For Quick Alerts
ALLOW NOTIFICATIONS  
For Daily Alerts

ರೋಗಿಯ ಕಿವಿಯೊಳಗೆ ಜೀವಂತ ಹಲ್ಲಿಯೊಂದು ಪತ್ತೆ ಹಚ್ಚಿದ ವೈದ್ಯರು!

|

ಕಿವಿಯೊಳಗೆ ಸಣ್ಣ ಕೀಟಗಳು ಅವರು ಇರುವೆ ಹೋಗುವುದು ಇದೆ. ಇದರಿಂದ ನಮಗೆ ತುಂಬಾ ಕಿರಿಕಿರಿ ಆಗುವುದು. ಆದರೆ ಅದಕ್ಕಿಂತ ದೊಡ್ಡದು ಏನಾದರೂ ಕಿವಿಯೊಳಗೆ ಹೋದರೆ ಆಗ ನಮಗೆ ತುಂಬಾ ಸಮಸ್ಯೆ ಕಾಡುವುದು. ಇಂತಹ ಒಂದು ಘಟನೆಯ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಥಾಯ್ಲೆಂಡ್ ನ ವೈದ್ಯರೊಬ್ಬರಿಗೆ ರೋಗಿಯ ಕಿವಿಯೊಳಗೆ ಹಲ್ಲಿಯೊಂದು ಪತ್ತೆಯಾಗಿದೆ. ಫೇಸ್ ಬುಕ್ ನಲ್ಲಿ ಈ ಬಗ್ಗೆ ತನ್ನ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

ತಾನು ಉದ್ಯೋಗಕ್ಕೆ ಸೇರಿದ ಮೊದಲ ದಿನವೇ ಈ ಘಟನೆಯು ನಡೆದಿದೆ. ಆ ವೈದ್ಯೆ ವಾರಣ್ಯ ನ್ಗಂತವೀ ಎಂಬವರೇ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಭೀತಿ ಮೂಡಿಸುವ ದಿನದ ಬಗ್ಗೆ ಅವರು ಇಲ್ಲಿ ಬರೆದಿದ್ದಾರೆ. ಆದರೆ ಈ ಪೋಸ್ಟ್ ನ್ನು ಅವರು ಈಗ ತೆಗೆದುಹಾಕಿದ್ದಾರೆ. ರೋಗಿಯ ಕಿವಿಯೊಳಗೆ ಹಲ್ಲಿಯೊಂದು ಪತ್ತೆಯಾಗಿರುವುದನ್ನು ವಾರಣ್ಯ ನ್ಗಂತವೀ ಅವರು ಹಂಚಿಕೋಂಡಿದ್ದಾರೆ. ಆಸ್ಪತ್ರೆಗೆ ಬಂದ ರೋಗಿಯೊಬ್ಬ ತನ್ನ ಕಿವಿಯಲ್ಲಿ ಅತಿಯಾದ ನೋವು ಇದೆ ಎಂದು ಹೇಳಿದ್ದಾನೆ. ಆ ವ್ಯಕ್ತಿಯ ಕಿವಿಯನ್ನು ಪರೀಕ್ಷೆ ಮಾಡಲು ಆಕೆ ಓಟೊಸ್ಕೋಪ್ ಬಳಸಿದ ವೇಳೆ ಕಿವಿಯೊಳಗೆ ಏನೋ ತೆವಳುತ್ತಿರುವುದು ಕಂಡುಬಂದಿದೆ. ತುಂಬಾ ಹತ್ತಿರದಿಂದ ನೋಡಿದ ವೇಳೆ ಆಕೆಗೆ ಇದು ಹಲ್ಲಿ ಎಂದು ತಿಳಿದುಬಂದಿದೆ.

ಇಷ್ಟು ಸಣ್ಣ ಕಿವಿಯೊಳಗೆ ಅಷ್ಟು ದೊಡ್ಡ ಹಲ್ಲಿಯು ತೆವಳುವುದು ಹೇಗೆ ಎಂದು ಆಕೆಗೆ ಮೊದಲ ಸಲ ತುಂಬಾ ಗೊಂದಲವಾಗಿದೆ.

ಕಿವಿಯೊಳಗೆ ಕೆಲವು ಹನಿ ಆ್ಯಂಟಿ ಬಯೋಟಿಕ್ ಹಾಕಿ ಆ ರೋಗಿಯು ತಲೆಯನ್ನು ಓರೆಯಾಗಿಸಲು ಹೇಳಿ ಆ ವೈದ್ಯೆ ಹಲ್ಲಿಯನ್ನು ತೆಗೆಯಲು ಮೊದಲು ಪ್ರಯತ್ನ ಮಾಡಿದರು. ಆದರೆ ಇದು ಕೆಲಸ ಮಾಡಲಿಲ್ಲ ಮತ್ತು ಆಕೆ ನರ್ಸ್ ನೆರವಿನಿಂದ ಚಿಮುಟಗಳನ್ನು ಬಳಸಿಕೊಂಡು ಆ ಹಲ್ಲಿಯನ್ನು ಹೊರಗೆ ತೆಗೆದಿದ್ದಾರೆ.

ಎರಡು ದಿನಗಳಿಂದ ಕಿವಿಯೊಳಗೆ ಇದ್ದ ಹಲ್ಲಿಯು ಜೀವಂತವಾಗಿಯೇ ಹೊರಗೆ ಬಂದಿದೆ ಹಲ್ಲಿಯನ್ನು ಕಿವಿಯನ್ನು ಹೊರಗೆ ತೆಗೆದರೂ ಆ ವ್ಯಕ್ತಿಗೆ ಕಿವಿಯ ತಜ್ಞರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಿದ್ದಾರೆ. ಯಾಕೆಂದರೆ ಹಲ್ಲಿಯ ಬಾಲ ಅಥವಾ ಬೇರೆ ಯಾವುದೇ ಭಾಗವು ಅಲ್ಲಿ ಉಳಿದಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಪರೀಕ್ಷೆ ನಡೆಸಿದ ಬಳಿಕ ಅಂತಹ ಯಾವುದೇ ತುಂಡುಗಳು ಉಳಿದುಕೊಂಡಿಲ್ಲ ಎಂದು ಸ್ಪಷ್ಟವಾಗಿದೆ. ಫೇಸ್ ಬುಕ್ ನಿಂದ ಆ ವೈದ್ಯರು ಈ ಪೋಸ್ಟ್ ನ್ನು ಯಾಕೆ ತೆಗೆದಿರುವರು ಎಂದು ತಿಳಿದಿಲ್ಲ. ಆದರೆ ಹಲ್ಲಿಯನ್ನು ಹೊರಗೆ ತೆಗೆದಿರುವುದರಿಂದ ಖಂಡಿತವಾಗಿಯೂ ಆ ರೋಗಿಯು ವೈದ್ಯರಿಗೆ ಕೃತಜ್ಞತೆ ಸಲ್ಲಿಸಿರಬಹುದು.

English summary

Doctor Found A Live Lizard In The Patient’s Ear

A young doctor named Varanya Nganthavee revealed in a Facebook post about her first-day experience where she handled the bizarre case of a live lizard residing in the patient's ear. She revealed that she had removed the creepy creature with a pair of tweezers. The most shocking fact about the incident was that the lizard came out alive after it was stuck for 2 days!
X
Desktop Bottom Promotion