For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ನಿಮಗೆ ತಿಳಿದಿರದ ಕಾನೂನು ಬಾಹಿರ ಸಂಗತಿಗಳು

|

ಒಂದು ದೇಶ, ಸಮಾಜ ಎಂದಮೇಲೆ ಅಲ್ಲಿ ಅನೇಕ ರೀತಿಯ ಕಟ್ಟುಪಾಡುಗಳು, ನೀತಿ-ನಿಯಮಗಳು ಇರುತ್ತವೆ. ಅವು ಸಮಾಜದ ಹಿತಕ್ಕಾಗಿ ದೇಶದ ಅಭಿವೃದ್ಧಿಗಾಗಿ ಎಂದು ಪರಿಗಣಿಸಲಾಗುವುದು. ಸಮಾಜದ ಹಾಗೂ ದೇಶದ ರೀತಿ-ನೀತಿಗಳನ್ನು ಅಲ್ಲಗಳೆದರೆ ಅಥವಾ ಅದರ ವಿರುದ್ಧವಾದ ನಡತೆಯನ್ನು ತೋರಿದಾಗ ಕಾನೂನು ರೀತಿಯಲ್ಲಿ ಶಿಕ್ಷೆಗೆ ಒಳಪಡಿಸಲಾಗುವುದು. ಇಂತಹ ನಿಯಮಗಳು ಕೇವಲ ಯಾವುದೋ ಒಂದು ದೇಶ ಅಥವಾ ಸಮಾಜಕ್ಕೆ ಸೀಮಿತವಾಗಿರುವುದರಿಲ್ಲ. ಪ್ರತಿಯೊಂದು ದೇಶ ಹಾಗೂ ಸಮಾಜದಲ್ಲೂ ಅವರದ್ದೇ ಆದ ವಿಭಿನ್ನ ಕಾನೂನುಗಳು ಹಾಗೂ ನಿಯಮಗಳು ಇರುತ್ತವೆ. ಅವುಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಹೇಳಲಾಗುವುದು.

ಭಾರತ ದೇಶ ವಿಶಾಲ ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಪಡೆದುಕೊಂಡ ದೇಶ. ಇಲ್ಲಿ ಅನೇಕ ಭಾಷೆಗಳು, ವೇಷ ಭೂಷಣಗಳು, ಜಾತಿ-ಪದ್ಧತಿ, ಸಂಸ್ಕೃತಿ, ಜೀವನ ಪದ್ಧತಿ ಎಲ್ಲವೂ ವಿಭಿನ್ನವಾಗಿರುತ್ತವೆ. ಅವರವರ ಪ್ರದೇಶದಲ್ಲಿ ಇರುವ ವಾತಾವರಣ ಹಾಗೂ ಆಚಾರ-ವಿಚಾರಗಳಿಗೆ ಅನುಗುಣವಾಗಿ ವಿವಿಧ ನಿಯಮಗಳನ್ನು ಸಹ ಒಳಗೊಂಡಿದೆ. ಇವುಗಳ ನಡುವೆಯೂ ಕೆಲವು ಸಾಮಾನ್ಯವಾದ ಅಥವಾ ಎಲ್ಲರಿಗೂ ಅನ್ವಯವಾಗುವಂತಹ ಕೆಲವು ಕಾನೂನುಗಳಿವೆ. ಅವುಗಳನ್ನು ಮೀರಿ ನಡೆಯಬಾರದಷ್ಟೆ.

ಹೌದು, ಭಾರತದಲ್ಲಿ ಕಾನೂನು ಬಾಹಿರವಾದ ಅನೇಕ ಸಂಗತಿಗಳಿವೆ. ಅವುಗಳನ್ನು ವಿರೋಧಿಸಿದರೆ ಅಥವಾ ಆ ನಿಯಮಗಳಿಗೆ ವಿರುದ್ಧವಾದ ವರ್ತನೆಯನ್ನು ತೋರಿದರೆ ಸಾಕಷ್ಟು ಶಿಕ್ಷೆ ಹಾಗೂ ಬಂಧನಗಳು ಸಂಭವಿಸುವ ಸಾಧ್ಯತೆಗಳಿವೆ. ಅವುಗಳ ಬಗ್ಗೆ ಸಾಕಷ್ಟು ಅರಿವು ಹಾಗೂ ಜ್ಞಾನ ನಮಗೆ ಇಲ್ಲ ಎಂದು ಹೇಳಬಹುದು. ಹಾಗಾದರೆ ಆ ಕಾನೂನು ಬಾಹಿರ ಸಂಗತಿಗಳು ಯಾವವು? ಕಾನೂನು ಬಾಹಿರ ಸಂಗತಿಗೆ ವಿರುದ್ಧವಾಗಿ ನಡೆದುಕೊಂಡರೆ ಯಾವ ಶಿಕ್ಷೆ ಸಿಗುವುದು ಎನ್ನುವುದರ ಕುರಿತು ಇನ್ನಷ್ಟು ಮಾಹಿತಿ ಹಾಗೂ ಜ್ಞಾನವನ್ನು ಪಡೆದುಕೊಳ್ಳುವ ಹಂಬಲ ನಿಮ್ಮದಾಗಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಓರಲ್ ಸೆಕ್ಸ್!

ಓರಲ್ ಸೆಕ್ಸ್!

ಐಪಿಸಿ ಕಾನೂನಿನ 377ನೇ ವಿಭಾಗದ ಅಡಿಯಲ್ಲಿ, "ಅಸ್ವಾಭಾವಿಕ ಲೈಂಗಿಕತೆಯನ್ನು"ಕಾನೂನು ಬಾಹಿರ ಎಂದು ಪರಿಗಣಿಸಲಾಗಿದೆ. ಈ ವಿಚಾರವು ಸಾಕಷ್ಟು ಜನರಿಗೆ ತಿಳಿದಿರದೇ ಇರಬಹುದು. ಅಸ್ವಾಭಾವಿಕ ಲೈಂಗಿಕತೆಯನ್ನು ಕೈಗೊಂಡ ದೂರು ದಾಖಲಾದರೆ ವ್ಯಕ್ತಿಯ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.

ರಾತ್ರಿ ಪಾಳಿಯಲ್ಲಿ ಮಹಿಳೆಯರಿಗೆ ಕೆಲಸ ಮಾಡಿಸುವುದು

ರಾತ್ರಿ ಪಾಳಿಯಲ್ಲಿ ಮಹಿಳೆಯರಿಗೆ ಕೆಲಸ ಮಾಡಿಸುವುದು

1948ರ ಆಕ್ಟ್ ಪ್ರಕಾರ ಮಹಿಳೆಯರನ್ನು ರಾತ್ರಿ ಪಾಳಿಗೆ ಅನ್ವಯಿಸಿ ಕೆಲಸ ಮಾಡಿಸುವುದು ಕಾನೂನು ಪ್ರಕಾರ ಅಪರಾದ. ಇದು ಸಾಕಷ್ಟು ಮಂದಿಗೆ ತಿಳಿದಿರದೆ ಇರಬಹುದು. ಬಿಪಿಓ ನೌಕರರಿಗೆ ತಿಳಿದಿದೆಯೇ ಎನ್ನುವುದು ಆಶ್ಚರ್ಯದ ಸಂಗತಿ.

ವೇಶ್ಯಾವಾಟಿಕೆ ಕಾನೂನು ಬಾಹಿರವಾಗದಿದ್ದರೂ ಹಣಕ್ಕಾಗಿ ನಡೆಸುವ ವೇಶ್ಯಾವಾಟಿಕೆ ಅಪರಾಧ

ವೇಶ್ಯಾವಾಟಿಕೆ ಕಾನೂನು ಬಾಹಿರವಾಗದಿದ್ದರೂ ಹಣಕ್ಕಾಗಿ ನಡೆಸುವ ವೇಶ್ಯಾವಾಟಿಕೆ ಅಪರಾಧ

ಭಾರತದಲ್ಲಿ ಕೆಲವು ನಗರಗಳು ಮತ್ತು ಪಟ್ಟಣಗಳನ್ನು ಕೆಂಪು ಬೆಳಕಿನ ಪ್ರದೇಶಗಳು ಎಂದು ಕರೆಯಲಾಗುತ್ತದೆ. ಅಂತಹ ಪ್ರದೇಶದಲ್ಲಿ ತಮಗೆ ಇಷ್ಟಬಂದವರ ಜೊತೆ ಏನನ್ನಾದರೂ ಮಾಡಬಹುದು. ಆದರೆ ವೇಶ್ಯಾವಾಟಿಕೆಯ ರೂಪದಲ್ಲಿ ಮಾರಾಟ ಅಥವಾ ವ್ಯವಹಾರ ರೀತಿಯಲ್ಲಿ ಹಣವನ್ನು ಸಂಪಾದಿಸುವ ಮಾರ್ಗಕ್ಕಾಗಿ ನಡೆಸುವ ದಂದೆಯನ್ನು ಅಪರಾಧ ಎಂದು ಪರಿಗಣಿಸಲಾಗಿದೆ.

ಆತ್ಮ ಹತ್ಯೆ!

ಆತ್ಮ ಹತ್ಯೆ!

ಐಪಿಸಿ ಕಾನೂನು 309ರ ಪ್ರಕಾರ ಯಾವುದೇ ವ್ಯಕ್ತಿಯು ಆತ್ಮ ಹತ್ಯೆಗೆ ಪ್ರಯತ್ನಿಸಿದರೆ ಅದು ಕಾನೂನು ಪ್ರಕಾರ ಅಪರಾಧ. ಅದಕ್ಕೆ ಕಾನೂನು ರೀತಿಯಲ್ಲಿ ಶಿಕ್ಷೆಯನ್ನು ನೀಡಲಾಗುವುದು. ಆತ್ಮ ಹತ್ಯೆ ಮಾಡಿಕೊಳ್ಳು ಕಾರಣರಾದ ವ್ಯಕ್ತಿಗಳಿದ್ದರೆ ಅವರಿರೂ ಶಿಕ್ಷೆ ವಿಧಿಸಲಾಗುವುದು.

 ರಸ್ತೆ ಬದಿಯಲ್ಲಿ ದಂತ ಪರೀಕ್ಷೆ

ರಸ್ತೆ ಬದಿಯಲ್ಲಿ ದಂತ ಪರೀಕ್ಷೆ

ಅಧ್ಯಾಯ 5ರ ಅನ್ವಯ 1948ರ ಆಕ್ಟ್‍ನ 49ನೇ ವಿಧಿಯ ಪ್ರಕಾರ ರಸ್ತೆ ಬದಿಯಲ್ಲಿ ದಂತ ಚಿಕಿತ್ಸೆ ಕೈಗೊಳ್ಳುವುದು ಕಾನೂನು ಪ್ರಕಾರ ಅಪರಾಧ. ರಸ್ತೆ ಬದಿಯಲ್ಲಿ ಅಕ್ರಮವಾಗಿ ಕಿವಿಗಳನ್ನು ಸ್ವಚ್ಛ ಗೊಳಿಸುವುದು, ಹಲ್ಲಿನ ಚಿಕಿತ್ಸೆ ಸೇರಿದಂತೆ ಇನ್ನಿತರ ಲಾಬಿ ದಂದೆಯನ್ನು ಕೈಗೊಂಡರೆ ಅದು ಅಪರಾಧ ಅಥವಾ ಕಾನೂನು ಬಾಹಿರವಾದ ಕೆಲಸ ಎನಿಸಿಕೊಳ್ಳುತ್ತದೆ. ಅದಕ್ಕೆ ಸೂಕ್ತ ಶಿಕ್ಷೆಯನ್ನು ಸಹ ವಿಧಿಸಲಾಗುವುದು.

ಗಾಳಿಪಟ ಹಾರಿಸುವುದು

ಗಾಳಿಪಟ ಹಾರಿಸುವುದು

1934ರ ಇಂಡಿಯನ್ ಏರ್‍ಕ್ರಾಫ್ಟ್ ಆಕ್ಟ್ ಪ್ರಕಾರ ವಿಮಾನವೊಂದು ಹಾರಲು ನಿಮಗೆ ಪರವಾನಗಿ ಬೇಕಾಗುತ್ತದೆ. ಅಂತೆಯೇ ಗಾಳಿಪಟ ಹಾರಿಸಲು ಸಹ ನೀವು ಪರವಾನಗಿ ಹೋಂದಿರಬೇಕಾಗುತ್ತದೆ. ಆದರೆ ಈ ಕಾನೂನು ಯಾರಿಗೂ ತಿಳಿದಿರದೆ ಇರುವ ವಿಷಯವಾಗಿರಬಹುದು.

English summary

Illegal Things That People Do In India

There are several things that are illegal in India. From flying a kite to even having oral sex is considered to be illegal. There are several other things that we often do but are not aware of the fact that these things are illegal in India.Find out about these illegal things that people do in India...
X
Desktop Bottom Promotion