For Quick Alerts
ALLOW NOTIFICATIONS  
For Daily Alerts

ವ್ಯಕ್ತಿಯ ಜೀವ ಉಳಿಸಿದ ರಸ್ತೆ ಗುಂಡಿ!

|

ನಮ್ಮ ದೇಶದಲ್ಲಿ ಗುಂಡಿಗಳು ಇಲ್ಲದೆ ಇರುವಂತಹ ರಸ್ತೆಗಳನ್ನು ಹುಡುಕಿಕೊಡುವುದು ಅಂಗೈಯಲ್ಲಿ ಗಾಳಿಯನ್ನು ಹಿಡಿದಷ್ಟು ಕಷ್ಟ ಎಂದು ಹೇಳಬಹುದು. ಯಾಕೆಂದರೆ ಯಾವುದೇ ರಸ್ತೆ ಕೂಡ ಗುಂಡಿ ಇಲ್ಲದೆ ನಮಗೆ ಸಿಗದು. ರಸ್ತೆ ಗುಂಡಿಯಿಂದಾಗಿ ಹಲವಾರು ಅಪಘಾತಗಳು ನಡೆದು, ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವಿದೇಶದಲ್ಲಿ ಕೂಡ ರಸ್ತೆಗಳಲ್ಲಿ ಗುಂಡಿಗಳು ಇದೆ ಎಂದರೆ ನಾವು ನಂಬಲೇಬೇಕು. ಇಂತಹ ಗುಂಡಿಗಳು ಕೆಲವೊಮ್ಮೆ ನಮಗೆ ಕೂಡ ನೆರವಾಗುವುದು ಎಂದು ಕೇಳಿದರೆ ಅಚ್ಚರಿಯಾಗಬಹುದು. ರಸ್ತೆ ಗುಂಡಿಗಳು ಜೀವ ಉಳಿಸಬಲ್ಲದು ಎಂದು ನಿಮಗೆ ತಿಳಿದಿದೆಯಾ? ಹಾಗಿದ್ದರೆ ಈ ಘಟನೆಯನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ.

Potholes Can Be Lifesavers Too!

ಮಲೇಶಿಯಾದ ಗ್ರೆಟ್ನಾದಲ್ಲಿ 59ರ ಹರೆಯದ ವ್ಯಕ್ತಿಯೊಬ್ಬನಿಗೆ ಕೆಲಸ ಮಾಡುತ್ತಿದ್ದ ವೇಳೆ ಹೃದಯ ಬಡಿತವು ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗುತ್ತಿತ್ತು. ಆ ವ್ಯಕ್ತಿಯ ಹೃದಯ ಬಡಿತವು ನಿಮಿಷಕ್ಕೆ ಸುಮಾರು 200 ಸಲ ಬಡಿಯುತ್ತಿತ್ತು. ಇದು ರಾಕೆಟ್ ನ ವೇಗದಲ್ಲಿತ್ತು ಎಂದು ವರದಿಗಳು ಹೇಳಿವೆ. ಆದರೆ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಇದ್ದ ಗುಂಡಿಯೊಂದು ಆತನ ಹೃದಯ ಬಡಿತವನ್ನು ಸ್ಥಿರವಾಗಿಸಿದೆ ಮತ್ತು ಸಮಸ್ಯೆ ನಿವಾರಣೆ ಮಾಡಿದೆ.

ಆ ವ್ಯಕ್ತಿಗೆ ವಾಹನವು ಗುಂಡಿಗೆ ಬಿದ್ದ ವೇಳೆ ವಿದ್ಯುತ್ ಆಘಾತವಾದಂತೆ ಆಗಿ ಹೃದಯ ಬಡಿತವು ಸ್ಥಿರವಾಗಿದೆ ಎಂದು ನಂಬಲಾಗಿದೆ. ಗುಂಡಿಗೆ ಬಿದ್ದ ಪರಿಣಾಮ ರೋಗಿಯ ಹೃದಯ ಬಡಿತವು ತುಂಬಾ ಏರಿಕೆಯಾಗಿರುವುದರಿಂದ ತಗ್ಗಿ ಸಾಮಾನ್ಯ ಸ್ಥಿತಿಗೆ ತಲುಪಿದೆ.
ಇದು ಒಂದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿತ್ತು. ತುರ್ತು ಸಂದರ್ಭದಲ್ಲಿ ಯಾವುದೇ ಗುಂಡಿಗಳು ಇದ್ದರೆ ಆಗ ನೀವು ಈ ಪ್ರಯೋಗ ಮಾಡಬಹುದು. ಆದರೆ ಅಪಾಯ ನಿಮ್ಮ ಮೇಲೆ ಬಿಟ್ಟಿರುವುದು.
ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.

English summary

Potholes Can Be Lifesavers Too!

A 59-year-old man from Gretna, Malaysia, was being rushed to hospital as he had a racing heart at work. His heartbeat skyrocketed to a rate of 200 beats per minute, but the potholes ride to the hospital stabilised his heartbeat and saved his life. Apparently, he had no history of heart problems.Thanks To Potholes This Man's Heartbeat Stabilised
X
Desktop Bottom Promotion