For Quick Alerts
ALLOW NOTIFICATIONS  
For Daily Alerts

ಒಬ್ಬಂಟಿತನದಲ್ಲಿ ಹಣದ ಸಮಸ್ಯೆ ಕಾಡದಿರಲು 4 ಸೂಕ್ತ ಸಲಹೆಗಳು

By Super
|

ಪರಿವಾರದೊಂದಿಗಿರುವವರ ಹಣದ ಸಮಸ್ಯೆ ಒಂದೆರಡಲ್ಲ. ನಾಲ್ಕು ಕಾಸು ಸೇರಿದಾಕ್ಷಣ ಆರು ಕಾಸಿನ ಖರ್ಚು ಎದುರಾಗಿರುತ್ತದೆ. ಇದಕ್ಕಿಂತ ಒಂಟಿಯಾಗಿರುವುದೇ ಮೇಲು ಎಂದು ಅವರು ತಕ್ಷಣ ತೀರ್ಮಾನ ಕೊಟ್ಟುಬಿಡುತ್ತಾರೆ. ನಮ್ಮ ಸಮಾಜದಲ್ಲಿ ಒಂದು ತಪ್ಪು ಕಲ್ಪನೆಯಿದೆ. ಹೆಚ್ಚು ವೇತನದವರು ಹೆಚ್ಚು ಉಳಿಸಬಲ್ಲರು ಎಂಬುದು ತಪ್ಪು ಕಲ್ಪನೆ.
ಏಕೆಂದರೆ ವೇತನಕ್ಕೆ ಅನುಗುಣವಾಗಿ ಎಲ್ಲರೂ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವುದರಿಂದ, ಅಲ್ಲದೇ ತಮ್ಮ ಸಾಮರ್ಥ್ಯಕ್ಕೆ ಕೊಂಚ ಹೆಚ್ಚಿನದೇ ಐಶಾರಾಮದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಉಳಿತಾಯ ಹೆಚ್ಚೇನೂ ಇರುವುದಿಲ್ಲ. ಒಂಟಿಯಾಗಿರುವವರು ಬೇರೆಯವರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳದೇ ಈ ನಾಲ್ಕು ವಿಧಾನಗಳನ್ನು ಅನುಸರಿಸುವುದರಿಂದ ಖಂಡಿತವಾಗಿಯೂ ಉತ್ತಮವಾದ ಉಳಿತಾಯ ಸಾಧಿಸಬಹುದು ಹಾಗೂ ಮುಂದೆ ಹೆಚ್ಚಿನದನ್ನು ಪಡೆಯಬಹುದು.

ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆರ್.ಡಿ. ಮಾಡಿರಿ
ಮೊದಲು ನಿಮ್ಮ ವೇತನ ಹಾಗೂ ಖರ್ಚುಗಳನ್ನು ಪಟ್ಟಿಮಾಡಿ. ಇದರಲ್ಲಿ ಅನಗತ್ಯ ಖರ್ಚುಗಳನ್ನು ತಡೆಗಟ್ಟಿ ಹಾಗೂ ಪ್ರತಿತಿಂಗಳೂ ಉಳಿಸಬಹುದಾದ ಒಂದು ಮೊತ್ತವನ್ನು ನಿಮ್ಮ ವೇತನ ಬರುವ ಬ್ಯಾಂಕಿನಲ್ಲಿಯೇ ಆರ್. ಡಿ. (recurring deposit) ಮಾಡಿ ಪ್ರತಿತಿಂಗಳೂ ನಿರ್ದಿಷ್ಟ ಮೊತ್ತ ಕೂಡುತ್ತಾ ಬರುವಂತೆ ಬ್ಯಾಂಕಿಗೆ ನಿರ್ದೇಶನ ನೀಡಿ. ಇದರಿಂದಾಗಿ ನಿಮ್ಮ ಕೈಯಲ್ಲಿ ಅಗತ್ಯವಿರುವಷ್ಟು ಮಾತ್ರ ಹಣ ಬರುತ್ತದೆ. ತನ್ಮೂಲಕ ಅಗತ್ಯವಾದುದಕ್ಕೆ ಮಾತ್ರ ಖರ್ಚಾಗಿ ಅನಗತ್ಯ ಖರ್ಚುಗಳಿಂದ ದೂರವಾದಂತಾಗುತ್ತದೆ. ಕೆಲ ವರ್ಷಗಳ ಬಳಿಕ ಬೆಳೆದಿರುವ ಈ ಮೊತ್ತವನ್ನು ದೊಡ್ಡ ಕಾರ್ಯಗಳಿಗೆ ಬಳಸಬಹುದು.

4 ways to save money when single

ಹಣ ಉಳಿತಾಯದ ಅಭಿಯಾನಕ್ಕಾಗಿ 5 ಸೂಕ್ತ ಸಲಹೆಗಳು

ನಿಮ್ಮ ಖರ್ಚುಗಳನ್ನು ಬರೆದಿಡಿ
ಅಂಗಡಿಗೆ ಹೋಗುವಾಗ ಮೊದಲು ನಾವು ಕಾಗದದಲ್ಲಿ ಪಟ್ಟಿ ಮಾಡಿಕೊಂಡು ಹೋಗುತ್ತಿದ್ದೆವು. ಎಲ್ಲ ವಸ್ತುಗಳೂ ಒಂದೆರಡು ರೂಪಾಯಿಯವೇ ಆಗುತ್ತಿದ್ದರೂ ಕೊನೆಯದಾಗಿ ಎಲ್ಲವನ್ನೂ ಕೂಡಿಸಿ ಮೊತ್ತ ನೂರು ದಾಟಿದಾಗ ಮಾತ್ರ ಎದೆ ಧಸಕ್ಕೆನ್ನುತ್ತಿತ್ತು. ಒಂದು ವೇಳೆ ಈ ಚಿಕ್ಕ ಚಿಕ್ಕ ಖರ್ಚುಗಳನ್ನು ಕೂಡಿಸಿ ಮೊತ್ತ ನೋಡದೇ ಇದ್ದರೆ ಚಿಕ್ಕ ಚಿಕ್ಕ ಖರ್ಚುಗಳ ಪ್ರಮುಖ್ಯತೆ ನಮಗೆ ಗೊತ್ತಾಗುವುದೇ ಇಲ್ಲ. ಆದುದರಿಂದ ಎಷ್ಟೇ ಚಿಕ್ಕದಾಗಿದ್ದರೂ ಆ ಖರ್ಚಿನ ಮೊತ್ತವನ್ನು ಬರೆದಿಡುತ್ತಾ ಹೋಗಿ. ಕೆಲಸಮಯದ ಬಳಿಕ ಎಲ್ಲವನ್ನೂ ಕೂಡಿಸಿ ತಾಳೆ ಮಾಡಿ. ಮೇಲಿನಿಂದ ಕೆಳಕ್ಕೆ ಪಟ್ಟಿ ಅವಲೋಕಿಸಿದಾಗ ಅವುಗಳಲ್ಲಿ ಕೆಲವಾದರೂ ಖರ್ಚುಗಳು ಅನಗತ್ಯವಾಗಿದ್ದುದು ಕಂಡುಬರುತ್ತದೆ. ಆ ಸಮಯದಲ್ಲಿ ನಿಮ್ಮ ಮನಃಸ್ಥಿತಿ ಹೇಗಿತ್ತು ಎಂದು ಯೋಚಿಸಿ. ಮುಂದಿನಬಾರಿ ಅದೇ ಪರಿಸ್ಥಿತಿ ಎದುರಾದಾಗ ಈ ಖರ್ಚಿನ ಸೆಳೆತಕ್ಕೆ ಒಳಗಾಗದಿರಲು ಮಾನಸಿಕವಾಗಿ ಈಗ ಹೆಚ್ಚು ಸದೃಢರಾಗಿರುತ್ತೀರಿ.

ವಿಫಲತೆಯು ಕಲಿಸುವ 10 ಮಹತ್ತರ ಜೀವನ ಪಾಠಗಳು

ಚಿಕ್ಕಪುಟ್ಟ ಸಂತೋಷಕೂಟಗಳನ್ನು ಮನೆಯಲ್ಲಿಯೇ ಆಚರಿಸಿ
ನಮ್ಮ ಸಂತೋಷವನ್ನು ನಮಗೆ ನಿಕಟರಾಗಿರುವವರೊಂದಿಗೆ ಹಂಚಿಕೊಂಡಾಗ ಆ ಸಂತೋಷ ಇನ್ನಷ್ಟು ಹೆಚ್ಚುವುದರಿಂದ ಸಂತೋಷಕೂಟಗಳು ಖಂಡಿತವಾಗಿಯೂ ಅಗತ್ಯವಾಗಿವೆ. ಆದರೆ ಈ ಅಗತ್ಯವನ್ನು ಮಾರುಕಟ್ಟೆಯಲ್ಲಿ ವೃತ್ತಿನಿರತರು ಯಶಸ್ವಿಯಾಗಿ ನಿಭಾಯಿಸುವುದರಿಂದ ಹಾಗೂ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದರಿಂದ ಹೆಚ್ಚಾಗಿ ನಾವು ಇವರ ಸೇವೆ ಪಡೆದುಕೊಳ್ಳುತ್ತೇವೆ.

ಆದರೆ ಈ ಸೇವೆ ದುಬಾರಿಯೂ ಹಾಗೂ ಕೆಲ ಸೌಲಭ್ಯಗಳು ಅನಗತ್ಯವಾಗಿಯೂ ಇರುತ್ತವೆ. ಅದರ ಬದಲಿಗೆ ಈ ಕೂಟವನ್ನು ಮನೆಯಲ್ಲಿಯೇ ಏರ್ಪಡಿಸಿ ಸ್ನೇಹಿತರೇ ಸೇರಿ ಕೆಲಸಗಳನ್ನು ಹಂಚಿಕೊಳ್ಳುವುದರಿಂದ ಖರ್ಚು ಕಡಿಮೆಯೂ ಆಗುತ್ತದೆ ಹಾಗೂ ಸ್ನೇಹಿತನ ನೆರವಿಗೆ ಬಂದ ಆತ್ಮತೃಪ್ತಿಯೂ ಸಿಗುತ್ತದೆ. ಉಳಿದ ಆಹಾರ, ಪಾನೀಯಗಳನ್ನು ಅಗತ್ಯವುಳ್ಳವರಿಗೆ ನೀಡಿ ಆಹಾರವನ್ನು ತಿಪ್ಪೆಗೆಸೆಯುವುದರಿಂದ ತಡೆದಂತೆಯೂ ಆಗುತ್ತದೆ.

ಮೂವತ್ತು ದಿನಗಳ ನಿಯಮಕ್ಕೆ ಬದ್ಧರಾಗಿ
ಮೂವತ್ತು ದಿನಗಳ ನಿಯಮದ ಬಗ್ಗೆ ಕೇಳಿಲ್ಲವೇ? ಸುಲಭ, ಇದು ಕೇವಲ ನಮ್ಮ ಮನಸ್ಸೆಂಬ ಮರ್ಕಟವನ್ನು ಪಳಗಿಸುವ ವಿಧಾನ. ಉದಾಹರಣೆಗೆ ಒಂದು ಮೊಬೈಲ್ ಫೋನಿನ ಜಾಹೀರಾತಿನಲ್ಲಿ ಕಡಿತ ಬೆಲೆಯ ಕೊಡುಗೆ ನೋಡಿದ ಬಳಿಕ ಆ ಮೊಬೈಲ್ ಫೋನು ಕೊಳ್ಳದಿದ್ದರೆ ಜೀವನವೇ ನಶ್ವರ ಎಂಬ ನಿರ್ಧಾರಕ್ಕೆ ಬಂದು ಮಾರುಕಟ್ಟೆಗೆ ಹೋಗಿ ಕೊಂಡುಕೊಳ್ಳುತ್ತೀರಿ. ಹಣ ಇಲ್ಲದಿದ್ದರೆ ಕಂತಿನಲ್ಲಿ ತೀರಿಸಬಹುದಾದ ಪ್ರಲೋಭನೆಗೆ ಒಳಗಾಗುತ್ತೀರಿ. ಇಲ್ಲಿ ಮರ್ಕಟ ಸಂಪೂರ್ಣವಾಗಿ ತನ್ನ ಬುದ್ಧಿ ತೋರಿಸಿದೆ. ಈ ನಿರ್ಧಾರಕ್ಕೆ ಬರುವ ಮುನ್ನ ನಿಮಗೆ ನೀವೇ ಮೂವತ್ತು ದಿನಗಳ ಬೇಲಿಯನ್ನು ಹಾಕಿಕೊಳ್ಳಿ. ಅಂದರೆ ಇಂದಿನಿಂದ ಮೂವತ್ತು ದಿನಗಳವರೆಗೆ ಈ ಮೊಬೈಲನ್ನು ನಾನು ಕೊಳ್ಳುವುದಿಲ್ಲ.

ಮೂವತ್ತು ದಿನಗಳ ನಂತರವೇ ಕೊಳ್ಳುತ್ತೇನೆ
ಮೂವತ್ತು ದಿನಗಳ ನಂತರ ಆ ಆಫರ್ ಇರುತ್ತದೆಯೇ? ಮೂವತ್ತು ದಿನದ ಬಳಿಕ ಇನ್ನೊಂದು ಆಫರ್ ಬರುತ್ತದೆ ಎಂದು ಸುಮ್ಮನಾಗಿಸಿ. ಮೂವತ್ತು ದಿನಗಳವರೆಗೆ ನಿಮಗೆ ಆ ಮೊಬೈಲ್ ಬಗ್ಗೆ ವಿಚಾರಿಸಲು ಸಮಯ ಸಿಗುತ್ತದೆ. ಈ ಸಮಯದಲ್ಲಿ ಅದರಲ್ಲಿರುವ ಗುಣಾತ್ಮಕ ಹಾಗೂ ಋಣಾತ್ಮಕ ಅಂಶಗಳು ಹೊರಬರುತ್ತವೆ.
ಈಗಾಗಲೇ ಕೊಂಡವರು ಅದರೆ ತರಲೆ ತಾಪತ್ರಯಗಳನ್ನು ಪಟ್ಟಿಮಾಡಲು ತೊಡಗುತ್ತಾರೆ. ಮೂವತ್ತು ದಿನಗಳ ಬಳಿಕವೂ ಆ ಸಾಧನ ನಿಮ್ಮ ಕಾರ್ಯಕ್ಕೆ ನಿಜಕ್ಕೂ ಅಗತ್ಯವೇ ಆಗಿದ್ದು ಅದರಿಂದ ನಿಮಗೆ ಪ್ರಯೋಜನವೇ ಆಗುವಂತಿದ್ದರೆ ಮಾತ್ರ ಖಂಡಿತಾ ಖರೀದಿಸಿ.

Read more about: ಕೆಲಸ ಜೀವನ work life
English summary

4 ways to save money when single

Are you among those who desperately wait for their salaries to get credited, so that they don't have to struggle to manage their daily expenses? Many people have a tough time during the month end, not because they don't earn enough. Here are a few simple steps to put into practice, especially if you are single.
X
Desktop Bottom Promotion