Just In
- 27 min ago
ಚರ್ಮದ ಕ್ಯಾನ್ಸರ್ ಯೌವನ ಪ್ರಾಯದವರಲ್ಲಿ ಹೆಚ್ಚು ಯಾಕೆ . .? ತಡೆಗಟ್ಟುವುದು ಹೇಗೆ?
- 1 hr ago
30 ದಿನ ಸಕ್ಕರೆ ಸೇವಿಸದಿದ್ದರೆ ಇಷ್ಟೆಲ್ಲಾ ಲಾಭವಾಗುತ್ತಾ..? ವೈಟ್ಲಾಸ್ಗೆ ಇದೇ ಬೆಸ್ಟ್..!
- 8 hrs ago
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- 13 hrs ago
ವಾರ ಭವಿಷ್ಯ (ಫೆ.4-11): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
Don't Miss
- Sports
SA 20: ಫಾಫ್ ಡುಪ್ಲೆಸಿಸ್ ನಾಯಕನ ಆಟ: ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಭರ್ಜರಿ ಜಯ
- Movies
ತಮಿಳು ನಿರ್ಮಾಪಕರ ನಿದ್ದೆ ಕೆಡಿಸಿದ ದಿಗ್ಗಜರು: ಅಜಿತ್ ₹100 ಕೋಟಿ.. ವಿಜಯ್ ಕೇಳಿದ್ದೆಷ್ಟು?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮನೆಯ ಅಲಂಕಾರಕ್ಕಾಗಿ ಹಾಕಿರುವ ಈ ಚಿತ್ರಗಳು ಮನಸ್ಸು ಹಾಳು ಮಾಡಬಹುದು ಜೋಕೆ!
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲಿನಿಂದ ಹಿಡಿದು, ಕೋಣೆಗಳು, ಸ್ನಾನಗೃಹ, ಪೂಜಾ ಸ್ಥಳ ಮತ್ತು ಮನೆಯಲ್ಲಿ ಇರುವ ಎಲ್ಲವುಗಳಿಗೆ ಸರಿಯಾದ ದಿಕ್ಕು ಮತ್ತು ಸ್ಥಳವನ್ನು ಹೊಂದಿರುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳುವುದರಿಂದ ಮನೆಯಲ್ಲಿ ಸುಖ-ಸಂತೋಷವನ್ನು ಕಾಪಾಡುವುದರ ಜೊತೆಗೆ ಮನೆಯವರ ಆರೋಗ್ಯವೂ ಚೆನ್ನಾಗಿರುತ್ತದೆ.
ಅದೇ ಸಮಯದಲ್ಲಿ, ವಾಸ್ತು ಪ್ರಕಾರ, ಮನೆಯನ್ನು ಅಲಂಕರಿಸಲು ಬಳಸುವ ಛಾಯಾಚಿತ್ರಗಳು, ಶೋಪೀಸ್ಗಳು, ಸಸ್ಯಗಳು ಇತ್ಯಾದಿಗಳಿಗೂ ವಾಸ್ತುವನ್ನು ನೋಡಿಕೊಳ್ಳುವುದು ಅವಶ್ಯಕ. ಇಲ್ಲವಾದಲ್ಲಿ ಆ ಚಿತ್ರಗಳೇ ಮನೆಯೊಳಗೆ ನಕಾರಾತ್ಮಕ ಶಕ್ತಿ ಹರಡುವ ಜೊತೆಗೆ ಕುಟುಂಬ ಸದಸ್ಯರ ಮೇಲೆ ಸಮಸ್ಯೆ ಉಂಟಾಗಲು ಕಾರಣವಾಗುತ್ತವೆ. ಹಾಗಾದರೆ, ಮನೆಯೊಳಗೆ ವಾಸ್ತು ಪ್ರಕಾರ, ಯಾವ ಚಿತ್ರಗಳನ್ನು ಹಾಕಬಾರದು ಎಂಬುದನ್ನು ಇಲ್ಲಿ ನೋಡೋಣ.
ಮನೆಯಲ್ಲಿ ಅಲಂಕಾರಕ್ಕಾಗಿ ಹಾಕಿರುವ ಯಾವ ಚಿತ್ರಗಳು ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಋಣಾತ್ಮಕ ಚಿತ್ರ:
ವಾಸ್ತು ಪ್ರಕಾರ, ಹೂವು ಅಥವಾ ಹಣ್ಣುಗಳಿಲ್ಲದ ಮರಗಳು ಮತ್ತು ಸಸ್ಯಗಳ ಚಿತ್ರಗಳು, ಬಲಿಯಾದವರ ಚಿತ್ರಗಳು, ದುಃಖ ಅಥವಾ ಅಳುವ ಜನರ ಚಿತ್ರಗಳು, ಮುಳುಗುತ್ತಿರುವ ಹಡಗುಗಳ ಚಿತ್ರಗಳು, ಯುದ್ಧದಲ್ಲಿ ಕತ್ತಿಗಳನ್ನು ಹಿಡಿದಿರುವ ಜನರು ಇತ್ಯಾದಿಗಳನ್ನು ಮನೆಯಲ್ಲಿ ಇಡಬಾರದು. ಏಕೆಂದರೆ ಈ ಚಿತ್ರಗಳನ್ನು ನೋಡುವುದರಿಂದ ಕುಟುಂಬದ ಸದಸ್ಯರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಮನಸ್ಸಿನಲ್ಲಿ ದುಃಖ ಉಂಟಾಗಲು ಕಾರಣವಾಗುತ್ತದೆ. ಇದರಿಂದ ಮನೆಯಲ್ಲಿ ಸಂತೋಷವಾಗಿರಲು ಸಾಧ್ಯವಾಗುವುದಿಲ್ಲ. ಕೆಟ್ಟ ಆಲೋಚನೆಗಳೇ ಮನದಲ್ಲಿ ತುಂಬಿರುತ್ತವೆ.

2. ನಟರಾಜನ ಚಿತ್ರ :
ಅನೇಕ ಮನೆಗಳಲ್ಲಿ ಅಲಂಕಾರಕ್ಕಾಗಿ ನಟರಾಜನ ಚಿತ್ರವನ್ನು ನೇತು ಹಾಕುವುದು ಸಾಮಾನ್ಯ. ಇದನ್ನು ಭಗವಾನ್ ಶಿವನ ಚಿತ್ರವೆಂದು ನಂಬಲಾಗಿದೆ. ಆದರೆ ಶ್ರೇಷ್ಠ ಕಲೆಯ ಪ್ರತೀಕವಾದ ನಟರಾಜನ ಚಿತ್ರವನ್ನು ಎಂದಿಗೂ ಮನೆಯಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಏಕೆಂದರೆ ನಟರಾಜನ ಚಿತ್ರದಲ್ಲಿ ಶಿವನ ಭಂಗಿಯು ತಾಂಡವ ನೃತ್ಯದ ಭಾಗವಾಗಿದೆ, ಇದನ್ನು ವಿನಾಶದ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ ಮನೆಯಲ್ಲಿ ಎಂದಿಗೂ ನಟರಾಜನ ಚಿತ್ರ ಅಥವಾ ವಿಗ್ರಹವನ್ನು ಇಡಬಾರದು ಎಂಬುದನ್ನು ನೆನಪಿನಲ್ಲಿಡಿ.

3. ತಾಜ್ ಮಹಲ್ ಫೋಟೋ:
ತಾಜ್ ಮಹಲ್‌ನ್ನು ಕಲೆ ಮತ್ತು ಪ್ರೀತಿಯ ವಿಶಿಷ್ಟ ಉದಾಹರಣೆ ಎಂದು ಪರಿಗಣಿಸಲಾಗಿದ್ದು, ಇದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಆದರೆ ವಾಸ್ತು ಪ್ರಕಾರ ಈ ಚಿತ್ರವನ್ನು ಅಥವಾ ಪ್ರೀತಿಯ ಸಂಕೇತದ ಶೋಪೀಸ್ ಅನ್ನು ಮನೆಯಲ್ಲಿ ಇಡುವುದು ಸರಿಯಲ್ಲ. ಏಕೆಂದರೆ ಇದು ಷಹಜಹಾನ್ ಮತ್ತು ಅವರ ಪತ್ನಿ ಮುಮ್ತಾಜ್ ಬೇಗಂ ಅವರ ಸಮಾಧಿ ಇರುವ ಜಾಗವಾಗಿದೆ. ವಾಸ್ತು ಪ್ರಕಾರ, ಇದು ಮನೆಯ ಜನರ ಮೇಲೆ ಕೆಟ್ಟ ಮತ್ತು ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಇನ್ನು ಮುಂದಾದರೂ, ತಾಜ್‌ಮಹಲ್‌ನ ಕಲಾಕೃತಿಯನ್ನು ಮನೆಯಲ್ಲಿ ಇಡುವುದನ್ನು ನಿಲ್ಲಿಸಿ.

4. ಯುದ್ಧದ ಫೋಟೋಗಳು
ವಾಸ್ತು ಶಾಸ್ತ್ರದ ಪ್ರಕಾರ, ರಾಮಾಯಣ ಮಹಾಭಾರತದಂತಹ ಯುದ್ಧದ ಚಿತ್ರಗಳನ್ನು ಮನೆಗಳಲ್ಲಿ ಹಾಕುವುದು ಎಂದಿಗೂ ಒಳ್ಳೆಯದಲ್ಲ. ಏಕೆಂದರೆ ಇದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರ ಜೊತೆಗೆ ಮನಸ್ಸು ಚಂಚಲವಾಗಿರುತ್ತದೆ. ಜೊತೆಗೆ ಕುಟುಂಬದಲ್ಲಿ ವಿರಹ ಉಂಟಾಗಬಹುದು. ಆದ್ದರಿಂದ ಯಾವುದೇ ರೀತಿಯ ಯುದ್ಧ, ಸಂಘರ್ಷಗಳು ನಡೆಯುವಂತಹ ಚಿತ್ರ ಅಥವಾ ವಿಗ್ರಹಗಳನ್ನು ಮನೆಯೊಳಗೆ ಇಡಬೇಡಿ. ಇವು ನಿಮ್ಮ ಮನೆ ಹಾಗೂ ಮನಸ್ಸೊಳಗೆ ಯುದ್ಧ ಮನಸ್ಥಿತಿಯನ್ನು ಹುಟ್ಟುಹಾಕಬಹುದು. ಆದ್ದರಿಂದ ಎಚ್ಚರವಾಗಿರಿ.