For Quick Alerts
ALLOW NOTIFICATIONS  
For Daily Alerts

ಎಡ ಕೈ ಮೂಳೆ ಮುರಿದರೆ ಬಲದ ಕೈಗೆ ಪ್ಲಾಸ್ಟರ್ ಹಾಕಿದ ವೈದ್ಯರು!!

|

ನಾವು ಏನಾದರೂ ಆಸ್ಪತ್ರೆಗೆ ಹೋದರೆ ಆಗ ಅಲ್ಲಿ ವೈದ್ಯರು ನಮ್ಮ ಸಮಸ್ಯೆಯ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕು. ಎಲ್ಲಿ ನೋವಿದೆ ಎನ್ನುವ ಬಗ್ಗೆ ರೋಗಿಯಿಂದ ಮಾಹಿತಿ ಪಡೆದುಕೊಂಡ ಬಳಿಕ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಕೆಲವೊಂದು ಸಮಸ್ಯೆಗಳು ಕಾಡುವುದು. ಹೀಗೆ ವೈದ್ಯಕೀಯ ಲೋಕದಲ್ಲಿ ಕೆಲವೊಂದು ಸಲ ತಪ್ಪುಗಳು ನಡೆಯುವುದು ಸಹಜ. ಯಾಕೆಂದರೆ ವೈದ್ಯರು ಕೂಡ ಮನುಷ್ಯರಾಗಿರುವ ಕಾರಣದಿಂದಾಗಿ ತಪ್ಪು ನಡೆಯುತ್ತದೆ. ಇನ್ನು ಕೆಲವು ಸಲ ದೀರ್ಘಕಾಲದ ತನಕ ಪಾಳಿಯಲ್ಲಿರುವುದು ಮತ್ತು ಉದಾಸೀನದಿಂದಲೂ ತಪ್ಪುಗಳು ನಡೆಯುವುದು.

ಇಲ್ಲೊಂದು ಇಂತಹ ಘಟನೆ ಬಗ್ಗೆ ನಿಮಗೆ ಹೇಳಲಿದ್ದೇವೆ. ಅದೇನೆಂದರೆ ಇಲ್ಲಿ ಬಾಲಕನೊಬ್ಬ ಕೈ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗುತ್ತಾನೆ. ಆದರೆ ಆತನ ಗಾಯವಿಲ್ಲದ ಕೈಗೆ ವೈದ್ಯರು ಪ್ಲಾಸ್ಟರ್ ಹಾಕಿರುವರು. ಈ ನಿರ್ಲಕ್ಷ್ಯದ ಬಗ್ಗೆ ನೀವು ಈ ಲೇಖನದಲ್ಲಿ ಓದಿಕೊಂಡು ತಿಳಿಯಿರಿ.

ಬಿಹಾರದ ದರ್ಬಾಂಗ್ ಜಿಲ್ಲೆಯಲ್ಲಿರುವ ಅತೀ ದೊಡ್ಡ ಸರ್ಕಾರ ಆಸ್ಪತ್ರೆಯಲ್ಲಿ ಈ ಘಟನೆಯು ನಡೆದಿದೆ. ಏಳರ ಹರೆಯದ ಬಾಲಕ ಫೈಝನ್ ಮರದಿಂದ ಬಿದ್ದು ಕೈಗೆ ಗಾಯ ಮಾಡಿಕೊಂಡಿದ್ದಾನೆ. ಆತನ ಮೂಳೆ ಮುರಿದಿದೆ ಮತ್ತು ಆತನನ್ನು ತಕ್ಷಣವೇ ದರ್ಬಾಂಗ್ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್(ಡಿಎಂಸಿಎಚ್)ಗೆ ದಾಖಲಿಸಲಾಯಿತು.

ಮರದಿಂದ ಬಿದ್ದ ಬಾಲಕನ ಎಡ ಕೈಯ ಮೂಳೆ ಮುರಿತಕ್ಕೆ ಒಳಗಾಗಿತ್ತು ಮತ್ತು ಆತನ ಕೈಗೆ ಪ್ಲಾಸ್ಟರ್ ಮಾಡುವ ಅಗತ್ಯವಿತ್ತು. ಆದರೆ ವೈದ್ಯರು ನಿರ್ಲಕ್ಷ್ಯದಿಂದಾಗಿ ಬಾಲಕನ ಬಲದ ಕೈಗೆ ಪ್ಲಾಸ್ಟರ್ ಹಾಕಿ ಬಿಟ್ಟರು. ಬಾಲಕನು ತನ್ನ ಎಡದ ಕೈಗೆ ನೋವಾಗಿದೆ ಎಂದು ಹೇಳುತ್ತಲಿದ್ದರೂ ವೈದ್ಯರು ಮಾತ್ರ ಇದನ್ನು ಪರಿಗಣಿಸಲೇ ಇಲ್ಲ.

ಎಲ್ಲವೂ ಸರಿಯಾಗಿಯೇ ಇದ್ದ ಬಲ ಕೈಗೆ ವೈದ್ಯರು ಪ್ಲಾಸ್ಟರ್ ಹಾಕಿದರು. ಎಕ್ಸ ರೇಯಲ್ಲಿ ಕೂಡ ಬಾಲಕನ ಎಡ ಕೈಯ ಮೂಳೆ ಮುರಿತಕ್ಕೆ ಒಳಗಾಗಿರುವುದು ತಿಳಿದುಬರುತ್ತಿತ್ತು. ಆದರೂ ವೈದ್ಯರು ಇದನ್ನೆಲ್ಲಾ ಕಡೆಗಣಿಸಿ ಬಲ ಕೈಗೆ ಪ್ಲಾಸ್ಟರ್ ಹಾಕಿಬಿಟ್ಟರು. ವೈದ್ಯರು ಪ್ಲಾಸ್ಟರ್ ಹಾಕುವ ವೇಳೆ ಬಾಲಕನು ಅವರ ತಪ್ಪಿನ ಬಗ್ಗೆ ಹೇಳಿದರೂ ಅದನ್ನು ಕೂಡ ವೈದ್ಯರು ಕಡೆಗಣಿಸಿದರು. ವೈದ್ಯರು ಬಾಲಕನ ಮಾತನ್ನು ಕೂಡ ನಿರ್ಲಕ್ಷ್ಯ ಮಾಡಿದರು.

ಇನ್ನೊಬ್ಬ ವೈದ್ಯರು ನೀಡಿರುವಂತಹ ವರದಿಯಲ್ಲಿ ಕೂಡ ಬಾಲಕನ ಎಡದ ಕೈಯ ಮೂಳೆ ಮುರಿತಕ್ಕೆ ಒಳಗಾಗಿದೆ ಎಂದು ಸ್ಪಷ್ಟವಾಗಿ ಬರೆಯಲಾಗಿತ್ತು. ಬಾಲಕನ ಕುಟುಂಬಸ್ಥರು ಈ ಬಗ್ಗೆ ಆಸ್ಪತ್ರೆಯ ಅಧೀಕ್ಷಕರಿಗೆ ದೂರು ನೀಡಿದರು ಮತ್ತು ಅವರು ಈ ಬಗ್ಗೆ ತನಿಖೆ ಮಾಡಿ ವೈದ್ಯರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಈ ಘಟನೆಗೆ ತಾನು ಕಾರಣವೆಂದು ವೈದ್ಯರು ಜವಾಬ್ದಾರಿ ತೆಗೆದುಕೊಂಡಿದ್ದಾರೆ.

ವೈದ್ಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬಾಲಕನ ಮನೆಯವರು ಒತ್ತಾಯಿಸಿದ್ದಾರೆ. ಬಿಹಾರದ ಸರ್ಕಾರಿ ಆಸ್ಪತ್ರೆಗಳು ಮತ್ತು ಇಲ್ಲಿನ ವೈದ್ಯರ ನಿರ್ಲಕ್ಷ್ಯಗಳು ಆಗಾಗ ವರದಿಯಾಗುತ್ತಲೇ ಇದೆ. ಇಲ್ಲಿ ಮಕ್ಕಳು ಮೆದುಳು ಜ್ವರದಿಂದ ಬಳಲುತ್ತಿರುವುದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಲಿದೆ.

English summary

Doctor Plasters Young Boy’s Nonfractured Arm!

The medical negligence case of an injured boy was brought to notice of the authorities at the Darbhanga Medical College and Hospital (DMCH) by his parents. The boy had his left arm broken and he needed a plaster. The doctor was negligent and instead plastered the wrong arm despite the child's protest.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X