ನಿಮ್ಮ ಹೆಸರು “M” ಅಕ್ಷರದಿಂದ ಪ್ರಾರಂಭವಾಗುತ್ತದೆಯೇ?

By: Divya
Subscribe to Boldsky

ಪ್ರತಿಯೊಂದು ಧರ್ಮದಲ್ಲೂ ವ್ಯಕ್ತಿಯ ಹುಟ್ಟು ಹಾಗೂ ಸಾವು ವಿಶೇಷತೆಯಿಂದ ಕೂಡಿರುತ್ತದೆ. ಹುಟ್ಟಿದ ಘಳಿಗೆಯಿಂದ ಅದೆಷ್ಟೋ ಜನರು ಶ್ರೀಮಂತರಾಗಿದ್ದಾರೆ. ಇನ್ನೆಷ್ಟೋ ಮಂದಿ ಸರ್ವಸ್ವವನ್ನೂ ಕಳೆದಕೊಂಡಿರುತ್ತಾರೆ. ಜನನದ ಸಮಯ, ಭವಿಷ್ಯ, ಜಾತಕ ಎನ್ನುವ ವಿಚಾರದ ಬಗ್ಗೆ ಕೆಲವರು ಮೂಗು ಮುರಿಯುತ್ತಾರೆ. ಇನ್ನುಕೆಲವರು ಇದೊಂದು ಪವಾಡ ಎಂದು ನಂಬುತ್ತಾರೆ, ಆ ದೇವರಿಲ್ಲದೆ ಇದ್ದರೆ ಜಗತ್ತಿನ ಸೃಷ್ಟಿ ಸಾಧ್ಯವಿರಲಿಲ್ಲ ಎನ್ನುತ್ತಾರೆ...

ಯಾರು ಏನೇ ಎಂದರೂ ಪ್ರತಿಯೊಬ್ಬ ವ್ಯಕ್ತಿಯ ದೇಹದ ಸುತ್ತಲೂ ನಮ್ಮ ದೃಷ್ಟಿಗೆ ನಿಲುಕದಷ್ಟು ಸೂಕ್ಷ್ಮತೆಯಲ್ಲಿ ವಿಶೇಷವಾದ ಪ್ರಭೆಯಿರುತ್ತದೆ. ಈ ಪ್ರಭೆಯು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಆರೋಗ್ಯದ ಗುಣಮಟ್ಟವನ್ನು ಸೂಚಿಸುತ್ತದೆ ಎನ್ನುವುದನ್ನು ನಂಬಲೇ ಬೇಕು. ಇದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ನಾಗರೀಕತೆ ಬೆಳೆದಂತೆ ವ್ಯಕ್ತಿಯ ಜನನದ ಘಳಿಗೆಯನ್ನು ಪರಿಗಣಿಸಿ ಜಾತಕ ಹಾಗೂ ಹೆಸರುಗಳನ್ನು ಇಡುವುದು ವಾಡಿಕೆಯಾಗಿದೆ.    ನಿಮ್ಮ ಹೆಸರಿನ ಒಳಗುಟ್ಟೇನು ಎಂಬುದನ್ನು ಬಲ್ಲಿರಾ?

ನಮ್ಮ ಈ ಸಂಪ್ರದಾಯದ ಅಡಿಯಲ್ಲಿಯೇ ಘಳಿಗೆಯ ಅನುಸಾರವಾಗಿ ನಕ್ಷತ್ರ ಹಾಗೂ ಅದಕ್ಕೆ ಸಂಬಂಧಿಸಿದ ಅಕ್ಷರದಲ್ಲಿ ಹೆಸರನ್ನು ಇಡುತ್ತಾರೆ. ಇತ್ತೀಚೆಗೆ ಕೆಲವು ಕಾರಣಗಳಿಗೆ ತಂದೆತಾಯಿಗಳಿಗೆ ಇಷ್ಟವಾಗುವ ಹೆಸರುಗಳನ್ನು ಇಡುವುದು ಸಾಮಾನ್ಯವಾಗಿದೆ. ಈ ಹೆಸರುಗಳ ಆರಂಭದಲ್ಲಿ ಇರುವ ಅಕ್ಷರಗಳು ವ್ಯಕ್ತಿಯ ವಿಶೇಷತೆಯನ್ನು ವಿವರಿಸುತ್ತವೆಯಂತೆ.  ಜಾತಕದ ಅನುಗುಣವಾಗಿರುವ ನಿಮ್ಮ ಹೆಸರು ಅದೃಷ್ಟಶಾಲಿಯೇ?

ಹೌದು, ಈ ಒಂದು ವಿಶೇಷ ಸಂಗತಿಯ ಅಡಿಯಲ್ಲಿ ಹೇಳುತ್ತಿರುವುದು ಇಂಗ್ಲಿಷ್ ಅಕ್ಷರದ M ಅಕ್ಷರದ ವಿಚಾರ. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಯಾವೆಲ್ಲಾ ವ್ಯಕ್ತಿತ್ವ ಹಾಗೂ ಸ್ವಭಾವವನ್ನು ಹೊಂದಿರುತ್ತಾರೆ ಎನ್ನುವುದನ್ನು ತಿಳಿಯೋಣ ಬನ್ನಿ... 

'M' ಅಕ್ಷರದವರ ನಡತೆ

'M' ಅಕ್ಷರದವರ ನಡತೆ

ಎಮ್ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳು ಅತ್ಯಂತ ನಿಷ್ಠಾವಂತರಾಗಿರುತ್ತಾರೆ. ಹೆಚ್ಚು ಶ್ರಮ ಜೀವಿಗಳು. ಭದ್ರತೆ ಹಾಗೂ ಜಾಗ್ರತ ಮನೋಭಾವದವರಾದ ಇವರು ಸದಾ ಇನ್ನೊಬ್ಬರನ್ನು ಅವಲಂಭಿತರಾಗಿರುತ್ತಾರೆ. ಜೀವನದಲ್ಲಿ ಹೆಚ್ಚು ವಾಸ್ತವಿಕವಾಗಿಯೇ ಇರುತ್ತಾರೆ.

ಸುಂದರ ಜೀವನಕ್ಕೆ ಕೇಂದ್ರೀಕೃತವಾಗಿರುತ್ತಾರೆ

ಸುಂದರ ಜೀವನಕ್ಕೆ ಕೇಂದ್ರೀಕೃತವಾಗಿರುತ್ತಾರೆ

ಜೀವನದಲ್ಲಿ ಮುಂದೆ ಬರಬಹುದಾದ ಸಂಗತಿಗಳ ಬಗ್ಗೆ ಅಥವಾ ವಿಚಾರಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಅವರ ತಮ್ಮ ಸುತ್ತಲು ಇರುವ ಹೊಸ ಸಂಗತಿಗಳ ಬಗ್ಗೆ ಪ್ರಾಯೋಗಿಕ ರೀತಿಯಲ್ಲಿ ವರ್ತಿಸುವುದು ಹಾಗೂ ಚಿಂತಿಸುವುದರಲ್ಲಿ ದೂರ ಸರಿಯುವುದಿಲ್ಲ.

ನೈತಿಕತೆಗೆ ಹೆಚ್ಚು ಬೆಲೆ

ನೈತಿಕತೆಗೆ ಹೆಚ್ಚು ಬೆಲೆ

ಇವರು ಜೀವನದ ಮೌಲ್ಯ, ನೈತಿಕತೆ, ಸಂಪ್ರದಾಯ ಹಾಗೂ ನೀತಿಯನ್ನು ಗೌರವಿಸುತ್ತಾರೆ. ನೈತಿಕವಾಗಿಯೂ ಇವರಿಗೆ ಹೆಚ್ಚಿನ ಸ್ಥಾನ ದೊರೆಯುತ್ತದೆ. ಜೊತೆಗೆ ಸರಿಯಾದ ಮಾರ್ಗದಲ್ಲಿಯೇ ನಡೆಯುತ್ತಾರೆ.

ಉತ್ತಮ ವೃತ್ತಿಜೀವನದ ಆಯ್ಕೆ

ಉತ್ತಮ ವೃತ್ತಿಜೀವನದ ಆಯ್ಕೆ

ಇವರು ಹೆಚ್ಚು ಆತ್ಮವಿಶ್ವಾಸ ಹೊಂದಿದ ವ್ಯಕ್ತಿಗಳು ಎನ್ನಬಹುದು. ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ಸಾಧಿಸುತ್ತಾರೆ. ಮಾಡುವ ಪ್ರತಿಯೊಂದು ಕೆಲಸವೂ ಪೂರ್ವಾಪರ ಯೋಚನೆಯಿಂದಲೇ ಕೈಗೊಳ್ಳುತ್ತಾರೆ. ಜೊತೆಗೆ ಯಶಸ್ಸನ್ನು ಹೊಂದುತ್ತಾರೆ.

ವ್ಯಕ್ತಿತ್ವದ ಲಕ್ಷಣಗಳು

ವ್ಯಕ್ತಿತ್ವದ ಲಕ್ಷಣಗಳು

ಬಹಳ ಶಿಸ್ತಿನ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಪ್ರಾಮಾಣಿಕವಾದ ಜೀವನವನ್ನು ನಡೆಸುವ ಇವರು ಗಂಭೀರ ಮನಃಸ್ಥಿತಿಯವರು. ಜೀವನವನ್ನು ತಮ್ಮದೇ ಆದ ರೀತಿಯಲ್ಲಿನಡೆಸುವವರು.

ಆಕ್ರಮಣಕಾರಿ ಸ್ವಭಾವ

ಆಕ್ರಮಣಕಾರಿ ಸ್ವಭಾವ

ಜನರು ತಮ್ಮ ಮಿತಿಯನ್ನು ಮೀರಿ ತಳ್ಳುವಾಗ ಅಥವಾ ವರ್ತಿಸುವಾಗ ಬಹಳ ಬಾಷ್ಪಶೀಲರಾಗುತ್ತಾರೆ. ಇವರ ತಾಳ್ಮೆಯನ್ನು ಪರೀಕ್ಷಿಸ ಹೊರಟರೆ ಇವರು ತುಂಬಾ ವಾದ ಹಾಗೂ ಆಕ್ರಮಣಕಾರಿ ಸ್ವಭಾವವನ್ನು ತೋರುವರು.

ನಿರ್ಣಯಕ್ಕೆ ಸಮಯ ತೆಗೆದುಕೊಳ್ಳುವವರು

ನಿರ್ಣಯಕ್ಕೆ ಸಮಯ ತೆಗೆದುಕೊಳ್ಳುವವರು

ಈ ವ್ಯಕ್ತಿಗಳು ಒಂದೇ ಬಾರಿಗೆ ಚುರುಕಾಗಿ ವರ್ತಿಸುವುದಿಲ್ಲ. ತಮ್ಮ ತೀರ್ಮಾನಗಳನ್ನು ಹೇಳುವಾಗ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತಾರೆ. ವಿಚಾರಗಳ ಕುರಿತು ಕೂಲಂಕುಶವಾಗಿ ಯೋಚಿಸುತ್ತಾರೆ. ತಮ್ಮ ಜೀವನದ ನಿರ್ಧಾರ ತೆಗೆದುಕೊಳ್ಳುವಾಗ ತಮ್ಮದೇ ಆದ ಸರಿಯಾದ ಸಮಯವನ್ನು ತೆಗೆದುಕೊಳ್ಳುತ್ತಾರೆ.

ಪ್ರೀತಿಯ ಸುಳಿಗೆ ಬೀಳರು

ಪ್ರೀತಿಯ ಸುಳಿಗೆ ಬೀಳರು

ಇವರು ಬೇಗನೆ ಇತರರೊಡನೆ ಬೆರೆಯಲಾರರು. ಇತರರೊಡನೆ ಬೆರೆಯಲು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಅಭಿಪ್ರಾಯವನ್ನು ಬೇಗನೆ ವ್ಯಕ್ತಪಡಿಸದೇ ಇರುವುದರಿಂದ ಪ್ರೀತಿಯ ಸುಳಿಗೆ ಬೀಳರು. ತಮ್ಮ ಅಭಿಪ್ರಾಯವೇ ಸರಿ ಎಂಬ ಭಾವನೆ ಹೊಂದುವ ಕಾರಣದಿಂದ ಕೆಲವೊಮ್ಮೆ ಸ್ವಾರ್ಥಿ ವ್ಯಕ್ತಿಗಳು ಎಂದು ಎನಿಸಿಕೊಳ್ಳುವ ಅವಕಾಶಗಳು ಇರುತ್ತವೆ.

ಇವರು ರಸಿಕರು!

ಇವರು ರಸಿಕರು!

ಈ ಅಕ್ಷರದ ವ್ಯಕ್ತಿಗಳು ಹೆಚ್ಚು ರಸಿಕರಾಗಿರುತ್ತಾರೆ. ನಾಚಿಕೆ ಸ್ವಭಾವದವರಾದ ಇವರ ಗುಣ ಬಹಳ ಉತ್ತಮವಾದದ್ದು. ಇವರು ಪ್ರಕೃತಿಯಲ್ಲಿ ಬಹಳ ಕಲಾತ್ಮಕ ಜೀವನವನ್ನು ನಡೆಸುವರು. ನಿಷ್ಠಾವಂತರಾದ ಇವರು ಕೆಲವೊಮ್ಮೆ ಉಗ್ರವಾದ ಗುಣವನ್ನು ತೋರಿಸುವ ಸಾಧ್ಯತೆಗಳಿರುತ್ತವೆ.

ಪ್ರೀತಿಸುವ ಜನರಿಗಾಗಿ ನಿಲ್ಲುತ್ತಾರೆ

ಪ್ರೀತಿಸುವ ಜನರಿಗಾಗಿ ನಿಲ್ಲುತ್ತಾರೆ

ಇವರು ತಮ್ಮ ಇಷ್ಟ ಪಡುವ ಜನರಿಗಾಗಿ ಸದಾ ನಿಲ್ಲುತ್ತಾರೆ. ಅವರ ನಿಲುವು, ನಂಬಿಕೆ ಹಾಗೂ ಇಷ್ಟಗಳ ಪರವಾಗಿ ನಿಲ್ಲುತ್ತಾರೆ. ಅವರಿಗಾಗಿ ಸದಾ ಸಿದ್ಧರಾಗಿ ನಿಲ್ಲುವ ಇವರು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ.

English summary

Read This If Your Name Starts With The Letter M!

Check out on what does the letter "M" mean in a name. So, continue reading to find out on what the letter M defines and means in a person's name!
Subscribe Newsletter