For Quick Alerts
ALLOW NOTIFICATIONS  
For Daily Alerts

ವಿಜ್ಞಾನ, ತಂತ್ರಜ್ಞಾನ ಎಷ್ಟೇ ಬೆಳೆದರೂ, ಇನ್ನೂ ಉತ್ತರ ಸಿಗುತ್ತಿಲ್ಲ!

By Deepu
|

ಏಕತೆಯಲ್ಲಿ ಅನೇಕತೆ ಎಂಬುದು ಭಾರತಕ್ಕಿರುವ ಹೆಮ್ಮೆಯಾಗಿದೆ. ವಿವಿಧ ಸಂಸ್ಕೃತಿ, ಅನೇಕ ಆಚಾರ ವಿಚಾರಗಳು, ಸಂಪ್ರದಾಯಗಳು, ವಿವಿಧ ಧರ್ಮಗಳು ಹೀಗೆ ಬೇರೆ ದೇಶಗಳಿಗಿಂತಲೂ ಭಾರತ ಅನೂಹ್ಯವಾದುದು ಐಕ್ಯತೆಯನ್ನು ಹೊಂದಿರುವಂಥದ್ದು.

ಅಷ್ಟೇ ಅಲ್ಲದೆ ನಮ್ಮ ದೇಶದಲ್ಲಿ ಸ್ವಾಂತತ್ರ್ಯಕ್ಕೆ ಏನೂ ಕೊರತೆಯಿಲ್ಲ. ಆಚಾರ ವಿಚಾರಗಳನ್ನು ಯಾವುದೇ ಕಟ್ಟುಪಾಡುಗಳಿಲ್ಲದೆ, ಮುಕ್ತವಾಗಿ ಇಲ್ಲಿ ಪ್ರಕಟಿಸಬಹುದು. ಆದ್ದರಿಂದಲೇ ನಮ್ಮ ದೇಶ ವಿದೇಶದವರನ್ನು ಸೆಳೆಯುತ್ತಿದೆ. ನಮ್ಮ ಪದ್ಧತಿಗಳನ್ನು ಅವರೂ ಆಚರಿಸುವಂತೆ ಈ ಆಚರಣೆಗಳು ಅವರನ್ನು ಪ್ರೇರೇಪಿಸಿವೆ. ಒಂದು ರೀತಿಯಲ್ಲಿ ಇಲ್ಲಿರುವ ಜನರಿಗೆ ಸರ್ವ ಸ್ವಾತಂತ್ರ್ಯವೂ ದೊರೆಯುತ್ತದೆ.

ದೇಶದಲ್ಲಿ ಹೇಗೆ ಸಮಗ್ರತೆ ಒಂದಾಗಿ ಮಿಳಿತಗೊಂಡಿದೆಯೋ ಹಾಗೆಯೇ ಕೆಲವೊಂದು ನಿಗೂಢಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಈ ನಿಗೂಢತೆಗಳು ಬರೀ ರಹಸ್ಯವನ್ನು ಮಾತ್ರ ಒಳಗೊಂಡಿರದೇ ತನ್ನದೇ ವಿಶೇಷತೆಯನ್ನು ಒಳಗೊಂಡಿದೆ. ಪ್ರಪಂಚದ ಯಾವ ಮೂಲೆಗಳಲ್ಲೂ ಈ ರೀತಿಯ ಅತಿ ವಿಶೇಷ ನಿಗೂಢತೆಗಳನ್ನು ನಿಮಗೆ ಕಾಣಲು ಕಂಡಿರಲು ಸಾಧ್ಯವಿಲ್ಲ. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಭಾರತದಲ್ಲಿರುವ ಅತಿ ವಿಸ್ಮಯಕಾರಿ ಅಂಶಗಳನ್ನು ನೋಡೋಣ.

ಅವಳಿ ಹಳ್ಳಿಗಳು

ಅವಳಿ ಹಳ್ಳಿಗಳು

ಕೇರಳದಲ್ಲಿರುವ ಕೊಡಿನ್ಹಿ ಗ್ರಾಮವು ಅವಳಿಗಳಿಗಾಗಿ ಭಾರೀ ಖ್ಯಾತಿಯನ್ನು ಪಡೆದಿದೆ. ಈ ಪುಟ್ಟ ಗ್ರಾಮದಲ್ಲಿ ಸುಮಾರು 2000 ದಷ್ಟು ಜನರು ವಾಸವಾಗಿದ್ದಾರೆ. ಅದರಲ್ಲಿ ಬರೋಬ್ಬರಿ 200 ಅವಳಿ-ಜವಳಿಗಳು ಇದ್ದಾರೆ.

Image courtesy - www.thebinnews.com

ಅವಳಿ ಹಳ್ಳಿಗಳು

ಅವಳಿ ಹಳ್ಳಿಗಳು

ವಿಜ್ಞಾನಿಗಳು ಅದರ ಹಿಂದಿನ ಕಾರಣಗಳನ್ನು ಇಂದಿಗೂ ಹುಡುಕುತ್ತಲೇ ಇದ್ದಾರೆ. ಇಡಿ ದೇಶದಲ್ಲಿ ಅವಳಿಗಳ ಅನುಪಾತ ಕಡಿಮೆ ಇದ್ದಾಗಲೂ ಸಹ ಈ ಗ್ರಾಮದಲ್ಲಿ ಅವಳಿಗಳ ಸಂಖ್ಯೆ ಅಧಿಕ ಮಟ್ಟದಲ್ಲಿ ಏಕೆ ಇದೆ ಎಂಬ ಕುರಿತು ನಿಖರ ಕಾರಣ ಇಂದಿಗೂ ಸಿಕ್ಕಿಲ್ಲ.

Image courtesy - www.thebinnews.com

ಜೋಧ್‌ಪುರ್‌ನ ಸ್ಫೋಟ

ಜೋಧ್‌ಪುರ್‌ನ ಸ್ಫೋಟ

ಡಿಸೆಂಬರ್ 18 2012 ರಂದು ಕಿವಿಗಡಚಿಕ್ಕುವ ಒಂದು ಆ ಸ್ಫೋಟಕಾರಿ ಸದ್ದಿಗೆ ಜೋಧ್‌ಪುರ್ ಸಾಕ್ಷಿಯಾಯಿತು. ವಿವರಿಸಲು ಸಾಧ್ಯವಾಗದ ಒಂದು ಸ್ಫೋಟವನ್ನು ಇಲ್ಲಿನ ಜನರು ಕೇಳಿದಾರೆ. ಇದು ಆಕಾಶದಲ್ಲಿ ಸಂಭವಿಸಿತು ಎನ್ನುವುದು ಮತ್ತೊಂದು ವಿಸ್ಮಯ. ವಿಜ್ಞಾನಿಗಳ ಪ್ರಕಾರ ಇಂತಹ ಸದ್ದನ್ನು ಅವರು ಇದುವರೆಗೂ ಕೇಳಿರಲಿಲ್ಲವಂತೆ. ಇಂದಿಗೂ ಸಹ ಜೋಧ್‌ಪುರ್ ಸ್ಫೋಟವು ವಿವರಣೆಗೆ ನಿಲುಕದೆ ಹಾಗೆಯೇ ಇದೆ.

Photo Courtesy: Ghirlandajo

9 ಅನಾಮಿಕರು

9 ಅನಾಮಿಕರು

ಭಾರತವು ತನ್ನದೆ ಆದ ಗುಪ್ತ ಕತೆಗಳನ್ನು ಹೊಂದಿದೆ. 9 ಅನಾಮಿಕರು ಅಥವಾ ಗೊತ್ತಿರದ ಜನರು ಒಂದು ರಹಸ್ಯ ಸಂಘಕ್ಕೆ ಸೇರಿದವರಂತೆ. ಸಾಮ್ರಾಟ ಅಶೋಕನಿಂದ ಖುದ್ದಾಗಿ ಆರಂಭಿಸಲ್ಪಟ್ಟ ಈ ಪಂಥವು 9 ಜನ ಅನಾಮಿಕರನ್ನು ಒಳಗೊಂಡಿರುತ್ತದೆ. ವರು ಮನಃಶಾಸ್ತ್ರೀಯ ಯುದ್ಧ ಕಲೆ, ಬಾಹ್ಯಾಕಾಶ ಜೀವಿಗಳ ಜೊತೆಗೆ ಸಂವಾದ ನಡೆಸುವುದು, ಗುರುತ್ವಾಕರ್ಷಣೆಯನ್ನು ಇಲ್ಲವಾಗಿಸುವುದು ಇತರೆ ಕಲೆಗಳಲ್ಲಿ ಪರಿಣತಿಯನ್ನು ಪಡೆದಿದ್ದಾರಂತೆ. ಈ ಪಂಥವು ಇಂದಿಗು ಅಸ್ತಿತ್ವದಲ್ಲಿದೆ ಎಂಬ ನಂಬಿಕೆಗಳು ಚಾಲ್ತಿಯಲ್ಲಿವೆ. ಆದರೆ ಈ 9 ಜನರನ್ನು ನೋಡಿದವರು ಯಾರೂ ಇಲ್ಲ. ಅದು ಇಂದಿಗು ರಹಸ್ಯವಾಗಿ ಉಳಿದಿದೆ.

Pic - shanepedia.wordpress.com

ಶಾಪಗ್ರಸ್ಥ ಗ್ರಾಮ - ಕುಲ್‌ಧಾರಾ

ಶಾಪಗ್ರಸ್ಥ ಗ್ರಾಮ - ಕುಲ್‌ಧಾರಾ

ಕುಲ್‌ಧಾರಾ ಎಂಬ ಗ್ರಾಮವು ರಾಜಸ್ಥಾನದಲ್ಲಿದೆ. ಇದು ಇಂದಿಗೂ ಸಹ ಅವಶೇಷಗಳಲ್ಲಿಯೇ ಇದೆ. ಒಂದು ಶಾಪದ ನಿಮಿತ್ತವಾಗಿ ಈ ಗ್ರಾಮವು ಶಾಪಗ್ರಸ್ತವಾಗಿ ಇಂದಿನ ಸ್ಥಿತಿಗೆ ತಲುಪಿತು ಎಂದು ಹೇಳಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

www.rajasthangk.net

ಶಾಪಗ್ರಸ್ಥ ಗ್ರಾಮ - ಕುಲ್‌ಧಾರಾ

ಶಾಪಗ್ರಸ್ಥ ಗ್ರಾಮ - ಕುಲ್‌ಧಾರಾ

ಒಂದಾನೊಂದು ಕಾಲದಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದ ಈ ಗ್ರಾಮವು ರಾತ್ರೋ ರಾತ್ರಿ ಜನರಿಲ್ಲದೆ ಸ್ಮಶಾನದಂತಾಗಿದ್ದು ಮಾತ್ರ ಇಂದಿಗು ಬಗೆಹರಿಸಲಾಗದ ರಹಸ್ಯವಾಗಿ ಉಳಿದಿದೆ.

www.rajasthangk.net

ಕೊಂಗ್‌ಕ ಲಾ ಪಾಸ್ ಬಾಹ್ಯಾಕಾಶ ಜೀವಿಗಳ ನೌಕಾ ನೆಲೆ

ಕೊಂಗ್‌ಕ ಲಾ ಪಾಸ್ ಬಾಹ್ಯಾಕಾಶ ಜೀವಿಗಳ ನೌಕಾ ನೆಲೆ

ಭಾರತ ಚೀನಾ ಗಡಿಯಲ್ಲಿ ಕೊಂಗ್‌ಕ ಲಾ ಪಾಸ್ ಎಂಬ ಸ್ಥಳವಿದೆ. ಇಲ್ಲಿ ಆಗಮಿಸುವವರು ಆಕಾಶವನ್ನೇ ನೋಡುತ್ತಾ ಇರುತ್ತಾರೆ. ಇಲ್ಲಿ ನೀರವ ಮೌನ, ವಿಚಿತ್ರವಾದ ಸದ್ದು ಇತ್ಯಾದಿಗಳನ್ನು ನಾವು ಗಮನಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Pic - ufosightingshotspot

ಕೊಂಗ್‌ಕ ಲಾ ಪಾಸ್ ಬಾಹ್ಯಾಕಾಶ ಜೀವಿಗಳ ನೌಕಾ ನೆಲೆ

ಕೊಂಗ್‌ಕ ಲಾ ಪಾಸ್ ಬಾಹ್ಯಾಕಾಶ ಜೀವಿಗಳ ನೌಕಾ ನೆಲೆ

ಈ ಸ್ಥಳವು ನಮ್ಮ ಪಟ್ಟಿಯಲ್ಲಿ ಸ್ಥಾನಪಡೆಯಲು ಕಾರಣ ಇದು ಬಾಹ್ಯಾಕಾಶ ಜೀವಿಗಳ ನೌಕಾ ನೆಲೆಯಂತೆ. (ಅಂದರೆ ಯುಎಫ್‌ಒ ಬೇಸ್) ಹೌದು ಇಲ್ಲಿನ ಜನರು ಚಿತ್ರ ವಿಚಿತ್ರ ಬಾಹ್ಯಾಕಾಶ ನೌಕೆಗಳನ್ನು ನೋಡಿದ್ದಾರೆ. ಇಲ್ಲಿಗೆ ಭೇಟಿ ನೀಡಿದಾಗ ನೀವು ಒಂದನ್ನು ನೋಡಬಹುದು ಎಂಬುದು ಅವರ ನಂಬಿಕೆ.

Pic - ufosightingshotspot

ಸುಭಾಷ್ ಚಂದ್ರ ಬೋಸ್‌ರ ಮರಣ

ಸುಭಾಷ್ ಚಂದ್ರ ಬೋಸ್‌ರ ಮರಣ

ನೇತಾಜಿ ಎಂದು ಕರೆಯುವ ನಮ್ಮ ಹೆಮ್ಮೆಯ ನಾಯಕನ ಕಣ್ಮರೆ ಇಂದಿಗೂ ನಿಗೂಢ. ಇತಿಹಾಸದ ಪ್ರಕಾರ ಅವರು 1945 ರಲ್ಲಿ ವಿಮಾನ ಅಪಘಾತದಲ್ಲಿ ಮಡಿದರು.

ಸುಭಾಷ್ ಚಂದ್ರ ಬೋಸ್‌ರ ಮರಣ

ಸುಭಾಷ್ ಚಂದ್ರ ಬೋಸ್‌ರ ಮರಣ

ಮತ್ತೊಂದು ವಾದದ ಪ್ರಕಾರ ಇವರನ್ನು ಸ್ಟಾಲಿನ್ ಹತ್ಯೆ ಮಾಡಿದನಂತೆ. ಇನ್ನೂ ಕೆಲವರ ವಾದದ ಪ್ರಕಾರ ಇವರು ಭೂಗತರಾಗಿ ಜೀವಿಸಿದರಂತೆ, ಇನ್ನೂ ಕೆಲವರು 1985ರಲ್ಲಿಯೇ ಅವರು ಸಹಜ ಸಾವನ್ನಪ್ಪಿದರೆಂದು ಅಭಿಪ್ರಾಯಪಡುತ್ತಾರೆ. ಆದರೆ ಸತ್ಯ ಇನ್ನಷ್ಟೇ ಹೊರ ಬರಬೇಕಿದೆ.

ಅನಂತಪುರದ ನೇತಾಡುವ ಕಂಬ

ಅನಂತಪುರದ ನೇತಾಡುವ ಕಂಬ

ಅನಂತಪುರದಲ್ಲಿರುವ ಲೇಪಾಕ್ಷಿಯ ನೇತಾಡುವ ಕಂಬು ವಿಸ್ಮಯಗಳ ತಾಣವಾಗಿದೆ. ಇಲ್ಲಿ 70 ಸದೃಢ ಕಂಬಗಳು ದೇವಾಲಯದ ಭಾರವನ್ನು ಹೊತ್ತುಕೊಂಡಿವೆ. ಆದರೂ ಇಲ್ಲಿ ಒಂದು ಕಂಬ ಜನರ ಆಕರ್ಷಣೆಗೆ ಪಾತ್ರವಾಗಿದೆ. ಅದನ್ನು ನೇತಾಡುವ ಕಂಬವೆಂದು ಗುರುತಿಸಲಾಗುತ್ತದೆ. ಅದು ನೆಲವನ್ನು ತಾಕದೆ, ಸ್ವಲ್ಪ ಮೇಲೆಯೇ ನಿಂತಿದೆ. ಒಂದು ಪೇಪರ್ ಅಥವಾ ತೆಳುವಾದ ಕಟ್ಟಿಗೆಯನ್ನು ಅದರ ಕೆಳಗೆ ಹಾಯಿಸಿ ಬೇಕಾದರೂ ನೀವು ಪರೀಕ್ಷಿಸಬಹುದು. ಈ ಕಂಬ ಹೇಗೆ ನೇತಾಡುತ್ತಿದೆ ಎಂಬುದೇ ರಹಸ್ಯವಾಗಿ ಇಂದಿಗೂ ಉಳಿದುಕೊಂಡಿದೆ.

courtesy - http://allindiaroundup.com

ಭೂತ ಪ್ರೇತಗಳ ಕಥೆ

ಭೂತ ಪ್ರೇತಗಳ ಕಥೆ

ಎಂತಹ ಧೈರ್ಯವಂತನ ಎದೆ ನಡುಗಿಸುವ ಭಯಂಕರ ಸ್ಥಳಗಳು!

English summary

Unsolved Mysteries Of India That Will Give You The Creeps

The land of tantriks and black magic, India has enthralled generations and generations of scientists and researchers with mysteries that till today remain unsolved and unexplained. Let’s take a look at some of these mysteries of India that have baffled people throughout the ages.
X
Desktop Bottom Promotion