Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮದುವೆಯಲ್ಲಿ ದಂಪತಿಗಳಿಗೆ 5 ಲೀಟರ್ ಪೆಟ್ರೋಲ್ ಉಡುಗೊರೆ ಮಾಡಿದ ಗೆಳೆಯರು!!
ನೀವು ಹೊಸದಾಗಿ ಮದುವೆಯಾಗಿರುವ ಸಂದರ್ಭದಲ್ಲಿ ನಿಮ್ಮ ಪ್ರೀತಿಯ ಗೆಳೆಯರಿಂದ ನೀವು ಒಂದು ಒಳ್ಳೆಯ ಪುಟ್ಟ ಉಡುಗೊರೆಯನ್ನಾದರೂ ಅಪೇಕ್ಷಿಸುವುದು ಸಹಜವಲ್ಲವೇ? ಆದರೆ ಇಲ್ಲಿ ಗೆಳೆಯರ ಗುಂಪೊಂದು ತಮ್ಮ ಗೆಳೆಯನ ಮದುವೆಗೆ 5 ಲೀಟರ್ ಪೆಟ್ರೋಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ! ಅಚ್ಚರಿಯೆನಿಸುತ್ತದೆ ಅಲ್ಲವೇ?

ಹೌದು ನೀವು ಸರಿಯಾಗಿಯೇ ಓದಿದ್ದೀರಾ.ಮದುವೆಗೆ ೫ ಲೀಟರ್ ಪೆಟ್ರೋಲ್ ಅನ್ನು ಉಡುಗೊರೆಯಾಗಿ ಪಡೆದುಕೊಂಡ ದಂಪತಿಗಳ ಬಗ್ಗೆ ತಿಳಿದುಕೊಳ್ಳಬೇಕೇ ?ಹಾಗು ಪೆಟ್ರೋಲ್ ಅನ್ನೇ ಉಡುಗೊರೆಯಾಗಿ ನೀಡಲು ಇರುವ ಕಾರಣವನ್ನು ತಿಳಿಯಬೇಕೇ ?ಹಾಗಾದರೆ ಮುಂದೆ ಓದಿ....

ಮದುವೆ ಮನೆಗೆ ಪೆಟ್ರೋಲ್ನೊಂದಿಗೆ ಬಂದ ಗೆಳೆಯರು
ತಮ್ಮ ಗೆಳೆಯನ ಮದುವೆಗೆ ಸ್ನೇಹಿತರ ಗುಂಪೊಂದು ಮದುವೆ ಮನೆಗೆ ಪೆಟ್ರೋಲ್ ನೊಂದಿಗೆ ಬಂದಿತು.ಅವರೆಲ್ಲರೂ ಸೇರಿ ಮದುವೆಯಾದ ನವದಂಪತಿಗಳಿಗೆ (ಎಲ್ಚೆಂಜಿಯನ್ ಮತ್ತು ಕಣಿಮೊಝಿ) ೫ ಲೀಟರ್ ಪೆಟ್ರೋಲ್ ಅನ್ನು ತಮ್ಮ ಕಡೆಯ ಮದುವೆಯ ಉಡುಗೊರೆಯಾಗಿ ಕೊಟ್ಟುಬಿಟ್ಟರು.

ಈ ನಿರ್ಧಾರ ಮಾಡಲು ಕಾರಣ
ಮದುವೆಯ ಗಂಡಿನ ಗೆಳೆಯನಾದ ಪ್ರಭು ಚೆನ್ನೈನ ನಂದನಂ ಆರ್ಟ್ಸ್ ಕಾಲೇಜ್ ನ ವಿದ್ಯಾರ್ಥಿ.ಹಾಗೆಯೇ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್ಐ) ನ ಸದಸ್ಯ ಕೂಡ ಹೌದು.ಪೆಟ್ರೋಲ್ ಅನ್ನು ಮದುವೆಯ ಉಡುಗೊರೆಯಾಗಿ ಕೊಡಲು ಅದರ ಹಿಂದೆ ಇದ್ದ ಮುಖ್ಯವಾದ ಉದ್ದೇಶವೆಂದರೆ ದೇಶದಾದ್ಯಂತ ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆ ಏರಿಕೆ ಹಾಗು ದಿನ ದಿನಕ್ಕೂ ಪೆಟ್ರೋಲ್ ತುಟ್ಟಿಯಾಗುತ್ತಿರುವ ಬಗ್ಗೆ ಜಾಗೃತಿಯನ್ನು ಮೂಡಿಸುವುದಾಗಿತ್ತು.

ಇದಕ್ಕೆ ನವದಂಪತಿಗಳ ಪ್ರತಿಕ್ರಿಯೆ
ಎಲ್ಚೆಂಜಿಯನ್ ಮತ್ತು ಕಣಿಮೊಝಿ ತಮ್ಮ ಗೆಳೆಯರು ಮದುವೆಗೆ ತಂದ ಉಡುಗೊರೆಯನ್ನು ಕಂಡು ಆಶ್ಚರ್ಯಚಕಿತರಾಗಿದ್ದರು.ಮೊದಲಿಗೆ ತಮಾಷೆಗಾಗಿ ಹೀಗೆ ಮಾಡುತ್ತಾ ಇರಬಹುದೆಂದುಕೊಂಡು ಇಬ್ಬರೂ ನಕ್ಕರು.ನಂತರ ಅದರ ಹಿಂದೆ ಇದ್ದ ಉದ್ದೇಶವನ್ನು ಮನಗಂಡರು.

ಉಡುಗೊರೆಯೆಂಬುದು ನಿಜಕ್ಕೂ ಆಶೀರ್ವಾದವೇ
ಪೆಟ್ರೋಲ್ ಅನ್ನು ಉಡುಗೊರೆಯಾಗಿ ನೀಡಿದ್ದು ಬಹಳ ಉತ್ತಮವಾದ ಆಯ್ಕೆಯಾಗಿತ್ತು.ಏಕೆಂದರೆ ಮದುವೆ ಗಂಡು ಒಬ್ಬ ಆಟೋ ಡ್ರೈವರ್ ಆಗಿದ್ದು ಇದರಿಂದ ಖಂಡಿತವಾಗಿಯೂ ಅವನಿಗೆ ಸಹಾಯವಾದಂತೆ ಅಯಿತು.

ನಿಮ್ಮ ಅನಿಸಿಕೆ ಏನು ?
ಮದುವೆಯ ಗಂಡಿನ ಗೆಳೆಯರ ಪ್ರಕಾರ ಪೆಟ್ರೋಲ್ ಅನ್ನು ಧಾರಾಳವಾಗಿ ಮದುವೆಗಳಲ್ಲಿ ಉಡುಗೊರೆಯಾಗಿ ನೀಡಬಹುದು.ಆದರೆ ನಾವು ಆಯ್ಕೆಯನ್ನು ನಿಮಗೆ ಬಿಟ್ಟಿದ್ದೇವೆ. ನಿಮಗೂ ಹೀಗೆ ನಿಮ್ಮ ಗೆಳೆಯರ ಮದುವೆಗೆ ಪೆಟ್ರೋಲ್ ಅನ್ನು ಉಡುಗೊರೆಯಾಗಿ ನೀಡಬೇಕು ಎಂಬ ಆಲೋಚನೆ ಏನಾದರೂ ಬಂದಿತೇ ?ಹಾಗೇನಾದರೂ ಇದ್ದಲ್ಲಿ ನಮಗೆ ತಿಳಿಸಿ. ಇನ್ನು ಹೆಚ್ಚು ಈ ತರಹದ ವಿಷಯಗಳನ್ನು ತಿಳಿದುಕೊಳ್ಳಲು ಬೋಲ್ಡ್ ಸ್ಕೈ ಗೆ ಚಂದಾದಾರರಾಗಿ.



Click it and Unblock the Notifications
