For Quick Alerts
ALLOW NOTIFICATIONS  
For Daily Alerts

Ratha Saptami 2022: ಸೂರ್ಯ ಜಯಂತಿಯ ಸಂಪೂರ್ಣ ಮಾಹಿತಿ ನಿಮಗಾಗಿ

|

ಭಾರತದಾದ್ಯಂತ ಆಚರಿಸಲಾಗುವ ಅತ್ಯಂತ ಮಹತ್ವದ ಧಾರ್ಮಿಕ ಹಬ್ಬಗಳಲ್ಲಿ ಒಂದು ರಥಸಪ್ತಮಿ. ಈ ವರ್ಷ ಫೆಬ್ರವರಿ 7, ಸೋಮವಾರದಂದು ಆಚರಿಸಲಾಗುವುದು. ಈ ಉತ್ಸವದ ಇತರ ಜನಪ್ರಿಯ ಹೆಸರುಗಳು ' ಮಾಘ ಸಪ್ತಮಿ, 'ಮಾಘ ಜಯಂತಿ ', ಮತ್ತು' ಸೂರ್ಯ ಜಯಂತಿ'. ವಿಷ್ಣುವಿನ ಅವತಾರವಾದ ಸೂರ್ಯನನ್ನು ಪೂಜಿಸುವ ಸಲುವಾಗಿ ಭಕ್ತರು ಈ ದಿನವನ್ನು ಆಚರಿಸುತ್ತಾರೆ. ಈ ಹಬ್ಬದ ಈ ವರ್ಷ ಯಾವಾಗ? ರಥ ಸಪ್ತಮಿಯ ಪ್ರಾಮುಖ್ಯತೆ ಹಾಗೂ ಅದರ ಆಚರಣೆ ಹೇಗೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ರಥ ಸಪ್ತಮಿ:

ರಥ ಸಪ್ತಮಿ:

ಸೂರ್ಯನ ಜನ್ಮ ದಿನವನ್ನು ರಥಸಪ್ತಮಿ ಎಂದು ಆಚರಣೆ ಮಾಡಲಾಗುತ್ತದೆ. ಈ ನಿರ್ದಿಷ್ಟ ದಿನದಂದು ಸೂರ್ಯ ದೇವ ತನ್ನ ಉಷ್ಣತೆ ಮತ್ತು ಹೊಳಪಿನಿಂದ ಇಡೀ ವಿಶ್ವವನ್ನು ಬೆಳಗಿಸಿದ್ದಾನೆ ಎಂದು ನಂಬಲಾಗಿದೆ.

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈ ಹಬ್ಬವು ಜನವರಿ ಮಧ್ಯದಿಂದ ಫೆಬ್ರವರಿ ಮಧ್ಯದ ಅವಧಿಯಲ್ಲಿ ಬರುತ್ತದೆ. ಸಾಮಾನ್ಯವಾಗಿ, ವಸಂತ ಪಂಚಮಿ ಆಚರಣೆಯ ಎರಡು ದಿನಗಳ ನಂತರ ರಥ ಸಪ್ತಮಿಯ ಆಚರಣೆಗಳನ್ನು ನಡೆಸಲಾಗುತ್ತದೆ.

ರಥ ಸಪ್ತಮಿ ದಿನಾಂಕ:

ರಥ ಸಪ್ತಮಿ ದಿನಾಂಕ:

ಹಿಂದೂ ಕ್ಯಾಲೆಂಡರ್ ಪ್ರಕಾರ, ರಥ ಸಪ್ತಮಿ ಮಾಘ ತಿಂಗಳ ಶುಕ್ಲ ಪಕ್ಷ ಸಮಯದಲ್ಲಿ ಆಚರಿಸಲಾಗುತ್ತದೆ ಅಂದರೆ ಸಪ್ತಮಿ ತಿಥಿಯಂದು ಆಚರಣೆ ಮಾಡಲಾಗುತ್ತದೆ. ಈ ವರ್ಷ ಇದರ ಆಚರಣೆಯು ಫೆಬ್ರವರಿ ೧೯ರಂದು ನಡೆಯಲಿದೆ.

ರಥ ಸಪ್ತಮಿಯ ಪ್ರಾಮುಖ್ಯತೆ:

ರಥ ಸಪ್ತಮಿಯ ಪ್ರಾಮುಖ್ಯತೆ:

ರಥ ಸಪ್ತಮಿ ದಿನ ಉತ್ತರಾರ್ಧಗೋಳದಲ್ಲಿ ಸೂರ್ಯ ನ ಪ್ರಯಾಣ ಆರಂಭವಾಗುತ್ತದೆ. ಇದು ಬೇಸಿಗೆಯ ಆಗಮನವನ್ನು ಸೂಚಿಸುತ್ತದೆ ಮತ್ತು ದಕ್ಷಿಣ ಭಾರತದ ಪ್ರದೇಶಗಳಲ್ಲಿನ ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ. ಇದು ರೈತರಿಗೆ ಸುಗ್ಗಿಯ ಆರಂಭವನ್ನು ಸಂಕೇತಿಸುತ್ತದೆ.

ರಥ ಸಪ್ತಮಿಯ ಹಬ್ಬವು ಎಲ್ಲಾ ರೀತಿಯ ದಾನ-ಪುಣ್ಯ ಚಟುವಟಿಕೆಗಳನ್ನು (ದೇಣಿಗೆ ಮತ್ತು ದತ್ತಿ) ನಿರ್ವಹಿಸಲು ಅತ್ಯಂತ ಶುಭವಾಗಿದೆ. ದಂತಕಥೆಗಳ ಪ್ರಕಾರ, ಈ ಸಂದರ್ಭದ ಮುನ್ನಾದಿನದಂದು ದೇಣಿಗೆ ನೀಡುವ ಮೂಲಕ ಭಕ್ತರು ತಮ್ಮ ಪಾಪಗಳನ್ನು ತೊಡೆದುಹಾಕುತ್ತಾರೆ. ಇದು ದೀರ್ಘಾಯುಷ್ಯ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ನೀಡಲಾಗುತ್ತದೆ ಎಂದು ನಂಬಲಾಗಿದೆ.

ರಥ ಸಪ್ತಮಿ ಪೂಜೆಯನ್ನು ಮಾಡುವುದರಿಂದ ಏನು ಪ್ರಯೋಜನ?

ರಥ ಸಪ್ತಮಿ ಪೂಜೆಯನ್ನು ಮಾಡುವುದರಿಂದ ಏನು ಪ್ರಯೋಜನ?

ದಂತಕಥೆಗಳ ಪ್ರಕಾರ, ರಥ ಸಪ್ತಮಿಯ ಮುನ್ನಾದಿನದಂದು ಸೂರ್ಯನನ್ನು ಆರಾಧಿಸುವ ಮೂಲಕ ಭಕ್ತರು ತಮ್ಮ ಹಿಂದಿನ ಮತ್ತು ಪ್ರಸ್ತುತ ಪಾಪಗಳನ್ನು ತೊಡೆದುಹಾಕುತ್ತಾರೆ ಮತ್ತು ಮೋಕ್ಷವನ್ನು ಪಡೆಯುವ ಮಾರ್ಗಕ್ಕೆ (ಮೋಕ್ಷ) ಒಂದು ಹೆಜ್ಜೆ ಹತ್ತಿರ ಇಡುತ್ತಾರೆ ಎಂದು ನಂಬಲಾಗಿದೆ. ಹಿಂದೂ ಧರ್ಮದ ಪ್ರಕಾರ, ಸೂರ್ಯ ದೇವ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ನೀಡುತ್ತಾನೆ ಮತ್ತು ಈ ಶುಭ ಸಂದರ್ಭದಲ್ಲಿ ದೇವರಿಗೆ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರೆ ಭಕ್ತರಿಗೆ ಉತ್ತಮ ಲಾಭ ಪ್ರಾಪ್ತವಾಗುತ್ತದೆ ಎಂದು ನಂಬಲಾಗಿದೆ.

ರಥ ಸಪ್ತಮಿಯ ಆಚರಣೆ:

Ratha Saptami 2021 Date and Time, Significance And Rituals Of Surya Jayanti
  • ರಥ ಸಪ್ತಮಿಯ ಮುನ್ನಾದಿನದಂದು ಮಾಡಬೇಕಾದ ಮೊದಲ ಮತ್ತು ಅತ್ಯಂತ ಮಹತ್ವದ ಆಚರಣೆ ಎಂದರೆ ಬೇಗನೆ ಎಚ್ಚರಗೊಂಡು ಪವಿತ್ರ ಸ್ನಾನವನ್ನು ಮಾಡುವುದು. ಅರುಣೋದಯ (ಮುಂಜಾನೆ) ಸಮಯದಲ್ಲಿ ಮಾತ್ರ ಈ ಆಚರಣೆಯನ್ನು ಮಾಡುವುದು ಬಹಳ ಮುಖ್ಯ. ಗಮನಿಸಿ: ಜನರು ಈ ನಿರ್ದಿಷ್ಟ ಅವಧಿಯಲ್ಲಿ (ಅರುಣೋದಯ) ಪವಿತ್ರ ಸ್ನಾನವನ್ನು ಮಾಡಿದರೆ, ಅವರು ಉತ್ತಮ ಆರೋಗ್ಯದಿಂದ ಆಶೀರ್ವದಿಸಲ್ಪಡುತ್ತಾರೆ ಮತ್ತು ಎಲ್ಲಾ ರೀತಿಯ ಕಾಯಿಲೆಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ, 'ಆರೋಗ್ಯ ಸಪ್ತಮಿ' ಇದರ ಮತ್ತೊಂದು ಜನಪ್ರಿಯ ಹೆಸರಾಗಿದ್ದು, ಇದರ ಮೂಲಕ ರಥ ಸಪ್ತಮಿ ಪ್ರಸಿದ್ಧವಾಗಿದೆ. ತಮಿಳುನಾಡಿನಲ್ಲಿ ಜನರು ಪವಿತ್ರ ಸ್ನಾನ ಮಾಡಲು ಎರುಕ್ಕು ಎಲೆಗಳನ್ನು ಬಳಸುತ್ತಾರೆ.
  • ಪವಿತ್ರ ಸ್ನಾನವನ್ನು ಕೈಗೊಂಡ ನಂತರ ಮಾಡಬೇಕಾದ ಮುಂದಿನ ಆಚರಣೆ ಸೂರ್ಯೋದಯದ ಸಮಯದಲ್ಲಿ ಸೂರ್ಯ ದೇವನ ಹೆಸರಿನಲ್ಲಿ 'ಅರ್ಗ್ಯದಾನ'. ಕಲಶದಿಂದ ಸೂರ್ಯನಿಗೆ ನೀರನ್ನು ಅರ್ಪಿಸುವ ಮೂಲಕ ಮತ್ತು ನಮಸ್ಕಾರ ಮುದ್ರೆಯಲ್ಲಿ ನಿಲ್ಲುವ ಮೂಲಕ ಅರ್ಗ್ಯದಾನ ಅಭ್ಯಾಸ ಮಾಡಲಾಗುತ್ತದೆ. ಗರಿಷ್ಠ ಪ್ರಯೋಜನಗಳನ್ನು ಪಡೆಯಲು, ಭಕ್ತರು ಸೂರ್ಯನ ವೈವಿಧ್ಯಮಯ ಹೆಸರುಗಳನ್ನು ಪಠಿಸಿಕೊಂಡು ಸತತವಾಗಿ ಹನ್ನೆರಡು ಬಾರಿ ಈ ಆಚರಣೆಯನ್ನು ಮಾಡಬೇಕಾಗುತ್ತದೆ.
  • ಅರ್ಗ್ಯದಾನ ಮಾಡಿದ ನಂತರ ಭಕ್ತರು ತುಪ್ಪ ತುಂಬಿದ ಮಣ್ಣಿನ ದೀಪವನ್ನು ಬೆಳಗಿಸಿ ರಥ ಸಪ್ತಮಿ ಪೂಜೆಯನ್ನು ಮಾಡುತ್ತಾರೆ ಮತ್ತು ಸೂರ್ಯನಿಗೆ ಧೂಪ, ಕರ್ಪೂರ ಮತ್ತು ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸುತ್ತಾರೆ.
  • ಅದರ ನಂತರ, ಸ್ತ್ರೀ ಭಕ್ತರು ಸೂರ್ಯ ದೇವ ಮತ್ತು ಆತನ ದೈವಿಕ ಆಶೀರ್ವಾದಗಳನ್ನು ಸ್ವಾಗತಿಸಲು ರಥ ಮತ್ತು ಸೂರ್ಯನ ಚಿತ್ರಗಳನ್ನು ಬಿಡಿಸುತ್ತಾರೆ. ವಿವಿಧ ಪ್ರದೇಶಗಳಲ್ಲಿ, ಮಹಿಳೆಯರು ತಮ್ಮ ಮನೆಗಳ ಪ್ರವೇಶದ್ವಾರದಲ್ಲಿ ಸಮೃದ್ಧಿ ಮತ್ತು ಸಕಾರಾತ್ಮಕತೆಯ ಸಂಕೇತವಾಗಿ ರಂಗೋಲಿ ಕೂಡ ಹಾಕುತ್ತಾರೆ.
  • ಅತ್ಯಂತ ಮಹತ್ವದ ಆಚರಣೆಯೆಂದರೆ ಮಣ್ಣಿನಿಂದ ಮಾಡಿದ ಪಾತ್ರೆಯಲ್ಲಿ ಹಾಲನ್ನು ಸುರಿದು, ಸೂರ್ಯನನ್ನು ಎದುರಿಸುವ ದಿಕ್ಕಿನಲ್ಲಿ ಕುದಿಯಲು ಇಡಲಾಗುತ್ತದೆ. ಅದನ್ನು ಕುದಿಸಿದ ನಂತರ, ಅದೇ ಹಾಲನ್ನು ಪ್ರಸಾದ (ಸಿಹಿ ಅಕ್ಕಿ) ತಯಾರಿಸಲು ಬಳಸಲಾಗುತ್ತದೆ ಮತ್ತು ನಂತರ ಅದನ್ನು ದೇವ ಸೂರ್ಯ ಸೂರ್ಯನಿಗೆ ಅರ್ಪಿಸಲಾಗುತ್ತದೆ.
  • ರಥ ಸಪ್ತಮಿ ದಿನದಂದು ಸೂರ್ಯಸ್ಥಕಂ, ಸೂರ್ಯ ಸಹಸ್ರಣಂ ಮತ್ತು ಗಾಯತ್ರಿ ಮಂತ್ರವನ್ನು ನಿರಂತರವಾಗಿ ಜಪಿಸುವುದರಿಮ್ದ ಅದೃಷ್ಟ ಮತ್ತು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
  • ಸೂರ್ಯನ ಭಕ್ತಿಯಿಂದ ನಿರ್ಮಿಸಲಾದ ಹಲವಾರು ದೇವಾಲಯಗಳು ಮತ್ತು ಪವಿತ್ರ ಸ್ಥಳಗಳಿವೆ. ಈ ಎಲ್ಲ ಸ್ಥಳಗಳಲ್ಲಿ ರಥ ಸಪ್ತಮಿಯ ಮುನ್ನಾದಿನದಂದು ಬೃಹತ್ ಆಚರಣೆಗಳು ಮತ್ತು ವಿಶೇಷ ಸಮಾರಂಭಗಳು ನಡೆಯುತ್ತವೆ. ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನ, ಶ್ರೀ ಮಾಂಗೇಶ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ ಜೊತೆಗೆ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಮತ್ತು ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಭವ್ಯ ಉತ್ಸವಗಳನ್ನು ಆಯೋಜಿಸಲಾಗುತ್ತದೆ.
English summary

Ratha Saptami 2022 Date and Time, Significance And Rituals Of Surya Jayanti

Here we told about Ratha Saptami 2021 Date and Time, Significance And Rituals of f Surya Jayanti, read on
X
Desktop Bottom Promotion