For Quick Alerts
ALLOW NOTIFICATIONS  
For Daily Alerts

ಸಿಂಹ ರಾಶಿಯವರಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇವೇ ನೋಡಿ

|

ರಾಶಿಚಕ್ರ ಎಂಬುದು ಆ ರಾಶಿಗೆ ಸೇರಿದವರ ಭವಿಷ್ಯ, ಗುಣಲಕ್ಷಣ, ಸಮಸ್ಯೆಗಳು, ಪರಿಹಾರ ಸೇರಿದಂತೆ ಹಲವು ಗೊಂದಲಗಳಿಗೆ ಉತ್ತರ ನೀಡುವ ಜ್ಯೋತಿಶಾಸ್ತ್ರದ ಪರಿಹಾರ ಮಾರ್ಗವಾಗದೆ. ಪ್ರತಿಯೊಂದು ರಾಶಿಚಕ್ರಕ್ಕೂ ತನ್ನದೇ ಆದ ಗುಣಲಕ್ಷಣಗಳು, ವಿಶೇಷತೆಗಳು, ಅದೃಷ್ಟಾಂಶಗಳು ಪ್ರತ್ಯೇಕವಾಗಿರುತ್ತದೆ. ಹಾಗೆಯೇ ವ್ಯಕ್ತಿಯ ರಾಶಿಚಕ್ರ ಆಧರಿಸಿಯೇ ಜ್ಯೋತಿಶಾಸ್ತ್ರವನ್ನು ಹೇಳಲಾಗುತ್ತದೆ.

ಅಂತೆಯೇ ಇಂದಿನ ಲೇಖನದಲ್ಲಿ ಸಿಂಹ ರಾಶಿಯವರ ಗುಣಾವಗುಣಗಳು ಹೇಗಿರುತ್ತದೆ, ಅವರ ವಿಶೇಷತೆಗಳೇನು, ಅವರಲ್ಲಿರುವ ನಕಾರಾತ್ಮಕ ಅಂಶಗಳೇನು ಎಂಬುದರ ಬಗ್ಗೆ ಸವಿವರವಾಗಿ ತಿಳಿಸಿಕೊಡಲಿದ್ದೇವೆ.

ಸಿಂಹ ರಾಶಿ ಹೆಸರೇ ಸೂಚಿಸುವಂತೆ ಒಬ್ಬ ಉತ್ತಮ ಹಾಗೂ ಮಾದರಿ ನಾಯಕನಿಗೆ ಇರಬೇಕಾದ ಮುಖ್ಯ ಗುಣಲಕ್ಷಣ ಇವರಲ್ಲಿರುತ್ತದೆ. ಇವರಲ್ಲಿ ಬುದ್ಧಿವಂತಿಕೆ, ಧೈರ್ಯಶಾಲಿ ಸ್ವಭಾವ, ಮುನ್ನುಗ್ಗುವ ಛಾತಿ ರಕ್ತಗತವಾಗಿಯೇ ಬಂದಿರುತ್ತದೆ ಎಂದೇ ಹೇಳಬಹುದು. ಅಷ್ಟೇ ಅಲ್ಲದೇ ಇವರು ಸಾಹಸಿಗರು, ಜೀವನವನ್ನು ಅನುಭವಿಸುತ್ತಾರೆ ಹೀಗೆ ಹತ್ತು ಹಲವು ಗುಣಗಳ ಬಗ್ಗೆ ನೀವು ಸಾಮಾನ್ಯವಾಗಿ ತಿಳಿದಿರುತ್ತೀರಿ, ಇಲ್ಲಿ ಇನ್ನಷ್ಟು ಅದರೆ ಸಕಾರಾತ್ಮಕ ಗುಣಗಳ ಜತೆಗೆ ಇವರಲ್ಲಿರುವ ನಕಾರಾತ್ಮಕ ಗುಣಗಳು ಯಾವುವು ಎಂಬುದರ ಬಗ್ಗೆಯೂ ಸವಿಸ್ತಾರವಾಗಿ ತಿಳಿಯೋಣ ಬನ್ನಿ.......

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ

ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.

Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

ಸಿಂಹ ರಾಶಿಯವರಲ್ಲಿರುವ ಸಕಾರಾತ್ಮಕ ಲಕ್ಷಣಗಳು

ಸಿಂಹ ರಾಶಿಯವರಲ್ಲಿರುವ ಸಕಾರಾತ್ಮಕ ಲಕ್ಷಣಗಳು

ಆಪ್ತರಿಗೆ ಸದಾ ರಕ್ಷಣಾತ್ಮಕರು

ಸಿಂಹ ರಾಶಿಯವರು ಸ್ನೇಹಿತರು ಮತ್ತು ಪರಿಚಯಸ್ಥರ ದೊಡ್ಡ ವಲಯವನ್ನು ಹೊಂದಿದ್ದೀರಿ. ನೀವು ಎಲ್ಲವನ್ನೂ ಕಾಳಜಿ ವಹಿಸುತ್ತೀರಿ ಮತ್ತು ಪೋಷಿಸುತ್ತೀರಿ ಮತ್ತು ಅವರೊಂದಿಗೆ ಬಹಳ ಉದಾರವಾಗಿರುತ್ತೀರಿ. ನೀವು ಬಹಳ ಧೈರ್ಯಶಾಲಿ ಮತ್ತು ಬಲಶಾಲಿಗಳು. ನಿಮ್ಮ ಸ್ನೇಹಿತರ ಸದಾ ರಕ್ಷಣಾತ್ಮಕ ಮನೋಭಾವವನ್ನು ಹೊಂದಿದ್ದೀರಿ. ನಿಮಗೆ ಹತ್ತಿರವಿರುವವರ ಬಗ್ಗೆ ಅಪಾರ ಕಾಳಜಿ ವಹಿಸುತ್ತೀರಿ. ನೀವು ಇಷ್ಟ ಪಡುವ ಎಲ್ಲವನ್ನೂ ನಿಮ್ಮದಾಗಿಸಿಕೊಳ್ಳಲು ಎಲ್ಲಾ ಅಡೆತಡೆಗಳ ವಿರುದ್ಧವೂ ಹೋರಾಡುತ್ತೀರಿ. ನಿಮ್ಮ ಜೀವನವನ್ನು ನಿಮ್ಮದೇ ರೀತಿಯಲ್ಲಿ, ಸ್ವಂತ ನಿಯಮಗಳು ಮತ್ತು ಷರತ್ತುಗಳ ಸಹಿತ ಬದುಕಲು ಇಷ್ಟಪಡುತ್ತೀರಿ. ಇತರರು ಯಾರಾದರೂ ನಿಯಮಗಳನ್ನು ನಿಮ್ಮ ಮೇಲೆ ಹೇರಿದರೆ ಅಥವಾ ಆದೇಶ ಮಾಡಿದರೆ ನಿಮಗೆ ಇಷ್ಟವಾಗುವುದಿಲ್ಲ.

ಆಶಾವಾದಿ

ಆಶಾವಾದಿ

ಸಿಂಹ ರಾಶಿಯವರು ಬಹಳಾ ಆಶಾವಾದಿಗಳು, ಅವರು ಜೀವನಕ್ಕೆ ಬೆಳ್ಳಿ ಪದರವನ್ನು ನೋಡಲು ಸಾಧ್ಯವಾಗುತ್ತದೆ. ನೀವು ಸಮಸ್ಯೆಗಳ ರೂಪದಲ್ಲಿ ಎದುರಿಸುವ ಯಾವುದೇ ಪರಿಸ್ಥಿತಿಯನ್ನು ಸಹ ಸಕಾರಾತ್ಮಕವಾಗಿ ನೋಡುತ್ತೀರಿ. ಕೆಟ್ಟ ಪರಿಸ್ಥಿತಿಗೆ ಹೊಂದಿಕೊಳ್ಳುವುದರ ಬದಲಿಗೆ ಒಳ್ಳೆಯದನ್ನೇ ಆನಂದಿಸಲು ಬಯಸುತ್ತೀರಿ.

ನಾಯಕತ್ವ, ಜನಪ್ರಿಯ

ನಾಯಕತ್ವ, ಜನಪ್ರಿಯ

ನಿಮ್ಮಲ್ಲಿ ಸ್ವಾಭಾವಿಕವಾಗಿಯೇ ನಾಯಕತ್ವ ಗುಣ ಇದೆ ಮತ್ತು ಯಾವಾಗಲೂ ಜನಮನದಲ್ಲಿ ಹಾಗೂ ಮುಂಚೂಣಿಯಲ್ಲಿರಬೇಕು ಎಂದು ಬಯಸುತ್ತೀರಿ. ನಿಮಗಿಂತ ಉತ್ತಮವಾಗಿ ಮುಂದಾಳತ್ವ ವಹಿಸಬಲ್ಲ ಇತರರನ್ನು ಅಷ್ಟೇನೂ ಇಷ್ಟಪಡುವುದಿಲ್ಲ. ನೀವು ಸ್ಟಾರ್‌ ಆಗುವುದನ್ನು ಇಷ್ಟಪಡುತ್ತೀರಿ, ಅದನ್ನು ಪ್ರೀತಿಸುತ್ತೀರಿ. ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ನೀವೇ ಕೇಂದ್ರವಾಗಿರಲು ಬಯಸುತ್ತೀರಿ, ಅದಕ್ಕಾಗಿ ಶ್ರಮಿಸುತ್ತೀರಿ. ನಿಮ್ಮಲ್ಲಿರುವ ಆತ್ಮವಿಶ್ವಾಸ, ಜನಸಂದಣಿಯನ್ನು ಮೆಚ್ಚಿಸುವ ಅಂತಃಪ್ರಜ್ಞೆ ನಿಮ್ಮನ್ನು ಜನಪ್ರಿಯಗೊಳಿಸುತ್ತವೆ.

ರೀತಿಯ ಮತ್ತು ರಕ್ಷಣಾತ್ಮಕ

ರೀತಿಯ ಮತ್ತು ರಕ್ಷಣಾತ್ಮಕ

ನೀವು ಜವಾಬ್ದಾರರಾಗಿರುತ್ತೀರಿ ಮತ್ತು ಪ್ರೀತಿಪಾತ್ರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತೀರಿ. ಪ್ರತಿ ಬಾರಿಯೂ ದುರ್ಬಲರ ಪರ ನಿಲ್ಲುಲು ಬಯಸುತ್ತೀರಿ. ನಿಮ್ಮಲ್ಲಿ ಸಹಾನುಭೂತಿಯ ಮನಸ್ಸು ಇದೆ, ಅತ್ಯಂತ ಕರುಣಾಮಯಿ ಮತ್ತು ಉದಾರ ಜೀವಿಗಳಾಗಿರುತ್ತೀರಿ.

ನಿಷ್ಠೆ

ನಿಷ್ಠೆ

ನಿಮ್ಮಲ್ಲಿರುವ ಅತ್ತುತ್ತಮವಾದ ಒಂದು ಗುಣಲಕ್ಷಣವೆಂದರೆ ಅದು ನಿಮ್ಮ ನಿಷ್ಠೆ. ನಿಮ್ಮ ಸ್ನೇಹಿತರು, ಪರಿಚಯಸ್ಥರು ಮತ್ತು ಆಪ್ತರಿಗೆ ನೀವು ತುಂಬಾ ನಿಷ್ಠರಾಗಿರುತ್ತೀರಿ. ಈ ನಿಮ್ಮ ಗುಣವೇ ಅವರು ನಿಮ್ಮನ್ನು ಹೆಚ್ಚು ನಂಬಲು, ನಿಮ್ಮನ್ನು ಪ್ರೇರಣೆಯಾಗಿಸಿಕೊಳ್ಳಲು ಕಾರಣವಾಗಿದೆ.

ಪ್ರಾಮಾಣಿಕ

ಪ್ರಾಮಾಣಿಕ

ಸಿಂಹ ರಾಶಿಯವರು ತುಂಬಾ ಪ್ರಾಮಾಣಿಕರು. ನೀವು ಜನರೊಂದಿಗೆ ಅತ್ಯಂತ ನೇರವಾಗಿರುತ್ತೀರಿ. ಯಾವುದೇ ಅಭಿಪ್ರಾಯವನ್ನು ಅವರ ಮನಸ್ಸಿಗೆ ನೋವಾಗದಂತೆ ಪ್ರಾಮಾಣಿಕವಾಗಿ ಪ್ರತಿಕ್ರಿಯೆ ನೀಡುತ್ತೀರಿ, ನೀವು ಸುಳ್ಳನ್ನು ನಂಬುವುದಿಲ್ಲ. ಕೇವಲ ಇತರರನ್ನು ಮೆಚ್ಚಿಸಲು ಎಂದಿಗೂ ಸುಳ್ಳನ್ನು ಹೇಳುವುದಿಲ್ಲ.

ಸಿಂಹ ರಾಶಿಯವರಲ್ಲಿರುವ ನಕಾರಾತ್ಮಕ ಲಕ್ಷಣಗಳು

ಸಿಂಹ ರಾಶಿಯವರಲ್ಲಿರುವ ನಕಾರಾತ್ಮಕ ಲಕ್ಷಣಗಳು

ದುರಹಂಕಾರ

ಕೆಲವೊಮ್ಮೆ ನಿಮ್ಮ ಪ್ರಾಬಲ್ಯ, ಆತ್ಮವಿಶ್ವಾಸವು ದುರಹಂಕಾರ ಅಥವಾ ಅಹಂಕಾರದಂತೆ ಕಾಣಬಹುದು. ನಿಮ್ಮ ನಿರ್ಧಾರ ಸರಿಯಾಗಿಯೇ ಇರುತ್ತದೆ ಎಂಬುದು ಎಷ್ಟು ಸತ್ಯವೋ, ಅಂತೆಯೇ ನೀಉ ಅದನ್ನು ಇತರರ ಮೇಲೆ ಹೇರುವಾಗ ಅದು ಅವರಿಗೆ ನಿಮ್ಮಲ್ಲಿರುವ ಅಹಂಕಾರ,ದರ್ಪ ಎಂಬಂತೆ ಭಾಸವಾಗುತ್ತದೆ ಅಥವಾ ನೀವು ಹಾಗೆಯೇ ವರ್ತಿಸಿಯೂ ಇರಬಹುದು. ಸ್ವಾರ್ಥಿಯಾಗಬಹುದು ಅಥವಾ ಎಲ್ಲದರಲ್ಲೂ ತಾವೇ ಉತ್ತಮರೆಂದು ಭಾವಿಸಬಹುದು.

ಹೊಂದಿಕೊಳ್ಳುವುದಿಲ್ಲ

ಹೊಂದಿಕೊಳ್ಳುವುದಿಲ್ಲ

ನೀವು ಇತರರಿಗೆ ಹೊಂದಿಕೊಳ್ಳುವವರಲ್ಲ, ಅಂತೆಯೇ ನಿಮಗಾಗಿ ಸಹ ನೀವು ಹೊಂದಿಕೊಳ್ಳುವುದಿಲ್ಲ. ನೀವು ಏನನ್ನಾದರೂ ಮಾಡಲು ಒಮ್ಮೆ ಅದಕ್ಕೆ ನಿರ್ಧರಿಸಿದರೆ ಅದಕ್ಕೆ ಬದ್ಧರಾಗಿರುತ್ತೀರಿ.

ಸೋಮಾರಿತನ

ಸೋಮಾರಿತನ

ನೀವು ಮಹತ್ವಾಕಾಂಕ್ಷೆಯ, ಆತ್ಮವಿಶ್ವಾಸದ ಮತ್ತು ಸದಾ ಉತ್ಸಾಹದಿಂದ ಇರುವ ವ್ಯಕ್ತಿಯಾಗಿದ್ದರೂ, ನೀವು ಸೋಮಾರಿಯಾಗಿರುವುದನ್ನು ಸಹ ಒಪ್ಪಿಕೊಳ್ಳಲೇಬೇಕು. ಅವಕಾಶಗಳು ಮತ್ತು ಸನ್ನಿವೇಶಗಳನ್ನು ನಿಭಾಯಿಸಲು ಕೆಲವು ಬಾರಿ ನೀವು ಸುಲಭವಾದ ಮಾರ್ಗಗಳನ್ನೂ ಅನುಸರಿಸುತ್ತೀರಿ. ಪರಿಸ್ಥಿತಿಯು ನಿಮಗೆ ಸ್ವಲ್ಪ ಮೋಜು ಅಥವಾ ವೈಭವವನ್ನು ನೀಡಿದಾಗ ವಿಶೇಷವಾಗಿ ಸೋಮಾರಿಯಾಗುತ್ತೀರಿ.

ಮೊಂಡುತನ

ಮೊಂಡುತನ

ಮೊಂಡುತನದ ನಿಮ್ಮ ಸ್ವಭಾವ ಸಾಕಷ್ಟು ಸಮಸ್ಯೆಗಳನ್ನು ನಿಮಗೆ ನೀಡಬಹುದು. ಅಂದರೆ ನೀವು ಕೆಲವು ಬಾರಿ ತಪ್ಪುಗಳನ್ನೇ ಮಾಡಿದ್ದರೂ ನಿಮ್ಮ ತಪ್ಪುಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ, ನಿಮ್ಮದೇ ಸರಿ ಎಂದು ವಾದಿಸುತ್ತೀರಿ. ಇತರರು ನಿಮಗೆ ಸರಿಯಾಗಿಯೇ ಸಲಹೆಗಳನ್ನು ನೀಡಿದ್ದರೂ ಅದನ್ನು ಸ್ವೀಕರಿಸಲು ನಿಮಗೆ ಕಷ್ಟವಾಗುತ್ತದೆ. ಇದು ಬೆಳವಣಿಗೆಯ ಲಕ್ಷಣವಲ್ಲ ಎಂಬುದು ನಿಮ್ಮ ನೆನಪಿನಲ್ಲಿರಲಿ.

ಪ್ರಾಬಲ್ಯ

ಪ್ರಾಬಲ್ಯ

ಸಿಂಹ ರಾಶಿಯವರು ಯಾವಾಗಲೂ ಗೌರವವನ್ನು ಬಯಸುತ್ತೀರಿ ಮತ್ತು ನಿಮ್ಮ ಸುತ್ತಲಿರುವ ಪ್ರತಿಯೊಬ್ಬರೂ ಅಧೀನವಾಗಿ ವರ್ತಿಸಬೇಕೆಂದು ನಿರೀಕ್ಷಿಸುತ್ತೀರಿ. ನೀವು ಇತರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಹುದು, ಇತರರ ಆದೇಶಗಳನ್ನು ನಿರಾಕರಿಸಬಹುದು ಮತ್ತು ಯಾವುದೇ ವಾದಗಳಿಲ್ಲದೆ ಅವರು ಅನುಸರಿಸುತ್ತಾರೆಂದು ನಿರೀಕ್ಷಿಸಬಹುದು. ನೀವು ಇತರರನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ನಿರಾಶೆಗೊಳ್ಳುತ್ತೀರಿ, ಸಾಕಷ್ಟು ಕೋಪಗೊಳ್ಳುತ್ತೀರಿ.

ಇಲ್ಲಿ ಹೇಳಿರುವ ಎಲ್ಲಾ ನಕಾರತ್ಮಕ ಅಂಶಗಳು ನಿಮ್ಮಲ್ಲಿ ಇರಬಹುದು ಅಥವಾ ಇಲ್ಲದೆಯೂ ಇರಬಹುದು, ಆದರೆ ಇದೆ ಎಂಬುದೇ ಅದಲ್ಲಿ, ಅದರ ಬಗ್ಗೆ ನಿಮಗೆ ಅರಿವಿದ್ದಲ್ಲಿ ಅವುಗಳನ್ನು ತಿದ್ದಿಕೊಂಡರೆ ನೀವೆ ಅತ್ಯುತ್ತಮ, ಆದರ್ಶ, ಮಾದರಿ ನಾಯಕರಾಗಬಹುದು, ಎಲ್ಲರ ನಡುವೆಯೂ ಮಿಂಚಬಹುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ

ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.

ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.

Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

English summary

Positive And Negative Characteristics Of Leo

Here we are discussing about Positive And Negative Characteristics Of Leo. Read more.
X