Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಆನ್‌ಲೈನ್ ಫುಡ್‌ನಲ್ಲಿ ಜಿರಳೆ, ಜೀವಂತ ಬಸನವ ಹುಳು ಪತ್ತೆ.! ನಿಮಗೂ ಹೀಗಾದ್ರೆ ಏನು ಮಾಡಬೇಕು?
ತಾವಿದ್ದಲ್ಲೇ ಊಟ, ತಿಂಡಿ ಸೇವಿಸಲು ಇಷ್ಟಪಡೋರು ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುತ್ತಾರೆ. ಇತ್ತೀಚಿಗೆ ಎಲ್ಲರೂ ಈ ರೀತಿ ಫುಟ್ ಆರ್ಡರ್ ಮಾಡೋದು ಕಾಮನ್ ಆಗಿದೆ. ನೀವು ಸಹ ಸಮಯ ಇಲ್ಲದಾಗ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿರ್ತೀರಿ. ಆದ್ರೆ ಆ ಫುಡ್‌ನಲ್ಲಿ ಸಿಗಬಾರದು ಸಿಕ್ಕಿದ್ರೆ ಹೇಗೆ?
ಇತ್ತೀಚಿಗೆ ಇಂತಹ ಎರಡು ಘಟನೆಗಳು ನಡೆದಿವೆ. ಒಬ್ಬರಿಗೆ ಫುಡ್‌ನಲ್ಲಿ ಜಿರಳೆ ಸಿಕ್ಕಿದರೆ ಮತ್ತೊಬ್ಬರಿಗೆ ಜೀವಂತ ಬಸವನ ಹುಳು ಸಿಕ್ಕಿದೆ. ಒಂದು ಘಟನೆ ಜೊಮ್ಯಾಟೋದಿಂದ ನಡೆದಿದ್ದರೆ ಮತ್ತೊಂದು ಸ್ವಿಗ್ಗಿಯಿಂದ ಆರ್ಡರ್ ಮಾಡಿದ್ದ ಆಹಾರದಲ್ಲಿ ಹುಳು ಸಿಕ್ಕಿದೆ. ಇತ್ತೀಚಿಗೆ ಇಂತಹ ಘಟನೆಗಳು ಸಹ ಹೆಚ್ಚಾಗುತ್ತಿದ್ದು, ಹೆಸರಾಂತ ರೆಸ್ಟೋರೆಂಟ್‌ಗಳ ಫುಡ್‌ನಲ್ಲೂ ಈ ರೀತಿಯಾಗುತ್ತಿದೆ.

ಬೆಂಗಳೂರಿನ ಮಹಿಳೆಯೊಬ್ಬರಿಗೆ ತಮ್ಮ ಊಟದಲ್ಲಿ ಜಿರಳೆ ಸಿಕ್ಕಿರುವ ಕುರಿತು ಟ್ವಿಟರ್ (ಎಕ್ಸ್) ನಲ್ಲಿ ಹಂಚಿಕೊಂಡಿದ್ದಾರೆ. ಹರ್ಷಿತಾ ಎಂಬಾಕೆ ರೆಸ್ಟೊರೆಂಟ್‌ನಿಂದ ಫ್ರೈಡ್ ರೈಸ್‌ಗೆ ಆರ್ಡರ್ ಮಾಡಿದ್ದು, ಬಾಕ್ಸ್‌ನಲ್ಲಿ ಜಿರಳೆ ಇರುವುದನ್ನು ಗಮನಿಸಿ ಆ ವಿಡಿಯೋ ಹಂಚಿಕೊಂಡಿದ್ದಾರೆ.
"ನಾನು "ಟ್ಯಾಪ್ರಿ ಬೈ ದಿ ಕಾರ್ನರ್" ರೆಸ್ಟೊರೆಂಟ್‌ನಿಂದ ಜೊಮಾಟೊದಲ್ಲಿ ಚಿಕನ್ ಫ್ರೈಡ್ ರೈಸ್ ಅನ್ನು ಆರ್ಡರ್ ಮಾಡಿದ್ದೇನೆ. ನನ್ನ ಆಹಾರದಲ್ಲಿ ಜಿರಳೆ ಸಿಕ್ಕಿತು. ಈ ಆರ್ಡರ್ ಅಸಹ್ಯ ಹುಟ್ಟಿಸಿದೆ! ಇದು ಸ್ವೀಕಾರಾರ್ಹವಲ್ಲ ಮತ್ತು ತಕ್ಷಣದ ಪರಿಹಾರ ಬೇಕು," ಎಂದು ಬರೆದು ಕಂಪನಿಯನ್ನು ಟ್ಯಾಗ್ ಮಾಡಿದ್ದಾರೆ.
ಇನ್ನೊಬ್ಬರು ಸ್ಥಳೀಯ ರೆಸ್ಟೋರೆಂಟ್‌ನಿಂದ ಫುಡ್ ಡೆಲಿವರಿ ಆಪ್ ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ ಸಲಾಡ್‌ನಲ್ಲಿ ಜೀವಂತ ಬಸವನ ಹುಳು ಕಂಡು ಬೆಚ್ಚಿಬಿದ್ದಿದ್ದಾರೆ. ಧವಲ್ ಸಿಂಗ್ ಎಂಬಾತ ಸ್ವಿಗ್ಗಿ ಮೂಲಕ ಸ್ಥಳೀಯ ರೆಸ್ಟೋರೆಂಟ್‌ನಿಂದ ಸಲಾಡ್ ಆರ್ಡರ್ ಮಾಡಿದ್ದರು.
ಅವರ ಆರ್ಡರ್ ಸಲಾರ್ ಸರಿಯಾದ ಸಮಯಕ್ಕೇನೋ ಬಂದಿತ್ತು. ಆದರೆ ಸಲಾಡ್ ಸವಿಯಲು ಬಾಕ್ಸ್ ತೆರೆದ ಧವಲ್ ಸಿಂಗ್‌ಗೆ ಜೀವಂತ ಬಸವನ ಹುಳು ಸ್ವಾಗತಿಸಿದೆ. ಹುಳು ಕಂಡ ಧವಲ್ ಕೆಂಡಾಮಂಡಲವಾಗಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿ ಸ್ವಿಗ್ಗಿ ಕಂಪನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಂಪನಿ ಪ್ರತಿಕ್ರಿಯೆ ಏನು.?
ಇಂತಹ ಘಟನೆಗಳು ಎದುರಾದಾಗ ಸಾಮಾನ್ಯವಾಗಿ ಕಂಪನಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಲಿದೆ. ಸ್ವಿಗ್ಗಿ ಸಹ ನಿಮ್ಮ ಆರ್ಡರ್ ಐಡಿ ನೀಡಿ ನಾವು ಪರಿಶೀಲಿಸಿಸುತ್ತೇವೆ ಎಂದಿದೆ.
ಫುಡ್ ಆರ್ಡರ್ ಮಾಡುವಾಗ ರೇಟಿಂಗ್ ನೋಡಿ
ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಯಾವ ರೆಸ್ಟೋರೆಂಟ್ ಅಥವಾ ಹೋಟೆಲ್‌ನಿಂದ ಫುಡ್ ಆರ್ಡರ್ ಮಾಡುತ್ತಿದ್ದೇವೆ ಎಂಬುದನ್ನು ಗಮನಿಸಿ. ಆ ರೆಸ್ಟೋರೆಂಟ್‌ಗೆ ಗ್ರಾಹಕರು ಎಷ್ಟು ರೇಟಿಂಗ್ ಪಾಯಿಂಟ್ ನೀಡಿದ್ದಾರೆ ಎಂಬುದನ್ನು ಗಮನಹರಿಸಿ. ಒಂದು ವೇಳೆ ರೇಟಿಂಗ್ ಉತ್ತಮವಾಗಿರದಿದ್ದರೆ ಆ ಹೋಟೆಲ್‌ನಿಂದ ಆರ್ಡರ್ ಮಾಡುವುದನ್ನು ಬಿಟ್ಟು ಬೇರೆ ರೆಸ್ಟೋರೆಂಟ್ ಆಯ್ಕೆ ಮಾಡಿ.
ದರಕ್ಕಿಂತ ಗುಣಮಟ್ಟದ ಆಯ್ಕೆ ಇರಲಿ
ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವ ಬಹುತೇಕರು ದರದ ಕುರಿತು ಹೆಚ್ಚು ಯೋಚಿಸುತ್ತಾರೆ. ಯಾವ ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ಎಷ್ಟು ಕಡಿಮೆ ದರ ಇದೆಯೋ ಅಲ್ಲಿಂದ ಆರ್ಡರ್ ಮಾಡಲು ಮುಂದಾಗುತ್ತಾರೆ. ಆದರೆ ಹೀಗೆ ಮಾಡುವುದರಿಂದ ಗುಣಮಟ್ಟದ ಆಹಾರ ಕೈ ಸೇರುವುದು ಅನುಮಾನ.
ಆಹಾರದಲ್ಲಿ ಹುಳು ಪತ್ತೆಯಾದರೆ ಏನು ಮಾಡಬೇಕು?
ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಈ ಘಟನೆಯ ಬಗ್ಗೆ ದೂರು ಸಲ್ಲಿಸಬಹುದು ಮತ್ತು ಫೋಟೋ ಪುರಾವೆಗಳನ್ನು ಲಗತ್ತಿಸಬಹುದು. ಇಲ್ಲಿಂದ ಮುಂದಿನ ತನಿಖೆಗೆ ನಡೆಯಲಿದೆ. ಜನರು ರೆಸ್ಟೋರೆಂಟ್ ಅಥವಾ ಇತರ ಹೋಟೆಲ್ ವಿರುದ್ಧ ದೂರು ನೀಡಲು FSSAI ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು.
ಆಹಾರಕಲಬೆರಕೆ ಆಗಿರಬಹುದು, ಕಲ್ಲುಗಳು ಅಥವಾ ಕೀಟಗಳು ಕಂಡುಬಂದರೆ, ಅಥವಾ ಆಹಾರ ಸೇವಿಸಿದ ಬಳಿಕ ಅನಾರೋಗ್ಯ ಕಾಣಿಸಿಕೊಂಡರೆ ದೂರು ನೀಡಬೇಕು. ಈ ಸಂಬಂಧ ತನಿಖೆ ನಡೆಸುವ ಇಲಾಖೆ ಆರೋಪ ಸಾಬೀತಾದರೆ ರೆಸ್ಟೋರೆಂಟ್, ಹೋಟೆಲ್ ಅಥವಾ ಅಂಗಡಿಯನ್ನು ಶಾಶ್ವತವಾಗಿ ಮುಚ್ಚಿಸುವ ಹಕ್ಕು ಹೊಂದಿರುತ್ತದೆ.



Click it and Unblock the Notifications
