Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಹೆಣ್ಣಿನ ಮನಸ್ಸೇ ಚಂಚಲ, ಅರ್ಥೈಸಿಕೊಳ್ಳುವುದೇ ಕಷ್ಟ!
ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಸಾಧ್ಯವಿಲ್ಲ ಎಂಬ ಸುಭಾಷಿತವೊಂದಿದೆ. ಏಕೆಂದರೆ ವಿಷಯಗಳು ಒಂದೇ ಆದರೂ ಮಹಿಳೆಯರು ಮತ್ತು ಪುರುಷರು ಇದನ್ನು ಅರ್ಥೈಸಿಕೊಳ್ಳುವ ಕ್ರಮದಲ್ಲಿ ಕೊಂಚ ವ್ಯತ್ಯಾಸವಿರುತ್ತದೆ. ನಮ್ಮ ದೇಹಗಳಲ್ಲಿರುವ ಹಾರ್ಮೋನುಗಳು ಇದಕ್ಕೆ ಪ್ರಮುಖ ಕಾರಣ. (ಭಿಕ್ಷುಕರಿಗೆ ಈ ವ್ಯತ್ಯಾಸ ಚೆನ್ನಾಗಿ ಗೊತ್ತು, ಅದಕ್ಕೇ ಅವರು ಅಮ್ಮಾ ತಾಯೇ ಎಂದೇ ಭಿಕ್ಷೆ ಬೇಡುತ್ತಾರೆಯೇ ವಿನಃ ಅಪ್ಪಾ, ತಂದೇ ಎಂದು ಎಂದಿಗೂ ಕರೆಯುವುದಿಲ್ಲ..!)
ಯಾವುದೇ ವ್ಯಕ್ತಿಯನ್ನು ಮೊದಲು ನೋಡಿದಾಗ ಅವರ ಬಾಹ್ಯ ಲಕ್ಷಣಗಳು ಪ್ರಮುಖವಾಗಿ ಆಕರ್ಷಿಸುತ್ತವೆ. ಆದರೆ ಜೀವನಸಂಗಾತಿಗಳನ್ನು ಆರಿಸಿಕೊಳ್ಳುವಾಗ ಬಾಹ್ಯ ಲಕ್ಷಣಗಳಿಗಿಂತಲೂ ಅವರ ಆಂತರಿಕ ಮತ್ತು ನೈಜಗುಣಗಳೇ ಮಹತ್ವ ಪಡೆಯುತ್ತವೆ ಹಾಗೂ ಪಡೆಯಬೇಕು ಸಹಾ.

ಆದರೆ ಇನ್ನೇನು ವಿವಾಹಕ್ಕೆ ಒಪ್ಪಿಗೆ ನೀಡಬೇಕು ಎನ್ನುವಷ್ಟು ನಿಕಟಗೊಂಡ ಸಂಬಂಧಗಳಲ್ಲಿ ನಿಧಾನವಾಗಿ ಯುವತಿಯರು ತಮ್ಮ ಸಂಗಾತಿಯಾಗುವವರತ್ತ ಸ್ಪಷ್ಟ ನಿಲುವು ತೋರದೇ ಆಟವಾಡಿಸುವುದು ಕಂಡುಬರುತ್ತದೆ. ಆದ್ದರಿಂದ ಮಹಿಳೆಯರ ಯೋಚನಾಲಹರಿಯನ್ನು ಅರ್ಥೈಸಿಕೊಳ್ಳಲು ಪುರುಷರು ಕೆಲವೊಮ್ಮೆ ವಿಫಲರಾಗುತ್ತಾರೆ. ಅದರಲ್ಲೂ ಸಂಬಂಧ ವಿವಾಹದಲ್ಲಿ ಕೊನೆಗೊಳ್ಳುವ ಹೊತ್ತಿನಲ್ಲಿ ಕೆಲವು ಯುವತಿಯರು ವಿಚಿತ್ರವಾಗಿ ವರ್ತಿಸುತ್ತಾರೆ.
ಆಕೆಯ ವರ್ತನೆ ನಿಮ್ಮ ತಾಳ್ಮೆಯನ್ನು ಅಪಾರವಾಗಿ ಪರೀಕ್ಷಿಸುವಂತಿರುತ್ತದೆ. ಆಕೆಗೆ ಸ್ಪಷ್ಟವಾದ ನಿರ್ಧಾರ ಪ್ರಕಟಿಸಲು ಹೆಚ್ಚಿನ ಸಮಯ ಬೇಕೋ, ಅಥವಾ ನಿಮ್ಮ ಬದಲಿಗೆ ಬೇರೆ ಯಾರಾದರೂ ಸಿಕ್ಕರಬಹುದೋ ಎಂಬ ಅನುಮಾನಗಳೂ ಉಂಟಾಗುತ್ತವೆ. ಈ ಸಮಯದಲ್ಲಿ ನೀವು ಆಕೆಗೆ ಸಮಯಾವಕಾಶ ನೀಡಿ ಆಕೆಯ ನಿಲುವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅಗತ್ಯ. ಒಂದು ವೇಳೆ ಸ್ಪಷ್ಟವಾದರೆ ಮುಂದೆ ಹೋಗಿ ಈ ಸಂಬಂಧದಲ್ಲಿ ಬಿರುಕುಂಟಾಗುವುದನ್ನು ಮೊದಲೇ ತಪ್ಪಿಸಬಹುದು.
ಒಂದು ವೇಳೆ ಇದನ್ನು ಅರ್ಥಮಾಡಿಕೊಳ್ಳದೇ ನೀವು ಆಕೆಯ ಮೇಲೆ ಒತ್ತಡ ಹೇರಿದರೆ ಆಕೆ ಅದಕ್ಕೆ ಸಾರ್ವಜನಿಕವಾಗಿ ನಿಮಗೆ ಮುಜುಗರ ಹುಟ್ಟಿಸುವಂತೆ ಪ್ರತಿಕ್ರಿಯಿಸಬಹುದು. ಇದು ನಿಮ್ಮ ಪ್ರತಿ ಸಮಾಜದ ದೃಷ್ಟಿಯನ್ನು ನಿಮ್ಮ ಊಹೆಗೂ ನಿಲುಕದಷ್ಟು ಹೆಚ್ಚು ಘಾಸಿಗೊಳಿಸಬಹುದು. ಏಕೆಂದರೆ ಪ್ರಥಮ ನೋಟದಲ್ಲಿ ಸಮಾಜ ಹೆಣ್ಣಿನ ಭಾವನೆಗೇ ಹೆಚ್ಚಿನ ಮಹತ್ವ ನೀಡುತ್ತದೆ, ಮತ್ತು ಇದು ಯುವತಿಯರಿಗೆ ಚೆನ್ನಾಗಿ ಗೊತ್ತು! ನಿಮ್ಮ ಸಂಬಂಧ ಈ ನಿಟ್ಟಿನಲ್ಲಿ ಮುಂದುವರೆಯುತ್ತಿದೆಯೇ? ನಿಮ್ಮನ್ನು ಸ್ವತಃ ಸಂಭಾಳಿಸಿಕೊಂಡು ಈ ಜಾಲದಲ್ಲಿ ಸಿಲುಕುವ ಮುನ್ನ ಹೊರಬರಲು ನಿಮಗೆ ಕೆಳಗಿನ ಸ್ಲೈಡ್ ಶೋ ನೆರವಿಗೆ ಬರಲಿದೆ.
ಆಕೆ ನಿಮ್ಮ ಗಮನ ಬಯಸುತ್ತಾಳೆ ಆದರೆ ಸಾಮೀಪ್ಯವನ್ನಲ್ಲ
ಆಕೆಯ ಚರ್ಯೆಗಳು ನಿಮ್ಮ ಗಮನವನ್ನು ತನ್ನೆಡೆಗೆ ಸೆಳೆಯುವಂತಿರುತ್ತವೆ. ಆದರೆ ನೀವು ಯಾವುದೇ ವಿಷಯವನ್ನು ಆಕೆಯಲ್ಲಿ ಪ್ರಸ್ತಾಪಿಸಿದ ತಕ್ಷಣ ಆಕೆಯ ಪ್ರತಿಕ್ರಿಯೆ ಒಂದು ವೇಳೆ ಥಟ್ಟನೇ ಮತ್ತು ನಿಮ್ಮ ಊಹೆಗೆ ವಿರುದ್ಧವಾಗಿದ್ದರೆ ಆಕೆಯ ಮನಸ್ಸಿನಲ್ಲಿ ಬೇರೇನೋ ನಡೆಯುತ್ತಿದೆ ಎಂದು ಅರ್ಥೈಸಿಕೊಳ್ಳಬಹುದು. ನೀವು ಆಕೆಯ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದರೆ ಸ್ವೀಕರಿಸುವ ಆಕೆ ಭವಿಷ್ಯದ ಬಗೆಗಿನ ನಿಮ್ಮ ನಿಲುವನ್ನು ಸ್ಪಷ್ಟವಾಗಿ ನಿರಾಕರಿಸುತ್ತಾಳೆ. ಇದು ನಿಮಗೆ ದೂರ ಹೋಗಲು ಹೇಳುವ ಸ್ಪಷ್ಟ ಸೂಚನೆಯಾಗಿದೆ.
ಚೆಲ್ಲಾಟಕ್ಕೆ ಸರಿ, ಆದರೆ ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ತಯಾರಿಲ್ಲ
ಇತ್ತೀಚೆಗೆ ಹೆಚ್ಚಿನ ಯುವತಿಯರಿಂದ ಈ ತರಹದ ನಡವಳಿಕೆ ಹೆಚ್ಚಾಗಿ ಕಂಡುಬರುತ್ತಿದೆ. ಏಕೆಂದರೆ ಪುರುಷರ ಚೆಲ್ಲಾಟಕ್ಕೆ ಕೊಂಚವೇ ಪ್ರತಿಕ್ರಿಯಿಸಿದರೂ ಪುರುಷರು ಕೈ ಚೆಲ್ಲಿ ಖರ್ಚು ಮಾಡುವ ಕಾರಣ ಸಮಾಜದಲ್ಲಿ ಸಿಗುವ ಎಲ್ಲಾ ಮಜಾ ಮತ್ತು ಐಷಾರಾಮಗಳಿಗೆ ಈ ಚೆಲ್ಲಾಟ ಅವರಿಗೆ ಒಂದು ಟಿಕೆಟಿನ ರೂಪದಲ್ಲಿರುತ್ತದೆ. ಆದ್ದರಿಂದ ಪುರುಷರು ಎಲ್ಲಿಯವರೆಗೆ ಯುವತಿಯರಿಗಾಗಿ ಖರ್ಚು ಮಾಡಲು ತಯಾರಿರುತ್ತಾರೋ ಅಲ್ಲಿಯವರೆಗೆ ನಗುನಗುತ್ತಾ ಸ್ಪಂದಿಸುತ್ತಾರೆ.
ಆದರೆ ಒಮ್ಮೆ ಪುರುಷರು ಈ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಮಾತೆತ್ತಿದ ಕೂಡಲೇ ಯುವತಿಯರು ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾರೆ. ಹೆಚ್ಚಾಗಿ ಪುರುಷರು ತಮ್ಮಿಂದ ಏನಾದರೂ ತಪ್ಪಾಯಿತೇ ಎಂದು ದ್ವಂದ್ವಕ್ಕೊಳಾಗುತ್ತಾರೆ. ಹೆಚ್ಚಿನ ಎಲ್ಲಾ ಪುರುಷರು ಕಡೆಗೆ ಒಂದೇ ಪ್ರಶ್ನೆಗೆ ಬಂದು ತಲುಪುತ್ತಾರೆ:"ಆಕೆ ನನಗೆ ಮೋಸ ಮಾಡುತ್ತಾಳೆಯೇ?"
ಆಕೆ ಸಕರಾತ್ಮಕವಾಗಿ ಸ್ಪಂದಿಸಿದರೂ ನಿಮ್ಮಲ್ಲಿ ಅನುರಕ್ತಳಾಗಿಲ್ಲ
ನಿಮ್ಮ ಭಾವನೆಗಳಿಗೆ ಹೆಚ್ಚಿನ ಪಕ್ಷದಲ್ಲಿ ಆಕೆ ಸಕಾರಾತ್ಮಕವಾಗಿ ಸ್ಪಂದಿಸಿದರೂ ಆಕೆಯ ನಿಲುವು ನಿಮ್ಮ ಪ್ರತಿ ಸ್ಪಷ್ಟವಾಗಿರುವುದಿಲ್ಲ. ಏಕೆಂದರೆ ಆಕೆಗೆ ನಿಮ್ಮ ಬೇರಾವುದೋ ಕಲೆ (ಉದಾಹರಣೆಗೆ ಐಶ್ವರ್ಯ ಅಥವಾ ಸಮಾಜದಲ್ಲಿ ಗಣ್ಯಸ್ಥಾನ) ಆಕರ್ಷಣೀಯವಾಗಿದ್ದು ಆಕೆ ನಿಮ್ಮೆಡೆಗೆ ಒಲವು ತೋರುತ್ತಿದ್ದಿರಬಹುದು.
ಇದರ ಅರ್ಥ ಆಕೆ ನಿಮ್ಮನ್ನು ಮನಸಾರೆ ಪ್ರೀತಿಸುತ್ತಿದ್ದಾಳೆ ಎಂದಲ್ಲ. ವಾಸ್ತವವೆಂದರೆ ಆಕೆ ನಿಮ್ಮಲ್ಲಿ ಅನುರಕ್ತಳಾಗಿಯೇ ಇಲ್ಲ! ಕೇವಲ ನಿಮ್ಮ ವರ್ಚಸ್ಸನ್ನು ತನ್ನ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿದ್ದಾಳೆ ಅಷ್ಟೇ. ಸಾಮಾನ್ಯವಾಗಿ ಸಮಾಜದ ಶ್ರೀಮಂತ ಮತ್ತು ಗಣ್ಯಸ್ಥಾನದಲ್ಲಿರುವ ವ್ಯಕ್ತಿಗಳ ಸ್ನೇಹಿತೆಯರು ಈ ನಿಲುವನ್ನು ತಾಳುತ್ತಾರೆ.



Click it and Unblock the Notifications













