For Quick Alerts
ALLOW NOTIFICATIONS  
For Daily Alerts

Festival List September 2021: ಸೆಪ್ಟೆಂಬರ್ ತಿಂಗಳ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ ಇಲ್ಲಿದೆ

|

ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದೆ ಎಂದರೆ, ನಾವು ಸೆಪ್ಟೆಂಬರ್ ತಿಂಗಳಿಗೆ ಕಾಲಿಡುತ್ತಿದ್ದೇವೆ ಎಂದರ್ಥ. ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸುವ ಗಣೇಶ ಚತುರ್ಥಿ ಸೇರಿದಂತೆ ನಾನಾ ಹಬ್ಬಗಳು, ವ್ರತಗಳು ಸೆಪ್ಟೆಂಬರ್ ತಿಂಗಳಲ್ಲೇ ಬರುತ್ತವೆ. ಹಾಗಾದ್ರೆ ಬನ್ನಿ, ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಯಾವೆಲ್ಲಾ ಹಬ್ಬ-ಹರಿದಿನಗಳು, ವ್ರತ, ಉಪವಾಸ, ಪೂಜಾಚರಣೆಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸೆಪ್ಟೆಂಬರ್ ತಿಂಗಳಲ್ಲಿ ಇರುವ ಹಬ್ಬ-ವ್ರತಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಸೆಪ್ಟೆಂಬರ್ 3 ಅಜ ಏಕಾದಶಿ:

ಸೆಪ್ಟೆಂಬರ್ 3 ಅಜ ಏಕಾದಶಿ:

ಸೆಪ್ಟೆಂಬರ್ 3 ರಂದು ಕೃಷ್ಣ ಪಕ್ಷದ ಏಕಾದಶಿ ಅಂದರೆ, ಅಜ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಬಾರಿ ಪುಷ್ಯ ನಕ್ಷತ್ರವು ಅಜ ಏಕಾದಶಿಯ ದಿನದಂದು ಬರುತ್ತದೆ. ಆದ್ದರಿಂದ ಈ ದಿನದ ಉಪವಾಸವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ವಿಷ್ಣುವನ್ನು ಪೂಜಿಸಿ, ಉಪವಾಸ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ನೇರವೇರುತ್ತವೆ.

ಸೆಪ್ಟೆಂಬರ್ 4 ಪ್ರದೋಷ ವ್ರತ:

ಪ್ರದೋಷ ವ್ರತವನ್ನು ಶಿವನಿಗೆ ಸಮರ್ಪಿಸಲಾಗಿದ್ದು, ಸೆಪ್ಟೆಂಬರ್ 4 ರಂದು ಆಚರಿಸಲಾಗುತ್ತದೆ. ಪ್ರದೋಷ ವ್ರತದ ದಿನದಂದು ಉಪವಾಸ ಕೈಗೊಳ್ಳುವ ಮೂಲಕ, ಜಾತಕದಲ್ಲಿ ಇರುವ ಚಂದ್ರನ ದೋಷದಿಂದ ಮುಕ್ತಿ ಪಡೆಯಬಹುದು. ಈ ಬಾರಿ ಪ್ರದೋಷ ವ್ರತವು ಶನಿವಾರ ಬಂದಿರುವುದರಿಂದ, ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ಶನಿ ದೇವನ ಆಶೀರ್ವಾದವನ್ನು ಪಡೆಯುತ್ತೀರಿ ಏಕೆಂದರೆ ಶನಿ ದೇವನನ್ನು ಶಿವಭಕ್ತ ಎಂದು ಪರಿಗಣಿಸಲಾಗುತ್ತದೆ.

ಸೆಪ್ಟೆಂಬರ್ 5 ಮಾಸ ಶಿವರಾತ್ರಿ

ಸೆಪ್ಟೆಂಬರ್ 5 ಮಾಸ ಶಿವರಾತ್ರಿ

ಸೆಪ್ಟೆಂಬರ್ 6 ಪಿತೋರಿ ಅಮಾವಾಸ್ಯೆ:

ಭಾದ್ರಪದ ಕೃಷ್ಣ ಪಕ್ಷದ ಅಮವಾಸ್ಯೆಯನ್ನು ಪಿತೋರಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಪಿತೋರಿ ಅಮಾವಾಸ್ಯೆಯು ಸೆಪ್ಟೆಂಬರ್ 6 ರಂದು ಬಂದಿದ್ದು, ಇದನ್ನು ಕುಶಗ್ರಹಣಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ.

ಸೆಪ್ಟೆಂಬರ್ - 9 ಸ್ವರ್ಣ ಗೌರಿ ವ್ರತ:

ಸೆಪ್ಟೆಂಬರ್ - 9 ಸ್ವರ್ಣ ಗೌರಿ ವ್ರತ:

ಪಾರ್ವತಿಯ ಅಪರಾವತಾರವಾದ ಗೌರಿ ದೇವಿಯ ವ್ರತವನ್ನು ಸೆಪ್ಟೆಂಬರ್‌ 9ರಂದು ಆಚರಿಸಲಾಗುತ್ತಿದೆ. ಈ ಸ್ವರ್ಣ ಗೌರಿ ವ್ರತ ಪುತ್ರ ವಿನಾಯಕ ಚತುರ್ಥಿಯ ಹಿಂದಿನ ದಿನ ಆಚರಿಸಲಾಗುತ್ತದೆ. ಶಕ್ತಿ, ಧೈರ್ಯ, ಸ್ಥೈರ್ಯಕ್ಕೆ ಹೆಸರುವಾಗಿಯಾದ ಗೌರಿ ಮಾತೆ ಶಕ್ತಿಯನ್ನು ನಮಗೆ ದಯಪಾಲಿಸಲು ಎಂದು ಮಹಿಳೆಯರು ಗೌರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಈ ದಿನ ವರಹಾ ಜಯಂತಿಯೂ ಇದೆ. ಈ ದಿನದಂದು ವಿಷ್ಣುವಿನ ವರಾಹ ಅವತಾರವನ್ನು ಪೂಜಿಸುವುದರಿಂದ ಅನೇಕ ಆಸೆಗಳನ್ನು ಈಡೇರಿಕೆಯಾಗುತ್ತದೆ.

ಸೆಪ್ಟೆಂಬರ್ 10 ಗಣೇಶೋತ್ಸವ ಆರಂಭ:

ಸಂಭ್ರಮ ಸಡಗರಕ್ಕೆ ಹೆಸರಾಗಿರುವ ಗಣೇಶ ಚತುರ್ಥಿಯನ್ನು ಅಥವಾ ಚೌತಿಯನ್ನು ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಗಣೇಶನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಜನಿಸಿದನು ಮತ್ತು ಈ ದಿನಾಂಕವನ್ನು ಗಣೇಶ ಚತುರ್ಥಿಯೆಂದು ಆಚರಿಸಲಾಗುತ್ತದೆ. ಈ ಬಾರಿ 10 ದಿನಗಳ ಗಣೇಶ ಹಬ್ಬವು ಸೆಪ್ಟೆಂಬರ್ 10 ರಿಂದ ಆರಂಭವಾಗಿ, ವಿಗ್ರಹ ವಿಸರ್ಜನೆಯ ನಂತರ ಅಂದರೆ ಸೆಪ್ಟೆಂಬರ್ 19, ಭಾನುವಾರ ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ.

ಸೆಪ್ಟೆಂಬರ್ 11 ಋಷಿ ಪಂಚಮಿ:

ಸೆಪ್ಟೆಂಬರ್ 11 ಋಷಿ ಪಂಚಮಿ:

ಋಷಿ ಪಂಚಮಿಯ ಸಂದರ್ಭವನ್ನು ಮುಖ್ಯವಾಗಿ ಸಪ್ತರ್ಷಿಗಳು ಎಂದು ಕರೆಯಲ್ಪಡುವ ಏಳು ಮಹಾನ್ ಮುನಿಗಳಿಗೆ ಅರ್ಪಿಸಲಾಗಿದೆ. ಸಾಮಾನ್ಯವಾಗಿ ಈ ಹಬ್ಬವು ಗಣೇಶ ಚತುರ್ಥಿಯ ಒಂದು ದಿನದ ನಂತರ ಬರುತ್ತದೆ. ಋಷಿ ಪಂಚಮಿಯ ದಿನದಂದು, ಮುನಿಗಳನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಿದ ನಂತರ, ಕಥಾ ಪಠಣ ಮತ್ತು ಉಪವಾಸವನ್ನು ಮಾಡಲಾಗುತ್ತದೆ. ಈ ಉಪವಾಸವು ಜನರ ಎಲ್ಲಾ ಪಾಪಗಳನ್ನು ದೂರಮಾಡಿ, ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಲಾಗಿದೆ

ಸೆಪ್ಟೆಂಬರ್ 13 ಸಂತಾನ ಸಪ್ತಮಿ ವ್ರತ:

ಮಕ್ಕಳಿಗಾಗಿ ಈ ಉಪವಾಸವನ್ನು ಭಾದ್ರಪದ ಶುಕ್ಲ ಪಕ್ಷದ ಸಪ್ತಮಿ ತಿಥಿಯ ದಿನದಂದು ಮಾಡಲಾಗುತ್ತದೆ. ಈ ಉಪವಾಸವನ್ನು ಮಧ್ಯಾಹ್ನದವರೆಗೆ ಮಾತ್ರ ಆಚರಿಸಲಾಗುವುದು ಜೊತೆಗೆ, ಮಕ್ಕಳ ರಕ್ಷಣೆಗಾಗಿ ಶಿವ ಪಾರ್ವತಿಯನ್ನು ಪೂಜಿಸಲಾಗುತ್ತದೆ. ಮಹಾರಾಷ್ಟ್ರ ಮತ್ತು ದಕ್ಷಿಣ ರಾಜ್ಯಗಳಲ್ಲಿ ಈ ದಿನದಂದು ಮಹಾಲಕ್ಷ್ಮಿ ಉಪವಾಸವನ್ನು ಆಚರಿಸಲಾಗುತ್ತದೆ.

ಸೆಪ್ಟೆಂಬರ್ 14 ರಾಧಾಷ್ಟಮಿ, ಮಾಸ ದುರ್ಗಾಷ್ಟಮಿ:

ಸೆಪ್ಟೆಂಬರ್ 14 ರಾಧಾಷ್ಟಮಿ, ಮಾಸ ದುರ್ಗಾಷ್ಟಮಿ:

ಭಾದ್ರಪದ ಶುಕ್ಲ ಪಕ್ಷದ ಅಷ್ಟಮಿ ದಿನ ಕೃಷ್ಣಪ್ರಿಯೆ ರಾಧೆಯ ಜನ್ಮದಿನವನ್ನು ರಾಧಾಷ್ಟಮಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಕೃಷ್ಣ ಜನ್ಮಾಷ್ಟಮಿಯ 15 ದಿನಗಳ ನಂತರ ಆಚರಿಸಲಾಗುತ್ತದೆ. ಈ ದಿನ ಉಪವಾಸ ಮಾಡುವವರು ರಾಧೆಯಂತಹ ಪ್ರೀತಿಯನ್ನ ಪಡೆಯುತ್ತಾರೆ ಎಂಬ ನಂಬಿಕೆಯಿದೆ.

ಸೆಪ್ಟೆಂಬರ್ 17 ವಿಶ್ವಕರ್ಮ ಪೂಜೆ, ಏಕಾದಶಿ ಉಪವಾಸ

ಸೆಪ್ಟೆಂಬರ್ 17 ವಿಶ್ವಕರ್ಮ ಪೂಜೆ, ಏಕಾದಶಿ ಉಪವಾಸ

ಸೆಪ್ಟೆಂಬರ್ 19 ಅನಂತ ಚತುರ್ದಶಿ, ಗಣೇಶ ವಿಸರ್ಜನೆ:

ಅನಂತ ಚತುರ್ದಶಿಯ ದಿನದಂದು ಅನಂತ ಪದ್ಮನಾಭ ದೇವರನ್ನು ಪೂಜಿಸಲಾಗುತ್ತದೆ, ಹಾಗೆಯೇ ಈ ದಿನ ಉಪ್ಪು ಇಲ್ಲದ ಆಹಾರವನ್ನು ತಿನ್ನುವುದು ಸಂಪ್ರದಾಯವಾಗಿದೆ. ಜೊತೆಗೆ ಈ ದಿನ ಗಣೇಶ ಹಬ್ಬದ ಅಂತ್ಯವಾಗಿದ್ದು, ಗಣೇಶ ವಿಸರ್ಜನೆ ಮಾಡುತ್ತಾರೆ.

ಸೆಪ್ಟೆಂಬರ್ 20 ಪೂರ್ಣಿಮಾ ವ್ರತ

ಸೆಪ್ಟೆಂಬರ್ 20 ಪೂರ್ಣಿಮಾ ವ್ರತ

ಸೆಪ್ಟೆಂಬರ್ 24 ಸಂಕಷ್ಟಿ ಚತುರ್ಥಿ

ಸೆಪ್ಟೆಂಬರ್ 29 ಕಾಲಾಷ್ಟಮಿ

English summary

Festivals and Vrats in the month of September 2021

Here we talking about Festivals and Vrats in the month of September 2021, read on
X
Desktop Bottom Promotion