For Quick Alerts
ALLOW NOTIFICATIONS  
For Daily Alerts

ಶನಿ ಗ್ರಹದ ಒಂದು ದಿನದ ಅವಧಿ ಎಷ್ಟು ಗೊತ್ತೇ?

|

ಸೌರಮಂಡಲದಲ್ಲಿ ನಡೆಯುತ್ತಿರುವಂತಹ ಪ್ರತಿಯೊಂದು ವಿದ್ಯಮಾನಗಳು ಕೂಡ ತುಂಬಾ ಕುತೂಹಲಕಾರಿಯಾಗಿರುವುದು. ಇದರ ಬಗ್ಗೆ ಆಸಕ್ತಿ ಇರುವವರು ಖಂಡಿತವಾಗಿಯೂ ಇದರ ಪ್ರತಿಯೊಂದು ಬದಲಾವಣೆಗಳನ್ನು ಗಮನಿಸುತ್ತಲೇ ಇರಬಹುದು. ಅದರಲ್ಲೂ ವಿಜ್ಞಾನಿಗಳಿಗೆ ದಿನಕ್ಕೊಂದು ಹೊಸ ಹೊಸ ವಿಚಾರಗಳು ಸಿಗುತ್ತಲೇ ಇರುತ್ತದೆ.

ಇದರ ಬಗ್ಗೆ ಅಧ್ಯಯನ ಮಾಡುವವರು ಪ್ರತಿಯೊಂದು ಗ್ರಹ ಹಾಗೂ ಅದರಲ್ಲಿನ ದೈನಂದಿನ ಬದಲಾವಣೆಗಳನ್ನು ಗಮನಿಸುವರು. ವರದಿಗಳು ಹೇಳಿರುವ ಪ್ರಕಾರ ವಿಜ್ಞಾನಿಗಳು ಶನಿ ಗ್ರಹದಲ್ಲಿ ಒಂದು ದಿನದ ಸಮಯವೆಷ್ಟು ಎಂದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ...

ಇದರಲ್ಲಿರುವ ವೃತ್ತಗಳು ಅಡೆತಡೆ

ಇದರಲ್ಲಿರುವ ವೃತ್ತಗಳು ಅಡೆತಡೆ

ಶನಿ ಗ್ರಹದ ಸುತ್ತಲು ಇರುವಂತಹ ಆಯಸ್ಕಾಂತದಂತಹ ವೃತ್ತಗಳು ಮತ್ತು ಭೂಗಡಿ ಇಲ್ಲದೆ ಇರುವಂತಹ ಮೇಲ್ಮೈಯಿಂದಾಗಿ ಈ ಗ್ರಹವು ಯಾವ ಗತಿಯಲ್ಲಿ ತಿರುಗುತ್ತಿದೆ ಎಂದು ತಿಳಿಯಲು ತುಂಬಾ ಕಷ್ಟವಾಗುತ್ತಲಿತ್ತು.

ಈಗ ರಹಸ್ಯವನ್ನು ಬಗೆ ಹರಿಸಲಾಗಿದೆ

ಈಗ ರಹಸ್ಯವನ್ನು ಬಗೆ ಹರಿಸಲಾಗಿದೆ

ಈ ರಹಸ್ಯವನ್ನು ಭೇದಿಸಿರುವಂತಹ ಕ್ಯಾಸ್ಸಿನಿ ಡೇಟಾಗೆ ದೊಡ್ಡ ಮಟ್ಟದ ಧನ್ಯವಾದಗಳು. ಗ್ರಹದ ವೃತ್ತಗಳಲ್ಲಿ ಇರುವಂತಹ ಕೆಲವೊಂದು ವಸ್ತುಗಳು ಪಡೆದಿರುವಂತಹ ತಲ್ಲಣದಿಂದಾಗಿ ಶನಿ ಗ್ರಹದ ಒಳಗಿನ ಚಲನೆಗಳ ಬಗ್ಗೆ ತಿಳಿಯಲು ದಾರಿಯಾಗಿದೆ. ಮೊದಲ ಸಲ ವಿಜ್ಞಾನಿಗಳು ಶನಿಗ್ರಹದ ಗತಿಯ ಬಗ್ಗೆ ಒಂದೇ ದಿನದಲ್ಲಿ ತಿಳಿದುಕೊಂಡಿದ್ದಾರೆ. ಇದು ಸುಮಾರು 10 ಗಂಟೆ 33 ನಿಮಿಷ ಮತ್ತು 38 ಸೆಕೆಂಡುಗಳದ್ದಾಗಿರುವುದು.

Most Read:ಮುಖ ನೋಡಿದ ತಕ್ಷಣ ನಿಮ್ಮ ಮದುವೆ ಬಗ್ಗೆ ಹೇಳಬಹುದು!

 ಶನಿಗ್ರಹದ ದಿನವನ್ನು ನಾಸಾ ಬಹಿರಂಗಪಡಿಸಿದೆ

ಶನಿಗ್ರಹದ ದಿನವನ್ನು ನಾಸಾ ಬಹಿರಂಗಪಡಿಸಿದೆ

ನಾಸಾದ ಕ್ಯಾಸ್ಸಿನಿ ಬಾಹ್ಯಾಕಾಶ ನೌಕೆಯು ಅಂತಿಮವಾಗಿ ಶನಿ ಗ್ರಹದ ಒಂದು ದಿನದ ಅವಧಿಯನ್ನು ಬಹಿರಂಗಪಡಿಸಿದೆ. ಇದು ಹತ್ತುವರೆ ಗಂಟೆಗಿಂತಲೂ ಅಧಿಕವಾಗಿದೆ. ಇದು ಭೂಮಿಗಿಂತಲೂ ಹೆಚ್ಚಾಗಿದೆ. ಕ್ಯಾಲಿಫೋರ್ನಿಯಾ-ಸ್ಯಾಂಟಕ್ರಾಸ್ ಯೂನಿವರ್ಸಿಟಿ ಯ ವಿಜ್ಞಾನಿಗಳ ಪ್ರಕಾರ ಶನಿಗ್ರಹದಲ್ಲಿ ಒಂದು ವರ್ಷವು ಭೂಮಿಯ 29 ವರ್ಷಗಳಾಗಿರುವುದು! ಆದರೆ ದಿನವು ಕೇವಲ 10 ಗಂಟೆ, 33 ನಿಮಿಷ ಮತ್ತು 38 ಸೆಕೆಂಡುಗಳು ಆಗಿರುವುದು.

Most Read:2019ರಲ್ಲಿ ಗುರು ಗ್ರಹದ ಪ್ರಭಾವ-ಯಾವ್ಯಾವ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ ನೋಡಿ

ಹಿಂದಿನ ಅಧ್ಯಯನಗಳು ಏನು ಕಂಡುಕೊಂಡಿದ್ದವು

ಹಿಂದಿನ ಅಧ್ಯಯನಗಳು ಏನು ಕಂಡುಕೊಂಡಿದ್ದವು

ಹಿಂದಿನ ಕೆಲವೊಂದು ಅಧ್ಯಯನಗಳು ಶನಿ ಗ್ರಹದ ದಿನದ ಅವಧಿಯನ್ನು ಪತ್ತೆ ಹಚ್ಚಲು ಪ್ರಯತ್ನ ಮಾಡಿವೆ. ಇದರಲ್ಲಿ ಅದು ಹತ್ತು ಗಂಟೆ 39 ನಿಮಿಷ ಮತ್ತು 23 ಸೆಕೆಂಡುಗಳು ಎಂದು ಹೇಳಿತ್ತು. ವೃತ್ತದಲ್ಲಿನ ರೇಡಿಯೋ ತರಂಗಗಳಿಂದ ವಯೋಜರ್ ಎನ್ನುವ ಬಾಹ್ಯಾಕಾಶ ನೌಕೆಯು 1980ರಲ್ಲಿ ಇದನ್ನು ಪತ್ತೆ ಮಾಡಿತ್ತು.

ಇದು 20 ನಿಮಿಷಗಳ ಸಾಧನೆ

ಇದು 20 ನಿಮಿಷಗಳ ಸಾಧನೆ

ಶನಿಗ್ರಹದಲ್ಲಿ ದಿನದ ಅವಧಿಯನ್ನು ನಿಖರವಾಗಿ ತಿಳಿದುಕೊಳ್ಳಲು ಸುಮಾರು 20 ವರ್ಷಗಳ ಸಾಧನೆಯಿಂದ ಸಾಧ್ಯವಾಗಿದೆ. 1997ರಲ್ಲಿ ಕ್ಯಾಸ್ಸಿನಿಯನ್ನು ಫ್ಲೋರಿಡಾ ಕೇಪ್ ಕ್ಯಾನವೆರಲ್ ನಿಂದ ಕಳುಹಿಸಲಾಗಿತ್ತು ಎಂದು ನಾಸಾ ಹೆಳಿದೆ ಮತ್ತು ಏಳು ವರ್ಷ ಅದು ಪ್ರಯಾಣದಲ್ಲಿ ಕಳೆದಿದೆ ಮತ್ತು ಇದರ ಬಳಿಕ 13 ವರ್ಷ ಅದು ಶನಿಗ್ರಹಕ್ಕೆ ಸುತ್ತು ಹಾಕಿ ಮಾಹಿತಿ ಸಂಗ್ರಹಿಸಿದೆ ಎಂದು ಹೇಳಿದೆ.

English summary

Ever Wondered How Long A Day Is On Saturn?

NASA's Cassini spacecraft has finally revealed that a day on Saturn is just over 10 and-a-half-hours-long than that on earth. Scientists led by the University of California-Santa Cruz found that a year on Saturn planet is 29 Earth years! Apparently, the day lasts only 10 hours, 33 minutes and 38 seconds long.
X
Desktop Bottom Promotion