'ಒಪ್ಪೊ ಫೋನಿನ' ಕಮಾಲ್‌ಗೆ ಯುವ ವಿದ್ಯಾರ್ಥಿಗಳು ಫುಲ್ ಫಿದಾ!

Posted By: Staff
Subscribe to Boldsky

ಸ್ಮಾರ್ಟ್ ಫೋನ್‌ನ ಯುಗದಲ್ಲಿ ಒಪ್ಪೊ ಮೊಬೈಲ್ ಫೋನ್ ತನ್ನದೇ ಆದ ಛಾಪನ್ನು ಮೂಡಿಸಿದ್ದು, ಕೋಟ್ಯಾಂತರ ಮಂದಿಯನ್ನು ತನ್ನತ್ತ ಸೆಳೆಯುತ್ತಾ ಇದೆ. ಇದರಲ್ಲಿರುವ ಗುಣಮಟ್ಟದ ಕ್ಯಾಮೆರಾವು ಈ ಜನಪ್ರಿಯತೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ.

 OPPO F3

ಒಪ್ಪೊ ಫೋನ್‌ನ ಅಭಿಮಾನಿಗಳ ಸಾಲಿನಲ್ಲಿ ಕಾರ್ಮಿಕ ವರ್ಗದಿಂದ ಹಿಡಿದು ವಿದ್ಯಾರ್ಥಿ ವೃಂದದವರೂ ಇದ್ದಾರೆ. ಅದರಲ್ಲೂ ವಿದ್ಯಾರ್ಥಿ ವೃಂದವು ಒಪ್ಪೊ ಫೋನ್‌ಗೆ ಸಂಪೂರ್ಣವಾಗಿ ಮಾರು ಹೋಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಒಪ್ಪೋ ಎಫ್ 3 (OPPO F3) ಮೊಬೈಲ್ ಬಗ್ಗೆ ವಿದ್ಯಾರ್ಥಿ ವೃಂದದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಒಪ್ಪೋ ಎಫ್ 3 ಫೋನ್‌ನ 2.0 ವರ್ಸನ್ ಅನ್ನು ಖರೀದಿಸಿರುವ ಯುವ ಫ್ಯಾಷನ್ ಡಿಸೈನರ್ ವಿದ್ಯಾರ್ಥಿಯೊಬ್ಬರು ಇದು ತನ್ನ ವೈಯಕ್ತಿಕ ಹಾಗೂ ವೃತ್ತಿಪರ ಕೆಲಸದಲ್ಲಿ ತುಂಬಾ ನೆರವಾಗಿದೆ ಎಂದಿದ್ದಾರೆ.

 OPPO F3

ಒಪ್ಪೋ ಎಫ್ 3 ಫೋನ್ 2.0 ವರ್ಸನ್ ಬಗ್ಗೆ ಆಕೆಯ ಅಭಿಪ್ರಾಯ ಇಲ್ಲಿದೆ

ವಿದ್ಯಾರ್ಥಿಗಳಿಗೆ ಯಾವಾಗಲೂ ತರಗತಿಗೆ ಹಾಜರಾಗಲು, ಅಸೈನ್‌ಮೆಂಟ್ ಪೂರ್ತಿಗೊಳಿಸಲು ಮತ್ತು ಪ್ರಾಜೆಕ್ಟ್‌ಗಳ ಬಗ್ಗೆ ಸಂಶೋಧನೆಗಳನ್ನು ಪೂರ್ತಿಗೊಳಿಸಲು ಯಾವಾಗಲೂ ಅವಸರದಲ್ಲಿ ಇರುತ್ತಾರೆ. ಒಪ್ಪೋ ಎಫ್3 ಲೈಟ್ ಫ್ರೇಮ್ ಡಿಸೈನ್‌ನ ಮೊಬೈಲ್ ಅನ್ನು ಹೆಚ್ಚು ಶ್ರಮವಿಲ್ಲದೆ ಕೊಂಡುಹೋಗಬಹುದು. ಪುಸ್ತಕ ಮತ್ತು ನೋಟ್ ಪ್ಯಾಡ್ ಜತೆಗೆ ಇದನ್ನು ಕೊಂಡು ಹೋಗಬಹುದು. ಇದರಲ್ಲಿ ಹೆಚ್ಚು ಭಾರವಿಲ್ಲ. ಫೋನ್‌ನ ತೆಳ್ಳಗಿನ ರೂಪಕ್ಕೆ ನಾನು ಅಭಿಮಾಣಿಯಾಗಿದ್ದೇನೆ.

 OPPO F3

ಇದು ಸಂಪೂರ್ಣವಾಗಿ ಮೆಟಲ್ ಬಾಡಿ, ಸ್ಯಾಂಡ್ ಸ್ಪ್ರೇಯಿಂಗ್, ತ್ರೀ ಸ್ಟೇಜ್ ಪಾಲಿಶಿಂಗ್ ಮತ್ತು ಸಿಎನ್ ಸಿ ಮಿಲ್ಲಿಂಗ್ ಹೊಂದಿದೆ. ಇದರಲ್ಲಿರುವ ಉನ್ನತ ಮಟ್ಟದ ಗ್ರಿಪ್ ಮೊಬೈಲ್ ಅನ್ನು ಕೆಳಗೆ ಬೀಳದಂತೆ ಕಾಪಾಡುತ್ತದೆ. ಮೊಬೈಲ್‌ನ ಅಂಚುಗಳು ಕೂಡ ಕೈಯಲ್ಲಿ ಸರಿಯಾಗಿ ಕುಳಿತುಕೊಳ್ಳುತ್ತದೆ. ಸಂಪೂರ್ಣವಾಗಿ ನಾನು ಈ ಫೋನ್‌ನ ಅಭಿಮಾನಿಯಾಗಿಬಿಟ್ಟಿದ್ದೇನೆ.

ಮೊಬೈಲ್‌ನ ವಿಶ್ಲೇಷಣೆ

ರ್ಯಾಮ್- 4 ಜಿಬಿ

ROM - 64 ಜಿಬಿ (128 ಜಿಬಿ ತನಕ ವಿಸ್ತರಿಸಬಹುದು)

ಡಿಸ್‌ಪ್ಲೇ- 5.5 ಇಂಚು ಫುಲ್ ಎಚ್ ಡಿ

ಕ್ಯಾಮೆರಾ-13 ಎಂಪಿ ರೇರ್ ಕ್ಯಾಮೆರಾ, 16 ಎಂಪಿ +8 ಎಂಪಿ ಡ್ಯುಯಲ್ ಫ್ರಂಟ್ ಕ್ಯಾಮೆರಾ

ಬ್ಯಾಟರಿ-3200 ಎಂಎಎಚ್

ಪ್ರೊಸೆಸರ್- ಆಂಡ್ರಾಯ್ಡ್ 6.0

ಫಿಂಗರ್ ಫ್ರಿಂಟ್ ಸೆನ್ಸರ್ ಇದೆ

ಡ್ಯುಯೆಲ್ ಸಿಮ್- ಇದೆ. ಎರಡೂ 4ಜಿ

 OPPO F3

ಫ್ಯಾಷನ್ ವಿದ್ಯಾರ್ಥಿಯಾಗಿರುವ ಕಾರಣದಿಂದ ಯಾವಾಗಲೂ ನಮಗೆ ಪ್ರೇರಣೆ ಬೇಕಾಗುತ್ತದೆ. ಇದಕ್ಕಾಗಿ ನಾನು ಫೋಟೋ ತೆಗೆದು ಅದನ್ನು ಬಳಿಕ ಅಧ್ಯಯನ ಮಾಡುತ್ತೇವೆ. ಫೋನ್‌ನ ಕ್ಯಾಮರಾ ಗುಣಮಟ್ಟವು ನನ್ನನ್ನು ತುಂಬಾ ಆಕರ್ಷಿಸಿದೆ. 13 ಎಂಪಿ ರೇರ್ ಕ್ಯಾಮರಾವು ಅತ್ಯುತ್ತಮ ಸ್ಪಷ್ಟತೆಯೊಂದಿಗೆ ಉನ್ನತ ಮಟ್ಟದ ಫೋಟೋಗಳನ್ನು ತೆಗೆಯಲು ನೆರವಾಗುತ್ತದೆ. ಕೆಲವೊಂದು ಸಲ ತಿರುಗಾಡಲು ಹೋದಾಗ ಬೀದಿಯಲ್ಲಿರುವ ಕೆಲವೊಂದು ಡಿಸೈನ್‌ಗಳ ಫೋಟೋ ತೆಗೆದಿದ್ದೇನೆ. ಇದು ತುಂಬಾ ಸ್ಪಷ್ಟವಾಗಿದೆ. ಮೊಬೈಲ್‪ನ ಕ್ಯಾಮರಾ ಗುಣಮಟ್ಟವು ಅತ್ಯುತ್ತಮವಾಗಿದೆ.

ಒಪ್ಪೋ 3 ಮೊಬೈಲ್‌ನಿಂದ ತೆಗೆದಿರುವಂತಹ ಸೆಲ್ಫಿಗೆ ಬೇರೆ ಯಾವುದೇ ಸ್ಪರ್ಧಿಯಿಲ್ಲ. ಇದು ಬ್ಯೂಟಿಫೈ 4.0 ಮತ್ತು ಬ್ಲೆಮಿಶ್ ರಿಡಕ್ಷನ್ ಫೀಚರ್ ಹೊಂದಿದೆ. ಇದರಿಂದ ತೆಗೆದುಕೊಂಡ ಸೆಲ್ಫಿಯನ್ನು ಉತ್ತಮಪಡಿಸಬಹುದು. ಹಿಂಬದಿಯ ಚಿತ್ರಣವನ್ನು ಬ್ಲರ್ ಮಾಡುವಂತಹ ಫೀಚರ್ ಕೂಡ ಇದರಲ್ಲಿದೆ. ಇದು ಐಫೋನ್ 7ನಂತಿದೆ. ಇದರಲ್ಲಿರುವ ಪ್ಲಾಮ್ ಶಟರ್ ಅಟೋಮ್ಯಾಟಿಕ್ ಆಗಿ ಶಟರ್ ಕೌಂಟ್ ಡೌನ್ ಅನ್ನು ಆರಂಭಿಸುತ್ತದೆ. ನಾವು ತೆಗೆದುಕೊಂಡಿರುವ ಗ್ರೂಪ್ ಸೆಲ್ಫಿ ಮತ್ತು ಅದರ ಗುಣಮಟ್ಟದ ಬಗ್ಗೆ ನಮಗೆ ತುಂಬಾ ಸಂತೋಷವಿದೆ. ಇದರಲ್ಲಿರುವ ಡ್ಯುಯೆಲ್ ಫ್ರಂಟ್ ಕ್ಯಾಂರಾವು ಅತ್ಯುತ್ತಮವಾಗಿರುವಂತದ್ದಾಗಿದೆ. ಇದರಲ್ಲಿರುವ ವೈಡ್ ಆ್ಯಂಗಲ್ ನನ್ನ ಎಲ್ಲಾ ಸ್ನೇಹಿತರನ್ನು ಜತೆಯಾಗಿರುವಂತೆ ಮಾಡುತ್ತದೆ.

 OPPO F3

ಇದರಲ್ಲಿರುವ ಫುಲ್ ಎಚ್ ಡಿ ಡಿಸ್‌ಪ್ಲೇ ಯಿಂದಾಗಿ ಚಿತ್ರಗಳನ್ನು ಸರಿಯಾದ ಸ್ಪಷ್ಟತೆ ಮತ್ತು ನಿಜವಾದ ಬಣ್ಣದೊಂದಿಗೆ ಅಭ್ಯಸಿಸಲು ನೆರವಾಗುತ್ತದೆ. ಕಡಿಮೆ ಬೆಳಕಿನಲ್ಲಿಯೂ ಇದನ್ನು ಬಳಸಬಹುದು. ಯಾಕೆಂದರೆ ಇದರಲ್ಲಿರುವ ಐ ಪ್ರಾಟೆಕ್ಸನ್ ಕಣ್ಣಿಗೆ ಒತ್ತಡ ಬೀಳದಂತೆ ತಡೆಯುತ್ತದೆ. 64 ಜಿಬಿ ಒಳಗಿನ ಮೆಮೋರಿ ಎಷ್ಟು ಬೇಕೋ ಅಷ್ಟು ಚಿತ್ರಗಳನ್ನು ತೆಗೆಯಲು ನೆರವಾಗುತ್ತದೆ.

 OPPO F3

ಸ್ಮಾರ್ಟ್ ಫೋನ್‌ನ ಇಂಟರ್ ಫೇಸ್ ಅತ್ಯುತ್ತಮ ಮತ್ತು ವೇಗವಾಗಿದೆ. ಆ್ಯಪ್‌ಗಳನ್ನು ತೆರೆಯಲು ನನಗೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಮತ್ತು ಫಿಂಗರ್ ಪ್ರಿಂಟ್ ಸೆನ್ಸರ್ ಮತ್ತು ಸ್ಕ್ರೀನ್ ನೇವಿಗೇಟರ್ ಮೂಲಕ ಫೋನ್ ನ್ನು ಅನ್ ಲಾಕ್ ಮಾಡಬಹುದು. ಫೋನ್ ಹ್ಯಾಂಡ್ ಗೆಸ್ಚರ್ ಗೆ ಬೆಂಬಲವಾಗಿದೆ. ಇದರಿಂದ ಫೋನ್ ತುಂಬಾ ವೇಗ ಹಾಗೂ ಸರಳವಾಗಿದೆ. ಫೋನ್ ನ್ನು ಅನ್ ಲಾಕ್ ಮಾಡದೆ ಕ್ಯಾಮರಾ ಬಳಸಬೇಕಾದರೆ ಮೆನು ಸ್ಕ್ರೀನ್ ಗೆ ಹೋಗಿ ಕ್ಯಾಮರಾ ಬಟನ್ ಒತ್ತಿ ಸ್ಕ್ರೀನ್ ಅನ್ನು ಡಬಲ್ ಕ್ಲಿಕ್ ಮಾಡಿ ಓ ಎಂದು ಚಿತ್ರಿಸಿಕೊಳ್ಳಬೇಕು. ಮೊಬೈಲ್‌ನಲ್ಲಿ ಬ್ರೌಸ್ ಮಾಡುತ್ತಾ ಇರುವಾಗ ಯಾವುದಾದರೂ ತುಂಬಾ ಆಸಕ್ತಿದಾಯಕವೆಂದು ಕಂಡುಬಂದರೆ ಆಗ 3 ಫಿಂಗ್ ಸ್ಕ್ರೀನ್ ಶಾಟ್ ಬಳಸಿ ಇದನ್ನು ರೆಕಾರ್ಡ್ ಮಾಡಬಹುದು. ಇದು ಅತೀ ಸರಳವಾಗಿದೆ. ಫೋನ್‌ನ ಬ್ಯಾಟರಿ ದೀರ್ಘ ಕಾಲ ಬರುತ್ತದೆ. ಲೋ ಬ್ಯಾಟರಿ ಮೋಡ್ ನಲ್ಲಿ ಬ್ಯಾಟರಿಯನ್ನು ಹೆಚ್ಚು ಸಮಯ ಬಳಸಲು ಸಾಧ್ಯವಾಗುತ್ತದೆ.

 OPPO F3

ಫೋನ್‌ನಲ್ಲಿ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯಿದೆ. ಇದನ್ನು ನಾನು ಅಪ್ಪಿತಪ್ಪಿ ಕೆಳಗೆ ಹಾಕಿದರೂ ಅದರಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಅಂತಿಮವಾಗಿ ಹೇಳುವುದಾದರೆ ಇದು ವಿದ್ಯಾರ್ಥಿಗಳಿಗಾಗಿ ಹೇಳಿ ಮಾಡಿಸಿದಂತಹ ಫೋನ್ ಆಗಿದೆ. ಯಾವುದೇ ಫೈಲ್ ಅನ್ನು ಡೌನ್ ಲೋಡ್ ಮಾಡಿ ಅಭ್ಯಾಸ ಮಾಡಬಹುದು. ಇದು ತುಂಬಾ ಹಗುರವಾಗಿರುವ ಕಾರಣ ಹೆಚ್ಚು ಶ್ರಮವಿಲ್ಲದೆ ಕೊಂಡು ಹೋಗಬಹುದು. ಇದರ ಬ್ಯಾಟರ್ ಅದ್ಭುತವಾಗಿದೆ ಮತ್ತು ಫ್ರಂಟ್ ಮತ್ತು ಬ್ಯಾಕ್ ಕ್ಯಾಮೆರಾ ಅತ್ಯುತ್ತಮವಾಗಿದೆ. ಈ ಫೋನ್ ಸಂಪೂರ್ಣ ಪ್ಯಾಕೇಜ್‌ನ ಫೋನ್ ಎಂದರೆ ತಪ್ಪಾಗಲಾರದು.

English summary

oppo-wins-the-heart-of-the-student-community

In the world of smartphones today, OPPO phones have gathered millions of fans, and people are talking about the excellent camera quality that allows them to take crystal-clear selfies. However, it is not just the working class that has been impressed by this amazing phone. Even the student community has only good words to say about the new OPPO F3 phone.
Subscribe Newsletter