Just In
Don't Miss
- News
ಅನರ್ಹ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು?
- Movies
ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್
- Technology
ಶಿಯೋಮಿ 'ರೆಡ್ಮಿ ಕೆ30' ಸ್ಮಾರ್ಟ್ಫೋನ್ ಬಿಡುಗಡೆ!.ಬೆಲೆ ಎಷ್ಟು?.ಫೀಚರ್ಸ್ ಏನು?
- Automobiles
ಮೊದಲ ಬಾರಿಗೆ ಪ್ರದರ್ಶಿತವಾದ ಹೊಸ ತಲೆಮಾರಿನ ಪಜೆರೊ ಸ್ಪೋರ್ಟ್
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ದೇವಸ್ಥಾನದ ಆವರಣಕ್ಕೆ ಬಂದ ಮೊಸಳೆಯನ್ನೇ ಪೂಜಿಸಿದರು ಜನರು!
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಪ್ರಾಣಿ ಹಾಗೂ ಪಕ್ಷಿಗಳು ಯಾವುದಾದರೂ ದೇವ ದೇವತೆಗಳಿಗೆ ಸಂಬಂಧಿಸಿದ್ದಾಗಿದೆ. ಈ ಪ್ರಾಣಿ ಪಕ್ಷಿಗಳು ಅವರ ವಾಹನವಾಗಿರುವುದು. ಹೀಗಾಗಿ ಮನುಷ್ಯರು ಕೂಡ ಅದನ್ನು ಪೂಜಿಸಿಕೊಂಡು ಬರುತ್ತದೆ. ಮುಖ್ಯವಾಗಿ ಈಶ್ವರನ ದೇವಸ್ಥಾನದಲ್ಲಿರುವಂತಹ ನಂದಿ, ಗಣಪತಿ ವಾಹನ ಇಲಿ, ಸುಬ್ರಹ್ಮಣ್ಯನ ದೇವರು ನವಿಲು ಹೀಗೆ ಹಲವಾರು ಉದಾಹರಣೆಗಳು ಇವೆ. ಹಿಂದೂ ಧರ್ಮದಲ್ಲಿ ಗೋವಿಗೂ ವಿಶೇಷವಾದ ಮಹತ್ವವಿದೆ. ಗೋವನ್ನು ದೇವತೆ ಎಂದೇ ಪೂಜಿಸಲಾಗುತ್ತದೆ ಮತ್ತು ಅದಕ್ಕೆ ಆಹಾರ ನೀಡುವುದು ಪುಣ್ಯದ ಕೆಲಸ ಎಂದೇ ಭಾವಿಸಲಾಗಿದೆ. ಆದರೆ ತುಂಬಾ ಅಪಾಯಕಾರಿ ಆಗಿರುವಂತಹ ಪ್ರಾಣಿಯನ್ನು ಪೂಜಿಸಿದರೆ ಹೇಗಿರಬಹುದು ಎಂದು ನೀವು ಊಹಿಸಿಕೊಳ್ಳಿ.
Most Read: ಥೈಲ್ಯಾಂಡ್ನಲ್ಲಿ ಮೊಸಳೆಯ ಚರ್ಮಕ್ಕೆ ಭಾರೀ ಬೇಡಿಕೆಯಂತೆ! ಯಾಕೆ ಗೊತ್ತೇ?
ಆದರೆ ಇಂತಹ ಒಂದು ಅಪಾಯಕಾರಿ ಪ್ರಾಣಿಯನ್ನು ಭಾರತೀಯರಾಗಿರುವಂತಹ ನಾವು ಪೂಜಿಸುತ್ತಿದ್ದೇವೆ. ಗುಜರಾತ್ ನ ಮಹಿಸಾಗರ್ ಜಿಲ್ಲೆಯ ಪಲ್ಲ ಗ್ರಾಮದಲ್ಲಿರುವ ಖೊಡಿಯಾರ್ ಮಾತಾ ದೇವಾಲಯದಲ್ಲಿ ಅಪಾಯಕಾರಿ ಆದ ಮೊಸಳೆಯನ್ನು ಪೂಜಿಸಲಾಗಿದೆ.
ಖೊಡಿಯಾರ್ ದೇವಾಲಯದ ಆವರಣದಲ್ಲಿ ಸಂಜೆ ವೇಳೆಗೆ ಈ ಮೊಸಳೆಯು ಕಾಣಿಸಿಕೊಂಡಿದೆ. ಖೊಡಿಯರ್ ದೇವಸ್ಥಾನವು ಖೊಡಿಯಾ ಮಾತಾ'ವನ್ನು ಪೂಜಿಸುತ್ತಾರೆ. ಮೊಸಳೆಯು ಖೊಡಿಯಾರ್ ದೇವಿಯ ವಾಹನವೆಂದು ನಂಬಲಾಗಿದೆ. ಸಂಜೆ ವೇಳೆ ಬಂದ ಈ ಮೊಸಳೆಯನ್ನು ನೋಡಲು ದೂರದ ಊರುಗಳಿಂದಲೂ ಭಕ್ತರು ಬಂದು ಮೊಸಳೆಯನ್ನು ಪೂಜೆ ಮಾಡಿದರು.
ಹಸಿವಾದ ಮೊಸಳೆಯು ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಇಲ್ಲಿನ ಜನರು ಮಾತ್ರ ಭಯಭೀತರಾಗಿಲ್ಲ. ಮೊಸಳೆ ಬಗ್ಗೆ ಭೀತಿ ಪಡುವ ಬದಲು ಸ್ಥಳೀಯರು ತುಂಬಾ ಭಿನ್ನ ಪ್ರತಿಕ್ರಿಯೆ ನೀಡಿರುವರು. ಮೊಸಳೆಯ ಸುತ್ತಲು ಸೇರುವ ಜನರು ಅದಕ್ಕೆ ಪ್ರಾರ್ಥನೆ ಮಾಡಿ ಬಳಿಕ ಆರತಿ ಬೆಳಗುವರು. ಅಪರೂಪದ ಅತಿಥಿಯೊಬ್ಬರು ದೇವಸ್ಥಾನಕ್ಕೆ ಬಂದಿರುವ ಬಗ್ಗೆ ಅರಣ್ಯ ಇಲಾಖೆಗೆ ತಿಳಿದಾಗ ಅವರು ನೇರವಾಗಿ ಅಲ್ಲಿಗೆ ಹೋಗಿ ಅದನ್ನು ರಕ್ಷಿಸಲು ಬಯಸಿದರು.
Most Read: ಮೊಸಳೆ ಸಾವಿನ ದುಃಖದಲ್ಲಿ ಅಡುಗೆ ಮಾಡದ ಗ್ರಾಮಸ್ಥರು!
ಮಹಿಸಾಗರ್ ನ ಅರಣ್ಯ ಉಪ ಸಂರಕ್ಷಣಾಧಿಕಾರಿಯಾಗಿರುವ ಆರ್ ಎಂ ಪರ್ಮಾರ್ ಅವರು ಹೇಳುವ ಪ್ರಕಾರ, ಈ ಮೊಸಳೆಯನ್ನು ರಕ್ಷಿಸಲು ಜನರು ಸುಮಾರು ಎರಡು ಗಂಟೆ ಕಾಲ ವಿಳಂಬ ಮಾಡಿದರು. ಯಾಕೆಂದರೆ ಜನರು ಕೊನೇ ಕ್ಷಣದವರೆಗೆ ಮಂದಿರಕ್ಕೆ ದೌಡಾಯಿಸಿಕೊಂಡು ಬಂದು ಮೊಸಳೆಯ ಪ್ರಾರ್ಥನೆಯಲ್ಲಿ ತೊಡಗಿದ್ದರು. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಲು ಬಯಸದೆ ಇದ್ದ ಕಾರಣದಿಂದಾಗಿ ಅಧಿಕಾರಿಗಳು ಎರಡು ಗಂಟೆಗಳ ಕಾಲ ಕಾಯಬೇಕಾಯಿತು. ಅದಾಗ್ಯೂ, ಇದರ ಬಳಿಕ ಅಧಿಕಾರಿಗಳು ಹತ್ತಿರದಲ್ಲೇ ಇರುವ ಕೊಳವೊಂದಕ್ಕೆ ಇದನ್ನು ಬಿಟ್ಟುಬಿಟ್ಟರು.