For Quick Alerts
ALLOW NOTIFICATIONS  
For Daily Alerts

ದೇಹದ ಈ ಭಾಗದಲ್ಲಿ ಮಚ್ಚೆ ಇರುವವರು ತುಂಬಾನೇ ಅದೃಷ್ಟವಂತರಂತೆ!

|

ದೇಹದ ಯಾವುದಾದರೂ ಒಂದು ಭಾಗದಲ್ಲಿ ಮಚ್ಚೆ ಎನ್ನುವುದು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಕೆಲವರಲ್ಲಿ ದೇಹದಲ್ಲಿ ಕಾಣಿಸುವಂತಹ ಭಾಗದಲ್ಲಿ ಈ ಮಚ್ಚೆಯು ಇದ್ದರೆ ಇನ್ನು ಕೆಲವರಲ್ಲಿ ತುಂಬಾ ಗೌಪ್ಯ ಹಾಗೂ ಮುಚ್ಚಿಡುವಂತಹ ಭಾಗದಲ್ಲಿ ಈ ಮಚ್ಚೆಗಳು ಇರುವುದು. ಆದರೆ ನೀವು ನಿರೀಕ್ಷಿಸದರೆ ಇರುವಂತಹ ಭಾಗದಲ್ಲಿ ಮಚ್ಚೆಗಳು ಇರಲು ಕಾರಣವೇನೆಂದು ನಿಮಗೆ ತಿಳಿದಿದೆಯಾ? ಜ್ಯೋತಿಷ್ಯದ ಪ್ರಕಾರ ಕೆಲವೊಂದು ಮಚ್ಚೆಗಳು ತುಂಬಾ ಅದೃಷ್ಟವನ್ನು ಉಂಟು ಮಾಡುವುದು ಮತ್ತು ಇನ್ನು ಕೆಲವು ಮಚ್ಚೆಗಳು ದುರಾದೃಷ್ಟ. ಹೀಗಾಗಿ ಮಚ್ಚೆಗಳ ಬಗ್ಗೆ ನೀವು ತಿಳಿದುಕೊಂಡರೆ ತುಂಬಾ ಒಳ್ಳೆಯದು. ದೇಹದ ಕೆಲವು ಭಾಗಗಳಲ್ಲಿ ಇರುವಂತಹ ಮಚ್ಚೆಗಳು ವ್ಯಕ್ತಿತ್ವವನ್ನು ಹೇಳುತ್ತದೆ.

ಮುಖದ ಕೆಲವು ಭಾಗದಲ್ಲಿ ಇರುವಂತಹ ಮಚ್ಚೆಗಳು ತುಂಬಾ ಅದೃಷ್ಟವೆಂದು ಹೇಳಲಾಗುತ್ತದೆ. ಮಚ್ಚೆಯ ಗಾತ್ರ, ಬಣ್ಣ ಮತ್ತು ವಿನ್ಯಾಸ ಹೀಗೆ ಪ್ರತಿಯೊಂದನ್ನು ನೀವು ತಿಳಿದುಕೊಂಡು ಅದು ನಿಮಗೆ ಯಾವ ರೀತಿಯಲ್ಲಿ ಅದೃಷ್ಟವನ್ನು ತರಲಿದೆ ಎಂದು ತಿಳಿಯಿರಿ.

ಕೂದಲಿನ ಭಾಗದಲ್ಲಿ ಮಚ್ಚೆ

ಕೂದಲಿನ ಭಾಗದಲ್ಲಿ ಮಚ್ಚೆ

ಬಾಹ್ಯರೂಪ ತಜ್ಞರು ಹೇಳುವ ಪ್ರಕಾರ ಕೂದಲಿನ ಭಾಗದಲ್ಲಿ ಅಂದರೆ ಕೂದಲನ್ನು ಎರಡು ಭಾಗವಾಗಿಸುವಂತಹ ಜಾಗದಲ್ಲಿ ಕಪ್ಪು ಮಚ್ಚೆಯು ಅಡಗಿದ್ದರೆ ಇದು ತುಂಬಾ ಅದೃಷ್ಟ ಎಂದು ಪರಿಗಣಿಸಲಾಗುವುದು. ಮಚ್ಚೆಯು ತುಂಬಾ ದಪ್ಪಗೆ ಇದ್ದರೆ ಮತ್ತು ಅದರಲ್ಲೂ ಇದು ಹೆಚ್ಚು ಅಡಗಿಕೊಂಡಿದ್ದರೆ ಒಳ್ಳೆಯದು. ಇನ್ನೊಂದು ಮೂಲಗಳ ಪ್ರಕಾರ ಕಪ್ಪು ಮತ್ತು ಹೊಳಪಿನ ಮಚ್ಚೆಯು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದೇ ಸ್ವಲ್ಪ ಬಣ್ಣಕುಂದಿರುವಂತಹ ಮಚ್ಚೆಯು ನಿಮ್ಮ ಮನೋಭಾವವನ್ನು ಕುಂದಿಸುವುದು ಎಂದು ಹೇಳಲಾಗಿದೆ.

ಹುಬ್ಬಿನ ಭಾಗದಲ್ಲಿ ಇರುವ ಮಚ್ಚೆ

ಹುಬ್ಬಿನ ಭಾಗದಲ್ಲಿ ಇರುವ ಮಚ್ಚೆ

ಬಾಹ್ಯರೂಪ ತಜ್ಞರು ಹೇಳುವ ಪ್ರಕಾರ ಹುಬ್ಬಿನ ಭಾಗದಲ್ಲಿ ಮಚ್ಚೆಯು ಅಡಗಿಕೊಂಡಿದ್ದರೆ ಆಗ ಇದು ರತ್ನದ ಖಜಾನೆ ಎಂದು ಪರಿಗಣಿಸಲಾಗಿದೆ. ಇಂತಹ ಜಾಗದಲ್ಲಿ ಮಚ್ಚೆ ಇರುವಂತಹ ವ್ಯಕ್ತಿಗಳು ತುಂಬಾ ಜಾಣ ಮತ್ತು ಅತ್ಯುತ್ತಮವಾಗಿ ಶಿಕ್ಷಣ ಪಡೆಯುವರು ಎಂದು ಹೇಳಲಾಗಿದೆ. ಇವರು ಶೈಕ್ಷಣಿಕವಾಗಿ ದೊಡ್ಡ ಮಟ್ಟದ ಯಶಸ್ಸು ಪಡೆಯುವರು ಮತ್ತು ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡುವರು. ಇನ್ನೊಂದು ಕಡೆಯಲ್ಲಿ ಹುಬ್ಬಿನಲ್ಲಿ ಮಚ್ಚೆ ಇರುವಂತಹ ವ್ಯಕ್ತಿಗಳು ತುಂಬಾ ಮಹತ್ವಾಕಾಂಕ್ಷಿ, ಉನ್ನತ ಹುದ್ದೆ ಮತ್ತು ನಿರ್ಣಾಯಕರಾಗಿರುವರು. ಇವರು ವರ್ಷಪೂರ್ತಿ ಏನಾದರೂ ಶ್ರೇಷ್ಠವಾಗಿರುವುದನ್ನು ಮಾಡುವರು.

Most Read: ದೇಹದ ಮೇಲಿನ ಮಚ್ಚೆ, ನಿಮ್ಮ ಜಾತಕವನ್ನೇ ಬಿಚ್ಚಿಡುತ್ತದೆ!

ಹುಬ್ಬಿನ ಕೊನೆಯಲ್ಲಿ ಮಚ್ಚೆ ಕಾಣಿಸಿದರೆ

ಹುಬ್ಬಿನ ಕೊನೆಯಲ್ಲಿ ಮಚ್ಚೆ ಕಾಣಿಸಿದರೆ

ಹುಬ್ಬಿನ ಕೊನೆಯಲ್ಲಿ ಮಚ್ಚೆ ಕಾಣಿಸಿಕೊಂಡರೆ ಆ ವ್ಯಕ್ತಿಯು ತುಂಬಾ ಸಂತೋಷ ಮತ್ತು ಒಳ್ಳೆಯ ವೈಯಕ್ತಿಕ ಸಂಬಂಧವನ್ನು ತಮ್ಮ ಜೀವನದಲ್ಲಿ ಹೊಂದಿರುವರು ಎಂದು ಹೇಳಲಾಗುತ್ತದೆ. ಇವರು ವ್ಯಾಪಾರ ಮಾಡುವಲ್ಲಿ ಒಳ್ಳೆಯ ಪ್ರತಿಭೆ ಹೊಂದಿರುವರು. ಇನ್ನೊಂದು ಬದಿಯಲ್ಲಿ ಮಚ್ಚೆಯ ಬಣ್ಣವು ಮಸುಕಾಗಿದ್ದರೆ ಈ ವ್ಯಕ್ತಿಯ ಒಡಹುಟ್ಟಿದವರು ದುರಾದೃಷ್ಟಕ್ಕೆ ಒಳಗಾಗುವರು ಅಥವಾ ಅನೈತಿಕ ಸಂಬಂಧದಲ್ಲಿ ಸಿಲುಕುವರು ಎಂದು ಹೇಳಲಾಗುತ್ತದೆ. ಇದು 33 ಅಥವಾ 34ರ ಹರೆಯದಲ್ಲಿ ಹೆಚ್ಚಾಗಿ ಇರುವುದು.

ಕಿವಿಎಲುಬಿನಲ್ಲಿ ಮಚ್ಚೆ

ಕಿವಿಎಲುಬಿನಲ್ಲಿ ಮಚ್ಚೆ

ವ್ಯಕ್ತಿಯೊಬ್ಬನ ಕಿವಿಎಲುಬಿನಲ್ಲಿ ಮಚ್ಚೆಯು ಕಾಣಿಸಿಕೊಂಡರೆ ಆಗ ಆಗ ಅದು ತುಂಬಾ ಅನನ್ಯ ಎಂದು ಪರಿಗಣಿಸಲಾಗುತ್ತದೆ. ಇದು ಆ ವ್ಯಕ್ತಿಗೆ ತುಂಬಾ ಅದೃಷ್ಟ ಮತ್ತು ಅದಕ್ಕೂ ಅಧಿಕವಾದ ಸುಖ ತಂದುಕೊಡಲಿದೆ. ಕಿವಿಎಲುಬಿನಲ್ಲಿ ಮಚ್ಚೆ ಇರುವಂತಹ ವ್ಯಕ್ತಿಗಳು ತುಂಬಾ ವಿನಯಶೀಲ ಮತ್ತು ದೀರ್ಘಕಾಲ ಬಾಳುವವರು ಆಗಿರುವರು. ಇವರಲ್ಲಿ ಯಾವತ್ತೂ ಹಣದ ಕೊರತೆಯು ಕಾಣಿಸದು. '

Most Read: ನಿಮ್ಮ ಅದೃಷ್ಟವನ್ನೇ ಬದಲಾಯಿಸುವ ಒಂದು 'ಮಚ್ಚೆ' ಯ ಕಥೆ!

ಮಂದಿರದಲ್ಲಿ ಮಚ್ಚೆ ಇದ್ದರೆ…

ಮಂದಿರದಲ್ಲಿ ಮಚ್ಚೆ ಇದ್ದರೆ…

ಬಾಹ್ಯರೂಪ ತಜ್ಞರ ಪ್ರಕಾರ ಮಂದಿರವು ಪ್ರಯಾಣಿಸುವಂತಹ ಅರಮನೆ ಎಂದು ಪರಿಗಣಿಸಲಾಗುತ್ತದೆ. ಇದು ಒಬ್ಬರ ಪ್ರಯಾಣ, ಭಡ್ತಿ ಮತ್ತು ವಲಸೆಯನ್ನು ಸೂಚಿಸುವುದು. ಮಚ್ಚೆಯು ಕಪ್ಪು ಮತ್ತು ಕಾಂತಿಯುತವಾಗಿದ್ದರೆ, ಆಗ ಇದನ್ನು ತುಂಬಾ ಅದೃಷ್ಟ ಎಂದು ಪರಿಗಣಿಸಲಾಗಿದೆ. ಇಂತಹ ವ್ಯಕ್ತಿಗಳು ಯಾವಾಗಲೂ ಬೇರೆಯವರಿಂದ ನೆರವು ಪಡೆಯುತ್ತಿರುತ್ತಾರೆ.

ಗಲ್ಲದ ಮೇಲೆ ಮಚ್ಚೆ

ಗಲ್ಲದ ಮೇಲೆ ಮಚ್ಚೆ

ವ್ಯಕ್ತಿಯ ಗಲ್ಲದ ಮೇಲೆ ಮಚ್ಚೆಯಿದ್ದರೆ ಇದು ಆ ವ್ಯಕ್ತಿಯ ವೃತ್ತಿಗೆ ತುಂಬಾ ಅದೃಷ್ಟ ಎಂದು ಪರಿಗಣಿಸಲಾಗಿದೆ. ಈ ವ್ಯಕ್ತಿಗಳು ತಮ್ಮ ವೃತ್ತಿಯಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಲಿರುವರು. ಇಂತಹ ಮಚ್ಚೆಗಳು ಇರುವಂತಹ ವ್ಯಕ್ತಿಗಳು ಯಾವಾಗಲೂ ಹೆಚ್ಚಿನ ಪ್ರೇರಣೆಯನ್ನು ಪಡೆದುಕೊಳ್ಳುವರು. ಇನ್ನೊಂದು ವಿಚಾರವೆಂದರೆ ಈ ವ್ಯಕ್ತಿಗಳು ತಮ್ಮ ವೃತ್ತಿಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯುವರು. ಇವರು ತಮ್ಮ ಜೀವನದಲ್ಲಿ ಒಳ್ಳೆಯ ನಾಯಕರಾಗಿಯು ಕಾಣಿಸಿಕೊಳ್ಳುವರು.

Most Read: ಮೈಮೇಲೆ ಈ 8 ಸ್ಥಳಗಳಲ್ಲಿ ಮಚ್ಚೆ ಇದ್ದವರಿಗೆ, ಸ್ವಲ್ಪ ಹಣದ ಸಮಸ್ಯೆ ಕಾಡುತ್ತದೆಯಂತೆ!

ಗದ್ದದ ಭಾಗದಲ್ಲಿ ಮಚ್ಚೆಗಳು

ಗದ್ದದ ಭಾಗದಲ್ಲಿ ಮಚ್ಚೆಗಳು

ಗದ್ದದ ಭಾಗದಲ್ಲಿರುವಂತಹ ಮಚ್ಚೆಯು ಸಂಪತ್ತಿನ ಸಂಕೇತವೆಂದು ಹೇಳಲಾಗುತ್ತದೆ. ಈ ಭಾಗದಲ್ಲಿ ಮಚ್ಚೆ ಇರುವಂತಹ ವ್ಯಕ್ತಿಯು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅದೃಷ್ಟವಂತರಾಗಿರುವರು. ಇಂತಹ ಮಚ್ಚೆ ಇರುವಂತಹ ವ್ಯಕ್ತಿಗಳು ಬೇರೆಯವರಿಂದ ತುಂಬಾ ಬೆಂಬಲ ಪಡೆಯುವರು. ಇದರ ಹೊರತಾಗಿ ಈ ವ್ಯಕ್ತಿಗಳು ಜೀವನದಲ್ಲಿ ಒಳ್ಳೆಯ ಅಭಿರುಚಿ ಹೊಂದಿರುವರು ಮತ್ತು ಜೀವನಪೂರ್ತಿ ಇವರಿಗೆ ಸಂಪತ್ತು ಸಿಗುವುದು.

English summary

Moles In These Places Are Considered To Be Lucky

According to experts, a few moles reveal a lot about your personalities. Having a mole in these specific places on your face is considered to be lucky. From the texture to the colour, a number of minute details matter when you study moles.Have you ever imagined why you started developing a mole in one of the most unexpected places on your body?
X
Desktop Bottom Promotion