For Quick Alerts
ALLOW NOTIFICATIONS  
For Daily Alerts

ನವರಾತ್ರಿ 2021: ಒಂಬತ್ತು ದಿನಗಳ ವ್ರತದಂದು ಮಾಡಬೇಕಾದ ಹಾಗೂ ಮಾಡಲೇಬಾರದ ಕೆಲಸಗಳು ಇಲ್ಲಿವೆ

|

ನಾಡ ಹಬ್ಬ ದಸರಾ ಅಥವಾ ನವರಾತ್ರಿಗೆ ಕ್ಷಣಗಣನೆ ಆರಂಭವಾಗಿದೆ. ದೇಶದಾದ್ಯಂತ ಸಂಭ್ರಮದಿಂದ ಆಚರಿಸುವ ಈ ಹಬ್ಬವನ್ನು ಅಶ್ವಯುಜ ಮಾಸದ ಪ್ರಾರಂಭದಲ್ಲಿ ಹತ್ತು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಇದಕ್ಕೆ ಶರನ್ನವರಾತ್ರಿ ಎಂಬ ಹೆಸರೂ ಇದೆ. 9 ದಿನಗಳು ಹಬ್ಬ, ಉತ್ಸವ ಎಂದು ಆಚರಿಸುತ್ತೇವಾದರೂ ನವರಾತ್ರಿ ಎಂದರೆ ಅದೊಂದು ವೃತ. ನವದಿನಗಳಲ್ಲಿ ನವದುರ್ಗೆಯ ರೂಪದಲ್ಲಿರುವ ಶ್ರೀ ಮಹಾಲಕ್ಷ್ಮಿಯನ್ನು ಆರಾಧಿಸಲು ಹಾಗೂ ಅನುಗ್ರಹ ಪಡೆಯಲು ಈ ವೃತವನ್ನು ಮಾಡಬೇಕು.

2021ನೇ ಸಾಲಿನಲ್ಲಿ ನವರಾತ್ರಿ ಅಕ್ಟೋಬರ್ 7ರಂದು ಆರಂಭವಾಗಿ 15ರ ವಿಜಯದಶಮಿಯಂದು ಕೊನೆಗೊಳ್ಳಲಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ವ್ರತದಲ್ಲಿ ಭಕ್ತರು ದೇವಿಯ ಕೃಪೆಗಾಗಿ ಏನೆಲ್ಲಾ ಮಾಡಬೇಕು? ಯಾವುದನ್ನು ಮಾಡಬಾರದು ಎಂಬುದನ್ನು ಇಲ್ಲಿ ನೋಡೋಣ.

ನವರಾತ್ರಿ ವ್ರತದಂದು ಮಾಡಬೇಕಾದ ಹಾಗೂ ಮಾಡಬಾರದ ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ:

ನವರಾತ್ರಿ ವ್ರತದಂದು ಮಾಡಬೇಕಾದ ಕೆಲಸಗಳು:

Navratri Vrat 2021 Dos and Donts

1. ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳಿ. ನವರಾತ್ರಿ (ಒಂಬತ್ತು ರಾತ್ರಿಗಳು) ಆತ್ಮಾವಲೋಕನ, ಸ್ವಯಂ ಸಾಕ್ಷಾತ್ಕಾರ, ಸ್ವಯಂ ಶಿಸ್ತು, ಸ್ವಯಂ ನಿಯಂತ್ರಣ ಮತ್ತು ಆಧ್ಯಾತ್ಮಿಕ ಜಾಗೃತಿಗಾಗಿ ಸೂಕ್ತವಾಗಿದೆ.
2. ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶೂಚೀರ್ಭೂತರಾಗಿ, ಶುಚಿಯಾದ ವಸ್ತ್ರವನ್ನು ಧರಿಸಿ ಪೂಜೆಗೆ ಬೇಕಾಗಿರುವ ಸಾಮಾಗ್ರಿಯನ್ನು ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಬೇಕು.
3. ದುರ್ಗಾ ಮಾತೆಯ ಫೋಟೋ ಅಥವಾ ಮೂರ್ತಿಯನ್ನು ಕೆಂಪು ಬಟ್ಟೆಯ ಮೇಲೆ ಇಡಬೇಕು. ಮಣ್ಣಿನ ಮಡಿಕೆಯಲ್ಲಿ ಧಾನ್ಯಗಳನ್ನು ಹಾಕಿ, ನೀರನ್ನು ಚಿಮುಕಿಸಿ, ನವಮಿಯವರೆಗೂ ನೀರನ್ನು ಚಿಮುಕಿಸಬೇಕು.
4. ಶುಭ ಮುಹೂರ್ತದಲ್ಲಿ ಘಟಸ್ಥಾಪನಾ ಪ್ರಕ್ರಿಯೆಯನ್ನು ಮಾಡಿ. ಒಂದು ಹೂಜಿ ಅಥವಾ ಸಣ್ಣ ಮಡಕೆಯಲ್ಲಿ ಗಂಗಾಜಲವನ್ನು ಹಾಕಿ, ಮಡಕೆಯ ಬಾಯಿಯ ಮೇಲೆ ಮಾವಿನ ಎಲೆಯನ್ನು ಇಡಬೇಕು. ಮಡಕೆಯ ಕುತ್ತಿಗೆಯ ಭಾಗಕ್ಕೆ ಪವಿತ್ರ ಕೆಂಪು ದಾರವನ್ನು ಕಟ್ಟಬೇಕು. ತೆಂಗಿನ ಕಾಯಿಗೂ ಕೆಂಪು ದಾರವನ್ನು ಕಟ್ಟಿ ಮಡಿಕೆಯ ಬಾಯಿಯ ಭಾಗದಲ್ಲಿ ಮಾವಿನ ಎಲೆ ಜೋಡಿಸಿದ ಮಧ್ಯದಲ್ಲಿ ಇಡಬೇಕು. ಈ ಮಡಕೆಯನ್ನು ಧಾನ್ಯವಿಟ್ಟ ಮಡಕೆಯ ಪಕ್ಕದಲ್ಲೇ ಇಡಬೇಕು.

5. ದೇವಿಗೆ ಹೂವು, ಕರ್ಪೂರ, ಗಂಧದ ಕಡ್ಡಿ, ದ್ರವ್ಯ ಹಾಗೂ ಭಕ್ಷ್ಯಗಳನ್ನು ಅರ್ಪಿಸಿ, ಪೂಜೆಯನ್ನು ಮಾಡಬೇಕು.
6. ದುರ್ಗಾ ಮಂತ್ರವನ್ನು ಒಂಭತ್ತು ದಿನಗಳಲ್ಲೂ ಪಠಿಸಿ.
7. ನವರಾತ್ರಿಯ ಎಂಟನೇ ಅಥವಾ ಹತ್ತನೇ ದಿನ ಮನೆಗೆ ಒಂಭತ್ತು ಮಂದಿ ಹೆಣ್ಣು ಮಕ್ಕಳನ್ನು ಆಹ್ವಾನಿಸಿ, ನವದುರ್ಗೆಯರೆಂದು ಭಾವಿಸಿ, ಅವರ ಕಾಲು ತೊಳೆದು, ಆರತಿ ಮಾಡಿ, ಹಣೆಗೆ ಕುಂಕುಮ ಹಚ್ಚಿ, ಭೋಜನವನ್ನು ನೀಡಿ.
8. ನವರಾತ್ರಿಯ ಕೊನೆಯ ದಿನ ದುರ್ಗಾಪೂಜೆಯ ನಂತರ ಪ್ರಾರ್ಥನೆ ಮಾಡಿ, ಹೂವು ಹಾಗೂ ಅಕ್ಷತೆಯನ್ನು ದೇವತೆಗಳಿಗೆ ಅರ್ಪಿಸಿ, ನಂತರ ಘಟವನ್ನು ಪೀಠದಿಂದ ಸರಿಸಿ ಘಟ ವಿಸರ್ಜನೆಯನ್ನು ಮಾಡಿ.
9. ದಿನಕ್ಕೆ ಒಂದು ಊಟವನ್ನು ಮಾತ್ರ ಸೇವಿಸುವ ಮೂಲಕ ಉಪವಾಸವನ್ನು ಆಚರಿಸುವವರು ಸೂರ್ಯಾಸ್ತದ ನಂತರವೇ ಉಪವಾಸವನ್ನು ಮುರಿಯಬೇಕು, ಆದರೆ ಹಣ್ಣು/ಹಾಲಿನ ಆಹಾರದಲ್ಲಿರುವವರು ನಿಯಮಿತ ಮಧ್ಯಂತರದಲ್ಲಿ ತಿನ್ನಬಹುದು. ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ.

ನವರಾತ್ರಿಯಂದು ಮಾಡಬಾರದ ಕೆಲಸಗಳು:

1. ಈರುಳ್ಳಿ, ಬೆಳ್ಳುಳ್ಳಿ ಮತ್ತು ಇತರ ಶಾಖ ಉತ್ಪಾದಿಸುವ ಆಹಾರಗಳ ಬಳಕೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಹಾಗೆಯೇ, ಮಾಂಸಾಹಾರ ಅಥವಾ ಮದ್ಯ/ತಂಬಾಕು ಸೇವಿಸಬೇಡಿ.
2. ಈ ಅವಧಿಯಲ್ಲಿ ನಿಮ್ಮ ಕೂದಲು, ಉಗುರುಗಳನ್ನು ಕತ್ತರಿಸಬೇಡಿ. ನವರಾತ್ರಿಯ ಸಮಯದಲ್ಲಿ ಪುರುಷರು ತಮ್ಮ ಗಡ್ಡವನ್ನು ಶೇವ್ ಮಾಡಬಾರದು ಅಥವಾ ಕತ್ತರಿಸಬಾರದು.
3. ನಿಮ್ಮ ಮಾತುಗಳು ಅಥವಾ ಕ್ರಿಯೆಗಳಿಂದ ಇತರರನ್ನು ನೋಯಿಸಬೇಡಿ, ಅಂತಹ ಯಾವ ಕೆಲಸವನ್ನೂ ಮಾಡಬೇಡಿ.

English summary

Navratri Vrat 2021 Dos and Don'ts

Here we talking about Navratri Vrat 2021 dos and don'ts, read on
X
Desktop Bottom Promotion