ಗಂಡು-ಹೆಣ್ಣುಗಳ ಶರೀರದ ಭಿನ್ನತೆ, ತಪ್ಪುಕಲ್ಪನೆ ಏತಕ್ಕೆ..?

By: Arshad
Subscribe to Boldsky

ನಿಸರ್ಗ ಜಗತ್ತಿನ ಜೀವಿಗಳನ್ನು ಗಂಡು ಮತ್ತು ಹೆಣ್ಣು ಎಂಬ ಪ್ರಬೇಧಗಳ ರೂಪದಲ್ಲಿ ಸೃಷ್ಟಿಸಿ ಜೀವಜಾಲ ಮುಂದುವರೆಯುವಂತೆ ವ್ಯವಸ್ಥೆ ಮಾಡಿದೆ. ಅಂತೆಯೇ ಪ್ರತಿ ಜೀವಿಯ ಹೆಣ್ಣು ಮತ್ತು ಗಂಡಿನ ಶರೀರ ರಚನೆ ಭಿನ್ನವಾಗಿರುತ್ತವೆ. ಗಂಡುನವಿಲಿಗೆ ಇರುವ ಸುಂದರ ಗರಿಗಳ ಬಾಲ ಹೆಣ್ಣುನವಿಲಿಗೆ ಇಲ್ಲ. ಇದೇ ತರಹ ಮಾನವರಲ್ಲಿಯೂ ಗಂಡು ಹೆಣ್ಣುಗಳ ಶರೀರದಲ್ಲಿ ಹಲವಾರು ಭಿನ್ನತೆ ಇವೆ.

ಈ ಭಿನ್ನತೆಗಳೇ ಪುರುಷರ ಆಕರ್ಷಣೆಗೆ ಕಾರಣವಾಗಿದೆ. ಆದರೆ ಬಾಹ್ಯ ನೋಟದಲ್ಲಿ ಕಾಣುವ ವ್ಯತ್ಯಾಸಕ್ಕಿಂತಲೂ ಎಷ್ಟೂ ಹೆಚ್ಚು ವ್ಯತ್ಯಾಸಗಳು ಶರೀರದ ಒಳಭಾಗದಲ್ಲಿವೆ. ಇದರಲ್ಲಿ ಅತ್ಯಂತ ಪ್ರಮುಖವಾದ ವ್ಯತ್ಯಾಸವೆಂದರೆ ಗರ್ಭಕೋಶದ ಇರುವಿಕೆ. ಇದೇ ರೀತಿಯ ಹಲವಾರು ವ್ಯತ್ಯಾಸಗಳನ್ನು ಪ್ರೌಢಶಾಲೆಯ ಜೀವಶಾಸ್ತ್ರದ ಪಠ್ಯಪುಸ್ತಕದಲ್ಲಿ ನಮಗೆ ವಿವರಿಸಲಾಗಿದ್ದರೂ ಪುಸ್ತಕದ ಬದನೇಕಾಯಿಗೆ ಪ್ರಾಮುಖ್ಯತೆ ನೀಡದ ನಮ್ಮ ಸೋಮಾರಿತನದ ಕಾರಣದಿಂದ ಇಂದಿಗೂ ನಮ್ಮಲ್ಲಿ ಹೆಚ್ಚಿನವರಿಗೆ ಹೆಣ್ಣಿನ ಶರೀರವೆಂದರೆ ನಿಗೂಢತೆಯ ಕೂಪವೇ ಆಗಿದೆ.    ಹೆಣ್ಣಿನ ಮನಸ್ಸೇ ಚಂಚಲ, ಅರ್ಥೈಸಿಕೊಳ್ಳುವುದೇ ಕಷ್ಟ!

ಇದೇ ಕಾರಣಕ್ಕೆ ಹೆಚ್ಚಿನ ಪುರುಷರು ಹೆಣ್ಣಿನ ಶರೀರದ ಒಳರಚನೆ ಮತ್ತು ಇತರ ನೈಸರ್ಗಿಕ ಕ್ರಿಯೆಗಳಿಗೆ ತಮ್ಮದೇ ಆದ ನಂಬಿಕೆಗಳನ್ನು ಹೊಂದಿದ್ದು ಬಹುತೇಕ ಉತ್ಪ್ರೇಕ್ಷೆ ಹಾಗೂ ಮಿಥ್ಯವೇ ಆಗಿವೆ. ಬನ್ನಿ, ಈಗಲಾದರೂ ವಿಜ್ಞಾನ ವಿವರಿಸಿರುವ ಸತ್ಯಸಂಗತಿಗಳನ್ನು ಅರಿತು ಮಹಿಳೆಯರ ಬಗ್ಗೆ ನಮಗೆ ಇರುವ ತಪ್ಪುಕಲ್ಪನೆಗಳನ್ನು ನಿವಾರಿಸಿ ಅವರ ಬಗ್ಗೆ ನಮಗಿರುವ ಗೌರವವನ್ನು ಇನ್ನಷ್ಟು ಹೆಚ್ಚಿಸೋಣ.....   

ತಪ್ಪುಕಲ್ಪನೆ#1: ಮಹಿಳೆಯರಿಗೆ ಕಂಠ ಕುಹರ (Adam’s Apple)ಇರುವುದಿಲ್ಲ

ತಪ್ಪುಕಲ್ಪನೆ#1: ಮಹಿಳೆಯರಿಗೆ ಕಂಠ ಕುಹರ (Adam’s Apple)ಇರುವುದಿಲ್ಲ

ಮಹಿಳೆಯರ ಸ್ವರ ಕೀರಲಾಗಿರಲಿಕ್ಕೆ ಇವರ ಗಂಟಲಲ್ಲಿ ಕಂಠಕುಹರ ಇಲ್ಲದಿರುವುದೇ ಕಾರಣ ಎಂದು ಹೆಚ್ಚಿನ ಪುರುಷರು ಇನ್ನೂ ತಿಳಿದಿದ್ದಾರೆ. ವಾಸ್ತವವಾಗಿ ಕಂಠಕುಹರವಿಲ್ಲದೇ ಇದ್ದರೆ ನಮಗೆ ಧ್ವನಿ ಹೊರಡಿಸಲೇ ಸಾಧ್ಯವಿಲ್ಲ.

ತಪ್ಪುಕಲ್ಪನೆ#1: ಮಹಿಳೆಯರಿಗೆ ಕಂಠ ಕುಹರ (Adam’s Apple)ಇರುವುದಿಲ್ಲ

ತಪ್ಪುಕಲ್ಪನೆ#1: ಮಹಿಳೆಯರಿಗೆ ಕಂಠ ಕುಹರ (Adam’s Apple)ಇರುವುದಿಲ್ಲ

ಪುರುಷರಲ್ಲಿರುವ ಟೆಸ್ಟೋಸ್ಟ್ರೆರೋನ್ ಹಾರ್ಮೋನಿನ ಕಾರಣದಿಂದ ಈ ಗಂಟಿನಂತಿರುವ ಭಾಗ ಒಂದು ಕೋನದಲ್ಲಿ ಕೊಂಚ ಹೆಚ್ಚು ಹೊರಗೆ ಒತ್ತಲ್ಪಟ್ಟಿರುತ್ತದೆ. ಅದೇ ಮಹಿಳೆಯರಲ್ಲಿ ಹೆಚ್ಚು ಒತ್ತಲ್ಪಟ್ಟಿರುವುದಿಲ್ಲ ಅಷ್ಟೇ. ಸೂಕ್ಷ್ಮವಾಗಿ ಗಮನಿಸಿದರೆ ಮಹಿಳೆಯರು ತಲೆ ಎತ್ತಿದಾಗ ಈ ಗಂಟು ಹೊರ ಉಬ್ಬುವುದನ್ನು ಗಮನಿಸಬಹುದು.

ತಪ್ಪುಕಲ್ಪನೆ#2: ಮಹಿಳೆಯರು ಸ್ಖಲಿಸುವುದಿಲ್ಲ!

ತಪ್ಪುಕಲ್ಪನೆ#2: ಮಹಿಳೆಯರು ಸ್ಖಲಿಸುವುದಿಲ್ಲ!

ಸ್ಖಲನ ಕೇವಲ ಪುರುಷರಿಗೆ ಮಾತ್ರ ಮೀಸಲು ಎಂದು ತಿಳಿದುಕೊಂಡಿದ್ದರೆ ಇದು ತಪ್ಪು. ವಾಸ್ತವವಾಗಿ ಸಮಾಗಮದ ಪರಾಕಾಷ್ಠೆಯ ಸಮಯದಲ್ಲಿ ಮಹಿಳೆಯರೂ ಕೊಂಚ ಪ್ರಮಾಣದಲ್ಲಿ ಪಿಚಕಾರಿಯಂತೆ ಸ್ಖಲಿಸುತ್ತಾರೆ. ಆದರೆ ಇದು ಮೂತ್ರವಿಸರ್ಜನೆ ಎಂದು ಹೆಚ್ಚಿನವರು ತಪ್ಪು ತಿಳಿದುಕೊಂಡಿದ್ದಾರೆ. ಶ್! ಇದು ಮಹಿಳೆಯರ ಸೀಕ್ರೆಟ್ ವಿಷಯ-ಹೆಚ್ಚಿನ ಕುತೂಹಲ!

ತಪ್ಪುಕಲ್ಪನೆ#3: ಮಹಿಳೆಯರ ಮೂತ್ರಕೋಶ ಚಿಕ್ಕದು

ತಪ್ಪುಕಲ್ಪನೆ#3: ಮಹಿಳೆಯರ ಮೂತ್ರಕೋಶ ಚಿಕ್ಕದು

ಮೂತ್ರಕೋಶದ ಗಾತ್ರ ಸುಮಾರು ಅರ್ಧ ಲೀಟರ್ ದ್ರವವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಅರ್ಧ ಲೀಟರ್ ಗಿಂತ ಹೆಚ್ಚಾಗುತ್ತಿದ್ದ ಹಾಗೇ ಆರು ನೂರು ಮಿಲಿ ಲೀ ಯವರೆಗೂ ಇದು ತಡೆದುಕೊಳ್ಳಬಹುದಾಗಿದ್ದು ಆ ಹೊತ್ತಿನಲ್ಲಿ ಮೆದುಳು ತಕ್ಷಣ ಖಾಲಿ ಮಾಡುವಂತೆ ಸೂಚನೆ ಕಳಿಸುತ್ತದೆ. ಇದು ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಸರಿಸಮ.

ತಪ್ಪುಕಲ್ಪನೆ#3: ಮಹಿಳೆಯರ ಮೂತ್ರಕೋಶ ಚಿಕ್ಕದು

ತಪ್ಪುಕಲ್ಪನೆ#3: ಮಹಿಳೆಯರ ಮೂತ್ರಕೋಶ ಚಿಕ್ಕದು

ಆದರೆ ಮಹಿಳೆಯರಲ್ಲಿ ಈ ಕೋಶ ಹೊಟ್ಟೆಯ ಕೆಳಭಾಗದಲ್ಲಿರುವ ಕಾರಣ ನಾನೂರು ಮಿಲಿ ಮೀ ನಷ್ಟು ತುಂಬಿಕೊಳ್ಳುತ್ತಿದ್ದಂತೆಯೇ ಸೂಚನೆ ಹೋಗುತ್ತದೆ. ಇದೇ ಕಾರಣಕ್ಕೆ ಮಹಿಳೆಯರು ಪುರುಷರಿಗಿಂತಲೂ ಹೆಚ್ಚು ಬಾರಿ ನಿಸರ್ಗದ ಕರೆಗೆ ಓಗೊಡುತ್ತಾರೆ. ಇದನ್ನು ಗಮನಿಸಿದ ಪುರುಷರು 'ಮಹಿಳೆಯರಿಗೆ ಚಿಕ್ಕ ಮೂತ್ರಕೋಶವಿದೆ' ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ.

ತಪ್ಪುಕಲ್ಪನೆ#4: ಮಹಿಳೆಯರಿಗೆ ಮಾತ್ರ ರಜೋನಿವೃತ್ತಿ

ತಪ್ಪುಕಲ್ಪನೆ#4: ಮಹಿಳೆಯರಿಗೆ ಮಾತ್ರ ರಜೋನಿವೃತ್ತಿ

ನಡುವಯಸ್ಸು ದಾಟಿದ ಮಹಿಳೆಯರ ಗರ್ಭಕೋಶದಲ್ಲಿ ಅಂಡಾಣುಗಳು ಉತ್ಪತ್ತಿಯಾಗುವ ಸಾಮರ್ಥ್ಯ ಮುಗಿದ ಬಳಿಕ ಮಾಸಿಕ ದಿನಗಳ ಕಾಲ ಮುಗಿಯುತ್ತದೆ. ಇದನ್ನೇ ಮೆನೋಪಾಸ್ ಅಥವಾ ರಜೋನಿವೃತ್ತಿ ಎಂದು ಕರೆಯುತ್ತಾರೆ. ಆದರೆ ಪುರುಷರಿಗೆ ಮಾಸಿಕ ದಿನ ಮೊದಲಾದ ಯಾವುದೇ ತೊಂದರೆ ಇಲ್ಲದ ಕಾರಣ ಜೀವಮಾನವಿಡೀ ನಿವೃತ್ತಿಯೇ ಇಲ್ಲ ಎಂದು ತಿಳಿದುಕೊಂಡಿರುತ್ತಾರೆ.

ತಪ್ಪುಕಲ್ಪನೆ#4: ಮಹಿಳೆಯರಿಗೆ ಮಾತ್ರ ರಜೋನಿವೃತ್ತಿ

ತಪ್ಪುಕಲ್ಪನೆ#4: ಮಹಿಳೆಯರಿಗೆ ಮಾತ್ರ ರಜೋನಿವೃತ್ತಿ

ವಾಸ್ತವವಾಗಿ ಪುರುಷರ ದೇಹದಲ್ಲಿರುವ ಟೆಸ್ಟಾಸ್ಟೆರಾನ್ ಎಂಬ ಹಾರ್ಮೋನು ಯಾವಾಗ ಉತ್ಪಾದನೆ ಕಡಿಮೆಯಾಗತೊಡಗಿತೋ ಆಗ ಪೌರುಷ ತೋರುವ ಶಕ್ತಿಗಳೆಲ್ಲಾ ಉಡುಗತೊಡಗುತ್ತವೆ. ಇದನ್ನೇ ಆಂಡ್ರೋಪಾಸ್ (andropause) ಎಂದು ಕರೆಯುತ್ತಾರೆ.

ತಪ್ಪುಕಲ್ಪನೆ #5: ಋತುಸ್ರಾವವೆಂದರೆ ದೇಹದ ಮಲಿನ ಹೊರಹೋಗುವುದು

ತಪ್ಪುಕಲ್ಪನೆ #5: ಋತುಸ್ರಾವವೆಂದರೆ ದೇಹದ ಮಲಿನ ಹೊರಹೋಗುವುದು

ಪುರುಷರಲ್ಲಿಯೇ ಆಗಲಿ, ಮಹಿಳೆಯರಲ್ಲಿಯೇ ಆಗಲಿ, ದೇಹದ ಮಲಿನ ಪದಾರ್ಥಗಳು ಹೊರ ಹೋಗುವುದು ಮೂತ್ರ ಮತ್ತು ಮಲವಿಸರ್ಜನೆಯ ಮೂಲಕ ಮಾತ್ರ. ಮಹಿಳೆಯರ ಮಾಸಿಕ ದಿನಗಳಲ್ಲಿ ದೇಹದಿಂದ ಹೊರಹರಿಯುವ ದ್ರವ ಗರ್ಭಕೋಶದ ಒಳಭಾಗದಿಂದ ಫಲಿತಗೊಳ್ಳದೇ ಇದ್ದ ಅಂಡಾಣು, ಹೊಸ ಅಂಡಾಣುವಿಗೆ ಸ್ಥಳಾವಕಾಶ ಮಾಡಿಕೊಡಲು ಹಳೆಯ ಗರ್ಭಕೋಶದ ಒಳಪದರವನ್ನು ನಿವಾರಿಸಿದಾಗ ಬರುವ ನಿರ್ಜೀವ ಜೀವಕೋಶಗಳು ಮತ್ತು ರಕ್ತ ಮಾತ್ರ.

ತಪ್ಪುಕಲ್ಪನೆ #5: ಋತುಸ್ರಾವವೆಂದರೆ ದೇಹದ ಮಲಿನ ಹೊರಹೋಗುವುದು

ತಪ್ಪುಕಲ್ಪನೆ #5: ಋತುಸ್ರಾವವೆಂದರೆ ದೇಹದ ಮಲಿನ ಹೊರಹೋಗುವುದು

ಇದರ ಹೊರತಾಗಿ ಗರ್ಭಕೋಶದಲ್ಲಿ ಒಂದು ವೇಳೆ ಸೋಂಕು ಉಂಟಾಗಿದ್ದರೆ ಇದನ್ನು ಹೊರಹಾಕಲು ರಕ್ತದ ಬಿಳಿಕಣಗಳು ವೀರಾವೇಶದಿಂದ ಹೋರಾಡಿ ಸತ್ತು ಹೊರಬರುವಾಗ ಕೊಂಚ ಬಿಳಿಬಣ್ಣದ ಸ್ರಾವ. ಇವು ದೇಹದ ಸ್ರಾವಗಳೇ ಹೊರತು ಮಲಿನ ಪದಾರ್ಥಗಳಲ್ಲ.

 
English summary

Misconceptions Men Have About Female Body

We are here to clear some of the misconceptions and myths related to female bodies that most of us are not aware of! So, check out some of these interesting misconceptions that need to be cleared and we're sure after this, most men would not have the kind of doubts they had earlier.
Please Wait while comments are loading...
Subscribe Newsletter