮ ಬೇಕು ಬೇಡಗಳನ್ನು ಅರ್ಥ ಮಾಡಿಕೊಂಡರೆ ಆಗ ಅದಕ್ಕಿಂತ ದೊಡ್ಡ ಸ್ವರ್ಗ ಬೇರಿಲ್ಲ. ಪುರುಷರು ಯಾವಾಗಲೂ ತುಂಬಾ ಅಚ್ಚರಿಯನ್ನು ನೀಡುವವರು ಎಂದು ಹೇಳಲಾಗುತ್ತದೆ.

ಇದಕ್ಕೆ ಬೆಡ್ ರೂಮ್ ಕೂಡ ಹೊರತಾಗಿಲ್ಲ. ಪುರುಷರ ವರ್ತನೆ ಅರ್ಥ ಮಾಡಿಕೊಳ್ಳುವುದು ತುಂಬಾ ಕಠಿಣ. ಇಲ್ಲಿ ಮಹಿಳೆಯರಿಗೆ ಕೆಲವೊಂದು ಸೆಕ್ಸ್ ರಹಸ್ಯಗಳ ಬಗ್ಗೆ ಹೇಳಿಕೊಡಲಾಗಿದೆ. ಇದನ್ನು ಅವರು ತಿಳಿದುಕೊಂಡು ತಮ್ಮ ಸಂಗಾತಿಗೆ ಮತ್ತಷ್ಟು ಹತ್ತಿರವಾಗಬಹುದು.

ನಿಮಗೆ ಪೂರ್ತಿ ಸುಖ ನೀಡಲು ಆಗಲ್ಲ ಎನ್ನುವ ಭೀತಿ ಆತನಿಗೆ ಇರುವುದು

ನಿಮಗೆ ಪೂರ್ತಿ ಸುಖ ನೀಡಲು ಆಗಲ್ಲ ಎನ್ನುವ ಭೀತಿ ಆತನಿಗೆ ಇರುವುದು

ಲೈಂಗಿಕವಾಗಿ ಅದ್ಭುತವಾಗಿ ಪ್ರದರ್ಶನ ನೀಡಬೇಕೆಂದು ಪ್ರತಿಯೊಬ್ಬ ಪುರುಷನು ಬಯಸುವನು. ಮಹಿಳೆಯರು ಸೆಕ್ಸ್ ಪಡೆಯಲು ಮದುವೆ ತನಕ ಕಾಯುವುದು ಕಡಿಮೆ. ಇದರಿಂದಾಗಿ ಅವರು ಹಾಸಿಗೆಯಲ್ಲಿ ತುಂಬಾ ಆರಾಮವಾಗಿರುವರು. ಮಡೋನಾ ಅವರಂತಹ ಸೆಕ್ಸ್ ತೃಪ್ತಿ ಪಡೆದಿರುವ ಮಾಡೆಲ್ ಗಳು ಮತ್ತು `ಸೆಕ್ಸ್ ಆ್ಯಂಡ್ ಸಿಟಿ'ಯ ಕೆಲವು ನಟಿಯರು ನಗರದಲ್ಲಿನ ಮಹಿಳೆಯರು ಸೆಕ್ಸ್ ಬಗ್ಗೆ ಮುಕ್ತವಾಗಬೇಕು ಮತ್ತು ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಹೇಳುವರು. ಇಂತಹ ಮುಕ್ತ ಮನಸ್ಸಿನ ಕೆಲವು ಮಹಿಳೆಯರಿಂದಾಗಿ ಪುರುಷರಿಗೆ ಸಮಸ್ಯೆಯಾಗುವುದು. ಹಠಾತ್ ಆಗಿ ಆತನ ಮೇಲೆ ಒತ್ತಡವು ಬೀಳುವುದು. ಆತ ತನ್ನ ಪ್ರದರ್ಶನದಿಂದ ನಿಮ್ಮನ್ನು ಸಂತೋಷಗೊಳಿಸಬೇಕು ಎಂದು ಬಯಸುತ್ತಾನೆ. ಆತನ ಪ್ರದರ್ಶನದ ಬಗ್ಗೆ ನೀವು ಹೆಚ್ಚು ಚಿಂತೆ ಮಾಡುವುದಿಲ್ಲ ಮತ್ತು ಆತನ ಕೆಲವು ಕಳಪೆ ಪ್ರದರ್ಶನ ಮರೆತು ಬಿಡಬಹುದು. ಆದರೆ ಆತ ಮಾತ್ರ ತನ್ನನ್ನು ತಾನು ಮರೆಯಲು ತುಂಬಾ ಕಷ್ಟಪಡುವನು. ಇದು ಆತನಿಗೆ ತುಂಬಾ ಕಠಿಣ ಸಮಯವಾಗಿರುವುದು.

ಎಚ್ಚರಿಕೆ

ಎಚ್ಚರಿಕೆ

ತನ್ನ ಪ್ರದರ್ಶನದ ಬಗ್ಗೆ ಪುರುಷರಿಗೆ ಆತಂಕವಿದ್ದರೆ ಆಗ ಅವರು ತನ್ನ ಅಹಂನ್ನು ರಕ್ಷಿಸಿಕೊಳ್ಳುವ ಸಲುವಾಗಿ ಮಹಿಳೆಯರನ್ನು ದೂಷಿಸಲು ಆರಂಭಿಸುವರು. ಇಂತಹ ಪರಿಸ್ಥಿತಿ ನಿಭಾಯಿಸಲು ತಯಾರಾಗಿ.

ನೀವು ಏನು ಮಾಡಬೇಕು?

ನೀವು ಏನು ಮಾಡಬೇಕು?

ಇದನ್ನು ನೀವು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಅಥವಾ ಆತನನ್ನು ಅವಮಾನ ಮಾಡಬೇಡಿ. ಯಾವತ್ತೂ ನಗಬೇಡಿ. ಇದು ನಿಮಗೆ ಒಳ್ಳೆಯ ಸುಖ ನೀಡಿದೆ ಎಂದು ತೋರಿಸಿಕೊಳ್ಳಿ.

Most Read: ಮಹಿಳೆಯರು ಪರಾಕಾಷ್ಠೆಯ ಸುಖ ತಲುಪಲು ಹೀಗೂ ಮಾಡಬಹುದು

ಅವರು ಪುರುಷತ್ವ ಸಾಬೀತು ಮಾಡಲು ಬಯಸುವರು

ಅವರು ಪುರುಷತ್ವ ಸಾಬೀತು ಮಾಡಲು ಬಯಸುವರು

ಸೆಕ್ಸ್ ಎನ್ನುವುದು ಶತಮಾನಗಳಿಂದಲೂ ಒಂದು ಶಕ್ತಿಯಾಗಿದೆ ಮತ್ತು ಇದು ಪುರುಷತ್ವಕ್ಕೆ ಒಂದು ಸಾಕ್ಷಿಯಾಗಿದೆ. ಪುರುಷರಿಗೆ ಸೆಕ್ಸ್ ಎಂದರೆ ಅವರು ಮಹಿಳೆಯರಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡುವುದು, ಪೋಷಣೆ ನೀಡುವುದು ಮತ್ತು ಪ್ರೀತಿಸುವುದು. ನಿಮ್ಮ ಪುರುಷನು ತನ್ನನ್ನು ತಾನು ಸೂಪರ್ ಹೀರೊ ಎಂದು ಭಾವಿಸಿರುವನು ಮತ್ತು ಅದನ್ನು ನೋಡಲು ಬಯಸುತ್ತಾನೆ. ಆತ ನಿಮ್ಮನ್ನು ಲೈಂಗಿಕವಾಗಿ ತೃಪ್ತಿಪಡಿಸಿದಾಗ ತಾನು ಸೂಪರ್ ಮೆನ್ ಎಂದು ತಿಳಿಯುತ್ತಾನೆ. ನೀವು ಆನಂದಿಸುತ್ತಾ ಇರುವಾಗ ಆತ ಅದನ್ನು ತಿಳಿದುಕೊಳ್ಳಲಿ. ನಿಮ್ಮ ಪ್ರಶಂಸೆಯನ್ನು ಆತ ಇಷ್ಟಪಡುತ್ತಾನೆ.

ಎಚ್ಚರಿಕೆ

ಎಚ್ಚರಿಕೆ

ಯಾವುದೇ ಪ್ರಶಂಸೆ ಇಲ್ಲವೆಂದಾದರೆ ಆಗ ಯಾವುದೇ ಮನರಂಜನೆಯಿಲ್ಲ. ನೀವಾಗಿ ಇದನ್ನು ಆನಂದಿಸುತ್ತಿದ್ದೀರೋ ಇಲ್ಲವೋ ಆದರೆ ಪ್ರೋತ್ಸಾಹಿಸಿ.

ನೀವು ಏನು ಮಾಡಬೇಕು?

ನೀವು ಏನು ಮಾಡಬೇಕು?

ನೀವು ಸುಳ್ಳು ಹೇಳಬೇಡಿ ಅದೇ ರೀತಿಯಾಗಿ ಜಗಳ ಮಾಡಬೇಡಿ. ನೀವು ಸಂತೋಷವಾಗಿರಿ ಮತ್ತು ಸಂತೃಪ್ತಿಯಿಂದ ಇರಿ. ಇದರಿಂದ ಆತ ಸೂಪರ್ ಹೀರೊ ಎಂದು ಭಾವಿಸುವನು.

ದೀರ್ಘಕಾಲ ಕಾಯುವುದನ್ನು ಪುರುಷರು ಬಯಸುವುದಿಲ್ಲ

ದೀರ್ಘಕಾಲ ಕಾಯುವುದನ್ನು ಪುರುಷರು ಬಯಸುವುದಿಲ್ಲ

ಡೇಟಿಂಗ್ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಮಹಿಳೆಯರು ಸೆಕ್ಸ್ ನ್ನು ಮುಂದಕ್ಕೆ ಹಾಕುತ್ತಾ ಹೋಗಬಾರದು. ಸಂಬಂಧದಲ್ಲಿ ಸೆಕ್ಸ್ ಅನ್ನುವುದು ಇದ್ದರೆ ಆಗ ಮಾತ್ರ ಆತ ಹೆಚ್ಚು ಬದ್ಧತೆ ತೋರಿಸುವನು. ಲೈಂಗಿಕ ಆಕಾಂಕ್ಷೆಯಿಂದಲೂ ನೀವು ಆತನನ್ನು ಒಪ್ಪಿಕೊಂಡಿದ್ದೀರಿ ಎಂದು ಅರಿಯುವುದು ಮುಖ್ಯ.

Most Read: ಪುರುಷರಿಗಿಂತ ಮಹಿಳೆಯರಿಗೆಯೇ ಸೆಕ್ಸ್‌ನಲ್ಲಿ ಆಸಕ್ತಿ ಜಾಸ್ತಿಯಂತೆ! ಇದಕ್ಕೆ ಕಾರಣಗಳು ಇಲ್ಲಿದೆ ನೋಡಿ

ಎಚ್ಚರಿಕೆ

ಎಚ್ಚರಿಕೆ

ಸೆಕ್ಸ್ ಗೆ ನೀವು ಆಹ್ವಾನಿಸಿದ ವೇಳೆ ಆತ ತಿರಸ್ಕರಿಸಿದರೆ ಆಗ ನೀವು ದೂರವಾಗಿ.

ನೀವು ಏನು ಮಾಡಬಹುದು?

ನೀವು ಏನು ಮಾಡಬಹುದು?

ನಾವು ಎಲ್ಲವೂ ತುಂಬಾ ಸಂವೇದನೆ ಹೊಂದಿರುವವರು. ನಾವು ಏನು ಎನ್ನುವುದು ನಮಗೆ ತಿಳಿದಿದೆ. ಇದರಿಂದ ನೀವು ಮೊದಲು ಕೈ ಹಿಡಿಯಲು ಹಿಂಜರಿಯಬೇಡಿ.

ಪುರುಷರು ತಮ್ಮ ದೇಹದ ಬಗ್ಗೆ ತುಂಬಾ ಜಾಗೃತರಾಗಿರುವರು

ಪುರುಷರು ತಮ್ಮ ದೇಹದ ಬಗ್ಗೆ ತುಂಬಾ ಜಾಗೃತರಾಗಿರುವರು

ಮಹಿಳೆಯರು ತಮ್ಮ ತೂಕದ ಬಗ್ಗೆ ಆಲೋಚನೆ ಮಾಡಿದಷ್ಟು ಪುರುಷರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅವರಿಗೆ ತಮ್ಮದೇ ಆಗಿರುವಂತಹ ಕೆಲವೊಂದು ಸಮಸ್ಯೆಗಳಿರುವುದು.

ಎಚ್ಚರಿಕೆ

ಎಚ್ಚರಿಕೆ

ಹೆಚ್ಚಿನ ಪುರುಷರು ತಮ್ಮ ದೈಹಿಕ ದೇಹ ವಿನ್ಯಾಸದಿಂದ ತುಂಬಾ ಚಿಂತೆಗೀಡಾಗುವರು. ಇದರಲ್ಲಿ ಮುಖ್ಯವಾಗಿ ಎತ್ತರ ಮತ್ತು ತಲೆ ಬೋಳಾಗಿರುವುದು. ಇನ್ನೊಂದು ವಿಧದಲ್ಲಿ ಹೇಳಬೇಕೆಂದರೆ ಮಹಿಳೆಯರಂತೆ ಅವರು ಕೂಡ ಹಾಸಿಗೆಯಲ್ಲಿ ಮೂಡ್ ಹೆಚ್ಚಾಗಬೇಕೆಂದು ಬಯಸುವರು.

ನೀವು ಏನು ಮಾಡಬೇಕು?

ನೀವು ಏನು ಮಾಡಬೇಕು?

ನೀವು ತುಂಬಾ ಆಕರ್ಷಕವಾಗಿದ್ದೀಯಾ ಮತ್ತು ನನ್ನನ್ನು ಆಕರ್ಷಿಸುತ್ತಿದ್ದೀಯಾ ಎಂದು ಹೇಳಿ.

ಮೋಸ ಮಾಡುವ ಸಂಗಾತಿಯನ್ನು ಯಾವತ್ತೂ ಮರೆಯಲ್ಲ

ಮೋಸ ಮಾಡುವ ಸಂಗಾತಿಯನ್ನು ಯಾವತ್ತೂ ಮರೆಯಲ್ಲ

ಹಾಸಿಗೆಯಲ್ಲಿ ಮೋಸ ಮಾಡುವಂತಹ ಸಂಗಾತಿಯನ್ನು ಪುರುಷರು ಯಾವತ್ತಿಗೂ ಮರೆಯುವುದಿಲ್ಲ. ಮಹಿಳೆಯರು ಕೂಡ ಇದೇ ರೀತಿಯಲ್ಲಿ ಮೋಸವನ್ನು ಮರೆಯಲ್ಲ.

ಎಚ್ಚರಿಕೆ

ಎಚ್ಚರಿಕೆ

ಪುರುಷರು ಯಾವಾಗಲೂ ತುಂಬಾ ಪ್ರಾಮಾಣಿಕವಾಗಿರಬೇಕೆಂದು ಬಯಸುವರು.

Most Read: ಮಹಿಳೆಯರು ಸೆಕ್ಸ್ ವಿಷಯದಲ್ಲಿ ಪುರುಷರಷ್ಟು ಇಂಟರೆಸ್ಟ್ ಹೊಂದಿರುವುದಿಲ್ಲವಂತೆ!

ನೀವು ಏನು ಮಾಡಬೇಕು?

ನೀವು ಏನು ಮಾಡಬೇಕು?

ಬದ್ಧತೆಯ ಸಂಬಂಧದಲ್ಲಿ ನೀವು ಯಾವಾಗಲೂ ಪ್ರಾಮಾಣಿಕತೆಯನ್ನು ಪ್ರದರ್ಶಿಸಿ. ಇದು ಕೇವಲ ಸಂಬಂಧದಲ್ಲಿ ಮಾತ್ರವಲ್ಲ. ನೀವು ನಿಮ್ಮ ಸಂಗಾತಿಗೆ ಸಹೋದ್ಯೋಗಿಗಳ ಹಾಗೂ ಸ್ನೇಹಿತರ ಎದುರು ಕೂಡ ಬೆಂಬಲ ನೀಡಿ. ಈ ವರ್ತನೆಯಿಂದಾಗಿ ನಿಮ್ಮ ಪುರುಷನು ತುಂಬಾ ಸುರಕ್ಷಿತವಾದ ಭಾವನೆ ಹೊಂದುವನು. ಪುರುಷರು ಮಹಿಳೆಯರಂತೆ ಬದ್ಧತೆಯನ್ನು ಬಯಸುವರು. ಅವರು ತುಂಬಾ ಭಿನ್ನ ಎಂದು ತಿಳಿದುಕೊಳ್ಳಿ.

English summary

Sex Secrets Every Woman must Know

Here are five sex secrets that may help you understand and get even closer to your guy... Men are full of surprises and bedroom behaviour is no exception. While it’s impossible to explain all male behaviours, here are five sex secrets that may help you understand and get even closer to your guy.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more