For Quick Alerts
ALLOW NOTIFICATIONS  
For Daily Alerts

ಅಪ್ಪಿ-ತಪ್ಪಿಯೂ ತುಳಸಿ ಸುತ್ತ ಇವುಗಳನ್ನು ಇಡಬೇಡಿ, ಕೆಟ್ಟ ಕಾಲ ಶುರುವಾಗೋದು ಗ್ಯಾರಂಟಿ!

|

ಹಿಂದೂ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದ್ದು, ಇದು ಲಕ್ಷ್ಮಿಯ ವಾಸಸ್ಥಾನ ಎಂಬ ನಂಬಿಕೆಯಿದೆ. ಅದೇ ಕಾರಣಕ್ಕೆ ಜನರು ಇದನ್ನು ತಮ್ಮ ಮನೆಗಳಲ್ಲಿ ನೆಡುವುದು. ಶಾಸ್ತ್ರಗಳ ಪ್ರಕಾರ ತುಳಸಿ ಗಿಡ ಹಸಿರಾಗಿರುವ ಮನೆಗಳಲ್ಲಿ ಸುಖ, ಶಾಂತಿ, ಸಮೃದ್ಧಿ ಇರುತ್ತದೆ. ಅದೇ ರೀತಿ, ಧರ್ಮಗ್ರಂಥಗಳ ಪ್ರಕಾರ ಕೆಲವು ವಸ್ತುಗಳನ್ನು ತುಳಸಿಯ ಸುತ್ತ ಇಡುವುದರಿಂದ ಮನೆ-ಕುಟುಂಬಕ್ಕೆ ಕೆಟ್ಟ ಕಾಲ ಶುರುವಾಗುತ್ತದೆ. ಹಾಗಾದರೆ, ಅಂತಹ ವಸ್ತುಗಳಾವುವು ನೋಡೋಣ.

ತುಳಸಿಯ ಸುತ್ತ ಇಡಬಾರದ ವಸ್ತುಗಳನ್ನು ಈ ಕೆಳಗೆ ನೀಡಲಾಗಿದೆ:

ತುಳಸಿ ಹೀಗಾಗದಂತೆ ನೋಡಿಕೊಳ್ಳಿ:

ತುಳಸಿ ಹೀಗಾಗದಂತೆ ನೋಡಿಕೊಳ್ಳಿ:

ತುಳಸಿ ಗಿಡದ ಸುತ್ತಲಿನ ಪ್ರದೇಶವು ತುಂಬಾ ಸ್ವಚ್ಛವಾಗಿರಬೇಕು. ತುಳಸಿ ಒಣಗುತ್ತಿದ್ದರೆ ಅಥವಾ ಬಾಡುತ್ತಿದ್ದರೆ, ಅದು ಅಶುದ್ಧತೆಯ ಕಾರಣದಿಂದಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಪ್ರತಿದಿನ ತುಳಸಿಯ ಸುತ್ತಮುತ್ತ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು.

ತುಳಸಿಯ ಸುತ್ತ ಇವುಗಳಿರಬಾರದು:

ತುಳಸಿಯ ಸುತ್ತ ಇವುಗಳಿರಬಾರದು:

ತುಳಸಿಯ ಸುತ್ತ ಯಾವುದೇ ಪಾದರಕ್ಷೆ, ಪೊರಕೆ ಅಥವಾ ಕಸ ಇರಬಾರದು. ಇಂತಹ ವಸ್ತುಗಳೇನಾದರೂ ಕಂಡುಬಂದರೆ, ತಕ್ಷಣವೇ ಅದನ್ನು ತೆಗೆದುಹಾಕಿ. ಜೊತೆಗೆ ಇತರ ಹೂವುಗಳು ಮತ್ತು ಎಲೆಗಳ ಜೊತೆ ತುಳಸಿ ಗಿಡಗಳನ್ನು ನೆಡಬಾರದು. ವಾಸ್ತವವಾಗಿ, ತುಳಸಿ ಗಿಡವನ್ನು ನೆಟ್ಟ ಅದೇ ಕುಂಡದಲ್ಲಿ ಇನ್ನೊಂದು ಗಿಡವನ್ನು ನೆಡುವುದು ಸೂಕ್ತವಲ್ಲ.

ತುಳಸಿ ಚೆನ್ನಾಗಿ ಬೆಳೆಯಲು ಹೀಗೆ ಮಾಡಿ:

ತುಳಸಿ ಚೆನ್ನಾಗಿ ಬೆಳೆಯಲು ಹೀಗೆ ಮಾಡಿ:

ತುಳಸಿ ಬೆಳೆಯಲು ನೀರು ಹಾಕುವುದು ಸಾಮಾನ್ಯ. ಇದರಿಂದ ತುಳಸಿ ಬೆಳೆಯುವುದು ನಿಜ. ಆದರೆ, ತುಳಸಿ ಸದಾ ಹಸಿರಾಗಿರಲು ತುಳಸಿಗೆ, ಹಾಲನ್ನು ಬೆರೆಸಿ ನೀರು ಹಾಕಿದರೆ ತುಳಸಿ ಹಸಿರಾಗುತ್ತದೆ.

ತುಳಸಿ ಆರಾಧನೆಯಲ್ಲಿ ಇದು ಬೇಡ:

ತುಳಸಿ ಆರಾಧನೆಯಲ್ಲಿ ಇದು ಬೇಡ:

ಅನೇಕ ಬಾರಿ ಜನರು ಸಂಜೆ ತುಳಸಿಯ ದೀಪವಿಟ್ಟು ನೀರು ಹಾಕುತ್ತಾರೆ. ಆದರೆ, ಸಂಜೆ ತುಳಸಿಗೆ ನೀರನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದಲ್ಲದೇ ತುಳಸಿ ಬಳಿ ನೀರು ತುಂಬಿದ ಪಾತ್ರೆ ಇಡಬಾರದು. ಹಾಗೆಯೇ ದೀಪವನ್ನು ಬೆಳಗಿದ ನಂತರ ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗಬೇಕು, ಏಕೆಂದರೆ ತುಳಸಿಯ ಕೆಳಗೆ ದೀಪ ನಂದುವುದು ಅಶುಭವೆಂದು ಪರಿಗಣಿಸಲಾಗಿದೆ.

ತುಳಸಿಗೆ ಚುನರಿಯ ಅಲಂಕಾರ:

ತುಳಸಿಗೆ ಚುನರಿಯ ಅಲಂಕಾರ:

ಮನೆಯಲ್ಲಿ ತುಳಸಿ ಗಿಡವನ್ನು ಇಡುವಾಗ ಅದಕ್ಕೆ ಚುನರಿಯನ್ನು ತೊಡಿಸಿ. ಒಮ್ಮೆ ತೊಡಿಸಿದ ಚುನರಿಯು ಹಳೆಯದಾದಾಗ, ಅದನ್ನು ಏಕಾದಶಿ ಅಥವಾ ಇನ್ನಾವುದೇ ಶುಭ ಮುಹೂರ್ತದಲ್ಲೇ ಬದಲಾಯಿಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ.

ನೀರೆರೆಯುವಾಗ ಇದನ್ನು ಗಮನಿಸಿ:

ನೀರೆರೆಯುವಾಗ ಇದನ್ನು ಗಮನಿಸಿ:

ಮಹಿಳೆಯರು ಸ್ನಾನದ ನಂತರ ಕೂದಲನ್ನು ಬಿಟ್ಟುಕೊಂಡು ತುಳಸಿ ನೀರನ್ನು ಹೆಚ್ಚಾಗಿ ಅರ್ಪಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಮುಡಿಯನ್ನು ಕಟ್ಟಿ ಹಣೆಗೆ ಸಿಂಧೂರ ಹಚ್ಚಿ ಮಾತ್ರ ತುಳಸಿಗೆ ನೀರನ್ನು ಅರ್ಪಿಸಬೇಕು.

English summary

Don’t Keep these Things Around Tulsi, Bad Time will Start

Here we talking about Don’t keep these things around Tulsi, bad time will start, read on
X
Desktop Bottom Promotion