For Quick Alerts
ALLOW NOTIFICATIONS  
For Daily Alerts

ಸ್ಲೋ ಪಾಯ್ಸನ್ ಕೊಟ್ಟು ಸುಮಾರು 60 ಹಕ್ಕಿಗಳನ್ನು ಸಾಯಿಸಿದರು!

|

ವಿಶ್ವದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಉಂಟಾಗುವಂತಹ ಸಮಸ್ಯೆಗಳ ಬಗ್ಗೆ ನಮಗೆ ಈಗಾಗಲೇ ಹಲವಾರು ಅನುಭವಗಳು ಆಗುತ್ತಾ ಬರುತ್ತಿದೆ. ನಾವೇ ಮಾಡುತ್ತಿರುವ ತಪ್ಪಗಳಿಂದಾಗಿ ಬರುತ್ತಿರುವ ಸಮಸ್ಯೆಗಳನ್ನು ಎದುರಿಸಲು ತಯಾರಾಗಿ ಇರಬೇಕು. ಹವಾಮಾನ ವೈಪರಿತ್ಯದಿಂದಾಗಿ ಮಳೆಯಲ್ಲಿ ಮೀನು ಅಥವಾ ರಕ್ತ ಬರುವುದನ್ನು ನೀವು ನೀಡಬಹುದು. ಇಂತಹ ವಿಚಿತ್ರ ಘಟನೆಗಳು ಕೂಡ ನಡೆಯುತ್ತಿದೆ. ಮನುಷ್ಯನಿಗೆ ಮಾತ್ರವಲ್ಲದೆ ಹವಾಮಾನ ವೈಪರಿತ್ಯದಿಂದಾಗಿ ಪ್ರಾಣಿಗಳಿಗೂ ತೊಂದರೆ ಆಗುತ್ತಲಿದೆ. ಇದರ ಬಗ್ಗೆ ಯಾರೂ ಹೆಚ್ಚು ಗಮನಹರಿಸುತ್ತಿಲ್ಲ.

ಆದರೆ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಸುಮಾರು 60 ಪಕ್ಷಿಗಳು ಹಠಾತ್ ಆಗಿ ಸಾವನ್ನಪ್ಪಿದ ವೇಳೆ ಪಕ್ಷಿ ಪ್ರಿಯರು ಈ ಬಗ್ಗೆ ಧ್ವನಿಯೆತ್ತಿದ್ದಾರೆ.

Birds Fall To Death From Sky

Images Source: Viral press

ಈ ಘಟನೆ ಬಗ್ಗೆ ನೀವು ವಿವರವಾಗಿ ತಿಳಿಯಿರಿ. ದಕ್ಷಿಣ ಆಸ್ಟ್ರೇಲಿಯಾದಲ್ಲಿ ಪ್ರತ್ಯಕ್ಷದರ್ಶಿಗಳು ನೋಡುತ್ತಿದ್ದಂತೆ ಸ್ಥಳೀಯ ಸುಮಾರು 60 ಪಕ್ಷಿಗಳು ಒಮ್ಮೆಲೇ ಸಾವನ್ನಪ್ಪಿವೆ ಮತ್ತು ಆಕಾಶದಿಂದ ಕೆಳಗೆ ಬಿದ್ದಿವೆ. ಈ ಘಟನೆಯು ಅಡಿಲೇಡ್ ಸ್ಪೋರ್ಟ್ಸ್ ಗ್ರೌಂಡ್ ನಲ್ಲಿ ನಡೆದಿದೆ. ವಿಷ ಹಾಕಿರುವಂತಹ ಪ್ರಕರಣವು ಇದಾಗಿರಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾರರ್ ಸಿನಿಮಾಗಳಲ್ಲಿನ ದೃಶ್ಯದಂತಹ ಇಲ್ಲಿ ಹಕ್ಕಿಗಳು ಆಕಾಶದಿಂದ ಕೆಳಗೆ ಬೀಳುವುದನ್ನು ಜನರು ಕಣ್ಣಾರೆ ನೋಡಿದ್ದಾರೆ.

ಕ್ಯಾಸ್ಪೆರೆ ಬರ್ಡ್ ರೆಸ್ಕೂ(ಪಕ್ಷಿಗಳನ್ನು ರಕ್ಷಿಸಲು ಇರುವಂತಹ ಅಡಿಲೇಡ್ ನ ಒಂದು ಸಂಸ್ಥೆ)ನ ಸರಾಹ ಕಿಂಗ್ ಅವರು ಹೇಳುವ ಪ್ರಕಾರ, ಸಿಬ್ಬಂದಿಯೊಬ್ಬರು ಈ ಪಕ್ಷಿಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆಕಾಶದಿಂದ ನಿಜವಾಗಿಯೂ 2-3 ಪಕ್ಷಿಗಳು ಕೆಳಗೆ ಬಿದ್ದವು. ಉಳಿದವು ನೋವಿನಲ್ಲಿ ನರಳುತ್ತಿದ್ದವು. ಕಣ್ಣು ಮತ್ತು ಕೊಕ್ಕಿನಲ್ಲಿ ರಕ್ತ ಬರುತ್ತಿದ್ದ ಕಾರಣದಿಂದಾಗಿ ಅವುಗಳಿಗೆ ಹಾರಾಡಲು ಆಗುತ್ತಲಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರಲ್ಲಿ ಸುಮಾರು 57 ಪಕ್ಷಿಗಳು ಉದ್ದ ಕೊಕ್ಕಿನ ಕೊರ್ಲಾಗಳು ಎಂದು ಬಿಬಿಸಿ ವರದಿ ಮಾಡಿದೆ. ಪಕ್ಷಿಗಳಿಗೆ ಹಾಕಿರುವಂತಹ ವಿಷವು ಅವುಗಳನ್ನು ನಿಧಾನವಾಗಿ ಸಾಯುವಂತೆ ಮಾಡಿದೆ. ವಾರದ ಬಳಿಕ ಅವುಗಳು ಸಾವನ್ನಪ್ಪಿದೆ ಎಂದು ಮೂಲಗಳು ಹೇಳಿವೆ.

Images Source: Viral press

ಪಕ್ಷಿತಜ್ಞರು ಈ ಬಗ್ಗೆ ವರದಿಯನ್ನು ತಯಾರಿಸುತ್ತಿದ್ದಾರೆ. ಆದರೆ ಈ ಬಗ್ಗೆ ಇದುವರೆಗೆ ವರದಿ ಮಾತ್ರ ಪೂರ್ಣಗೊಂಡಿಲ್ಲ.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ತುಂಬಾ ದೊಡ್ಡ ಸಂಖ್ಯೆಯಲ್ಲಿ ಈ ಪಕ್ಷಿಗಳು ಕಂಡುಬರುತ್ತದೆ. ಇದು ಕಟ್ಟಡ, ಸ್ಟೊಬಿ ಪೋಲ್ಸ್, ಲೈಟ್ಸ್, ಮರದ ರಚನೆಗಳು ಮತ್ತು ಕ್ರೀಡಾ ಸಾಮಗ್ರಿಗಳು ಇತ್ಯಾದಿಗಳ ಮೇಲೆ ಸಮಸ್ಯೆಯಾಗುತ್ತಿದ್ದವು. ತರಕಾರಿ ಮತ್ತು ಇತರ ಬೆಳೆಗಳಿಗೆ ಇದು ತುಂಬಾ ಹಾನಿ ಉಂಟು ಮಾಡುತ್ತಿದ್ದವು. ಇದರಿಂದ ಅವುಗಳಿಗೆ ನಿಧಾನವಾಗಿ ಸಾಯುವ ವಿಷ ನೀಡಿರಬಹುದು ಎಂದು ವಿಶ್ಲೇಷಿಸಲಾಗಿದೆ.

English summary

60 Birds Fall To Death From Sky

In a suspected case of mass poisoning in Adelaide, South Australia, 60 native birds fell to their death from the sky. Horrified onlookers reported that the birds were bleeding from their eyes and beaks. While a few were already dead when they fell, most were writhing in pain on the ground. 60 Birds Fall To Death From Sky
X
Desktop Bottom Promotion