For Quick Alerts
ALLOW NOTIFICATIONS  
For Daily Alerts

ಕತ್ತೆ ಹಾಲಿನ ಸೋಪ್ ಬಗ್ಗೆ ಕೇಳಿದ್ದೀರಾ? ಈ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು

|

ಕತ್ತೆ ಎಂದರೆ ಮನುಷ್ಯನಿಗೆ ಅದೊಂದು ದಡ್ಡ ಪ್ರಾಣಿ ಎಂದೇ ಅರ್ಥ. ಮನುಷ್ಯರಲ್ಲಿ ತುಂಬಾ ದಡ್ಡರಿರುವ ವ್ಯಕ್ತಿಯನ್ನು ಕತ್ತೆ ಎಂದು ಅಡ್ಡ ಹೆಸರಿನಿಂದ ಕೂಡ ಕರೆಯುವರು. ಆದರೆ ಕತ್ತೆ ಹಾಲನ್ನು ಯಾರಾದರೂ ಬಳಸಿರುವುದನ್ನು ನೀವು ಕೇಳಿದ್ದೀರಾ? ಹೌದು, ಕತ್ತೆ ಹಾಲನ್ನು ನೀವು ಬಳಸುವಂತಹ ಕೆಲವೊಂದು ಸೌಂದರ್ಯವರ್ಧಕ ಉತ್ಪನ್ನಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಮಾರುಕಟ್ಟೆಯಲ್ಲಿ ಇದು ಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ. ದೆಹಲಿ ಮೂಲದ ಒರ್ಗಾನಿಕೊ’ಎನ್ನುವ ಸ್ಟಾರ್ಟ್ ಅಪ್ ಕತ್ತೆ ಹಾಲಿನಿಂದ ಸೋಪುಗಳನ್ನು ತಯಾರಿಸಿ ಈಗ ಜನಪ್ರಿಯವಾಗಿದೆ. ಇತ್ತೀಚೆಗೆ ಚಂಡೀಗಢದಲ್ಲಿ ನಡೆದ ವುಮೆನ್ ಆಫ್ ಇಂಡಿಯಾ ಒರ್ಗಾನಿಕ್ ಫೆಸ್ಟಿವಲ್ ನಲ್ಲಿ ಕತ್ತೆ ಹಾಳಿನ ಸೋಪ್ ಎಲ್ಲರ ಗಮನಸೆಳೆದಿದೆ. ಈ ಬಗ್ಗೆ ನೀವು ಇನ್ನು ಹೆಚ್ಚಿನ ಮಾಹಿತಿ ಪಡೆಯಿರಿ.

ಕತ್ತೆ ಹಾಲಿನ ಸೋಪ್ ನ ಲಾಭಗಳು ಬಹಿರಂಗವಾಗಿದೆ

ಕತ್ತೆ ಹಾಲಿನ ಸೋಪ್ ನ ಲಾಭಗಳು ಬಹಿರಂಗವಾಗಿದೆ

ಒರ್ಗಾನಿಕೊ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿರುವಂತಹ ಪೂಜಾ ಕೌಲ್ ಎಂಬವರು ಹೇಳುವ ಪ್ರಕಾರ ಕತ್ತೆ ಹಾಲಿನಲ್ಲಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುವಂತಹ ಗುಣಗಳು ಇದೆ. ಇದು ಚರ್ಮಕ್ಕೆ ಪೋಷಣೆ ನೀಡುವುದು ಮಾತ್ರವಲ್ಲದೆ, ಶಮನಕಾರಿ ಗುಣಗಳು ಕೂಡ ಇದರಲ್ಲಿ ಇದೆ ಎಂದು ಹೇಳಲಾಗಿದೆ.

ಸೌಂದರ್ಯ ಲಾಭಗಳ ಹೊರತಾಗಿ ಇದರಲ್ಲಿ ಇನ್ನು ಹೆಚ್ಚಿಗೆ…

ಸೌಂದರ್ಯ ಲಾಭಗಳ ಹೊರತಾಗಿ ಇದರಲ್ಲಿ ಇನ್ನು ಹೆಚ್ಚಿಗೆ…

ಕತ್ತೆಯ ಹಾಲಿನಲ್ಲಿ ಇನ್ನು ಹೆಚ್ಚಿನ ಲಾಭಗಳು ಇದೆ ಎಂದು ಹೇಳಲಾಗಿದೆ. ಕತ್ತೆಯ ಹಾಲಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದರಿಂದಾಗಿ ಮೊಡವೆ, ಚರ್ಮದ ಸೋಂಕು ಮತ್ತು ಇಸುಬನ್ನು ಇದು ತಡೆಯುವುದು.

ಒಂದು ಲೀಟರ್ ಹಾಲಿನ ಬೆಲೆ

ಒಂದು ಲೀಟರ್ ಹಾಲಿನ ಬೆಲೆ

ಈ ಸೋಪಿಗೆ ಈಗ ಹೆಚ್ಚಿನ ಬೇಡಿಕೆ ಇರುವುದು ದಕ್ಷಿಣ ಭಾರತದ ರಾಜ್ಯಗಳಾಗಿರುವ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಎಂದು ಹೇಳಲಾಗಿದೆ. ಈ ರಾಜ್ಯಗಳ ಕೆಲವು ಭಾಗದಲ್ಲಿ ಕತ್ತೆ ಹಾಲನ್ನು ಕುಡಿಯುವ ಕಾರಣದಿಂದಾಗಿ ಇದರ ಲಾಭಗಳು ತಿಳಿದಿದೆ ಎಂದು ಹೇಳಲಾಗುತ್ತಿದೆ. ಒಂದು ಲೀಟರ್ ಕತ್ತೆ ಹಾಲಿಗೆ ಒಂದು ಸಾವಿರ ರೂಪಾಯಿ ಎಂದು ಅಂಕಿಅಂಶಗಳು ಹೇಳಿವೆ.

ಲೈಂಗಿಕ ಜೀವನ ಸುಧಾರಿಸುವುದು

ಲೈಂಗಿಕ ಜೀವನ ಸುಧಾರಿಸುವುದು

ಕತ್ತೆ ಹಾಲು ಲೈಂಗಿಕ ಜೀವನವನ್ನು ಸುಧಾರಣೆ ಮಾಡುವುದು. ಇಷ್ಟು ಮಾತ್ರವಲ್ಲದೆ ಇದು ಅಸ್ತಮಾ, ಸಂಧಿವಾತ, ಮಧುಮೇಹ ಮತ್ತು ಇತರ ಕೆಲವೊಂದು ಕಾಯಿಲೆಗಳ ಲಕ್ಷಣಗಳನ್ನು ಕಡಿಮೆ ಮಾಡುವುದು.

English summary

Everything You Need To Know About Donkey Milk Soap

A Delhi-based start-up 'Organiko' has gained sudden fame after the soaps made by them became a super hit. The soaps are made from donkey's milk and it has stolen the show at 'Women of India Organic Festival' in Chandigarh.Did you know that donkey milk soaps are the latest trend in the beauty world? The benefits and the cost of these soaps will leave you baffled.
X
Desktop Bottom Promotion