For Quick Alerts
ALLOW NOTIFICATIONS  
For Daily Alerts

ಇತಿಹಾಸದಲ್ಲಿ ಮೊದಲ ಬಾರಿಗೆ ತಿರುಪತಿ ದೇವಸ್ಥಾನವನ್ನು 6 ದಿನಗಳ ಕಾಲ ಮುಚ್ಚಲಾಗುವುದು!

By Divya Pandith
|
ಇತಿಹಾಸದಲ್ಲೇ ಮೊದಲ ಬಾರಿಗೆ, ಆಗಸ್ಟ್ 10ರಿಂದ 17ರವರೆಗೆ ತಿರುಪತಿ ತಿರುಮಲ ದೇವಸ್ಥಾನ ಬಂದ್ | Oneindia Kannada

ತಿರುಪತಿ ಎಂಬ ಶಬ್ದ ಕೇಳಿದರೆ ಸಾಕು ಮನಸ್ಸಿಗೆ ಒಂದು ಬಗೆಯ ಧನ್ಯತೆ ಹಾಗೂ ಭಕ್ತಿಯ ಭಾವ ಮೂಡುವುದು. ವರ್ಷ ಪೂರ್ತಿ ಭಕ್ತ ಜನರು ವಿವಿಧೆಡೆಯಿಂದ ಹರಿದು ಬರುತ್ತಲೇ ಇರುತ್ತಾರೆ. ತಿರುಪತಿ ತಿಮ್ಮಪ್ಪನ ದರುಶನದಿಂದ ಜನ್ಮ ಪಾವನವಾಗುವುದು ಎನ್ನುವ ನಂಬಿಕೆ ಇದೆ. ಭಕ್ತರಿಗಾಗಿಯೇ ಸದಾ ದರ್ಶನವನ್ನು ನೀಡುವ ತಿಮ್ಮಪ್ಪನ ದೇಗುಲದ ಬಾಗಿಲು ಇದೀಗ 6 ದಿನಗಳ ವರೆಗೆ ಮುಚ್ಚುವುದು!

Tirupati Temple To Closed For 6 Days

ಅರೇ! ಇದೇನು? ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹೌದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದಲ್ಲಿರುವ ವೆಂಕಟೇಶ್ವರ ದೇವಸ್ಥಾನವು ಆರು ದಿನಗಳ ವರೆಗೆ ಮುಚ್ಚಲ್ಪಡುವುದು. ಆಗಸ್ಟ್ 10ರ ಸಂಜೆ 6 ಗಂಟೆಯಿಂದ ಆಗಸ್ಟ್ 17ರ ಬೆಳಗ್ಗೆ 6 ಗಂಟೆಯ ವರೆಗೆ ದೇಗುಲದ ಮಹಾದ್ವಾರಗಳು ಮುಚ್ಚಲ್ಪಡುತ್ತವೆ. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಸುವ ಮಹಾ ಸಂಪ್ರೋಕ್ಷಣಂ ಎಂಬ ಪವಿತ್ರ ಆಚರಣೆಗೆ ಸಂಬಂಧಿಸಿದಂತೆ ಇದನ್ನು ಮಾಡಲಾಗುವುದು. ಆಚರಣೆ ಮಾಡುವ ಪುರೋಹಿತರು ಮಾತ್ರ ದೇವಸ್ಥಾನದಲ್ಲಿ ಇರುತ್ತಾರೆ. 6 ದಿನಗಳ ವರೆಗೆ ದೇವಾಲಯವನ್ನು ವಿಸ್ತರಿಸಲಾಗುವುದು. ಹಿಂದೆಂದೂ ವರದಿ ಮಾಡಿರಲಿಲ್ಲ. ಕಾರಣ ಪ್ರತಿವರ್ಷ ಆ ಸಮಯದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ವಿಶೇಷ ಧಾರ್ಮಿಕ ಕ್ರಿಯೆಗಳನ್ನು ನಡೆಸಲಾಗುತ್ತಿತ್ತು.

ಜಗತ್ ಪ್ರಸಿದ್ಧ ದೇಗುಲ

ಜಗತ್ ಪ್ರಸಿದ್ಧ ದೇಗುಲ

ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳಿರುವ ರಾಜ್ಯವೆಂದರೆ ತಮಿಳುನಾಡು. ಆದರೆ ಅತಿ ಹೆಚ್ಚು ಶ್ರೀಮಂತ ದೇವಾಲಯವೆಂದರೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ವೆಂಕಟೇಶ್ವರ ದೇವಾಲಯ. ತಿರುಪತಿಯ ಬಳಿ ಇರುವ ತಿರುಮಲ ಬೆಟ್ಟದ ತುದಿಯಲ್ಲಿರುವ ಈ ದೇವಸ್ಥಾನ ಒಂದು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವ ಮತ್ತು ಭಾರತದಲ್ಲಿಯೇ ಅತಿ ಹೆಚ್ಚು ದೇಣಿಗೆಯನ್ನು ದಾನರೂಪದಲ್ಲಿ ಸ್ವೀಕರಿಸುವ ದೇವಾಲಯವಾಗಿದೆ. ಹೌದು ವೆಂಕಟೇಶ್ವರ ದೇವಾಲಯವು ಪ್ರಪಂಚದಾದ್ಯಂತ ಪ್ರಸಿದ್ಧತೆಯನ್ನು ಪಡೆದ ಯಾತ್ರಾ ಸ್ಥಳವಾಗಿದೆ. ಪ್ರತಿವರ್ಷ ಸುಮಾರು 35 ದಶಲಕ್ಷ ಜನರು ದೇವಾಲಯಕ್ಕೆ ಭೇಟಿ ನೀಡುತ್ತಾರೆ ಎಂದು ಹೇಳಲಾಗುತ್ತದೆ. ದೊಡ್ಡ ದೊಡ್ಡ ದೇಣಿಗೆಯನ್ನು ಈ ದೇವಾಲಯಕ್ಕೆ ನೀಡುವುದರಿಂದ ಇದನ್ನು ಪ್ರಪಂಚದ ಅತ್ಯಂತ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಇಲ್ಲಿ ವಾರ್ಷಿಕ ಬಜೆಟ್ ವರ್ಷಕ್ಕೆ 2530 ಕ್ಕೂ ಹೆಚ್ಚು ಕೋಟಿಯನ್ನು ಒಳಗೊಂಡಿದೆ ಎನ್ನಲಾಗುವುದು. ಇಲ್ಲಿ ವಿಷ್ಣುವಿನ ವಿಗ್ರಹವು ತನ್ನದೇ ಆದ ವಿಶೇಷತೆಯಿಂದ ಕೂಡಿದೆ ಎನ್ನಲಾಗುವುದು. ಇಲ್ಲಿರುವ ವೆಂಕಟೇಶ ದೇವರಿಗೆ ಸಂಬಂಧಿಸಿದಂತೆ ಅನೇಕ ಶ್ರೇಷ್ಠ ದಂತಕಥೆಗಳಿವೆ.

ಬೇಡಿದೆಲ್ಲವನ್ನೂ ಕರುಣಿಸುವ ವೆಂಕಟೇಶ್ವರ

ಬೇಡಿದೆಲ್ಲವನ್ನೂ ಕರುಣಿಸುವ ವೆಂಕಟೇಶ್ವರ

ಭಾರತದಲ್ಲಿರುವ ಅತ್ಯಂತ ಶ್ರೀಮಂತ ದೇವರೆಂದರೆ ವೆಂಕಟೇಶ್ವರನೆಂದು ನಂಬಲಾಗಿದೆ. ಪದ್ಮಾವತಿಯನ್ನು ಮದುವೆಯಾಗುವ ವೇಳೆ ಕುಬೇರನಿಂದ ಪಡೆದಿದ್ದ ಸಾಲವನ್ನು ಈಗಲೂ ವೆಂಕಟೇಶ್ವರ ತೀರಿಸುತ್ತಿದ್ದಾನೆ ಎನ್ನುವ ಪುರಾಣ ಕಥೆಯಿದೆ. ವೆಂಕಟೇಶ್ವರನನ್ನು ಅತ್ಯಂತ ಶಕ್ತಿಯುತ ದೇವರೆಂದು ನಂಬಲಾಗಿದೆ. ಭಕ್ತನು ಒಳ್ಳೆಯ ಮನಸ್ಸು ಮತ್ತು ದೃಢ ನಂಬಿಕೆಯಿಂದ ಯಾವುದೇ ಬೇಡಿಕೆ ಸಲ್ಲಿಸಿದರೂ ಅದನ್ನು ಈಡೇರಿಸುವ ಶಕ್ತಿ ವೆಂಕಟೇಶ್ವರನಿಗೆ ಇದೆ ಎನ್ನಲಾಗುತ್ತಿದೆ. ಕೆಲವರು ದೇವರಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಯಾಗಲಿ ಎಂದು ಬೇಡಿಕೆಯನ್ನಿಡುತ್ತಾರೆ ಮತ್ತು ಅದು ಈಡೇರಿದರೆ ಅವರು ತಮ್ಮ ಕೂದಲನ್ನು ಮುಡಿಗೆ ಅರ್ಪಿಸುತ್ತಾರೆ.

ತಿರುಪತಿಯ ಲಡ್ಡು

ತಿರುಪತಿಯ ಲಡ್ಡು

ಮುನ್ನೂರು ವರ್ಷಗಳಿಂದ ಸತತವಾಗಿ ಲಾಡುಗಳನ್ನು ದೇವರ ಪ್ರಸಾದದ ರೂಪದಲ್ಲಿ ನೀಡುತ್ತಿರುವ ತಿರುಮಲ ದೇವಸ್ಥಾನ ಈ ಲಾಡುಗಳನ್ನು ತಯಾರಿಸಿ ವಿತರಿಸುವ ಹಕ್ಕುಮಾನ್ಯತೆ ಅಥವಾ ಪೇಟೆಂಟ್ ಅನ್ನು 2009ರಲ್ಲಿ ಪಡೆದುಕೊಂಡಿದೆ. ಅಂದರೆ ಈ ಲಾಡುಗಳನ್ನು ತಯಾರಿಸಿ ವಿತರಿಸುವ ಅಥವಾ ಮಾರುವ ಹಕ್ಕನ್ನು ಪಡೆದುಕೊಂಡಿದೆ. ಪ್ರತಿ ದಿನ ಈ ದೇವಸ್ಥಾನದಲ್ಲಿ ಒಂದೂವರೆ ಲಕ್ಷದಷ್ಟು ಲಡ್ಡುಗಳು ತಯಾರಾಗಿ ಭಕ್ತರಿಗೆ ವಿತರಿಸಲ್ಪಡುತ್ತವೆ. ಅಂದರೆ ಪ್ರತಿದಿನ ಈ ದೇವಸ್ಥಾನಕ್ಕೆ ಭೇಟಿ ನೀಡುವ ಸರಿಸುಮಾರು ಐವತ್ತು ಸಾವಿರದಷ್ಟು ಭಕ್ತರು ಸರಾಸರಿ ಮೂರು ಲಾಡುಗಳನ್ನು ಕೊಂಡೊಯ್ಯುತ್ತಾರೆ. ಅದರಲ್ಲಿ ಒಂದು ಲಾಡು ಪೂಜೆಯ ಪ್ರಸಾದದ ರೂಪದಲ್ಲಿ ಉಚಿತವಾಗಿರುತ್ತದೆ.

ಮೊದಲ ಬಾರಿಗೆ ದೇವಾಲಯ ಮುಚ್ಚುವುದು

ಮೊದಲ ಬಾರಿಗೆ ದೇವಾಲಯ ಮುಚ್ಚುವುದು

ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಈ ಆಚರಣೆ ನಡೆಯುತ್ತಲೇ ಬಂದಿದೆ. ಆದರೂ ಭಕ್ತರಿಗೆ ಈ ದೇವಾಲಯವು ಎಂದಿಗೂ ಮುಚ್ಚಿರಲಿಲ್ಲ. ಈ ಹಿಂದೆ ಧಾರ್ಮಿಕ ಆಚರಣೆ ಮಾಡುವಾಗ ಭಕ್ತರ ಸಂಖ್ಯೆ ಹೆಚ್ಚಿರಲಿಲ್ಲ. ಇದೀಗ ಸುಮಾರು 20,000-30,000 ಭಕ್ತರ ಸಂಖ್ಯೆ ಹೆಚ್ಚಿದೆ. ಒಂದು ಲಕ್ಷಕ್ಕೂ ಹೆಚ್ಚಿನ ಜನರು ದೇಗುಲಕ್ಕೆ ನಿತ್ಯವೂ ಭೇಟಿ ನೀಡುತ್ತಾರೆ. ಇಂತಹ ಅಧಿಕ ಸಂಖ್ಯೆಯ ಭಕ್ತರ ನಡುವೆ ಧಾರ್ಮಿಕ ಕ್ರಿಯೆಯನ್ನು ನಡೆಸಲು ಬಹಳ ಕಷ್ಟವಾಗುವುದು ಎನ್ನಲಾಗುತ್ತಿದೆ.

ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟಿಗಳು

ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟಿಗಳು

ಆರಂಭದಲ್ಲಿ ದೇವಾಲಯದ ಟ್ರಸ್ಟಿಗಳ ಸಂಖ್ಯೆ 5ರ ಮಿತಿಯಲ್ಲಿತ್ತು. ಇದೀಗ ಟ್ರಸ್ಟಿಗಳ ಸಂಖ್ಯೆ 18ಕ್ಕೆ ಏರಿದೆ. ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟಿ ಎಂದು ಕರೆಯಲ್ಪಡುವವರು ಆಂಧ್ರಪ್ರದೇಶದ ಸರ್ಕಾರದಿಂದ ನೇಮಕಗೊಂಡ ಕಾರ್ಯನಿರ್ವಾಹಕ ಅಧಿಕಾರಿಗಳು. ನೀವು ಈ ದಿನಾಂಕದಂದು ತಿರುಪತಿಗೆ ಹೋಗುವ ಯೋಜನೆಯನ್ನು ಹೊಂದಿದ್ದರೆ ನಿಮ್ಮ ಯಾತ್ರೆಯನ್ನು ಮುಂದೂಡುವುದು ಒಳ್ಳೆಯದು.

ಪ್ರಸಿದ್ಧ ತೀರ್ಥ ಕ್ಷೇತ್ರ

ಪ್ರಸಿದ್ಧ ತೀರ್ಥ ಕ್ಷೇತ್ರ

ಈ ದೇಗುಲವು ಸುಮಾರು ಕ್ರಿ.ಶ 300ರಲ್ಲಿ ನಿರ್ಮಿಸಲಾಯಿತು. ಇಲ್ಲಿಗೆ ಕೇವಲ ಶ್ರೀಮಂತರಷ್ಟೇ ಅಲ್ಲ ಎಲ್ಲಾ ವರ್ಗದ ಭಕ್ತಾಧಿಗಳು ಇಲ್ಲಿಗೆ ಬರುತ್ತಾರೆ. ಈ ದೇವಾಲಯವನ್ನು ಆರು ಬೆಟ್ಟಗಳ ದೇವಸ್ಥಾನ ಎಂದು ಕರೆಯುತ್ತಾರೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಯಾತ್ರಾಸ್ಥಳ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ನಿತ್ಯದ ಸಂದರ್ಶಕರ ಸಂಖ್ಯೆ 50,000 ದಿಂದ 1,00,000ಕ್ಕೆ ಏರಿದೆ. ವಿಶೇಷ ಸಂದರ್ಭದಲ್ಲಿ ಹಾಗೂ ಬ್ರಹ್ಮೋತ್ಸವದಂತಹ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಭಕ್ತರ ಸಂಖ್ಯೆ 5,00,000ಕ್ಕೆ ಹೆಚ್ಚುವುದು.

ಗ್ರಹಣದ ದಿನವು ದೇಗುಲ ಮುಚ್ಚುವುದು:

ಗ್ರಹಣದ ದಿನವು ದೇಗುಲ ಮುಚ್ಚುವುದು:

ಇದೇ ಜುಲೈ 27ರಂದು ಚಂದ್ರಗ್ರಹಣ ನಡೆಯುವುದರಿಂದ ದೇಗುಲವನ್ನು ಮುಚ್ಚಲಾಗುವುದು. ಗ್ರಹಣವು ಜುಲೈ 27ರ ಮಧ್ಯರಾತ್ರಿ 11.54ಕ್ಕೆ ಗ್ರಹಣ ಪ್ರಾರಂಭವಾಗಿ 28ರ ಮುಂಜಾನೆ 3.49ರ ವರೆಗೆ ಇರುವುದು. ಈ ಹಿನ್ನೆಲೆಯಲ್ಲಿ ದೇಗುಲದ ಮಹಾದ್ವಾರಗಳು ಜುಲೈ 27ರ ಮಧ್ಯಾಹ್ನ 3.50 ರಿಂದ 28ರ ಮುಂಜಾನೆ 4.14ರ ತನಕವು ಮುಚ್ಚುವುದು. ಅಂದ ಹಾಗೆ ಈ ಬಾರಿ ಇನ್ನು ಈ ಚಂದ್ರಗ್ರಹಣವು ಶತಮಾನದ ಅತೀ ದೀರ್ಘ ಚಂದ್ರಗ್ರಹಣವೆಂದು ಹೇಳಲಾಗುತ್ತಿದೆ ಮತ್ತು ಈ ವೇಳೆ ಬ್ಲಡ್ ಮೂನ್ ಕಾಣಿಸಿಕೊಳ್ಳಲಿದೆ. ಇದು ತುಂಬಾ ಅಪರೂಪದ ವಿದ್ಯಮಾನ. ಜುಲೈ 27 ಮತ್ತು ಜುಲೈ 28ರ ರಾತ್ರಿಗಳಲ್ಲಿ ಬ್ಲಡ್ ಮೂನ್ ಕಾಣಿಸಿಕೊಳ್ಳಲಿದೆ. ಜುಲೈ 27ರಂದು ನಡೆಯಲಿರುವ ಚಂದ್ರಗ್ರಹಣವು ಸುಮಾರು ಒಂದು ಗಂಟೆ ಮತ್ತು 43 ನಿಮಿಷಗಳ ಕಾಲ ಸುದೀರ್ಘವಾಗಲಿದೆ.

English summary

In A First, Tirupati Temple To Remain Closed For Six Days

For the first time in history, Venkateswara Temple, located in the hill town of Tirumala at Tirupati in Chittoor district of Andhra Pradesh, will remain closed for a period of six days. From 6 pm on August 10 to 6 am on August 17 the temple gates will remain closed to the devotees. It is being done because of the sacred ritual, known as Maha Samprokshanam, performed once in every twelve years.
Story first published: Thursday, July 26, 2018, 17:50 [IST]
X
Desktop Bottom Promotion