Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ನೀವು ಮಿಥುನ ರಾಶಿಯವರಲ್ಲಿ ಈ 5 ವಿಷಯಗಳನ್ನು ಕೇಳಲೇಬಾರದು!
ತುಂಬಾ ತಮಾಷೆ ಹಾಗೂ ಜಾಣರಾಗಿರುವಂತಹ ಮಿಥುನ ರಾಶಿಯವರು ಯಾವಾಗಲೂ ಮನರಂಜನೆ ಇಷ್ಟಪಡುವವರು. ಇವರು ಹೊಸಬರೊಂದಿಗೆ ಬೇಗನೆ ಹೊಂದಿಕೊಳ್ಳಲ್ಲ. ಆದರೆ ಒಮ್ಮೆ ಇವರು ಸ್ನೇಹಿತರಾದ ಬಳಿಕ ಇವರು ಸಂಪೂರ್ಣವಾಗಿ ಭಿನ್ನ ವ್ಯಕ್ತಿಯಾಗಿರುವರು. ಮಿಥುನ ರಾಶಿಯ ಚಿಹ್ನೆ ಮಾತ್ರ ಅವಳಿಯಲ್ಲ. ಇವರ ನಡವಳಿಕೆ ಕೂಡ ಹಾಗೆಯೇ.
ಹೊರಗಿನಿಂದ ಇವರು ತುಂಬಾ ಬೇಸರ ಮೂಡಿಸುವ ಮತ್ತು ಕಡಿಮೆ ಮಾತನಾಡುವ ವ್ಯಕ್ತಿಯಂತೆ ಕಂಡರೂ ಒಳಗಿನಿಂದ ತುಂಬಾ ಹುಚ್ಚುತನ ಮತ್ತು ಹಾಸ್ಯ ಹೊಂದಿರುವರು. ಎಲ್ಲಾ ರಾಶಿಗಳಲ್ಲೂ ಒಳ್ಳೆಯದು ಹಾಗೂ ಕೆಟ್ಟದು ಎನ್ನುವುದು ಇದ್ದೇ ಇರುತ್ತದೆ. ಇದಕ್ಕೆ ಮಿಥುನ ರಾಶಿ ಕೂಡ ಇದಕ್ಕೆ ಹೊರತಾಗಿಲ್ಲ. ಮಿಥುನ ರಾಶಿಯವರಿಗೆ ಹೇಳಲೇ ಬಾರದ ಐದು ವಿಚಾರಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.
ಹೆಚ್ಚು ಮಾತನಾಡುತ್ತೀರಿ ಎಂದು ಹೇಳಬೇಡಿ
ಮಿಥುನ ರಾಶಿಯವರಿಗೆ ಪ್ರತಿಯೊಂದು ಮತ್ತು ಪ್ರತಿಯೊಬ್ಬರ ಬಗ್ಗೆಯೂ ತಿಳಿದುಕೊಳ್ಳಬೇಕು. ಈ ಆಸಕ್ತಿದಾಯಕ ವಿಚಾರದಿಂದಾಗಿ ಕೆಲವೊಂದು ಸಲ ಅವರ ಮನಸ್ಥಿತಿಯು ತಿಳಿಯಾಗುವುದು. ಹಾಸ್ಯದ ಮಾತುಗಳನ್ನು ಇದಕ್ಕೆ ಸೇರಿಸಿಕೊಂಡು ಕಥೆಗೆ ಮತ್ತಷ್ಟು ಬಣ್ಣ ಹಚ್ಚುವರು. ಇವರು ಒಳ್ಳೆಯ ಕೇಳುಗರು. ಅದೇ ರೀತಿ ತಮ್ಮ ಮಾತಿನ ಸರದಿ ಬಂದಾಗ ಬೇರೆಯವರು ಇದೇ ರೀತಿ ಕೇಳಬೇಕು ಎಂದು ಬಯಸುವರು. ಅವರು ಅತಿಯಾಗಿ ಮಾತನಾಡುತ್ತಾರೆಂದು ನೀವು ಭಾವಿಸಬಹುದು. ಇದನ್ನು ಅವರಿಗೆ ಯಾವತ್ತೂ ಹೇಳಬೇಡಿ. ನೀವು ಹೀಗೆ ಮಾಡಿದರೆ ಅವರು ಯಾವತ್ತಿಗೂ ನಿಮ್ಮೊಂದಿಗೆ ಕಥೆ ಹಂಚಿಕೊಳ್ಳಲ್ಲ.
ಗಂಭೀರವಾಗಿರಿ ಎಂದು ಹೇಳಬೇಡಿ
ಇವರಿಗೆ ತಮಾಷೆಯೆಂದರೆ ತುಂಬಾ ಇಷ್ಟ. ಇದರಲ್ಲಿ ನೀವು ಭಾಗಿಯಾದರೆ ಅವರಿಗೆ ತುಂಬಾ ಸಂತೋಷವಾಗುವುದು. ಇದರರ್ಥ ಅವರು ಜೀವನದ ಬಗ್ಗೆ ಗಂಭೀರವಾಗಿಲ್ಲವೆಂದಲ್ಲ. ಆದರೆ ಇವರು ಎಲ್ಲಾ ಸಮಯದಲ್ಲಿ ತಮ್ಮ ಮುಖದ ಮೇಲೆ ಗಂಭೀರತೆ ತೋರಿಸಲು ಇಷ್ಟಪಡಲ್ಲ. ಗಂಭೀರವಾಗಿರಿ ಎಂದು ಹೇಳಿದರೂ ಅವರು ಇದನ್ನು ಇಷ್ಟಪಡಲ್ಲ. ಯಾಕೆ ತಮಾಷೆಯಾಗಿರುತ್ತೀರಿ ಎಂದು ಕೇಳುವಂತೆಯೂ ಇಲ್ಲ, ಗಂಭೀರವಾಗಿರಿ ಎಂದು ಹೇಳುವಂತೆಯೂ ಇಲ್ಲ.
Most Read:'S'ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು, ಕಠಿಣ ಪರಿಶ್ರಮಿ ಹಾಗೂ ಮಗುವಿನಂತ ಮನಸ್ಸು...
ಬಹುಕಾರ್ಯ ಕೌಶಲ್ಯದ ಬಗ್ಗೆ ಪ್ರಶ್ನಿಸಬೇಡಿ
ಮಿಥುನ ರಾಶಿಯವರು ನೀವು ನೀಡುವ ಗೌರವಕ್ಕಿಂತಲೂ ಅವರನ್ನು ಹೆಚ್ಚಾಗಿ ಗೌರವಿಸಿಕೊಳ್ಳುವರು. ಇವರು ಒಂದೇ ಸಲ ಹಲವಾರು ಕೆಲಸ ಮಾಡಬಲ್ಲರು ಎಂದು ನಂಬಿರುವರು. ಇವರು ಒಂದು ಕೆಲಸದಿಂದ ಮತ್ತೊಂದರತ್ತ ಹೋದಾಗ ಅವರಿಗೆ ಏಕಾಗ್ರತೆಯಿಲ್ಲ ಮತ್ತು ಪೂರ್ಣಗೊಳಿಸಲು ಆಗಲ್ಲವೆಂದು ನೀವು ಯೋಚಿಸಬಹುದು. ಆದರೆ ಇದನ್ನು ನೀವು ಅವರೆದುರು ಮಾತ್ರ ಹೇಳಬೇಡಿ. ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿದೆ ಮತ್ತು ಇದು ಹೆಚ್ಚು ಪ್ರಾಮುಖ್ಯತೆ ಪಡೆಯುವುದು.
ನಿರ್ಧಾರ ಬದಲಾಯಿಸುವ ಬಗ್ಗೆ ಪ್ರಶ್ನೆ ಮಾಡಬೇಡಿ
ಮಿಥುನ ರಾಶಿಯವರು ತುಂಬಾ ವೇಗವಾಗಿ ನಿರ್ಧಾರವನ್ನು ಬದಲಾಯಿಸಬಲ್ಲರು. ಇವರಲ್ಲಿ ಇರುವಂತಹ ಅವಳಿ ಗುಣಗಳಿಂದ ಹೀಗೆ ಮಾಡುವರು. ಹೊಂದಿಕೊಳ್ಳುವರು, ಬದಲಾಗುವರು ಹಾಗೂ ಮತ್ತೆ ಹೊಂದಿಕೊಳ್ಳುವರು ಎಂದು ಅವರಿಗೆ ತಿಳಿದಿದೆ. ನಿರ್ಧಾರ ಪದೇ ಪದೇ ಬದಲಾಯಿಸುತ್ತಿರುವ ಬಗ್ಗೆ ಪ್ರಶ್ನೆ ಮಾಡಲು ಹೋಗಬೇಡಿ.
ನಾಟಕ ಯಾವಾಗ ಇಷ್ಟವೆಂದು ಕೇಳಲು ಹೋಗಬೇಡಿ
ಮಿಥುನ ರಾಶಿಯವರಿಗೆ ತಮ್ಮ ಮುಂದೆ ಯಾವಾಗಲೂ ಅಳುವುದು ಮತ್ತು ದೂರುವುದು ಇಷ್ಟವಾಗಲ್ಲ. ಇವರಿಗೆ ಮನೋರಂಜನೆ ಮತ್ತು ಧನಾತ್ಮಕತೆ ಬೇಕಾಗಿದೆ. ನೀವು ಇದನ್ನು ನೀಡಲು ವಿಫಲವಾದರೆ ಆಗ ಅವರು ನಿಮ್ಮ ಬದಲಿಗೆ ಬೇರೆಯವರನ್ನು ಇಡಬಹುದು. ಅವರ ಹೃದಯದಲ್ಲಿ ಉಳಿಯಲು ನೀವು ಯಾವಾಗಲೂ ಉತ್ಸಾಹದಿಂದ ಇರಬೇಕು ಮತ್ತು ಎಲ್ಲವನ್ನು ಉತ್ಸಾಹದಿಂದ ಮಾಡಬೇಕು. ಅವರ ಮುಂದೆ ನಿಮ್ಮ ನೋವು ಹೇಳಿಕೊಳ್ಳಬಾರದು ಎಂದೇನಿಲ್ಲ. ಅವರು ಒಳ್ಳೆಯ ಸ್ನೇಹಿತರಾಗಿರುವರು. ಆದರೆ ಇವರಿಗೆ ನಾಟಕೀಯತೆಯು ಇಷ್ಟವಾಗಲ್ಲ.