For Quick Alerts
ALLOW NOTIFICATIONS  
For Daily Alerts

ಶರದ್ ಪೂರ್ಣಿಮಾ 2021: ಸಂತೋಷ-ಸಂಪತ್ತು ವೃದ್ಧಿಗಾಗಿ ಲಕ್ಷ್ಮಿದೇವಿಯನ್ನು ಈ ರೀತಿ ಪೂಜಿಸಿ

|

ಇದೇ ಅಕ್ಟೋಬರ್ 19ರಂದು ಶರದ್ ಪೂರ್ಣಿಮಾ. ಪ್ರತಿ ತಿಂಗಳ ಹುಣ್ಣಿಮೆಯು ಮಂಗಳಕರವೆಂದು ಪರಿಗಣಿಸಲಾಗಿದ್ದರೂ, ವರ್ಷದ ಕೆಲವು ಹುಣ್ಣಿಮೆಗಳು ಅತ್ಯಂತ ಮಂಗಳಕರ ಮತ್ತು ಸಮೃದ್ಧವೆನಿಸಿಕೊಂಡಿವೆ. ಅಂತಹುಗಳಲ್ಲಿ ಒಂದು ಈ ಶರದ್ ಪೂರ್ಣಿಮಾ.

ಅಶ್ವಿನ್ ತಿಂಗಳಲ್ಲಿ ಬರುವ ಹುಣ್ಣಿಮೆಯನ್ನು ಶರದ್ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ಪೂಜೆ ಹಾಗೂ ಚಂದ್ರನ ಪೂಜೆಗೆ ಪ್ರಾಶಸ್ತ್ಯವಾದ ಈ ಹುಣ್ಣಿಮೆಯನ್ನು ಶ್ರೀಮಂತ ಹುಣ್ಣಿಮೆಯೆಂದು ಪರಿಗಣಿಸಲಾಗಿದ್ದು, ಈ ದಿನ ಆಕಾಶದಿಂದ ಅಮೃತ ಮಳೆ ಬೀಳುವುದು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸುವುದು ಎಂದು ನಂಬಿಕೆಯಿದೆ. ಜತೆಗೆ ಚಳಿಗಾಲದ ಆರಂಭವನ್ನು ಈ ಹುಣ್ಣಿಮೆಯು ಸೂಚಿಸುತ್ತದೆ. ಇಷ್ಟು ಮಹತ್ವವಾಗಿರುವ ಈ ಈ ದಿನದ ಮಹತ್ವ, ಪೂಜಾ ವಿಧಾನ ಮತ್ತು ಶುಭ ಮುಹೂರ್ತಗಳ ಬಗ್ಗೆ ಇಲ್ಲಿ ನೋಡೋಣ.

​ಶರದ್ ಪೂರ್ಣಿಮಾ 2021ರ ಶುಭ ಮುಹೂರ್ತ:

​ಶರದ್ ಪೂರ್ಣಿಮಾ 2021ರ ಶುಭ ಮುಹೂರ್ತ:

ಶರದ್ ಪೂರ್ಣಿಮಾ ದಿನಾಂಕ 2021 ರ ಅಕ್ಟೋಬರ್‌ 19, ಮಂಗಳವಾರ

ಪೂರ್ಣಿಮಾ ತಿಥಿ ಆರಂಭ: ಅಕ್ಟೋಬರ್ 19 ರಂದು ಸಂಜೆ 7 ಗಂಟೆಯಿಂದ

ಪೂರ್ಣಿಮಾ ತಿಥಿ ಅಂತ್ಯ: ಅಕ್ಟೋಬರ್‌ 20 ರಂದು ರಾತ್ರಿ 8.20 ರವರೆಗೆ

​ಶರದ್ ಪೂರ್ಣಿಮಾ ಪೂಜಾವಿಧಾನ:

​ಶರದ್ ಪೂರ್ಣಿಮಾ ಪೂಜಾವಿಧಾನ:

  • ಶರದ್ ಪೂರ್ಣಿಮಾ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು. ಇದು ಸಾಧ್ಯವಾಗದಿದ್ದರೆ, ಮನೆಯಲ್ಲಿ ಗಂಗಾಜಲವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.
  • ಮರದ ಹಲಗೆ ಅಥವಾ ಪೀಠದ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹರಡಿ ಮತ್ತು ಗಂಗಾಜಲದಿಂದ ಆ ಸ್ಥಳವನ್ನು ಪವಿತ್ರಗೊಳಿಸಿ.
  • ಈ ಪೀಠದ ಮೇಲೆ ಲಕ್ಷ್ಮಿ ದೇವಿಯ ವಿಗ್ರಹವನ್ನು ಸ್ಥಾಪಿಸಿ ಮತ್ತು ಕೆಂಪು ಬಟ್ಟೆಯಿಂದ ಅಲಂಕರಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕನ್ನು ಸಂಪತ್ತಿನ ವಲಯವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ದಿಕ್ಕಿನಲ್ಲಿ ಲಕ್ಷ್ಮಿ ಆರಾಧನೆಯು ಉತ್ತಮವಾಗಿದೆ.
  • ದೇವಿಗೆ ಧೂಪ, ದೀಪ, ನೈವೇದ್ಯ ಮತ್ತು ವೀಳ್ಯದೆಲೆ ಇತ್ಯಾದಿಗಳನ್ನು ಅರ್ಪಿಸಿ.
  • ನಂತರ ಲಕ್ಷ್ಮಿ ದೇವಿಯನ್ನು ಧ್ಯಾನ ಮಾಡಬೇಕು ಮತ್ತು ಪೂಜಿಸಬೇಕು ಜೊತೆಗೆ ಲಕ್ಷ್ಮಿ ಚಾಲೀಸಾವನ್ನು ಪಠಿಸಬೇಕು.
  • ಸಂಜೆ ವಿಷ್ಣುವನ್ನು ಪೂಜಿಸಿ ಮತ್ತು ತುಳಸಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ. ಇದರೊಂದಿಗೆ, ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ. ಅದರ ನಂತರ ಅಕ್ಕಿ ಮತ್ತು ಹಸುವಿನ ಹಾಲಿನಿಂದ ಪಾಯಸವನ್ನು ತಯಾರಿಸಿ ಚಂದ್ರನ ಬೆಳಕಿನಲ್ಲಿ ಇಡಿ. ಕೆಲವು ಸಮಯಗಳ ನಂತರ ಆ ಪಾಯಾಸವನ್ನು ತಂದು ಮನೆಯ ಸದಸ್ಯರಿಗೆ ಪ್ರಸಾದದ ರೂಪದಲ್ಲಿ ವಿತರಿಸಿ.
  • ​ಲಕ್ಷ್ಮಿ ದೇವಿಯ ಮಂತ್ರ:

    ​ಲಕ್ಷ್ಮಿ ದೇವಿಯ ಮಂತ್ರ:

    ''ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್ ಪ್ರಸೀದ್ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ''

    ಶರದ್ ಪೂರ್ಣಿಮಾ ಮಹತ್ವ:

    ಪೌರಾಣಿಕ ನಂಬಿಕೆಗಳ ಪ್ರಕಾರ, ಶರದ್ ಪೂರ್ಣಿಮೆಯ ದಿನ, ಲಕ್ಷ್ಮಿ ದೇವಿಯು ಸಮುದ್ರ ಮಂಥನದಿಂದ ಜನಿಸಿದಳು ಎಂದು ನಂಬಿಕೆಯಿದೆ. ಆದ್ದರಿಂದ ಈ ದಿನ ಲಕ್ಷ್ಮಿ ದೇವಿಯು ಭೂಮಿಗೆ ಭೇಟಿ ನೀಡುತ್ತಾಳೆ ಮತ್ತು ರಾತ್ರಿ ಭಜನೆ ಮಾಡಿ, ಲಕ್ಷ್ಮಿ ದೇವಿಯನ್ನು ಆವಾಹನೆ ಮಾಡುವವರು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಅನುಗ್ರಹವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ.

    ಈ ಹುಣ್ಣಿಮೆಯ ರಾತ್ರಿ, ಇಡೀ ಭೂಮಿಯು ಚಂದ್ರನ ಬೆಳಕಿನಲ್ಲಿ ತೇವವಾಗಿರುತ್ತದೆ ಮತ್ತು ಅಮೃತ ಮಳೆಯಾಗುತ್ತದೆ. ಈ ನಂಬಿಕೆಗಳ ಆಧಾರದ ಮೇಲೆ, ರಾತ್ರಿ ಚಂದ್ರನ ಬೆಳಕಿನಡಿಯಲ್ಲಿ ಖೀರ್ ಅನ್ನು ಇಡುವುದರಿಂದ, ಅದರಲ್ಲಿ ಅಮೃತವು ಸೇರಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

    ​ಶರದ್ ಪೂರ್ಣಿಮೆಯಂದು ಮಾಡಬಾರದ ಕೆಲಸಗಳು:

    ​ಶರದ್ ಪೂರ್ಣಿಮೆಯಂದು ಮಾಡಬಾರದ ಕೆಲಸಗಳು:

    • ಈ ದಿನ ಮಾಂಸಾಹಾರ ಮತ್ತು ಮದ್ಯ ಸೇವಿಸಬೇಡಿ, ಇಲ್ಲದಿದ್ದರೆ ನೀವು ಹಣಕಾಸಿನ ತೊಂದರೆಗೆ ಸಿಲುಕಬಹುದು.
    • ಹಣದ ವಹಿವಾಟುಗಳನ್ನು ಮಾಡಬೇಡಿ. ಇದು ಹಣದ ನಷ್ಟಕ್ಕೆ ಕಾರಣವಾಗುತ್ತದೆ.
    • ಈ ದಿನದಂದು ಬ್ರಹ್ಮಚರ್ಯವನ್ನು ಅನುಸರಿಸಬೇಕು, ಇಲ್ಲದಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತದೆ.
    • ಸೂರ್ಯಾಸ್ತದ ಮೊದಲು ದಾನ ಮಾಡಬೇಕೇ ವಿನಃ ಸೂರ್ಯಾಸ್ತದ ನಂತರ ಮಾಡಿದರೆ ಬಡತನ ಬರುತ್ತದೆ.
    • ಸೂರ್ಯಾಸ್ತದ ನಂತರ ಮಹಿಳೆಯರು ತಮ್ಮ ಕೂದಲನ್ನು ಬಾಚಿಕೊಳ್ಳಬಾರದು. ಹಾಗೆ ಮಾಡುವುದು ಅಶುಭವೆನಿಸುತ್ತದೆ.
English summary

Sharad Purnima 2021 Date, Shubh Muhurat, Puja Vidhi, Rituals and Significance

Here we talking about Sharad Purnima 2021 Date, Shubh Muhurat, Puja Vidhi, Rituals and Significance, read on
Story first published: Monday, October 18, 2021, 17:36 [IST]
X
Desktop Bottom Promotion