For Quick Alerts
ALLOW NOTIFICATIONS  
For Daily Alerts

ನವ ಜೋಡಿಯ ಈ ಹಾಡು ಇಂದು ವೈರಲ್ !!!

|

"ಮದುವೆಯ ಈ ಬಂಧ ಅನುರಾಗದ ಅನುಬಂಧ " ಎಂಬಂತೆ ಮದುವೆ ಸಂಭ್ರಮ ಕೇವಲ ಜೋಡಿಯಾಗಲಿಕ್ಕೆ ಹೊರಟಿರುವವರಿಗೆ ಮಾತ್ರವೇ ಖುಷಿ ತರುವ ವಿಚಾರವಲ್ಲ . ಬದಲಿಗೆ ವರನ ಕಡೆಯವರಿಗೆ , ವಧುವಿನ ಕಡೆಯವರಿಗೆ , ಬಂಧು ಭಾಂದವರಿಗೆ , ಸ್ನೇಹಿತರಿಗೆ , ಅಣ್ಣ ತಮ್ಮಂದಿರಿಗೆ , ಅಕ್ಕ ತಂಗಿಯರಿಗೆ ಹೀಗೆ ಎಲ್ಲರಿಗೂ ಆಗಸದ ತುತ್ತತುದಿಯವರೆಗೂ ಎನ್ನುವಷ್ಟು ಹೇಳತೀರದ ಮತ್ತು ಎಂದಿಗೂ ಮರೆಯಲಾರದ ಸಂಭ್ರಮ. ವಧು ವರರು ನಾವೂ ಎಲ್ಲರಂತೆ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಡುತ್ತಿದ್ದೇವೆ ಎಂಬ ಸಂಭ್ರಮ ದಲ್ಲಿದ್ದರೆ, ಇತರರು ನಮ್ಮ ಮನೆಯಲ್ಲಿ ಒಂದು ದೊಡ್ಡ ಮತ್ತು ಎಲ್ಲರೂ ಕಣ್ತುಂಬಿಕೊಳ್ಳುವಂತಹ ಶುಭ ಕಾರ್ಯ ನಡೆಯುತ್ತಿದೆಯಲ್ಲಾ ಎಂಬ ಖುಷಿಯ ಆಚರಣೆಯಲ್ಲಿರುತ್ತಾರೆ.

ದೂರದ ನೆಂಟರು ಸ್ನೇಹಿತರು ಎಲ್ಲರೂ ಬಂದು ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿ ಒಟ್ಟುಗೂಡಿ ಅತ್ಯಂತ ಸಂತೋಷದಿಂದ ವಧುವರರಿಗೆ ಧಾರೆಯೆರೆಯುತ್ತಾರೆ . ಮದುವೆಯ ನಂತರ ಛತ್ರ ಖಾಲಿ ಮಾಡಿ ಎಲ್ಲರೂ ಅವರವರ ಮನೆಗೆ ಹೋದರೆ ಗಂಡಿನ ಮನೆಯವರು ಹೆಣ್ಣನ್ನು ಮನೆ ತುಂಬಿಸಿಕೊಳ್ಳುತ್ತಾರೆ. ಇದು ಎಲ್ಲಾ ಕಡೆಯಲ್ಲೂ ನಡೆಯುವ ಮಾಮೂಲಿ ವಿಷಯ.

Most Read: ಮಹಿಳೆಯ ಗಂಟಲಿನಲ್ಲಿ ಸ್ಟೀಲ್‌ನ ಚಮಚ ಸಿಲುಕಿಕೊಂಡಿತು! ಮುಂದೆ ಏನಾಯಿತು ಗೊತ್ತೇ?

Couple’s Wedding Song Goes Viral

ನಾವು ಇಲ್ಲಿ ಹೇಳಲು ಹೊರಟಿರುವುದು ಇಂತಹದೇ ಒಂದು ಸಂದರ್ಭ . ಆದರೆ ಇಲ್ಲಿ ಮದುವೆಯಾಗಿ ಗಂಡನ ಮನೆ ಸೇರಿದ ಹೆಣ್ಣುಮಗಳು ತನ್ನ ಗಂಡನಿಗೆ ತನ್ನ ಅತ್ತೆ ಮಾವ ತನ್ನ ಮುಂದಿನ ಸಂಸಾರದ ಬಗ್ಗೆ ತಮಾಷೆಯಿಂದ ಕೀಟಲೆ ಮಾಡುತ್ತಾ ಅದನ್ನು ಒಂದು ಹಾಡಿನ ರೂಪದಲ್ಲಿ ಹೊರತರುತ್ತಾಳೆ . ಈಗಂತೂ ಇಂಟರ್ನೆಟ್ ನಲ್ಲಿ ಈ ಹಾಡಿನದೇ ಒಂದು ಹವಾ !!! ಅಂತರ್ಜಾಲದಲ್ಲಿ ಒಂದು ಹೊಸ ಅಲೆಯನ್ನೇ ಸೃಷ್ಟಿಸಿದ ಹಾಡಿದು . ಎಲ್ಲಾ ಯುವಜೋಡಿಗಳ ಬಾಯಲ್ಲಿ ಗುನುಗುತ್ತಿರುವ ಹಾಡಿದು . ಈ ಹಾಡು ಹಿಂದಿ ಮತ್ತು ಪಂಜಾಬಿ ಭಾಷೆಯಲ್ಲಿ ಮಿಶ್ರಗೊಂಡು ರಚಿತಗೊಂಡಿದೆ . ಕೇಳುವುದಕ್ಕೆ ಒಬ್ಬ ಸಾಮಾನ್ಯ ಜೋಡಿ ಹಾಡಿದಂತೆಯೇ ಇದೆ . ಆದರೆ ಇದರಲ್ಲಿ ಅಡಕವಾಗಿರುವ ಸಾಹಿತ್ಯದಲ್ಲಿನ ತಿರುವುಗಳು ಎಂತಹ ಯುವಜನರ ನಿದ್ದೆ ಕೆಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಿಮಗೆ ಹಿಂದಿ ಜೊತೆಗೆ ಸ್ವಲ್ಪ ಪಂಜಾಬಿ ಭಾಷೆ ಬಂದರೆ ನೀವು ಸುಲಭವಾಗಿ ಈ ವಿಡಿಯೋದಲ್ಲಿನ ಹಾಡನ್ನು ಅರ್ಥೈಸಿಕೊಳ್ಳಬಹುದು . ಇಲ್ಲವೆಂದರೆ ನಾವೇ ಈ ಕೆಳಗಿನ ಸಾರಾಂಶದಲ್ಲಿ ಅರ್ಥ ಮಾಡಿಸುತ್ತೇವೆ. ಯಾವುದಪ್ಪಾ ಈ ಹಾಡು ಎಂದು ಕಾತುರದಿಂದ ಕಾಯುತ್ತಿದ್ದೀರಾ ? ಇದು ಬೇರಾವುದೂ ಅಲ್ಲ " ಕೋಥೆ ತೇ ಆ " ಎಂಬ ಹಾಡು .

ಈ ವಿಡಿಯೋದಲ್ಲಿ ಹಾಡಿನ ಪ್ರಾರಂಭದಲ್ಲಿ ಅನಂತ್ ಮತ್ತು ವೀಣಾ ಎಂಬ ನವದಂಪತಿಗಳಿರುತ್ತಾರೆ . ಇಲ್ಲಿ ವೀಣಾ ಅನಂತ್ ಅವರನ್ನು ತಮಾಷೆ ಮಾಡುತ್ತಾ ನೀವು ಇನ್ನು ಮುಂದೆ ಗಡ್ಡ ಮೀಸೆ ತೆಗೆದು ಬಿಡಿ. ಏಕೆಂದರೆ ನೀವು ಅಮ್ಮನ ಮುದ್ದಿನ ಮಗ . ಅವರ ಮಾತನ್ನೇ ಇನ್ನು ಮುಂದೆಯೂ ಕೇಳುತ್ತೀರಿ ಎಂದು ಅಣಕಿಸುತ್ತಾಳೆ . ಅದಕ್ಕೆ ಅನಂತ್ ನಾನು ನನ್ನ ತಾಯಿಗೆ ಈ ವಿಷಯದಲ್ಲಿ ಖಂಡಿತ ಮನವೊಲಿಸುತ್ತೇನೆ ಮತ್ತು ನನ್ನ ಪ್ರೀತಿಯ ಹೆಂಡತಿ ಹೇಳಿದ ಹಾಗೆ ಗಡ್ಡ ಮೀಸೆ ಸಹ ತೆಗೆಯುತ್ತೇನೆ ಎಂದು ತಮಾಷೆಯಾಗಿಯೇ ಉತ್ತರಿಸುತ್ತಾನೆ.

Most Read: ಅಚ್ಚರಿಯ ಜಗತ್ತು: ಸ್ಟ್ರಾಬೆರಿಯಂತೆ ಕಾಣಿಸುವ ಮಹಿಳೆಯ ಒಸಡುಗಳು!!

ನಂತರ ವೀಣಾ ಮುಂದುವರಿದು ನಿಮ್ಮ ತಂದೆಗೆ ನೀವು ಇನ್ನೂ ಹೆದರುತ್ತೀರಿ ಅಲ್ಲವೇ ಎಂದು ಅನಂತ್ ಕಾಲೆಳೆಯುತ್ತಾಳೆ . ಅದಕ್ಕೆ ಅನಂತ್ ನನಗೆ ನಮ್ಮ ತಂದೆಯಿಂದ ಒದೆ ಬಿದ್ದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ಅವರನ್ನೂ ಮನವೊಲಿಸುತ್ತೇನೆ ಎಂದು ಪ್ರೀತಿಯಿಂದ ಹಾಡಿನ ರೂಪದಲ್ಲಿ ಉತ್ತರ ಕೊಡುತ್ತಾನೆ. ಎಷ್ಟು ಚಂದ ಅಲ್ಲವೇ ಈ ಹಾಡು. ಕೇಳಲು ಸೊಗಸಾಗಿರುವುದೂ ಅಲ್ಲದೆ ಇದರಲ್ಲಿನ ಸ್ವಾರಸ್ಯ ಎಲ್ಲರ ಹುಬ್ಬೇರಿಸುತ್ತದೆ . ಅದಕ್ಕೇ ಎಲ್ಲರೂ ಈ ಜೋಡಿಯ ಹಾಡು ಕೇಳಿ ಸಂತಸಗೊಂಡು ಇವರಿಬ್ಬರಿಗೆ ಶುಭ ಕೋರಿದ್ದಾರೆ . ನಾವೂ ಅದನ್ನೇ ಮಾಡುತ್ತಾ ನಿಮಗೂ ವಿಡಿಯೋ ನೋಡಲು ಹೇಳುತ್ತಾ ನಿಮಗನಿಸಿದ್ದನ್ನು ಕಾಮೆಂಟ್ ಮೂಲಕ ತಿಳಿಸಿ.

English summary

Couple’s Wedding Song Goes Viral

A couple from Mumbai,India sang the famous "Kothe Te Aa" song during a ceremony on their wedding day.This cute version of the song is too good. Check out the video as the couple start their new lives on a funny note.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X