For Quick Alerts
ALLOW NOTIFICATIONS  
For Daily Alerts

ತನ್ನ 14 ವಾರದ ಭ್ರೂಣದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮಹಿಳೆ!

|

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈಯಕ್ತಿಕ ವಿಚಾರದಿಂದ ಹಿಡಿದು ತಮ್ಮ ಯಶಸ್ಸಿನ ತನಕ ಪ್ರತಿಯೊಂದು ಹಂಚಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಹಿಂದೆ ಮಾತನಾಡಲು ಹಿಂಜರಿಯುತ್ತಿದ್ದ ಕೆಲವೊಂದು ವಿಚಾರಗಳನ್ನು ಕೂಡ ಈಗೀಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ನಾವು ಕಾಣುತ್ತಿದ್ದೇವೆ. ಹಿಂದೆ ನಾವು ಮನೆಯವರೊಂದಿಗೆ ಯಾವುದೇ ವಿಚಾರವನ್ನು ಹೇಳುಕೊಳ್ಳುತ್ತಿದ್ದಂತೆ ಇಂದು ಸಾಮಾಜಿಕ ಜಾಲತಾಣದಲ್ಲಿ ಇದನ್ನು ವ್ಯಕ್ತಪಡಿಸುತ್ತಿದ್ದೇವೆ. ಹೀಗಾಗಿ ಸಾಮಾಜಿಕ ಜಾಲತಾಣವು ಪ್ರತಿಯೊಬ್ಬರಿಗು ಅಚ್ಚುಮೆಚ್ಚು ಆಗಿದೆ. ಸಾಮಾಜಿಕ ಜಾಲತಾಣಗಳಿಂದ ಕೆಲವು ಗಂಟೆಗಳ ಕಾಲ ದೂರವಿದ್ದರೂ ಏನೋ ದೊಡ್ಡ ಮಟ್ಟದಲ್ಲಿ ಕಳಕೊಂಡಿದ್ದೇವೆ ಎನ್ನುವ ಭಾವ ಮೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಾವು ತುಂಬಾ ಸಂಭ್ರಮ ಪಡುವಂತಹ ಕೆಲವೊಂದು ಘಟನೆಗಳು, ವಿಚಾರಗಳು ಹಾಗೂ ಕಥೆಗಳನ್ನು ಓದುತ್ತಾ ಇರುತ್ತೇವೆ. ಅದೇ ರೀತಿಯಾಗಿ ದುಃಖ ಉಂಟು ಮಾಡುವ ಕೆಲವು ಘಟನೆಗಳ ಬಗ್ಗೆಯೂ ನಾವು ಓದುತ್ತೇವೆ. ಇಲ್ಲಿ ಅಂತಹ ಒಂದು ಘಟನೆ ಬಗ್ಗೆ ನಿಮಗೆ ತಿಳಿಸಲಿದ್ದೇವೆ.

Miscarried Foetus

ಈ ಘಟನೆಯು ಮಗುವನ್ನು ಕಳೆದುಕೊಂಡಿರುವ ಮಹಿಳೆಯ ಬಗ್ಗೆ. ಮಗುವನ್ನು ಕಳೆದುಕೊಳ್ಳುವುದಕ್ಕಿಂತ ನೋವಿನ ಸಂಗತಿಯು ಬೇರಾವುದೂ ಇಲ್ಲ. ಮಹಿಳೆಯು ತನ್ನ 14 ವಾರಗಳ ಭ್ರೂಣವನ್ನು ಕಳೆದುಕೊಂಡು ದುಃಖವನ್ನು ಇಲ್ಲಿ ಹೇಳಿಕೊಂಡಿದ್ದಾರೆ ಮತ್ತು ಈ ಬಗ್ಗೆ ಎಲ್ಲಾ ಫೋಟೊಗಳನ್ನು ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಧೈರ್ಯವಂತ ಮಹಿಳೆ 14 ವಾರಗಳ ಭ್ರೂಣದ ಫೋಟೊವನ್ನು ಕೂಡ ಹಂಚಿಕೊಂಡಿದ್ದಾರೆ. ಇದು ನಿಜಕ್ಕೂ ಮನಕಲಕುವಂತಿದೆ. ಈ ಬಗ್ಗೆ ನೀವು ಓದಿಕೊಳ್ಳಿ.

ಆಕೆ ಭ್ರೂಣದ ಚಿತ್ರಗಳನ್ನು ಪೋಸ್ಟ್ ಮಾಡಿದಳು

ಆಕೆ ಭ್ರೂಣದ ಚಿತ್ರಗಳನ್ನು ಪೋಸ್ಟ್ ಮಾಡಿದಳು

ಗರ್ಭಪಾತವಾದ ತನ್ನ 14 ವಾರಗಳ ಭ್ರೂಣದ ಫೋಟೊವನ್ನು ಆ ಮಹಿಳೆಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊವನ್ನು ಹಂಚಿಕೊಳ್ಳುವ ಮುಖ್ಯ ಉದ್ದೇಶವೆಂದರೆ ಭ್ರೂಣವು ಸಂಪೂರ್ಣವಾಗಿ ಬೆಳೆದಿತ್ತು ಮತ್ತು ಇದು ನಾಲ್ಕು ಇಂಚು ಉದ್ದ ಮತ್ತು ಸುಮಾರು 0.05 ಪೌಂಡ್ ನಷ್ಟು ತೂಕ ಹೊಂದಿತ್ತು.

MOst Read: ಆಯಸ್ಸು ಮುಗಿಯುತ್ತಾ ಬಂದಿದ್ದರೆ, ಹೀಗೆಲ್ಲಾ ನಡೆಯುತ್ತವೆಯಂತೆ!

ಆಕೆ ಈ ಭ್ರೂಣವನ್ನು ಎಸೆಯಲು ನಿರಾಕರಿಸಿದಳು!

ಆಕೆ ಈ ಭ್ರೂಣವನ್ನು ಎಸೆಯಲು ನಿರಾಕರಿಸಿದಳು!

ಕ್ರಿಸ್ಟಿಯಾನ ಶಾರ್ರನ್ ಎಂಬಾಕೆ ತನ್ನ ಭ್ರೂಣವನ್ನು ವೈದ್ಯಕೀಯ ತ್ಯಾಜ್ಯ ಎಂದು ಎಸೆಯಲು ನಿರಾಕರಿಸಿದರು. ಇದರಿಂದಾಗಿ ಆಕೆ ಮತ್ತು ಆಕೆಯ ಪತಿ ಮೈಕಲ್ ಈ ಭ್ರೂಣವನ್ನು ಒಂದು ವಾರಗಳ ತನಕ ಫ್ರಿಡ್ಜ್ ನಲ್ಲಿ ಇಟ್ಟುಕೊಂಡರು. ಇದರ ಬಳಿಕ ಅವರು ತಮ್ಮ ಮನೆಯ ಕೈದೋಟದಲ್ಲಿ ಹೂವಿನ ಕುಂಡದಲ್ಲಿ ಇದನ್ನು ದಫನ ಮಾಡಿದರು.

ಭ್ರೂಣ ದಫನ ಮಾಡಲು ಆಕೆಗೆ ಅವಕಾಶ ನೀಡಲಿಲ್ಲ, ಇದು ಕಾನೂನು ಬಾಹಿರವಾಗಿತ್ತು!

ಭ್ರೂಣ ದಫನ ಮಾಡಲು ಆಕೆಗೆ ಅವಕಾಶ ನೀಡಲಿಲ್ಲ, ಇದು ಕಾನೂನು ಬಾಹಿರವಾಗಿತ್ತು!

ಭ್ರೂಣವನ್ನು ಸರಿಯಾಗಿ ದಫನ ಮಾಡಲು ಆಕೆಗೆ ಅವಕಾಶ ನಿರಾಕರಿಸಲಾಗಿತ್ತು. ಯಾಕೆಂದರೆ ಅಮೆರಿಕಾದ ಕಾನೂನಿನ ಪ್ರಕಾರ, ತನ್ನ ಭ್ರೂಣವು ಕಾನೂನುಬದ್ಧವಾದ ಒಂದು ಮಗುವಾಗಿತ್ತು. 20 ವಾರಗಳ ಬಳಿಕವಷ್ಟೇ ಭ್ರೂಣವು ಮಗು ಆಗಿ ಪರಿವರ್ತಿತ ಆಗುವುದು ಎಂದು ನಂಬಲಾಗಿದೆ.

Most Read: ಬರೋಬ್ಬರಿ 5 ಲೀಟರ್ ಬಿಯರ್ ಕುಡಿಸಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು!

ದಂಪತಿಯು ಈ ಭ್ರೂಣವನ್ನು ಒಂದು ಕುಂಡದಲ್ಲಿ ದಫನ ಮಾಡಲು ನಿರ್ಧರಿಸಿದರು

ದಂಪತಿಯು ಈ ಭ್ರೂಣವನ್ನು ಒಂದು ಕುಂಡದಲ್ಲಿ ದಫನ ಮಾಡಲು ನಿರ್ಧರಿಸಿದರು

ಸ್ಮಶಾನದಲ್ಲಿ ಭ್ರೂಣವನ್ನು ಅಧಿಕೃತವಾಗಿ ದಫನ ಮಾಡಲು ಅಲ್ಲಿನ ಅಧಿಕಾರಿಗಳು ನಿರಾಕರಿಸಿದ ಬಳಿಕ ಈ ದಂಪತಿಯು ಭ್ರೂಣವನ್ನು ಒಂದು ಹೂವಿನ ಕುಂಡದಲ್ಲಿ ದಫನ ಮಾಡಲು ನಿರ್ಧರಿಸಿದರು. ಪ್ರತೀ ವರ್ಷವು ಇದು ಬೆಳೆಯುತ್ತಾ ಇರುವಂತೆ ಅವರಿಗೆ ನೆನಪು ಮರಕಳಿಸಿ ಬರಲಿದೆ ಎನ್ನುವುದು ಅವರ ಅನಿಸಿಕೆಯಾಗಿದೆ. ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.

English summary

Photos Of 14 Weeks Old Miscarried Foetus

A woman named Christian Sharran Sutherland, from Missouri, suffered a miscarriage. The 40-year-old Christian believed that her dead foetus was a 'real baby'. She didn't want the foetus to be disposed off as medical waste. Hence, she took it home and kept it in the fridge for a week before burying it in the garden.
X
Desktop Bottom Promotion